ಮಾಜಿ ಸಚಿವ ಹೆಚ್ ಎಂ ರೇವಣ್ಣ ಪುತ್ರನ ಒಡೆತನದ ಕಾರು ಅಪಘಾತಗಿದ್ದು, ಹೆಚ್ ಎಂ ರೇವಣ್ಣ ಪುತ್ರನಿಗೆ ಸೇರಿದ ಕಾರು ಡಿಕ್ಕಿಯಾಗಿ 27 ವರ್ಷದ ಯುವಕ ಸಾವನಪ್ಪಿದ್ದಾನೆ . ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಗುಡಿಮರನಹಳ್ಳಿ ಗ್ರಾಮದ ಬಳಿ ಈ ಒಂದು ಅಪಘಾತ ಸಂಭವಿಸಿದೆ.
ಹೆಚ್ ಎಂ ರೇವಣ್ಣ ಪುತ್ರ ಶಶಾಂಕ್ ಗೆ ಈ ಒಂದು ಕಾರು ಸೇರಿದೆ ತಡರಾತ್ರಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ರಾಜೇಶ್ (27) ಸಾವನಪಿದ್ದಾನೆ.ಮೃತ ಯುವಕ ಮಾಗಡಿ ತಾಲೂಕಿನ ಬೆಳಗುಂಬ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದ್ದು ರೇವಣ್ಣ ಪುತ್ರ ಶಶಾಂಕ್ ಕಾರು ಚಲಾಯಿಸುತ್ತಿದ್ದ ಮಾಹಿತಿ ತಿಳಿದು ಬಂದಿದೆ.
ಕಕಾ 51 MQ 0555 ನಂಬರ್ ಶಶಾಂಕ್ ಮಾಲೀಕತ್ವದ ಕಾರು ಎಂದು ತಿಳಿದು ಬಂದಿದೆ. ಮಾಗಡಿ ಇಂದ ಕಾರು ಬೆಂಗಳೂರು ಕಡೆಗೆ ತೆರಳುತ್ತಿತ್ತು. ಇಂದು ಬೆಳಿಗ್ಗೆ ತಾನೇ ಈ ಒಂದು ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದ ಕುರಿತು ಕುದುರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಇನ್ನು ಈ ವಿಚಾರವಾಗಿ ಮಾರಿ ಸಚಿವ ಹೆಚ್ಎಮ್ ರೇವಣ್ಣ ಮಾಧ್ಯಮಗಳೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದು ನನ್ನ ಮಗನ ಕಾರು ಅಪಘಾತ ಆಗಿರುವುದು ನಿಜ ಕಾರು ಓಡಿಸುತ್ತಿದ್ದಿದ್ದು ನನ್ನ ಮಗ ಅಲ್ಲ ಡ್ರೈವರ್ ಕುಟುಂಬದವರ ಜೊತೆಗೆ ನಾನು ಮಾತನಾಡುತ್ತೇನೆ. ಓವರ್ಟೇಕ್ ಮಾಡುವಾಗ ಈ ಒಂದು ಅಪಘಾತ ಆಗಿದೆ. ಮೃತ ಯುವಕನ ಕುಟುಂಬಸ್ಥರು ನನಗೆ ಪರಿಚಯ ಎಂದು ಪ್ರತಿಕ್ರಿಯೆ ನೀಡಿದರು.
ಮಾಜಿ ಸಚಿವ `ಹೆಚ್ ಎಂ ರೇವಣ್ಣ’ ಪುತ್ರನ ಕಾರು ಅಪಘಾತ : ಬೈಕ್ ಸವಾರ ಸಾವು.!
WhatsApp Group
Join Now