ಮಂಟಪದಲ್ಲೇ ಗಂಡನಿಗೆ ಚಪ್ಪಲಿ ಪೂಜೆ : ಸೈಲೆಂಟಾಗಿ 2ನೇ ಮದುವೆ ಆಗ್ತಿದ್ದವ ಹೆಂಡ್ತಿ ಕೈಗೆ ಸಿಕ್ಕಿಬಿದ್ದ!

ಚಿತ್ರದುರ್ಗದಲ್ಲಿ ವರದಕ್ಷಿಣೆಗಾಗಿ 2ನೇ ಮದುವೆಯಾಗಲು ಹೋದ ಗಂಡನಿಗೆ ಪತ್ನಿ ಚಪ್ಪಲಿ ಏಟು ಕೊಟ್ಟ ಘಟನೆ ನಡೆದಿದೆ. ತನುಜಾ ಎಂಬ ಮಹಿಳೆ ತನ್ನ ಗಂಡ ಕಾರ್ತಿಕ್ 2ನೇ ಮದುವೆಗೆ ಮುಂದಾಗುತ್ತಿರುವುದನ್ನು ತಿಳಿದು ಮಂಟಪಕ್ಕೆ ನುಗ್ಗಿ ಚಪ್ಪಲಿಯಿಂದ ಹೊಡೆದಿದ್ದಾರೆ. ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಒಂದು ವಿಚಿತ್ರ ಘಟನೆ ಶನಿವಾರ ನಡೆದಿದೆ. ತಮ್ಮ ಗಂಡ ಕಾರ್ತಿಕ್ ಅವರು ವರದಕ್ಷಿಣೆಯ ದುರಾಸೆಯಿಂದ ಬೇರೆ ಯುವತಿಯೊಂದಿಗೆ 2ನೇ ಮದುವೆಗೆ ಮುಂದಾಗುತ್ತಿರುವ ಮಾಹಿತಿ ತಿಳಿದ ತನುಜಾ ಎಂಬ ಮಹಿಳೆ ನೇರವಾಗಿ ಮಂಟಪಕ್ಕೆ ಬಂದು ಗಂಡನಿಗೆ … Read more

‘ಐಪಿಎಲ್ ಆಡುತ್ತಿದ್ದ ವೇಳೆ ಅರ್ಹತೆಗಿಂತ ಹೆಚ್ಚಿನ ಸಂಭಾವನೆ ಸಿಕ್ಕಿದೆ’ : ಆರ್ ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್‌

ಐಪಿಎಲ್ 2025ರ ಆರ್‌ಸಿಬಿಯ ಗೆಲುವನ್ನು ಆಚರಿಸಲು ಗೇಲ್ ಮತ್ತು ಡಿವಿಲಿಯರ್ಸ್ ಕೂಡ ಅಹಮದಾಬಾದ್‌ನಲ್ಲಿ ಹಾಜರಿದ್ದರು. ಭಾರತದ ಮಾಜಿ ಕ್ರಿಕೆಟಿಗ-ಬ್ರಾಡ್‌ಕಾಸ್ಟರ್ ಅಭಿನವ್ ಮುಕುಂದ್, ಡಿವಿಲಿಯರ್ಸ್ ನೀಡಿದ ಹೇಳಿಕೆಯೊಂದನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್ 2025ರ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಹಿಂದೆ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್‌ ಅವರಂತಹ ಅಸಾಧಾರಣ ಟಿ20 ಕ್ರಿಕೆಟಿಗರನ್ನು ಹೊಂದಿದ್ದರೂ, 18 ವರ್ಷಗಳಿಂದಲೂ ಆರ್‌ಸಿಬಿ … Read more

Virat Kohli : ಕಾಲ್ತುಳಿತಕ್ಕೆ 11 ಆರ್‌ಸಿಬಿ ಅಭಿಮಾನಿಗಳ ಸಾವು : ಮೌನ ಮುರಿದ ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ಹೇಳಿದ್ದಿಷ್ಟು.

