10 ನಿಮಿಷದಲ್ಲಿ ಮನೆಗೆ ಬರುತ್ತೇನೆ, ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಲಿಯಾದ ಅವಳಿ ಸಹೋದರನ ಕೊನೆಯ ಕರೆ

ಜಲಮಂಡಳಿ ನಿರ್ಲಕ್ಷ್ಯಕ್ಕೆ ಖಾಸಗಿ ಬ್ಯಾಂಕ್ ಮ್ಯಾನೇಜರ್ ದುರಂತ ಅಂತ್ಯ ಕಂಡ ಘಟನೆ ದೆಹಲಿಯಲ್ಲಿ ನಡೆದಿದೆ. ಇತ್ತೀಚೆಗ ನೋಯ್ಡಾದಲ್ಲಿ ಟೆಕ್ಕಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೆಸರು ತುಂಬಿದ ಹೊಂಡದಲ್ಲಿ ಮುಳುಗಿ ಸತ್ತ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ದೆಹಲಿಯಲ್ಲಿ ದುರಂತ ನಡೆದಿದೆ. ಬೈಕ್‌ನಲ್ಲಿ ಮನೆಗೆ ಬರುತ್ತಿದ್ದ ಬ್ಯಾಂಕ್ ಮ್ಯಾನೇಜರ್ ಕಮಲ್ ಜೈನ್ ಜಲಮಂಡಳಿಯ ಕಾಮಗಾರಿಯ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ಮತ್ತೆ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ದೇಶವೇ ಪ್ರತಿಭಟನೆ ಮಾಡುವ ಪರಿಸ್ಥಿತಿಗೆ ದೂಡಿದೆ. ದೆಹಲಿ ಜಲಮಂಡಳಿ ಕಾಮಗಾರಿ … Read more

ರೆಹಮಾನ್ ವಿವಾದಕ್ಕೆ ಪ್ರಕಾಶ್ ರಾಜ್ ಎಂಟ್ರಿ : ಬಿಜೆಪಿ ಸಂಸದೆ ಕಂಗನಾ ವಿರುದ್ಧ ಹರಿಹಾಯ್ದ ನಟ ಪ್ರಕಾಶ್

ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಗಾರ ಎ.ಆರ್. ರೆಹಮಾನ್ ಬಗ್ಗೆ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರನೌತ್ ಅವರ ಹೇಳಿಕೆಗೆ ನಟ ಮತ್ತು ನಿರ್ದೇಶಕ ಪ್ರಕಾಶ್ ರಾಜ್ (Prakash Raj) ಟೀಕಿಸಿದ್ದಾರೆ. ಕೇರಳ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಈ ದೇಶದಲ್ಲಿ ಭಿನ್ನಾಭಿಪ್ರಾಯವನ್ನು ಅಪರಾಧೀಕರಿಸಲಾಗುತ್ತಿದೆ. ಮಾತನಾಡಿದ್ದಕ್ಕಾಗಿ ಯಾರನ್ನು ಬಂಧಿಸಲಾಗುತ್ತದೆ? ಎಂದು ಇತ್ತೀಚೆಗೆ ಎ.ಆರ್. ರೆಹಮಾನ್ ಅವರಿಗೆ ಎದುರಾಧ ವಿರೋಧವನ್ನು ಉದಾಹರಿಸಿ ಅವರು ಮಾತನಾಡಿದರು. ಬೊಗಳುವುದು ಪ್ರಾರಂಭವಾಗಿದೆ: ಪ್ರಕಾಶ್ ರಾಜ್ ಎ.ಆರ್. ರೆಹಮಾನ್ ಚಲನಚಿತ್ರೋದ್ಯಮದಲ್ಲಿ ತಮ್ಮ ಕೆಲಸದ … Read more

ಡಿಕೆಶಿಗೆ ಜಾವಾ ಬೈಕ್‌ಗೆ ಪೆಟ್ರೋಲ್ ಹಾಕಿಸಲು ಕಾಸಿರಲಿಲ್ಲ, ನಾನೇ ಕೊಟ್ಟಿದ್ದೆ; ನಾನೇ ‘ಕನಕಪುರ ಬಂಡೆ’ ಶ್ರೀನಿವಾಸ್!

ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಹಿರಿಯ ಚಲನಚಿತ್ರ ನಿರ್ಮಾಪಕ ಹಾಗೂ ವಿತರಕ ಕನಕಪುರ ಶ್ರೀನಿವಾಸ್ ಅವರು ಸ್ಫೋಟಕ ಹೇಳಿಕೆಗಳನ್ನು ನೀಡುವ ಮೂಲಕ ಹೊಸ ವಿವಾದದ ಕಿಡಿ ಹೊತ್ತಿಸಿದ್ದಾರೆ. ಡಿಕೆಶಿ ಅವರ ಹಳೆಯ ದಿನಗಳನ್ನು ಕೆದಕಿರುವ ಶ್ರೀನಿವಾಸ್, ‘ಒಂದು ಕಾಲದಲ್ಲಿ ಡಿ.ಕೆ ಶಿವಕುಮಾರ್ ಅವರ ಬಳಿ ಜಾವಾ ಬೈಕಿಗೆ ಪೆಟ್ರೋಲ್ ಹಾಕಿಸಲೂ ಹಣವಿರಲಿಲ್ಲ. ಆಗ ನಾನೇ ಅವರಿಗೆ ಹಣ ನೀಡಿದ್ದೆ’ ಎಂದು ಬಹಿರಂಗಪಡಿಸಿದ್ದಾರೆ. ನಾನೇ ಒರಿಜಿನಲ್ ‘ಕನಕಪುರ ಬಂಡೆ’: ಕಾಟನ್‌ಪೇಟೆ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, … Read more

ನಮ್ಮ ಮೆಟ್ರೋ’ ಟಿಕೆಟ್ ದರ ಏರಿಕೆಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ.! ಹೇಳಿದ್ದೇನು..?

ಬೆಂಗಳೂರಿನ ‘ನಮ್ಮ ಮೆಟ್ರೋ’ (BMRCL) ಪ್ರಯಾಣಿಕರಿಗೆ ದರ ಏರಿಕೆಯ ಶಾಕ್ ಎದುರಾಗಿದೆ. ಫೆಬ್ರವರಿ 9, 2026 ರಿಂದ ಜಾರಿಗೆ ಬರುವಂತೆ ಮೆಟ್ರೋ ಟಿಕೆಟ್ ದರವನ್ನು ಸರಾಸರಿ ಶೇಕಡಾ 5ರಷ್ಟು ಹೆಚ್ಚಿಸಲಾಗಿದೆ. ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರು ಮೆಟ್ರೋ ಕೇವಲ ಒಂದು ಸಾರಿಗೆ ವ್ಯವಸ್ಥೆಯಲ್ಲ, ಅದು ನಮ್ಮ ನಗರದ ಲಕ್ಷಾಂತರ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಕುಟುಂಬಗಳ ಕನಸುಗಳನ್ನು ಹೊತ್ತೊಯ್ಯುವ, ಪ್ರಗತಿಯತ್ತ ಮುನ್ನಡೆಸುವ ಮತ್ತು … Read more

ಸಾರ್ವಜನಿಕರೇ ಎಚ್ಚರ : ಈ 10 ವಹಿವಾಟುಗಳನ್ನು ಮಾಡಿದ್ರೆ ‘IT’ ನೋಟಿಸ್ ಬರಬಹುದು.!

ನೀವು ಪ್ರತಿದಿನ ನಿಮ್ಮ ಉಳಿತಾಯ ಖಾತೆಯಿಂದ ಪಾವತಿಗಳು, ವರ್ಗಾವಣೆಗಳು ಮತ್ತು ನಗದು ಹಿಂಪಡೆಯುವಿಕೆಗಳನ್ನು ಮಾಡುತ್ತೀರಿ. ಆದರೆ ಈ ದೈನಂದಿನ ಕೆಲಸಗಳು ಸಹ ಕೆಲವೊಮ್ಮೆ ಆದಾಯ ತೆರಿಗೆ ಇಲಾಖೆಯ ತನಿಖೆಗೆ ಒಳಪಡಬಹುದು ಎಂಬುದು ನಿಮಗೆ ತಿಳಿದಿದೆಯೇ? ಉಳಿತಾಯ ಖಾತೆ ಕೇವಲ ಹಣವನ್ನು ಸಂಗ್ರಹಿಸಲು ಮತ್ತು ಖರ್ಚು ಮಾಡಲು ಇರುವ ಮಾರ್ಗ ಎಂದು ನೀವು ಭಾವಿಸಿದರೆ, ಇಂದಿನ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆಯು ಪ್ರತಿ ಪ್ರಮುಖ ವಹಿವಾಟನ್ನು ಮೇಲ್ವಿಚಾರಣೆ ಮಾಡಬಲ್ಲದು ಎಂದು ತಿಳಿದುಕೊಳ್ಳಿ. ವಿಶೇಷವಾಗಿ ನಿಮ್ಮ ಖಾತೆಗೆ ದೊಡ್ಡ ಮೊತ್ತದ … Read more

