ಈಗಾಗಲೇ ನಾವು ಸುಸ್ತಾಗಿದ್ದೇವೆ, ಪಿಂಚಣಿಯ ಬಗ್ಗೆ ಸದ್ಯಕ್ಕೆ ಚರ್ಚೆ ಬೇಡ : ಡಿಸಿಎಂ ಡಿ.ಕೆ ಶಿವಕುಮಾರ್

ಈಗಾಗಲೇ ನಾವು ಸುಸ್ತಾಗಿದ್ದೇವೆ. ಹಾಗಾಗಿ ಹೊಸ ಪಿಂಚಣಿ ಹಳೇ ಪಿಂಚಣಿಯ ಬಗ್ಗೆ ಸದ್ಯಕ್ಕೆ ಚರ್ಚೆ ಬೇಡ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಸುವರ್ಣ ಮಹೋತ್ಸವ ಹಾಗೂ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಶಿಕ್ಷಕರ ಸಂಘದ 26 ಬೇಡಿಕೆಗಳ ಬಗ್ಗೆ ಪ್ರತಿಕ್ರಿಯಿಸಿದರು. ಬೆಂಗಳೂರಿನಲ್ಲಿ ಶಿಕ್ಷಕರ ಸಂಘಕ್ಕೆ ಜಾಗ ಕೊಡುವುದು ನಮ ವ್ಯಾಪ್ತಿಯಲ್ಲಿ ಇದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುವದಾಗಿ ಭರವಸೆ ನೀಡಿದರು.ಮತದಾರರ ಪಟ್ಟಿ ಪರಿಷ್ಕರಣೆಯಿಂದ ಕೈ ಬಿಡುವಂತೆ … Read more

ಆಂಟಿಯೊಡನೆ ಲವಿಡವಿ, ಹಂತಕನಾದ ಪ್ರೇಮಿ – ಪುಟ್ಟ ಮಕ್ಕಳು ಅನಾಥ.!

ಮದುವೆಯಾಗಿ ಇಬ್ಬರು ಮಕ್ಕಳಿರುವ ಮಹಿಳೆಯೊಂದಿಗೆ ಯುವಕನೊಬ್ಬ ಪ್ರೇಮ ಸಂಬಂಧ ಇಟ್ಟುಕೊಂಡು, ಕುಡಿದ ಅಮಲಿನಲ್ಲಿ ಚಾಕು ಬೀಸಿ ಆಕೆಯನ್ನು ಹತ್ಯೆ ಮಾಡಿರುವ ಶಾಕಿಂಗ್‌ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ತಾಯಿಯನ್ನು ಕಳೆದುಕೊಂಡಿರುವ ಪುಟ್ಟ ಮಕ್ಕಳಿಬ್ಬರು ಈಗ ಅನಾಥರಾಗಿದ್ದಾರೆ. ಚಿಕ್ಕಬಳ್ಳಾಪುರ ನಗರದ ತೇಜಸ್ವೀನಿ (26) ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನನ್ನು ಬಿಟ್ಟು ಇಬ್ಬರು ಪುಟ್ಟ ಮಕ್ಕಳೊಂದಿಗೆ ಏಕಾಂಗಿಯಾಗಿ ಜೀವನ ನಡೆಸುತಿದ್ದಳು. ಹೋಟೆಲ್‌ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಮಹಿಳೆ ಹೋಟೆಲ್‌ನವರೇ ಕೊಟ್ಟಿದ್ದ ರೂಮಿನಲ್ಲಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಳು. ಈ ನಡುವೆ ಮಹಿಳೆಗೆ ಸಂದೀಪ್ … Read more

ಮೋದಿಗೆ 10 ಕೋಟಿ ಫಾಲೋವರ್ಸ್- ಇದರಿಂದ ಏನು ಪ್ರಯೋಜನ ಎಂದ ಪ್ರಕಾಶ್ ರಾಜ್ : ಬರ್ನಲ್ ಬೇಕಾ ಎಂದ ಅಣ್ಣಾಮಲೈ

ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶೇಷ ಸಾಧನೆಯನ್ನು ಮಾಡಿದ್ದರು. ಇನ್ಸ್ಟಾಗ್ರಾಂನಲ್ಲಿ ನೂರು ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿರುವ ವಿಶ್ವದ ಮೊದಲ ನಾಯಕರಾಗಿ ಹೊರಹೊಮ್ಮಿದ್ದರು. ಇದನ್ನು, ಬಿಜೆಪಿ ನಾಯಕ ಅಣ್ಣಾಮಲೈ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಕ್ಕೆ, ಪ್ರಕಾಶ್ ರಾಜ್ ಲೇವಡಿ ಮಾಡಿದ್ದರು. ಇದಕ್ಕೆ, ಮಾಜಿ ಐಪಿಎಸ್ ತಿರುಗೇಟು ನೀಡಿದ್ದಾರೆ. ಬಿಜೆಪಿ, ಸಂಘ ಪರಿವಾರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುವವರಲ್ಲಿ ಮಂಚೂಣಿಯಲ್ಲಿರುವ ನಟ ಪ್ರಕಾಶ್ ರಾಜ್ ಮತ್ತೊಮ್ಮೆ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರ … Read more

ರಾಹುಲ್ ಗಾಂಧಿ ಜನಪ್ರಿಯತೆ ಹೆಚ್ಚುತ್ತಿದ್ದು, BJPಗೆ ರಾಜಕೀಯ ಅಸುರಕ್ಷತೆ ಕಾಡುತ್ತಿದೆ : ಕಾಂಗ್ರೆಸ್ ಟೀಕೆ

ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ರಾಯ್‌ಬರೇಲಿ ಸಂಸದ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾಡಿರುವ ಟೀಕೆಗಳಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಜನಪ್ರಿಯತೆ ಹೆಚ್ಚುತ್ತಿದ್ದು, ಇದರಿಂದ ಬಿಜೆಪಿಗೆ ರಾಜಕೀಯ ಅಸುರಕ್ಷತೆ ಕಾಡುತ್ತಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ. ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ರಾಯ್‌ಬರೇಲಿ ಸಂಸದ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾಡಿರುವ ಟೀಕೆಗಳಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ … Read more

Horoscope Today : 28 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಮೇಷ ರಾಶಿಯವರಿಗೆ ಇದು ಅತ್ಯಂತ ಸೂಕ್ಷ್ಮ ಸಮಯ. ಎಲ್ಲಾ ರೀತಿಯ ಉದ್ವಿಗ್ನತೆಗಳು ಉಕ್ಕಿ ಹರಿದು ನಿಮ್ಮನ್ನು ಅವಮಾನದಲ್ಲಿರುವಂತೆ ಮಾಡುತ್ತದೆ ಎಂಬುಗಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನೀವು ಮುಟ್ಟಿದರೆ ಮುನಿ’ ಎಂಬಂತೆ ವರ್ತಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಸ್ನೇಹಿತರ ಅನಿರೀಕ್ಷಿತ ಪ್ರತಿಕ್ರಿಯೆಗಳಿಂದ ನಿಮ್ಮ ಮನಸ್ಸಿಗೆ ಬೇಸರ ಉಂಟಾಗಬಹುದು. ಅಂತಹ ಸಂದರ್ಭಗಳಲ್ಲಿ ವಿಚಾರಾಸಕ್ತರಾಗಿರುವುದು ಸೂಕ್ತ. ಆಸ್ತಿ ಅಥವಾ ಭೂ ವಿವಾದಗಳಿಂದ ಆದಷ್ಟು ದೂರವಿರಿ. ಅದಕ್ಕೆ ಸಂಬಂಧಿಸಿದ ಯಾವುದೇ ಒಪ್ಪಂದಗಳಿಗೆ ಸಹಿ ಹಾಕಲು ಇಂದು ಸೂಕ್ತ ದಿನವಲ್ಲ. ನಿಮ್ಮ ಹೆತ್ತವರ … Read more

ಬೆಂಗಳೂರು ಗ್ಯಾಂಗ್ ರೇಪ್ ಕೇಸಿಗೆ ಟ್ವಿಸ್ಟ್: ನಿಖಿಲ್-ಡಿಕ್ಸನ್‌ರಿಂದ 19 ಕಾಲೇಜು ಯುವತಿಯರ ಮೇಲೆ ಅತ್ಯಾಚಾರ!

