ಸುಖಾಂತ್ಯವಾಗಬೇಕಿದ್ದ ಯಾತ್ರೆ ದುರಂತ ಅಂತ್ಯ : ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ಮೂವರು ಬಲಿ!

ತಮಿಳುನಾಡಿನ ಪ್ರಸಿದ್ಧ ದೇವಸ್ಥಾನವೊಂದಕ್ಕೆ ತೆರಳಿ ಭಕ್ತಿಯಿಂದ ದರ್ಶನ ಪಡೆದು ಸಂಭ್ರಮದಿಂದ ಮನೆಗೆ ಮರಳುತ್ತಿದ್ದ ಕುಟುಂಬವೊಂದಕ್ಕೆ ವಿಧಿ ಕ್ರೂರವಾಗಿ ಎರಗಿದೆ. ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ದೇವಿನಗರ ಕ್ಯಾಂಪ್ ಬಳಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿಟ್ಟೂರು ಗ್ರಾಮದ ಪ್ರಸಾದ್ ರಾವ್ ಹಾಗೂ ಇಬ್ಬರು ಮಹಿಳೆಯರು ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬಳ್ಳಾರಿ-ಸಿರುಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಮುಂಜಾನೆ ಸುಮಾರು 5 ಗಂಟೆಯ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ … Read more

ಸಿನಿಮಾ ಸ್ಟೈಲ್ನಲ್ಲಿ ಪತ್ನಿಯನ್ನು ಕೊಂದ ಗಂಡ; ಆತನಿಂದಲೇ ಆಸ್ಪತ್ರೆಗೆ ಸಾಗಿಸುವ ನಾಟಕ! ಆದರೆ ಕಟ್ಟಿದ ಕಥೆ ಕೇಳಿದ್ರೆ ಶಾಕ್!

ಪತ್ನಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಗಂಡನೇ ಕೊಲೆ ಮಾಡಿ ಕೊನೆಗೆ ನಾಟಕವಾಡಿದ್ದಾನೆ. ತಾನೇ ಆಯಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಶಿಫ್ಟ್ ಮಾಡಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದು, ಆದರೆ ಕೊನೆಗೂ ಲಾಕ್ ಆಗಿದ್ದಾನೆ.ಬೆಂಗಳೂರಿನ ಬಾಗಲೂರು ಸಮೀಪ ಮಿಟ್ಟಗಾನಹಳ್ಳಿಯಲ್ಲಿ ನಿನ್ನೆ ಸಂಜೆ ನಡೆದ ಆಘಾತಕಾರಿ ಘಟನೆ ಇದು . ಪತಿ ತನ್ನ ಪತ್ನಿಯನ್ನು ಕೊಂದು ಅಪಘಾತದ ರೀತಿ ಬಿಂಬಿಸಲು ಪ್ರಯತ್ನಿಸಿದ್ದಾನೆ. ಆದರೆ ಪೊಲೀಸರು ತ್ವರಿತವಾಗಿ ಕೃತ್ಯ ಬಯಲು ಮಾಡಿ ಆರೋಪಿ ಪತಿಯನ್ನು ಬಂಧಿಸಿದ್ದಾರೆ. ಆರೋಪಿ ಆನಂದ್ (64) ಎಂಬಾತ … Read more

ಹುಬ್ಬಳ್ಳಿ ಮರ್ಯಾದಾ ಹತ್ಯೆ ಮಾಸುವ ಮುನ್ನವೇ, ಚಿತ್ರದುರ್ಗದಲ್ಲಿ ಮತ್ತೊಬ್ಬ ಗರ್ಭಿಣಿ ಜಾತಿ ದ್ವೇಷಕ್ಕೆ ಬಲಿ!

ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆಗೆ ಅಪ್ಪನೇ ಗರ್ಭಿಣಿ ಮಗಳನ್ನು ಕೊಂದ ಪ್ರಕರಣ ಮಾಸುವ ಮುನ್ನವೇ ಚಿತ್ರದುರ್ಗದಲ್ಲಿ ಮತ್ತೊಬ್ಬ ಗರ್ಭಿಣಿ ಯುವತಿ ಜಾತಿ ದ್ವೇಷಕ್ಕೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾಳೆ. ಜಿಲ್ಲೆಯ ಚಿತ್ರದುರ್ಗ ತಾಲೂಕಿನ ಕಾಟಿಹಳ್ಳಿ ಗ್ರಾಮದಲ್ಲಿ ಗರ್ಭಿಣಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮ*ಹತ್ಯೆಯಲ್ಲ, ಬದಲಿಗೆ ಜಾತಿ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದು ಮೃತರ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಮೃತಪಟ್ಟ ಯುವತಿಯನ್ನು ಪುಷ್ಪ (25) ಎಂದು ಗುರುತಿಸಲಾಗಿದೆ. ಮಾದಿಗ ಸಮಾಜಕ್ಕೆ ಸೇರಿದ … Read more

ಪತ್ನಿ ಕಸ್ಟಡಿಗೆ ಮಕ್ಕಳನ್ನು ಬಿಡಲು ಕೋರ್ಟ್ ಆದೇಶ : ಇಬ್ಬರು ಕಂದಮ್ಮಗಳಿಗೆ ವಿಷವುಣಿಸಿ ತಾಯಿ ಜೊತೆ ಪತಿ ಆತ್ಮಹತ್ಯೆ!

ಮಕ್ಕಳನ್ನು ಪತ್ನಿ ಜೊತೆ ಬಿಡಲು ಕೋರ್ಟ್ ಆದೇಶದಿಂದ ಮನನೊಂದ ತಂದೆಯೊಬ್ಬ ತನ್ನ ಎರಡು ಮಕ್ಕಳಿಗೆ ವಿಷವುಣಿಸಿ ತಾಯಿಯ ಜೊತೆ ತಾನು ನೇಣಿಗೆ ಶರಣಾಗಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನ ರಾಮಂತಳಿಯಲ್ಲಿ ನಡೆದಿದೆ. ಮಗಳು ಹಿಮಾ(6), ಪುತ್ರ ಕಣ್ಣನ್‌ಗೆ(2) ವಿಷ ನೀಡಿ, ಬಳಿಕ ತಾಯಿ ಉಷಾ(65) ಜೊತೆಗೆ ಕಲಾಧರನ್(36) ನೇಣು ಬಿಗಿದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಲತಃ ರಾಮಂತಳಿಯ ಸೆಂಟ್ರಲ್ ನಿವಾಸಿಯಾಗಿದ್ದ ಕಲಾಧರನ್ ಶೆಫ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಡಿ.22 ರಂದು ರಾತ್ರಿ ಈ ಘಟನೆ … Read more

ಲವರ್ ಜೊತೆ ಸೇರಿ ಗಂಡನನ್ನು ಕೊಂದು, ಮೃತದೇಹವನ್ನು ‘ಗ್ರೈಂಡರ್’ ನಲ್ಲಿ ರುಬ್ಬಿ, ಚರಂಡಿಗೆ ಎಸೆದ ಪತ್ನಿ!

ಉತ್ತರ ಪ್ರದೇಶದಲ್ಲಿ ಕನಸಿನಲ್ಲೂ ಬೆಚ್ಚಿ ಬೀಳಿಸುವ ಭಯಾನಕ ಘಟನೆಯೊಂದು ನಡೆದಿದೆ. ಲವರ್ ಜೊತೆಗೆ ಸೇರಿದ ಮಹಿಳೆಯೊಬ್ಬಳು, ತನ್ನ ಗಂಡನನ್ನು ಹತ್ಯೆಗೈದಿದ್ದು, ಬಳಿಕ ಮೃತದೇಹವನ್ನು ಗ್ರೈಂಡರ್ ನಲ್ಲಿ ರುಬ್ಬಿ, ಚರಂಡಿಗೆ ಎಸೆದಿದ್ದಾರೆ. ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಆರೋಪಿಗಳನ್ನು ರೂಬಿ ಮತ್ತು ಗೌರವ್ ಎಂದು ಗುರುತಿಸಲಾಗಿದ್ದು, ಅವರನ್ನು ಡಿಸೆಂಬರ್ 20 ರಂದು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ ಕೆ ಬಿಷ್ಣೋಯ್ ತಿಳಿಸಿದ್ದಾರೆ. ಪ್ರಕರಣ ಬೇದಿಸಿದ್ದು ಹೇಗೆ? … Read more

