ಅನ್ಯ ಧರ್ಮಿಯ ಜೊತೆ ಮದುವೆ : ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಅಪ್ಪ- ಅಮ್ಮನ ಇಚ್ಛೆಗೆ ವಿರುದ್ಧವಾಗಿ, ಅನ್ಯ ಧರ್ಮಿಯರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಪಾಠ ಕಲಿಸುವಂಥ ತೀರ್ಪೊಂದನ್ನು ಸುಪ್ರೀಂಕೋರ್ಟ್ ನೀಡಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳು ಇಬ್ಬರಿಗೂ ಈಗ ಕಾನೂನು ಸಮಾನ ಅವಕಾಶವನ್ನು ನೀಡಿದೆ ನಿಜವಾದರೂ, ಸ್ವಯಾರ್ಜಿತ ಆಸ್ತಿಯನ್ನು ತಂದೆಯಾದವ ಯಾರಿಗೆ ಬೇಕಾದರೂ ಕೊಡಬಹುದಾದ ಕಾನೂನು ಇದೆ. ಆದರೆ ಇಂಥ ಆಸ್ತಿಯಲ್ಲಿಯೂ ಕೆಲವೊಮ್ಮೆ ಪ್ರಶ್ನೆ ಮಾಡುವ ಅಧಿಕಾರ ಹೆಣ್ಣುಮಕ್ಕಳಿಗೆ ಬರಬಹುದು. ಆದರೆ, ಇದೀಗ ಅಪ್ಪ-ಅಮ್ಮನ ಇಚ್ಛೆಗೆ ವಿರುದ್ಧವಾಗಿ ಬೇರೆ ಧರ್ಮದ ಯುವಕನ ಜೊತೆ ಮದುವೆಯಾಗಿರುವ ಹೆಣ್ಣುಮಗಳಿಗೆ … Read more

ಇಳಿ ವಯಸ್ಸಿನಲ್ಲಿ ಮತ್ತೊಂದು ಮದುವೆಯಾದ ತಂದೆ – ಆಸ್ತಿಗಾಗಿ ಮಕ್ಕಳಿಂದ ಹಲ್ಲೆ.!

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ 68 ವರ್ಷದ ವ್ಯಕ್ತಿಯೋರ್ವ ಇಳಿ ವಯಸ್ಸಿನಲ್ಲೂ ಎರಡನೇ ಮದುವೆಯಾಗಿದ್ದು, ಇದೀಗ ಮಕ್ಕಳು ಆಸ್ತಿ ಬರೆದುಕೊಡುವಂತೆ ತಂದೆಯ ಮೇಲೆ ಹಲ್ಲೆ ನಡೆಸಿ ಬಳಿಕ ಅವರೇ ಬಂದು ಠಾಣೆಯಲ್ಲಿ ದೂರು ನೀಡಿರುವ ಘಟನೆ ನಡೆಸಿದ ಘಟನೆ ನಡೆದಿದೆ. ಎರಡು ವರ್ಷದ ಹಿಂದೆ ರಾಜಣ್ಣ ಮೊದಲ ಪತ್ನಿ ಮೃತಪಟ್ಟಿದ್ದರು, ಹೀಗಾಗಿ ತನ್ನ ಪತಿಯಿಂದ ದೂರವಾಗಿದ್ದ ಗೀತಾ (58) ಎಂಬುವವರನ್ನು ಡಿ.17 ರಂದು ಹೊಳೆನರಸೀಪುರ ತಾಲ್ಲೂಕಿನ, ಮಾವಿನಕೆರೆ ಬೆಟ್ಟದಲ್ಲಿ 68 ವರ್ಷದ ರಾಜಣ್ಣ ಮದುವೆಯಾಗಿದ್ದರು. ಆದರೆ ಇವರಿಬ್ಬರ ಮದುವೆಗೆ … Read more

ತಾಕತ್ತಿದ್ರೆ ನೋಟಲ್ಲಿರುವ ಮಹಾತ್ಮ ಗಾಂಧಿ ಚಿತ್ರ ತೆಗೆಯಿರಿ : ಕೇಂದ್ರಕ್ಕೆ ಡಿ.ಕೆ ಶಿವಕುಮಾರ್ ಸವಾಲು!

