ಸ್ಟ್ರೋಕ್ ಬರುವ ಮುನ್ನವೇ ದೇಹ ನೀಡುವ ಲಕ್ಷಣಗಳು : ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ಪಾರ್ಶ್ವವಾಯು (Stroke) ಒಂದು ಅತ್ಯಂತ ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಪ್ರಪಂಚದಾದ್ಯಂತ ಅನೇಕ ಜನರು ಇದರಿಂದ ಬಳಲುತ್ತಿದ್ದಾರೆ. ಮೆದುಳಿಗೆ ಆಮ್ಲಜನಕದ ಪೂರೈಕೆ ಭಾಗಶಃ ನಿಂತಾಗ ಇದು ಸಂಭವಿಸುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ, ನಿಮಿಷಗಳಲ್ಲಿ ಜೀವಕ್ಕೆ ಅಪಾಯ ಅಥವಾ ಶಾಶ್ವತ ಅಂಗವೈಕಲ್ಯತೆ (Paralysis) ಉಂಟಾಗಬಹುದು. ಆದರೆ, ಒಳ್ಳೆಯ ವಿಷಯವೇನೆಂದರೆ, ಎಲ್ಲಾ ಕಾಯಿಲೆಗಳಂತೆ, ನಮ್ಮ ದೇಹವು ಪಾರ್ಶ್ವವಾಯು ಸಂಭವಿಸುವ ಮುನ್ನವೇ ಕೆಲವು ಎಚ್ಚರಿಕೆ ಚಿಹ್ನೆಗಳನ್ನು ನೀಡುತ್ತದೆ. ಕೆಲವು ಪಾರ್ಶ್ವವಾಯುಗಳು ಇದ್ದಕ್ಕಿದ್ದಂತೆ ಸಂಭವಿಸಿದರೂ, ಹೆಚ್ಚಿನವು ತಿಂಗಳುಗಳ ಅವಧಿಯಲ್ಲಿ ನಿಧಾನವಾಗಿ ರೂಪುಗೊಳ್ಳುತ್ತವೆ. ಈ … Read more

ಮಾವನ ಮಗನನ್ನೇ ಲವ್ ಮಾಡಿ ಮದುವೆಯಾದ್ರೂ 2 ತಿಂಗಳು ಸಂಸಾರ ಮಾಡದ ಯುವತಿ; ನಗರ ಜೀವನಕ್ಕೆ ಆಸೆಪಟ್ಟು ಬದುಕು ಅಂತ್ಯ!

ಹಲವು ವರ್ಷಗಳ ಕಾಲ ಮಾವನ ಮಗನನ್ನೇ ಲವ್ ಮಾಡಿ ಮದುವೆಯಾದ ಯುವತಿ 2 ತಿಂಗಳು ಬಾಳುವೆ ಮಾಡದೇ ಪ್ರಾಣ ಬಿಟ್ಟಿದ್ದಾಳೆ. ನಗರ ಜೀವನಕ್ಕೆ ಆಸೆಪಟ್ಟು ಬದುಕು ಅಂತ್ಯಗೊಳಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಪ್ರೀತಿಸಿದ ಯುವಕನನ್ನೇ ಕೈಹಿಡಿದು, ಹೊಸ ಜೀವನದ ಕನಸು ಹೊತ್ತು ಹಸೆಮಣೆ ಏರಿದ್ದ ನವವಿವಾಹಿತೆಯೊಬ್ಬಳು ಮದುವೆಯಾದ ಕೇವಲ ಎರಡೇ ತಿಂಗಳಲ್ಲಿ ಆತ್ಮ*ಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಗರದ ಸಿದ್ದೇಶ್ವರ ಕಾಲೋನಿಯಲ್ಲಿ ನಡೆದಿದೆ. ಅನುಸೂಯಾ ಅವಿನಾಶ್ ಆಕಡೆ (26) ಆತ್ಮ*ಹತ್ಯೆ ಮಾಡಿಕೊಂಡ ದುರ್ದೈವಿ. ಮೂಲತಃ ಹಳ್ಳಿಯವರಾದ ಅನುಸೂಯಾ, … Read more