Virat Kohli : ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಟ್ರೋಫಿ ಜಯಿಸಿದ್ದು ಗೊತ್ತೇ ಇದೆ. 18 ವರ್ಷದ ಬಳಿಕ ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. ಇದರ ಸಂಭ್ರಮಾಚರಣೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರಿ ಸಿದ್ಧತೆ ಸಹ ಮಾಡಿಕೊಳ್ಳಲಾಗಿತ್ತು. ಆದರೆ, ಅಭಿಮಾನಿಗಳ ಅತಿರೇಕದ ವರ್ತನೆಯಿಂದ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದು, ಸಂಭ್ರಮದ ಮನೆಯಲ್ಲಿ ಸೂತಕ ಛಾಯೆ ಆವರಿಸಿತು. ಹೀಗಾಗಿ ಸಂಭ್ರಮಾಚರಣೆಯನ್ನು ರದ್ದು ಮಾಡಲಾಯಿತು. ಇದೀಗ ಈ ಘಟನೆಯ ಬಗ್ಗೆ ಆರ್ಸಿಬಿ ಸ್ಟಾರ್ ಆಟಗಾರ ವಿರಾಟ್ … Read more

IPL 2025 : ಇಂದು ಬೆಂಗಳೂರಿನಲ್ಲಿ ಆರ್ ಸಿಬಿಯ ವಿಜಯ ಯಾತ್ರೆ : ಎಲ್ಲಿಂದ ಎಲ್ಲಿಗೆ.?

IPL 2025 : 18 ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸಿದ ಭಾವನಾತ್ಮಕ ವಿಜಯದ ನಂತರ ಆರ್ ಸಿಬಿ ಅಭಿಮಾನಿಗಳು ಬುಧವಾರ(ಜೂನ್ 4) ಮಧ್ಯಾಹ್ನ ಬೆಂಗಳೂರಿನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಲಿದ್ದಾರೆ. ರಾಜ್ಯ ರಾಜಧಾನಿ ಕ್ರಿಕೆಟ್ ವೀರರನ್ನು ಭರ್ಜರಿಯಾಗಿ ಸ್ವಾಗತಿಸಲು ಸಜ್ಜಾಗಿದೆ. ವರದಿಗಳ ಪ್ರಕಾರ, ಆರ್‌ಸಿಬಿ ವಿಜಯ ಯಾತ್ರೆ ಮಧ್ಯಾಹ್ನ 3.30 ಕ್ಕೆ ವಿಧಾನಸೌಧದಿಂದ ಪ್ರಾರಂಭವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ. ತಂಡವು ಅಹಮದಾಬಾದ್‌ನಿಂದ ಬೆಳಗ್ಗೆ 4:30 ರ ಸುಮಾರಿಗೆ ಬೆಂಗಳೂರಿಗೆ ಬಂದಿಳಿದಿದ್ದು, ಬೃಹತ್ ಆಚರಣೆಗಳೊಂದಿಗೆ ಸ್ವಾಗತಿಸಲಾಗುವುದು ಎಂದು ಹೇಳಲಾಗಿದೆ. ನಗರದ … Read more

ವಿರಾಟ್‌, ಭುವಿ, ಹ್ಯಾಜಲ್ವುಡ್ ಇವರ್ಯಾರು ಅಲ್ಲ.. RCB ಕಪ್‌ ಗೆದ್ದಿದ್ದು ಕೆಲವೇ ನಿಮಿಷಗಳ ಹಿಂದೆ ವಿಲನ್ ಎನಿಸಿಕೊಂಡಿದ್ದ ಈ ಆಲ್ರೌಂಡರ್‌ನಿಂದ!

IPL 2025ರ ಫೈನಲ್ ಪಂದ್ಯ RCB ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯಿತು.. ಈ ಪಂದ್ಯದಲ್ಲಿ RCB ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 190 ರನ್ ಕಲೆಹಾಕಿತು. ಈ ಬಿಗ್ ಟಾರ್ಗೆಟ್ ಚೇಸ್ ಮಾಡುವಾಗ ಪ್ರಿಯಾಂಶ್ ಆರ್ಯ ಹಾಗೂ ಪ್ರಭ್‌ಸಿಮ್ರಾನ್ ಸಿಂಗ್ ಡೀಸೆಂಟ್ ಓಪನಿಂಗ್ ನೀಡಿದರು. ಆದರೆ ಇದೇ ವೇಳೆ ಆರಂಭಿಕ ಬ್ಯಾಟರ್‌ಗಳ ಒಂದರ ಮೇಲೋಂದರಂತೆ ವಿಕೆಟ್‌ ಬೀಳುತ್ತದೆ. 2 ವಿಕೆಟ್ ಬಿದ್ದ ಮೇಲೆ ಕ್ರೀಸ್‌ಗೆ ಬಂದ … Read more