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ನರೇಗಾ) ಯೋಜನೆ ಹೆಸರು ಬದಲು ಮತ್ತು ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ‘ಸತ್ಯಮೇವ ಜಯತೆ’ ಘೋಷವಾಕ್ಯದಡಿ ಶನಿವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಬೃಹತ್‌ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಯುಪಿಎ ಅವಧಿಯಲ್ಲಿ ಜಾರಿಗೆ ತಂದ ನರೇಗಾ ಯೋಜನೆ ಹೆಸರು ಬದಲಾವಣೆ ಮಾಡುವ ಮೂಲಕ ಕೇಂದ್ರ ಸರ್ಕಾರ ಮಹಾತ್ಮ ಗಾಂಧೀಜಿ ಅವರಿಗೆ ಅಪಮಾನ ಮಾಡುತ್ತಿದೆ. ನ್ಯಾಷನಲ್‌ ಹೆರಾಲ್ಡ್‌ … Read more

ಅಸಮರ್ಥರನ್ನು ಜಗದೇಕ ವೀರ ಎನ್ನಬೇಕೆ? : ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ವಿರುದ್ಧ ಪ್ರಿಯಾಂಕ್ ಖರ್ಗೆ ಟೀಕೆ

ರಾಜ್ಯ ಸರ್ಕಾರದ ವಿರುದ್ಧ ಅತಾರ್ಕಿಕ ಟೀಕೆ ನಡೆಸುತ್ತಿರುವ ಬಿಜೆಪಿ ನಾಯಕರಿಗೆ ಪ್ರತಿಕ್ರಿಯೆಯಾಗಿ, ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಗೃಹ ಸಚಿವೆ ಅಮಿತ್ ಶಾ ಅವರನ್ನು ಅಸಮರ್ಥ ನಾಯಕ ಎಂದು ಟೀಕಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಸಾಮಾಜಿಕ ಜಾಲತಾಣದ ಮೂಲಕ ಪ್ರಶ್ನಿಸಿದ್ದಾರೆ. ಬಾಂಗ್ಲಾ ವಲಸಿಗರು ದೇಶದ ಗಡಿ ದಾಟಿ ಬರುವಂತಾಗಿದ್ದು, ಅದು ಕೇಂದ್ರ ಗೃಹ ಸಚಿವೆ ಅವರ ವೈಫಲ್ಯವಲ್ಲವೇ? ದೆಹಲಿಯ ಕೆಂಪುಕೋಟೆ ಸ್ಫೋಟಗಳು, ಪಹಲ್ಗಾಮ್ ದಾಳಿ ಮತ್ತು ಮಣಿಪುರದ ದಂಗೆ ವೇಳೆ ಅವರ … Read more

ಸಾಮೂಹಿಕ ಅತ್ಯಾಚಾರ ಪ್ರಕರಣ: ಏಳೂ ಆರೋಪಿಗಳು ಯಾದಗಿರಿಗೆ ಗಡಿಪಾರು

ಜಿಲ್ಲೆಯ ಹಾನಗಲ್ ಸಮೀಪದ ನಾಲ್ಕರ ಕ್ರಾಸ್‍ನಲ್ಲಿ 2024ರ ಜ. 8ರಂದು ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಏಳು ಪ್ರಮುಖ ಆರೋಪಿಗಳನ್ನು ಹಾವೇರಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.. ಜಿಲ್ಲಾ ಎಸ್‌ಪಿ ಅವರು ಸಲ್ಲಿಸಿದ್ದ ಪ್ರಸ್ತಾವದ ವಿಚಾರಣೆ ನಡೆಸಿದ್ದ ಸವಣೂರು ಉಪವಿಭಾಗಾಧಿಕಾರಿ ಶುಭಂ ಶುಕ್ಲಾ, ಪ್ರಕರಣದ ಏಳೂ ಆರೋಪಿಗಳನ್ನು ಗಡಿಪಾರು ಮಾಡಿ ಡಿ.18ರಂದು ಆದೇಶ ಹೊರಡಿಸಿದ್ದಾರೆ. ಅಕ್ಕಿಆಲೂರಿನ ಸಮೀವುಲ್ಲಾ ಲಾಲನವರ, ಅಫ್ತಾಬ್ ಚಂದನಕಟ್ಟೆ, ಮದಾರಸಾಬ್ ಮಂಡಕ್ಕಿ, ಮೊಹಮ್ಮದ್ ಸಾದಿಕ್ ಅಗಸಿಮನಿ, ಶೋಯೆಬ್ ಮುಲ್ಲಾ, ತೌಸಿಫ್ ಚೋಟಿ ಹಾಗೂ … Read more