ಬೈಕ್‌ ಚಾಲಕರಿಗೆ ಬಿಗ್‌ ರಿಲೀಫ್‌ ; ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ (Bike Taxi) ಸೇವೆಗಳ ಮೇಲಿನ ನಿಷೇಧದ ಬಗ್ಗೆ ಹೈಕೋರ್ಟ್‌ನಲ್ಲಿ (Highcourt) ದೀರ್ಘಕಾಲದಿಂದ ವಿಚಾರಣೆ ನಡೆಯುತ್ತಿದೆ. ರ್ಯಾಪಿಡೋ, ಉಬರ್ ಮತ್ತು ಓಲಾ ಸೇರಿದಂತೆ ರೈಡ್-ಹೇಲಿಂಗ್ ಕಂಪನಿಗಳು ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಲ್ಲಿಸುವಂತೆ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಇದೀಗ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠವು ಈ ಪ್ರಕರಣವನ್ನು ವಿಚಾರಣೆ ನಡೆಸಿ ಆದೇಶ ನೀಡಿದೆ. ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಮೇಲಿದ್ದ … Read more

ಮುಸ್ಲಿಂ ಯುವಕನ ಪ್ರೀತಿಸಿದ ತಪ್ಪಿಗೆ ಅಮಾನುಷ ಶಿಕ್ಷೆ : ಪ್ರೇಮಿಗಳ ಕೈಕಾಲು ಕಟ್ಟಿ ಕೊಡಲಿಯಿಂದ ಕೊಚ್ಚಿ ಕೊಂದ ಅಣ್ಣಂದಿರು!

ಉತ್ತರ ಪ್ರದೇಶದ ಮುರಾದಾಬಾದ್‌ನಲ್ಲಿ ಅಂತರಧರ್ಮೀಯ ಪ್ರೇಮ(Loving) ಪ್ರಕರಣವೊಂದು ರಕ್ತಸಿಕ್ತ ಅಂತ್ಯ ಕಂಡಿದೆ. 27 ವರ್ಷದ ಮುಸ್ಲಿಂ ಯುವಕ ಮತ್ತು 22 ವರ್ಷದ ಹಿಂದೂ ಯುವತಿಯನ್ನು ಆಕೆಯ ಸಹೋದರರೇ ಭೀಕರವಾಗಿ ಹತ್ಯೆ ಮಾಡಿ ಹೂತುಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದ ಹಿನ್ನೆಲೆ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಅರ್ಮಾನ್ (27), ಕಳೆದ ಕೆಲವು ತಿಂಗಳುಗಳಿಂದ ಮುರಾದಾಬಾದ್‌ನಲ್ಲಿ ವಾಸವಾಗಿದ್ದ. ಈ ಸಮಯದಲ್ಲಿ ಆತನಿಗೆ ಕಾಜಲ್ (22) ಎಂಬ ಯುವತಿಯ ಪರಿಚಯವಾಗಿ, ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ, ಈ ಅಂತರಧರ್ಮೀಯ ಸಂಬಂಧಕ್ಕೆ ಕಾಜಲ್ … Read more

‘ಬಿಜೆಪಿ ಶಾಸಕರು ನನ್ನ ಬಟ್ಟೆ ಹರಿದಿದ್ದಾರೆ : ರಣಹೇಡಿಗಳು, ಬ್ರಿಟೀಷರ ಬೂಟ್ ನೆಕ್ಕಿದವರು ರಾಜ್ಯದ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ’

ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಇಂದು ಕೇವಲ ರಾಜಕೀಯ ಭಾಷಣಗಳಿಗಷ್ಟೇ ಅಲ್ಲ, ದೈಹಿಕ ನೂಕುನುಗ್ಗಲಿಗೂ ಸಾಕ್ಷಿಯಾಯಿತು. ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದೆ ಹೊರನಡೆದ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರನ್ನು ತಡೆಯಲು ಹೋದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹಾಗೂ ಮಾರ್ಷಲ್‌ಗಳ ನಡುವೆ ತೀವ್ರ ಘರ್ಷಣೆ ನಡೆದಿದ್ದು, ಈ ವೇಳೆ ಹರಿಪ್ರಸಾದ್ ಅವರ ಜುಬ್ಬಾ ಹರಿದುಹೋಗಿರುವ ಘಟನೆ ಸಂಭವಿಸಿದೆ. ರಾಜ್ಯಪಾಲರು ಕೇವಲ ಎರಡು ಸಾಲುಗಳ ಭಾಷಣ ಮಾಡಿ ಸದನದಿಂದ ಹೊರನಡೆಯುತ್ತಿದ್ದಂತೆ ಆಕ್ರೋಶಗೊಂಡ ಕಾಂಗ್ರೆಸ್ ನಾಯಕರು ಅವರನ್ನು … Read more

