ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ದಸರಾ ಹಬ್ಬದ ನಿಮಿತ್ತ ಸುದೀರ್ಘ ರಜೆಯನ್ನ ಆನಂದಿಸುತ್ತಾ ಇದ್ದಾರೆ. ಈ ನಡುವೆ ರಜೆಯನ್ನ ಅಕ್ಟೋಬರ್ 10 ಶುಕ್ರವಾರದವರೆಗೆ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ದಸರಾ ಪ್ರಯುಕ್ತ ಬರೋಬ್ಬರಿ 18 ದಿನಗಳ ಕಾಲ ಸಿಕ್ಕಿರುವ ಈ ರಜೆಯ ಖುಷಿಯಲ್ಲಿ ವಿದ್ಯಾರ್ಥಿಗಳು ರಿಲ್ಯಾಕ್ಸ್ ಮಾಡ್ತಾ ಇದ್ದಾರೆ.
ಆದರೆ ಇದೀಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆಯ ಅಬ್ಬರ ಜೋರಾಗುವ ಆತಂಕ ಮೂಡಿರುವ ಕಾರಣಕ್ಕೆ ಇದೀಗ ರಜೆಯನ್ನ ವಿಸ್ತರಣೆ ಮಾಡುವ ಸುದ್ದಿ ಕೂಡ ಇದೆ. ಈಗಾಗಲೇ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ಹಲವು ಭಾಗಗಳಲ್ಲಿ ಮತ್ತೆ ಭಾರಿ ಮಳೆ ಸುರಿಯುವ ಮುನ್ಸೂಚನೆ ಇದೆ. ಅದರಲ್ಲೂ ಅಕ್ಟೋಬರ್ ಆರು ಸೋಮವಾರದ ನಂತರ ಮಳೆಯ ಆರ್ಭಟ ಮತ್ತಷ್ಟು ಹೆಚ್ಚಾಗುವ ಆತಂಕ ಕೂಡ ವ್ಯಕ್ತವಾಗಿದೆ.
ಇದರಿಂದ ಪ್ರವಾಹ ಪರಿಸ್ಥಿತಿ ಅಥವಾ ರಸ್ತೆಗಳಲ್ಲಿ ಅವಾಂತರ ಸೃಷ್ಟಿಯಾಗುವ ಭೀತಿಯಿಂದ ಶಾಲಾ ಕಾಲೇಜುಗಳ ರಜೆಯನ್ನು ಅಕ್ಟೋಬರ್ 10ರವರೆಗೆ ವಿಸ್ತರಣೆ ಆಗುವ ಸಾಧ್ಯತೆ ಕೂಡ ಇದೆ. ಆದರೆ ರಜೆ ವಿಸ್ತರಣೆಯ ಸುದ್ದಿಯಿಂದ ವಿದ್ಯಾರ್ಥಿಗಳಲ್ಲಿ ಸಂತಸ ಮನೆ ಮಾಡಿದರೂ ಕೂಡ ಈ ಕುರಿತು ಇನ್ನು ಯಾವುದೇ ಅಧಿಕೃತ ಮಾಹಿತಿ ಅಥವಾ ಸುತ್ತೋಲೆ ಇನ್ನೂ ಬಂದಿಲ್ಲ.
ರಾಜ್ಯ ಸರ್ಕಾರ ಅಥವಾ ಶಿಕ್ಷಣ ಇಲಾಖೆಯು ಮಳೆ ಹಾಗೂ ಪ್ರವಾಹದ ಪರಿಸ್ಥಿತಿಯನ್ನು ಅರಿತು ಈ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಅಕ್ಟೋಬರ್ 10ರ ವರೆಗೆ ರಜೆ ವಿಸ್ತರಣೆ ಆಗ್ತಾ ಇದೆಯಾ ಅಥವಾ ಇಲ್ಲವೇ ಎಂಬ ಬಗ್ಗೆ ಸ್ಪಷ್ಟವಾಗಿ ಇನ್ನು ಗೊತ್ತಾಗಬೇಕಾಗಿದೆ. ಹಾಗಾಗಿ ಅಕ್ಟೋಬರ್ ಆರರ ಸಂಜೆಯ ತನಕ ಈ ಬಗ್ಗೆ ಕಾದು ನೋಡಲೇಬೇಕು.

ದಸರಾ ರಜೆ ಇನ್ನಷ್ಟು ದಿನ ವಿಸ್ತರಣೆ.! ಮಕ್ಕಳಿಗೆ ಸಿಹಿಸುದ್ದಿ ಇದೆಯಾ.? Dasara Holidays
WhatsApp Group
Join Now