ರಾತ್ರಿ ಹಿಂದೂ ಮಹಿಳೆಯ ಮನೆಯಲ್ಲಿ ಕಾಂಗ್ರೆಸ್ ಮುಖಂಡ ಸಿಕ್ಕಿಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಚಿಕ್ಕಮಗಳೂರು ನಗರದ ಗಾಂಧಿ ನಗರದಲ್ಲಿ ರಾತ್ರಿ ಹಿಂದೂ ಮಹಿಳೆಯ ಮನೆಯಲ್ಲಿ ಕಾಂಗ್ರೆಸ್ ಮುಖಂಡ ಸಿಕ್ಕಿಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ ಸಿಕ್ಕಿದೆ. ಚಿಕ್ಕಮಗಳೂರು ಕಾಂಗ್ರೆಸ್ ಮುಖಂಡ ರಾಹಿಲ್ ಷರೀಫ್, ಚಿಕ್ಕಮಗಳೂರು ನಗರದ ಗಾಂಧಿ ನಗರದ ಹಿಂದೂ ಮಹಿಳೆ ಜೊತೆ ಇರುವಾಗಲೇ ಸಿಕ್ಕಿಬಿದ್ದಿದ್ದು, ಮಹಿಳೆಯ ಪತಿ ಸ್ಥಳೀಯರ ಜೊತೆ ಸೇರಿಕೊಂಡು ರೆಡ್ ಹ್ಯಾಂಡ್ ಆಗಿ ಹಿಡಿದು ರಾಹಿಲ್ ಷರೀಫನಿಗೆ ಥಳಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು,  ಯಾವಾಗ ಈ ವಿಡಿಯೋ ವೈರಲ್ ಆಯ್ತೋ ಮಹಿಳೆ ಒಂದು ಹೇಳಿಕೆಯೊಂದನ್ನು ನೀಡಿದ್ದಾಳೆ. … Read more

ಮಹಿಳಾ ಅಧಿಕಾರಿಯ ಖಾಸಗಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌’ಮೇಲ್ : 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಮೂವರು ಅರೆಸ್ಟ್.!

ಬೆಳಗಾವಿ : ಮಹಿಳಾ ಅಧಿಕಾರಿಯೊಬ್ಬರ ಖಾಸಗಿ ದೃಶ್ಯಗಳನ್ನು ಗುಪ್ತವಾಗಿ ಸೆರೆಹಿಡಿದು, ಬ್ಲ್ಯಾಕ್‌’ಮೇಲ್ ಮಾಡುತ್ತಿದ್ದ ಆರೋಪಿಗಳನ್ನು ಬೆಳಗಾವಿ ಪೊಲೀಸರು ಭೇದಿಸಿದ್ದಾರೆ. 50 ಲಕ್ಷ ರೂಪಾಯಿ ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಹಿನ್ನೆಲೆ ಸಂತ್ರಸ್ತ ಮಹಿಳಾ ಅಧಿಕಾರಿಯ ಮನೆಯಲ್ಲಿ ಗುಪ್ತವಾಗಿ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಿ, ಅವರ ಖಾಸಗಿ ಕ್ಷಣಗಳನ್ನು ಆರೋಪಿಗಳು ಚಿತ್ರೀಕರಿಸಿದ್ದರು. ಈ ವಿಡಿಯೋಗಳನ್ನು ಇಟ್ಟುಕೊಂಡು ಅಧಿಕಾರಿಗೆ ಬೆದರಿಕೆ ಹಾಕಲಾರಂಭಿಸಿದ ಆರೋಪಿಗಳು, ಬರೋಬ್ಬರಿ 50 ಲಕ್ಷ … Read more