Horoscope Today : 23 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಇಂದು ನೀವು ಆರ್ಥಿಕ ಸ್ವಾತಂತ್ರ್ಯವನ್ನು ಆನಂದಿಸುವುದರಿಂದ ಗಣೇಶನೊಂದಿಗೆ, ಲಕ್ಷ್ಮೀದೇವಿಯ ಆಶೀರ್ವಾದವೂ ನಿಮಗೆ ಲಭ್ಯವಾಗಲಿದೆ. ನಿಮ್ಮ ಉದ್ಯಮದಲ್ಲಿ ಲಾಭವನ್ನು ಪಡೆಯಬಹುದು. ಇದೇ ಸಮಯಕ್ಕೆ, ಸಮಾಜದಲ್ಲಿ ಮನ್ನಣೆಯನ್ನೂ ಗುರುತಿಸಬಹುದು. ವಧುವರರ ಅನ್ವೇಷಣೆಯಲ್ಲಿ ತೊಡಗಿರುವವರಿಗೆ ಶೀಘ್ರದಲ್ಲೇ ಸಂಗಾತಿಯು ದೊರೆಯುವ ಸಂಭವವಿರುವುದರಿಂದ ಅದೃಷ್ಟ ಅವಧಿಗೆ ಪ್ರವೇಶಿಸಬಹುದು. ಏನೇ ಆದರೂ, ಮಧ್ಯಾಹ್ನದ ಬಳಿಕ, ಕೆಲಸದಲ್ಲಿ ಗಮನ ಮತ್ತು ಏಕಾಗ್ರತೆಯ ಕೊರತೆಯನ್ನು ನೀವು ಎದುರಿಸಬಹುದು. ನಿಮ್ಮ ಆರೋಗ್ಯವು ಕ್ಷೀಣಿಸುವುದರಿಂದ ಇದು ನಿಮಗೆ ವೈದ್ಯಕೀಯ ವೆಚ್ಚಗಳನ್ನು ತರಬಹುದು. ನಿಮ್ಮ ಕುಟುಂಬ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಪ್ರಾರಂಭದಲ್ಲೇ … Read more

ಬೆತ್ತಲೆ ಮಾಡಿ, ಕರೆಂಟ್ ಶಾಕ್ ಕೊಟ್ಟು ಹಿಂಸೆ : ಬದುಕಿರುವಾಗಲೇ ನರಕ ನೋಡಿ ಪ್ರಾಣಬಿಟ್ಟ ಮಹಿಳೆ

ಪತ್ನಿ ಶೀಲದ ಮೆಲೆ ಶಂಕಿಸಿ ಆಕೆಯ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಪತ್ತಿಯೇ ಆಕೆಯನ್ನು ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಾಪೋಲಿ ಗ್ರಾಮದಲ್ಲಿ ನಡೆದಿದೆ. ಕಿರಣಾ ಮೃತ ಮಹಿಳೆಯಾಗಿದ್ದು, ಆರೋಪಿ ಅವಿನಾಶ್ನನ್ನು ಪೊಲೀಸರು ಬಂಧಿಸಿದ್ದಾರೆ. ಪತಿಯನ್ನು ಮರ್ಡರ್ ಮಾಡಿ ಬಳಿಕ ಏನೂ ಗೊತ್ತಿಲ್ಲದಂತೆ ಡ್ರಾಮಾ ಮಾಡಿದ್ದ ಅವಿನಾಶ್, ಹೃದಯಾಘಾತದಿಂದ ಕಿರಣಾ ಮೃತಪಟ್ಟಿರೋದಾಗಿ ಎಲ್ಲರನ್ನ ನಂಬಿಸಿದ್ದ. ಆದ್ರೆ ಮೃತದೇಹದ ಸ್ನಾನ ಮಾಡಿಸುವ ವೇಳೆ ಅಸಲೀ ಸತ್ಯ ರಿವೀಲ್ ಆಗಿದೆ. ಅವಿನಾಶ್ ಮತ್ತು ಕಿರಣಾ … Read more

ಬಸ್ ಕಿರುಕುಳದ ವಿಡಿಯೋ ವೈರಲ್: ಅಮಾಯಕನ ಸಾವಿಗೆ ಕಾರಣವಾದ ‘ಸೋಷಿಯಲ್ ಮೀಡಿಯಾ ಸ್ಟಾರ್’ ಈಗ ಜೈಲುಪಾಲು!