ಹಿಂದೂ ಮಹಿಳೆಯ ಸೆರಗು ಎಳೆಯುವ ಧೈರ್ಯ ನಿಮಗಿದೆಯೇ? : ನಿತೀಶ್ ಕುಮಾರ್‌ಗೆ ಜಾವೇದ್ ಅಖ್ತರ್ ಪ್ರಶ್ನೆ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಹಿಳಾ ವೈದ್ಯೆಯ ಹಿಜಾಬ್ ಅನ್ನು ಎಳೆದ ಘಟನೆಯನ್ನು ಹಿರಿಯ ಸಾಹಿತಿ ಹಾಗೂ ಚಿತ್ರಕಥೆಗಾರ ಜಾವೇದ್ ಅಖ್ತರ್ ತೀವ್ರವಾಗಿ ಖಂಡಿಸಿದ್ದಾರೆ. “ಒಬ್ಬ ಹಿಂದೂ ಮಹಿಳೆಯ ತಲೆ ಮೇಲಿನ ಸೆರಗನ್ನು (ಘೂಂಘಟ್) ಎಳೆಯುವ ಧೈರ್ಯ ನಿಮಗಿದೆಯೇ?” ಎಂದು ಅವರು ನಿತೀಶ್ ಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜಾವೇದ್ ಅಖ್ತರ್, ನಿತೀಶ್ ಕುಮಾರ್ ಅವರ ವರ್ತನೆ ಅತ್ಯಂತ ಅಸಭ್ಯವಾದುದು ಎಂದಿದ್ದಾರೆ. “ನಿಮ್ಮಲ್ಲಿ ಸ್ವಲ್ಪವಾದರೂ ಸಭ್ಯತೆ ಉಳಿದಿದ್ದರೆ, … Read more

‘ಲವರ್’ ಜೊತೆ ಸೇರಿ ಪತಿಗೆ ನೇಣು ಬಿಗಿದು ಕೊಂದು ‘ಹೃದಯಾಘಾತ’ ಎಂದು ಬಿಂಬಿಸಿದ ಪಾಪಿ ಪತ್ನಿ.!

ಯುವಕನನ್ನು ಪ್ರೀತಿಸಿದ ಮಹಿಳೆಯೊಬ್ಬಳು ತನ್ನ ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂದು ನಂಬಿ ತನ್ನ ಪತಿಯನ್ನು ಕ್ರೂರವಾಗಿ ಕೊಂದಳು. ನಂತರ, ಅದನ್ನು ಸಹಜ ಸಾವು ಅಥವಾ ಹೃದಯಾಘಾತ ಎಂದು ಬಿಂಬಿಸಿ ಪೊಲೀಸರು ಮತ್ತು ಸಂಬಂಧಿಕರ ಮನವೊಲಿಸಲು ಪ್ರಯತ್ನಿಸಿದಳು. ಆದರೆ, ಪೊಲೀಸರು ನಡೆಸಿದ ಸಂಪೂರ್ಣ ತನಿಖೆಯಲ್ಲಿ ನಿಜವಾದ ಸತ್ಯ ಹೊರಬಂದಿತು. ಹೈದರಾಬಾದ್ ಹೊರವಲಯದಲ್ಲಿರುವ ಮೆಡಿಪಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ, ಪೊಲೀಸರು ಆರೋಪಿ, ಆಕೆಯ ಗೆಳೆಯ ಮತ್ತು ಇನ್ನೊಬ್ಬ ಯುವಕನನ್ನು ಬಂಧಿಸಿದರು. ಪೊಲೀಸ್ ವರದಿಯ ಪ್ರಕಾರ, ಕರ್ನಾಟಕದ ವಿ.ಜೆ. … Read more

