ಇಂತಹ ನೀಚ ಮಕ್ಕಳು ಯಾರಿಗೂ ಬೇಡ : ಆಸ್ತಿಗಾಗಿ ಹೆತ್ತ ತಂದೆಯನ್ನೇ ಮನೆಯಿಂದ ಹೊರ ಹಾಕಿದ ಮಕ್ಕಳು
ಚಿತ್ರದುರ್ಗದಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು, ಆಸ್ತಿಗಾಗಿ ಹೆತ್ತ ತಂದೆಯನ್ನೇ ನೀಚ ಮಕ್ಕಳು ಮನೆಯಿಂದ ಹೊರ ಹಾಕಿರುವ ಘಟನೆ ನಡೆದಿದೆ. ಈ ಹಿನ್ನೆಲೆ 82 ವರ್ಷದ ವೃದ್ಧರು ದೇವಸ್ಥಾನದಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಹೌದು ಚಿತ್ರದುರ್ಗದ ಮಾಳಪ್ಪನಹಟ್ಟಿಯಲ್ಲಿ ಈ ಒಂದು ಅಮಾನವೀಯ ಕೃತ್ಯ ನಡೆದಿದೆ. ಆಸ್ತಿ ವಿವಾದ ಹಿನ್ನೆಲೆಯಲ್ಲಿ ಮಕ್ಕಳು ವಯಸ್ಸಾದ ತಂದೆಯನ್ನೇ ಹೊರಹಾಕಿದ್ದಾರೆ. ನೆಲೆ ಇಲ್ಲದೆ 82 ವರ್ಷದ ವೃದ್ಧ ಬಸಪ್ಪ ಪರದಾಡುತ್ತಿದ್ದು, ಮಕ್ಕಳಾದ ಹನುಮಂತಪ್ಪ ಮತ್ತು ಜಯಪ್ಪ ವಿರುದ್ಧ ಗಂಭೀರವಾದ ಆರೋಪ ಕೇಳಿ ಬಂದಿದೆ. … Read more