ಖಾಸಗಿ ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹಂಚಿಕೊಳ್ಳುವ ಮೂಲಕ ವ್ಯಕ್ತಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶೀಮ್‌ಜಿತಾ ಮುಸ್ತಫಾ ಎಂಬಾಕೆಯನ್ನು ಕೇರಳ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕಳೆದ ಶುಕ್ರವಾರ ಕಣ್ಣೂರಿನ ಪಯ್ಯನ್ನೂರು ಬಳಿ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಬಟ್ಟೆ ಅಂಗಡಿಯೊಂದರ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ಗೋವಿಂದಪುರಂ ನಿವಾಸಿ ಯು. ದೀಪಕ್ (41) ಎಂಬುವವರು ತಮಗೆ ಅಸಭ್ಯವಾಗಿ ಸ್ಪರ್ಶಿಸಿದ್ದಾರೆ ಎಂದು ಮಲಪ್ಪುರಂನ ಅರೀಕೋಡ್ ಪಂಚಾಯತ್ ಮಾಜಿ ಸದಸ್ಯೆಯೂ ಆಗಿರುವ ಶೀಮ್‌ಜಿತಾ ಆರೋಪಿಸಿದ್ದರು. … Read more

ನೇಮಕಾತಿ ವಯೋಮಿತಿ 5 ವರ್ಷಗಳ ಕಾಲ ಸಡಿಲ.? ಸಂಪುಟ ಸಭೆಯಲ್ಲಿ ಅಧಿಕೃತ ನಿರ್ಣಯ ಸಾಧ್ಯತೆ.?

ರಾಜ್ಯದ ಎಲ್ಲಾ ರೀತಿಯ ಸಿವಿಲ್‌ ಹುದ್ದೆಗಳಿಗೆ 2027ರ ಡಿ.31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷ ಸಡಿಲಗೊಳಿಸಲು ಸರ್ಕಾರ ತೀರ್ಮಾನಿಸಿದ್ದು, ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಅಧಿಕೃತ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ. ರಾಜ್ಯದಲ್ಲಿ ಒಳ ಮೀಸಲಾತಿ ವಿವಾದ ಮತ್ತಿತರ ಕಾರಣಗಳಿಂದ ಕಳೆದ ಎರಡು ವರ್ಷಗಳಿಂದ ನೇಮಕಾತಿ ವಿಳಂಬ ಆಗಿದೆ. ಈ ಹಿನ್ನೆಲೆಯಲ್ಲಿ ಹೋರಾಟಕ್ಕಿಳಿದಿರುವ ಉದ್ಯೋಗಾಕಾಂಕ್ಷಿಗಳು ವಯೋಮಿತಿಯನ್ನು 5 ವರ್ಷ ಸಡಿಲಿಕೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಸೆಪ್ಟೆಂಬರ್‌ನಲ್ಲಿ … Read more

ರಾಜ್ಯದ ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ : ಮಹಿಳೆ ಅರೆಸ್ಟ್

ರಾಜ್ಯದ ಪ್ರತಿಷ್ಠಿತ ಮಠದ ಸ್ವಾಮೀಜಿಯೊಬ್ಬರನ್ನು ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ್ದ ಮಹಿಳೆಯನ್ನು ಬಂಧಿಸಿರುವ ಘಟನೆ ನಡೆದಿದೆ. ಬೆಂಗಳೂರು ಸಿಸಿಬಿ ಪೊಲೀಸರು ಚಿಕ್ಕಮಗಳೂರು ಮೂಲದ ಮಹಿಳೆಯನ್ನು ಬಂಧಿಸಿದ್ದಾರೆ. ಸ್ಪೂರ್ತಿ ಬಂಧಿತ ಮಹಿಳೆ. ಸ್ವಾಮೀಜಿಯಿಂದ ಈಗಾಗಲೇ ಮಹಿಳೆ 4.5 ಲಕ್ಷ ಹಣ ವಸೂಲಿ ಮಾಡಿದ್ದಳು. ಬಳಿಕ ೧ ಕೋಟಿ ರೂಪಾಯಿಗೆ ಮತ್ತೆ ಬೇಡಿಕೆ ಇಟ್ಟಿದ್ದಳು. 5 ತಿಂಗಳ ಹಿಂದೆ ಮಹಿಳೆ ತಾನು ತಿಪಟೂರಿನಲ್ಲಿ ವ್ಯಾಸಂಗ ಮಾಡಿದ್ದೇನೆ ಎಂದು ಸ್ವಾಮೀಜಿಗೆ ಪರಿಚಯಿಸಿಕೊಂಡಿದ್ದಳು. ಹೀಗೆ ಆರಂಭವಾದ ಪರಿಚಯದಲ್ಲಿ ಮಹಿಳೆ ಸ್ವಾಮೀಜಿಗೆ … Read more