ಮುಸ್ಲಿಂ ವೈದ್ಯೆಯ ನಕಾಬ್ ಎಳೆದ ಪ್ರಕರಣ : ಸಿಎಂ ನಿತೀಶ್ ಭಾವಚಿತ್ರಕ್ಕೆ ಚಪ್ಪಲಿ ಏಟು

ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಮುಸ್ಲಿಂ ವೈದ್ಯೆಯ ನಕಾಬ್ ಎಳೆದಿರುವುದನ್ನು ವಿರೋಧಿಸಿ ವಕ್ಫ್‌ ಸಂರಕ್ಷಣಾ ಸಂಘದ ನೇತೃತ್ವದಲ್ಲಿ ಮುಸ್ಲಿಂ ಮಹಿಳೆಯರು ಇಲ್ಲಿಯ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು. ಮುಸ್ಲಿಂ ಸಂಪ್ರದಾಯವನ್ನು ಅವಮಾನಿಸಿರುವ ನಿತೀಶ್‌ ಕುಮಾರ್‌, ತಕ್ಷಣವೇ ಕ್ಷಮೆ ಯಾಚಿಸಬೇಕು. ದೇಶದಲ್ಲಿ ಎಲ್ಲ ಜನ ಸಮುದಾಯವರಿಗೂ ಅವರು ಇಷ್ಟಪಡುವ ಸಾಂಪ್ರದಾಯಿಕ ಬಟ್ಟೆಗಳನ್ನು ತೊಡುವ ಅಧಿಕಾರ ಇದೆ. ಆದರೆ, ನಿತೀಶ್‌ ಕುಮಾರ್‌ ನಡೆ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಹಿಳೆಯರು ನಿತೀಶ್‌ ಕುಮಾರ್‌ ಭಾವಚಿತ್ರಕ್ಕೆ ಚಪ್ಪಲಿಯಿಂದ … Read more

Horoscope Today : ಡಿಸೆಂಬರ್‌ 23 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಈ ದಿನ ಶುಭದಾಯಕವಾಗಿದೆ ಎಂದು ಗಣೇಶ ಹೇಳುತ್ತಾರೆ. ಮನೆಗೆ ಸಂಬಂಧಿಸಿದ ವಿಚಾರಗಳಲ್ಲಿ ಶಾಂತಿ ಇರುತ್ತದೆ. ನಿಮ್ಮ ಅಭಿರುಚಿಗೆ ತಕ್ಕ ಹಾಗೆ ಮನೆಯ ಒಳ ಸೌಂದರ್ಯದ ಬಗ್ಗೆ ಮಾತುಕತೆ ನಡೆಸುವಿರಿ. ತಾಯಿಯ ಕಡೆಯಿಂದಲೂ ಒಳ್ಳೆಯ ಸುದ್ದಿ ಬರಲಿದೆ. ಅದು ನೀವು ಕೆಲಸದಲ್ಲಿರುವಾಗ ನೆಮ್ಮದಿಯನ್ನು ಕೊಡಬಹುದು. ಕೆಲಸ ಹೆಚ್ಚಾದರೂ ನಿಮ್ಮ ಮೇಲಾಧಿಕಾರಿಗ ಮತ್ತು ವರಿಷ್ಠರ ಪ್ರಶಂಸೆಗಳಿಂದ ಉತ್ತೇಜನಗೊಳ್ಳುವಿರಿ. ಸರಕಾರಿ ಕೆಲಸದ ನಿಮಿತ್ತ ಪ್ರಯಾಣ ತೆರಳುವಿರಿ. ಅದು ಶುಭದಾಯಕವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವೃಷಭ :- ನಿಮಗೆ … Read more

ಫೆಬ್ರವರಿ-ಮಾರ್ಚ್ ತಿಂಗಳ `ಗೃಹಲಕ್ಷ್ಮಿ’ ಹಣ ಬಿಡುಗಡೆ : ಸಿಎಂ ಸಿದ್ದರಾಮಯ್ಯ ಘೋಷಣೆ

ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಗೃಹಲಕ್ಷ್ಮಿ ಹಣವನ್ನು ಮಹಿಳೆಯರಿಗೆ ಕೊಟ್ಟಿಲ್ಲ ಅನ್ನೋದು ಸಾಬೀತಾಗಿದೆ. ಸದನಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅಪೂರ್ಣ ಮಾಹಿತಿ ನೀಡಿದ್ದಾರೆ, ಸದನವನ್ನ ದಾರಿ ತಪ್ಪಿಸಿದ್ದಾರೆ ಎಂದು ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ವಿಪಕ್ಷಗಳ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಫೆಬ್ರವರಿ ಮಾರ್ಚ್ ತಿಂಗಳ ಗೃಹ ಲಕ್ಷ್ಮಿ ಹಣ ಬಿಡುಗಡೆಯಾಗಿಲ್ಲ. ಪರಿಶೀಲಿಸಿ … Read more