ದುಡ್ಡು ಕೊಟ್ರೇ RCB ಆಟಗಾರ ನಾಳೆ JCB ಕಡೆ ಹೋಗ್ತಾನೆ! ವ್ಯಂಗ್ಯವಾಡಿದ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ

ರಾಯಲ್‌ ಚಾಲೆಂಜಸ್‌ ಬೆಂಗಳೂರು ತಂಡ ತನ್ನ 18 ವರ್ಷಗಳ ಪ್ರಶಸ್ತಿ ಬರ ನೀಗಲು ಈ ವರ್ಷ ಇನ್ನೊಂದೇ ಹೆಜ್ಜೆ ಏರಬೇಕಿದೆ. ಸದ್ಯ ಆರ್‌ಸಿಬಿ ಕಪ್‌ ಗೆಲ್ಲುವ ಫೇವರಿಟ್‌ ತಂಡ ಎನಿಸಿಕೊಂಡಿದ್ದು, ಅಭಿಮಾನಿಗಳು ಈ ಬಾರಿ ಕಪ್‌ ನಮ್ದೇ ಎಂಬ ವಿಶ್ವಾಸದಲ್ಲಿದ್ದಾರೆ. ಸದ್ಯ ಆಟಗಾರರು ಜೂನ್‌ 3ರಂದು ನಡೆಯು ಐತಿಹಾಸಿಕ ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ತಂಡವನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ. ಇನ್ನೊಂದೆಡೆ ವಿಶ್ವದಾದ್ಯಂತ ಇರುವ ಅಸಂಖ್ಯಾತ ಅಭಿಮಾನಿಗಳು ರಜತ್‌ ಪಾಟೀದಾರ್‌ ಬಳಗದ ಯಶಸ್ಸಿಗೆ ಹಾರೈಸುತ್ತಿದ್ದಾರೆ. ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳು, ರಾಜಕೀಯ … Read more

ಕೋಟ್ಯಂತರ ಗ್ರಾಹಕರಿಗೆ ಗುಡ್‌ ನ್ಯೂಸ್‌, ಮಿನಿಮಂ ಬ್ಯಾಲೆನ್ಸ್‌ ದಂಡ ರದ್ದುಗೊಳಿಸಿದ ರಾಷ್ಟ್ರೀಕೃತ ಬ್ಯಾಂಕ್‌

ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದು, ಜೂನ್ 1, 2025 ರಿಂದ ಎಲ್ಲಾ ಉಳಿತಾಯ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸುವ ಅಗತ್ಯವನ್ನು ತೆಗೆದುಹಾಕಿದೆ. ಈ ಹೊಸ ನಿಯಮವು ಎಲ್ಲಾ ವರ್ಗದ ಖಾತೆಗಳಿಗೂ ಅನ್ವಯವಾಗಲಿದ್ದು, ಗ್ರಾಹಕರಿಗೆ ದಂಡದ ಹೊರೆಯಿಂದ ಮುಕ್ತಿ ಸಿಗಲಿದೆ. ಹಣಕಾಸು ಸೇರ್ಪಡೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾರ್ವಜನಿಕ ರಂಗದ ಪ್ರಮುಖ ಬ್ಯಾಂಕ್‌ ಆಗಿರುವ ಕೆನರಾ ಬ್ಯಾಂಕ್ ತನ್ನ ಕೋಟ್ಯಂತರ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಜೂನ್ 1, 2025 ರಿಂದ … Read more

ಐಪಿಎಲ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ.? ಮ್ಯಾಚ್ ರದ್ದಾದರೆ ಚಾಂಪಿಯನ್ ಕಿರೀಟ ಯಾರಿಗೆ.? ಇಬ್ಬರಿಗೂ ಟ್ರೋಫಿ ಹಂಚಲಾಗುತ್ತಾ?