ರಾಜಧಾನಿಯ ಪ್ರತಿಷ್ಠಿತ ಕಾಲೇಜು ಯುವತಿಯರನ್ನು ಗುರಿಯಾಗಿಸಿಕೊಂಡು ನಡೆಸುತ್ತಿದ್ದ ಭೀಕರ ‘ಅತ್ಯಾ*ಚಾರ ದಂಧೆ’ಯನ್ನು ಅಮೃತಹಳ್ಳಿ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಸಕಲೇಶಪುರ ಮೂಲದ ನಿಕಿಲ್ ಮತ್ತು ಆತನಿಗೆ ಸಾಥ್ ನೀಡುತ್ತಿದ್ದ ಪಶ್ಚಿಮ ಬಂಗಾಳದ ಡಿಕ್ಸನ್ ಸಾಂಡ್ರಾ ಎಂಬುವವರನ್ನು ಬಂಧಿಸಿದ ಬೆನ್ನಲ್ಲೇ, ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದಿವೆ. ಇದು ಕೇವಲ ಒಬ್ಬ ಯುವತಿಯ ಮೇಲೆ ನಡೆದ ಹಲ್ಲೆಯಲ್ಲ, ಬದಲಿಗೆ ಹತ್ತಾರು ಹೆಣ್ಣುಮಕ್ಕಳ ಜೀವನದೊಂದಿಗೆ ಆಟವಾಡಿರುವ ದೊಡ್ಡ ಜಾಲ ಎನ್ನುವುದು ಪತ್ತೆಯಾಗಿದೆ. ದಂಧೆಯ ಸ್ವರೂಪ: ಇನ್‌ಸ್ಟಾಗ್ರಾಮ್ ಟು ವಿಲ್ಲಾ ಪಾರ್ಟಿ … Read more

ಪ್ರೀತಿಯ ನಾಟಕವಾಡುತ್ತಾ ಯುವಕನನ್ನು ಬಲೆಗೆ ಬೀಳಿಸಿ ಅತ್ಯಾಚಾರಕ್ಕೆ ಯತ್ನಿಸಿದ ಯುವತಿ.!

ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ವಿಕಲಚೇತನ (ಕಿವುಡು ಮತ್ತು ಮೂಗ) ಯುವಕನೊಬ್ಬನನ್ನು ಹನಿಟ್ರಾಪ್ ಮಾಡಿ ಲಾಡ್ಜ್‌ಗೆ ಕರೆಸಿಕೊಂಡ ಯುವತಿ, ಆತನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಘಟನೆ ಕೊಚ್ಚಿಯ ಪನಂಪಿಳ್ಳಿ ನಗರದಲ್ಲಿ ನಡೆದಿದೆ. ಘಟನೆಯ ವಿವರ: ನಾರ್ತ್ ಪರವೂರ್ ಮೂಲದ ಸ್ವಪ್ನಾ ಎಂಬ ಯುವತಿ, ತನ್ನ ಸ್ನೇಹಿತರಾದ ಜಾನ್ ರಾಹುಲ್, ಅಮಲ್ ಮತ್ತು ಆನಂದ್ ಎಂಬವರೊಂದಿಗೆ ಸೇರಿ ಕೊಲ್ಲಂನ ನಿಲ್ಲಿಲ್ಲಾ ನಿವಾಸಿ ಅಮಲ್ ದೇವ್ ಎಂಬ ಯುವಕನನ್ನು ಹನಿಟ್ರಾಪ್ ಮಾಡಿದ್ದಾಳೆ. ಈಕೆ ಸಂತ್ರಸ್ತ ಯುವಕನೊಂದಿಗೆ ಕಳೆದ ಕೆಲವು … Read more

ಪತಿಯ ಸಾವಿನ ದುಃಖ ಮಾಸುವ ಮುನ್ನವೇ ಮತ್ತೆ ಹಸೆಮಣೆಯೇರಿದ ಪತ್ನಿ; ಪತಿಯ ಸಾವಿಗೆ ಪತ್ನಿಯೇ ಕಾರಣಾನಾ.?

ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿಯ ದಾಸರಹಳ್ಳಿಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ಬೆಳಕಿಗೆ ಬಂದಿದೆ. ಪತಿ ಮೃತಪಟ್ಟ ಕೆಲವೇ ದಿನಗಳಲ್ಲಿ ಪತ್ನಿ ಮತ್ತೊಂದು ಮದುವೆಯಾಗಿರುವ ಹಿನ್ನೆಲೆ ಮೃತನ ಸಾವಿನ ಕುರಿತು ಸಂಶಯ ವ್ಯಕ್ತವಾಗಿದ್ದು, ವ್ಯಕ್ತಿ ಸತ್ತ 23 ದಿನಗಳ ಬಳಿಕ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತನ ಸಹೋದರಿಯಿಂದ ಪೊಲೀಸ್ ಠಾಣೆಗೆ ದೂರು! ದಾಸರಹಳ್ಳಿ ನಿವಾಸಿ ಪರಮೇಶ್ (50) ಜನವರಿ 31ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅದೇ ದಿನ ಅಂತ್ಯಕ್ರಿಯೆ ನಡೆಸಿ ಮಣ್ಣಿನಲ್ಲಿ ಸಮಾಧಿ ಮಾಡಲಾಗಿತ್ತು. ಆದರೆ ಪರಮೇಶ್ … Read more