Horoscope Today : 06 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಹಣಕಾಸು ಮತ್ತು ವ್ಯವಹಾರ ಸಂಬಂಧಿ ವಿಚಾರಗಳಿಗೆ ಇಂದು ಅನುಕೂಲಕರ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಆರ್ಥಿಕ ಲಾಭದ ಹೊರತಾಗಿ ಭವಿಷ್ಯದಲ್ಲಿ ನಿಮಗೆ ಸಹಾಯವಾಗುವಂತಹ ದೀರ್ಘಾವಧಿಯ ಬಂಡವಾಳ ಹೂಡಲಿದ್ದೀರಿ. ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ನೀವು ಕಳೆಯುವ ಸಮಯವು ನಿಮ್ಮನ್ನು ಎಂದಿಗಿಂತಲೂ ಖುಷಿಯಲ್ಲಿರಿಸುತ್ತದೆ. ಸಣ್ಣ ಪ್ರವಾಸಕ್ಕೆ ತೆರಳಲು ಯೋಜನೆ ರೂಪಿಸಬಹುದು. ಧಾರ್ಮಿಕತೆಯತ್ತ ಹೆಚ್ಚಿನ ಒಲವು ತೋರುವ ಸಾಧ್ಯತೆಯಿದೆ. ವೃಷಭ :- ನೀವು ಸಂವಹನ ಮತ್ತು ಸಾರ್ವಜನಿಕ ಸಂಭಾಷಣಾ ಕ್ಷೇತ್ರದಲ್ಲಿದ್ದರೆ, ಕೇಳುಗರನ್ನು ಮೋಡಿ ಮಾಡುವ ಸಾಮರ್ಥ್ಯವು ನಿಮಗೆ ಬರಲಿದೆ. … Read more

ಕಳ್ಳತನ ಅವರ ಕುಟುಂಬ ವೃತ್ತಿ, ಅವರು ಮಹಾತ್ಮಗಾಂಧಿಯವರ ಉಪನಾಮವನ್ನೇ ಕದ್ದವರು : ಪ್ರಧಾನಿ ಮೋದಿ

ರಾಜ್ಯಸಭೆಯಲ್ಲಿ ಇಂದು ಸುಮಾರು 100 ನಿಮಿಷಗಳ ಕಾಲ ನಿರಂತರ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ , ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಕುಟುಂಬ ಮೂಲತಃ ಕಳ್ಳರು, ಅವರು ಮಹಾತ್ಮ ಗಾಂಧಿಯವರ ಉಪನಾಮವನ್ನೂ ಕದ್ದಿದ್ದಾರೆ ಎಂದು ಪ್ರಧಾನಿ ಆರೋಪಿಸಿದರು. ಕೆಲವು ಜನರಿಗೆ ಕಳ್ಳತನವು ಒಂದು ಕುಟುಂಬ ವೃತ್ತಿಯಾಗಿದೆ. ಆ ಕಳ್ಳರು ಗುಜರಾತಿನ ಮಹಾತ್ಮ ಗಾಂಧಿಯವರ ಉಪನಾಮವನ್ನೂ ಕದ್ದಿದ್ದಾರೆ ಎಂಬುದು ಆಘಾತಕಾರಿ ಸಂಗತಿ ಎಂದು ಕಾಂಗ್ರೆಸ್ ನಾಯಕ ರಾಹುಲ್ … Read more

ಪ್ರಧಾನಿ ಮೋದಿ ಮೇಲೆ ದಾಳಿಗೆ ಕಾಂಗ್ರೆಸ್ ಪಿತೂರಿ : ಲೋಕಸಭಾ ಸಚಿವಾಲಯದಿಂದ ಸ್ಪೋಟಕ ಹೇಳಿಕೆ.!

ಸಂಸತ್ತಿನ ಬಜೆಟ್ ಅಧಿವೇಶನದ ಏಳನೇ ದಿನದಂದು ಅಭೂತಪೂರ್ವ ಮತ್ತು ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದಾಳಿ ಮಾಡಲು ವಿರೋಧ ಪಕ್ಷಗಳು ಸಂಚು ರೂಪಿಸಿದ್ದವು ಎಂದು ಲೋಕಸಭಾ ಸಚಿವಾಲಯ (Lok Sabha Secretariat) ಸ್ಫೋಟಕ ಹೇಳಿಕೆ ನೀಡಿದೆ. ವಿರೋಧ ಪಕ್ಷದ ಮಹಿಳಾ ಸಂಸದರು ಒಟ್ಟಾಗಿ ಪ್ರಧಾನಿ ಮೋದಿ ಅವರ ಕುರ್ಚಿಯನ್ನು ಮುತ್ತಿಗೆ ಹಾಕಿ ದಾಳಿ ಮಾಡಲು ಯೋಜಿಸಿದ್ದರು ಎಂದು ಸಚಿವಾಲಯ ತಿಳಿಸಿದೆ. ಈ ಪಿತೂರಿಯಲ್ಲಿ ಮಹಿಳಾ ಸದಸ್ಯರನ್ನು ‘ಗುರಾಣಿ’ಯಾಗಿ ಬಳಸಿಕೊಳ್ಳಲಾಗಿತ್ತು ಎಂಬ ಗಂಭೀರ … Read more