ಐಪಿಎಲ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಜೂನ್ 3ರಂದು ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಆದರೆ ಕಳೆದೆರಡು ದಿನದಿಂದ ಅಹಮ್ಮದಾಬಾದ್‌ನಲ್ಲಿ ಉತ್ತಮ ಮಳೆಯಾಗುತ್ತಿದೆ. ಇದೇ ಕಾರಣದಿಂದ 2ನೇ ಕ್ವಾಲಿಫೈಯರ್ ಪಂದ್ಯಕ್ಕೂ ಮಳೆ ಅಡ್ಡಿಯಾಗಿತ್ತು. ಇದೀಗ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಉಭಯ ತಂಡಗಳು ಟ್ರೋಫಿಗಾಗಿ ಇಷ್ಟು ವರ್ಷ ಕಾದಿದೆ. ಆದರೆ ಇದೀಗ ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಕತೆ … Read more

ಆರ್‌ಸಿಬಿ ಹಾಗು ಪಂಜಾಬ್ ಐಪಿಎಲ್ ಫೈನಲ್ ಪಂದ್ಯ ಪ್ರದರ್ಶಿಸಲು ಮುಂದಾದ ಚಿತ್ರಮಂದಿರಗಳು.! ಆರ್‌ಸಿಬಿ ಸೋತರೆ ಅಷ್ಟೇ ಕಥೆ!

ನಾಳೆ (ಜೂನ್ 3) ನಡೆಯಲಿರುವ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದ ಮೂಲಕ 2 ತಿಂಗಳುಗಳ ಕಾಲ ನಡೆದ ಟೂರ್ನಿ ಮುಕ್ತಾಯಗೊಳ್ಳಲಿದೆ. ನಿನ್ನೆ ನಡೆದ ಕ್ವಾಲಿಫಯರ್ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲಿಸಿದ ಪಂಜಾಬ್ ಕಿಂಗ್ಸ್ ಫೈನಲ್ ಪ್ರವೇಶಿಸಿದ್ದು, ಒಂದನೇ ಕ್ವಾಲಿಫಯರ್ ಪಂದ್ಯ ಗೆದ್ದು ಈಗಾಗಲೇ ಫೈನಲ್ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕಿಳಿಯಲಿದೆ. ಐಪಿಎಲ್‌ ಆರಂಭವಾದಾಗಿನಿಂದ ಒಮ್ಮೆಯೂ ಕಪ್‌ ಗೆಲ್ಲದ ಎರಡು ತಂಡಗಳು ಫೈನಲ್‌ ಪ್ರವೇಶಿಸಿರುವುದು ವಿಶೇಷವಾಗಿದ್ದು, ಯಾವ ತಂಡ … Read more

18 ವರ್ಷಗಳ ಕಾಯುವಿಕೆ, RCB – ಕೊಹ್ಲಿ ಕನಸು ; ಯಾರಾಗಲಿದ್ದಾರೆ ಚೊಚ್ಚಲ ಚಾಂಪಿಯನ್.?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಕಿರೀಟದ ಹುಡುಕಾಟದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮಂಗಳವಾರ (ಮೇ 3) ಅಹಮದಾಬಾದ್‌ನಲ್ಲಿ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಐಪಿಎಲ್ 18ನೇ ವರ್ಷಕ್ಕೆ ಕಾಲಿಸಿರುವಂತೆಯೇ ಇತ್ತಂಡಗಳು ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಇಲ್ಲಿ ಯಾವ ತಂಡ ಗೆದ್ದರೂ ನೂತನ ದಾಖಲೆ ಸೃಷ್ಟಿಯಾಗಲಿದೆ. ಏಕೆಂದರೆ ಇತ್ತಂಡಗಳು ಇದುವರೆಗೆ ಟ್ರೋಫಿ ಗೆದ್ದಿಲ್ಲ. ಆರ್‌ಸಿಬಿ ತಂಡದ ತಾರೆ ವಿರಾಟ್ ಕೊಹ್ಲಿ, ಸರಿ ಸುಮಾರು ಎರಡು … Read more