ದಲಿತರಿಗೆ ಹೇರ್ ಕಟ್ ಮಾಡಲು ನಿರಾಕರಣೆ : ಗದಗದಲ್ಲಿ ಸರ್ಕಾರದಿಂದಲೇ ‘ಕ್ಷೌರದ ಅಂಗಡಿ’ ಪ್ರಾರಂಭ.!

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಸರ್ಕಾರವೇ ಮುಂದೆ ನಿಂತು ಗ್ರಾಮದಲ್ಲಿ ಹೊಸದಾಗಿ ಕ್ಷೌರದ ಅಂಗಡಿಯನ್ನು ಪ್ರಾರಂಭಿಸಿದೆ. ಘಟನೆಯ ಹಿನ್ನೆಲೆ : ಸಿಂಗಟಾಲೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ಸ್ಥಳೀಯ ಕ್ಷೌರಿಕರು ಹಿಂದೇಟು ಹಾಕಿದ್ದರು. ಈ ಬಗ್ಗೆ ದೂರುಗಳು ಕೇಳಿಬಂದಾಗ ತಹಶೀಲ್ದಾರ್ ಸಭೆ ನಡೆಸಿ, ನೋಟಿಸ್ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕ್ಷೌರಿಕರು ತಮ್ಮ ಪಟ್ಟನ್ನು ಸಡಿಲಿಸದೆ ಅಂಗಡಿಗಳನ್ನೇ ಬಂದ್ ಮಾಡಿದ್ದರು. ನಿರಾಕರಣೆಗೆ ಕಾರಣವೇನು.? ಗ್ರಾಮದ ನಂಬಿಕೆಯಂತೆ, ಪ್ರತಿವರ್ಷ ಮಹಾನವಮಿಯ … Read more

ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆ | ಡಿಕೆಶಿಗೆ ಜ್ಞಾನೋದಯವಾಗಿದೆ: ಕೇಂದ್ರ ಸಚಿವ ಎಚ್. ಡಿ ಕುಮಾರಸ್ವಾಮಿ

‘ಗ್ಯಾರಂಟಿಗಳಿಗೆ ಖರ್ಚು ಮಾಡಿದ ಹಣವನ್ನು ರಾಜ್ಯ ಸರ್ಕಾರವು ಶಾಲೆ-ಆಸ್ಪತ್ರೆಗಳಿಗೆ ವಿನಿಯೋಗಿಸಿದ್ದರೆ ಸಮಸ್ಯೆ ಪರಿಹಾರವಾಗುತ್ತಿತ್ತು. ಈಗ ಆಸ್ಪತ್ರೆಗಳಲ್ಲಿ ಔಷಧಿಗಳಿಲ್ಲ. ಅವಧಿ ಮುಗಿದ ಔಷಧಿ ವಿತರಿಸಲಾಗುತ್ತಿದೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು. ‘ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆಯಾಗುತ್ತಿದೆ’ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ತಾಲ್ಲೂಕಿನ ಕೊಡಕಹಳ್ಳಿಯಲ್ಲಿ ಗುರುವಾರ ಸುದ್ದಿಗಾರರಿಗೆ ‍‍ಪ್ರತಿಕ್ರಿಯಿಸಿ, ‘ಅವರಿಗೆ ತಡವಾಗಿ ಜ್ಞಾನೋದಯವಾಗಿದೆ. ಇದೇ ಮಾತನ್ನು ಆರ್‌.ವಿ. ದೇಶಪಾಂಡೆ ಹಾಗೂ ಬಸವರಾಜ ರಾಯರೆಡ್ಡಿ ಮೊದಲೇ ಹೇಳಿದ್ದರು’ ಎಂದರು. ‘ರಾಜ್ಯದ ಜನರ ಬಗ್ಗೆ ಭಯಭಕ್ತಿ ಇದ್ದರೆ, ದೇವರಾಜ ಅರಸು … Read more