ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ತಾಯಿಯ ಮೇಲಿನ ದ್ವೇಷಕ್ಕೆ ಆಕೆಯ 6 ವರ್ಷದ ಮುಗ್ಧ ಮಗಳನ್ನು ಕತ್ತು ಹಿಸುಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ನಲ್ಲೂರಳ್ಳಿಯ ಬಳಿ ಈ ಒಂದು ಕೊಲೆ ನಡೆದಿದೆ.
ಕೊಲ್ಕತ್ತಾ ಮೂಲದ ಶಹಜಾನ್ ಕಥೂನ್ (6) ಎನ್ನುವ ಬಾಲಕಿಯನ್ನು ಕತ್ತುಹಿಸಿ ಕೊಲೆ ಮಾಡಲಾಗಿದೆ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ ಬ್ಯಾಗಿನಲ್ಲಿ ಶವ ಹಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅಲ್ಲದೆ ಶವವನ್ನು ಚರಂಡಿಗೆ ಎಸೆದು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.
ಅಕ್ಕ ಪಕ್ಕದ ಮನೆಯವರನ್ನೆ ಬಾಲಕಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಮಗುವಿನ ತಾಯಿ ಹಾಗೂ ಅಕ್ಕಪಕ್ಕದವರ ಜೊತೆಗೆ ಜಗಳ ಆಗಿತ್ತು. ತಾಯಿಯ ಮೇಲಿನ ದ್ವೇಷದಿಂದ ಬಾಲಕಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೊಲೀಸರು ಇದೀಗ ಹುಡುಕಾಟ ನಡೆಸುತ್ತಿದ್ದಾರೆ.
WhatsApp Group
Join Now