ವರದಕ್ಷಿಣೆ’ಗಾಗಿ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಹೊಡೆದು ಕೊಂದ ಪಾಪಿ ಪತಿ : ಭಯಾನಕ ವಿಡಿಯೋ ವೈರಲ್

ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಕೃತ್ಯ ನಡೆದಿದ್ದು, ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನು ಪಾಪಿ ಪತಿಯೊಬ್ಬ ಮನಸೋ ಇಚ್ಛೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ತಂದೂರ್ ಪಟ್ಟಣದ ಸಾಯಿಪುರ ಕಾಲೋನಿಯಲ್ಲಿ ಪ್ರೇಮ ವಿವಾಹವಾಗಿದ್ದ ತನ್ನ ಪತ್ನಿ ಅನುಷಾ (22) ಮೇಲೆ ಪರಮೇಶ್ ಕುಮಾರ್ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಕೌಟುಂಬಿಕ ಕಲಹ ಮತ್ತು ಪೋಷಕರ ವಿರೋಧದ ನಡುವೆ ನಡೆದ ಈ ಕ್ರೂರ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಯಿಪುರ … Read more

ರೈಲಿನ ಬಾಗಿಲಿನಲ್ಲಿ ನಿಲ್ಲುವವರೇ ಎಚ್ಚರ : ಆಕಸ್ಮಿಕವಾಗಿ ಬಿದ್ದು ನವ ವಿವಾಹಿತ ದಂಪತಿ ಸಾವು.!

ರೈಲಿನಲ್ಲಿ ಪ್ರಯಾಣಿಸುವಾಗ ಎಚ್ಚರವಾಗಿರಿ, ರೈಲಿನ ಬಾಗಿಲಿನ ಬಳಿ ನಿಂತಿದ್ದ ವೇಳೆ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ನವವಿವಾಹಿತ ದಂಪತಿ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಯಾದದ್ರಿ ಭುವನಗಿರಿ ಜಿಲ್ಲೆಯ ವಂಗಪಲ್ಲಿ-ಅಲೇರು ರೈಲು ಮಾರ್ಗದಲ್ಲಿ ಗುರುವಾರ ಮಧ್ಯರಾತ್ರಿ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ನವವಿವಾಹಿತ ದಂಪತಿ ಸಾವನ್ನಪ್ಪಿದ್ದಾರೆ. ರೈಲ್ವೆ ಪೊಲೀಸರ ಪ್ರಕಾರ ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಸಿಂಹಾಚಲಂ (25) ಮತ್ತು ಭವಾನಿ (22) ಎರಡು ತಿಂಗಳ ಹಿಂದೆ ವಿವಾಹವಾದರು. ಸಿಂಹಾಚಲಂ ಹೈದರಾಬಾದ್‌ನಲ್ಲಿ ರಾಸಾಯನಿಕ ಉದ್ಯಮದಲ್ಲಿ ಕೆಲಸ ಮಾಡುತ್ತಾ … Read more

ಇನ್ಮುಂದೆ ರಾಜ್ಯ ಸರ್ಕಾರಿ ನೌಕರರು ಈ ರೂಲ್ಸ್‌ ಬ್ರೇಕ್‌ ಮಾಡಿದ್ರೆ ಕೆಲಸವೇ ಹೋಗುತ್ತೆ.!

ಕರ್ನಾಟಕದ ಸರ್ಕಾರಿ ಅಧಿಕಾರಿಗಳ ಚಲನವಲನ ರಿಜಿಸ್ಟಾರ್, ನಗದು ಘೋಷಣೆ ರಿಜಿಸ್ಟಾರ್ ನಿರ್ವಹಣೆಯ ಜೊತೆಗೆ ಸಭ್ಯ ಉಡುಗೆ ತೊಡುಗೆಗಳನ್ನು ಧರಿಸುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಸರ್ಕಾರಿ ನೌಕರರ ಕುರಿತು ಸಾರ್ವಜನಿಕರಿಂದ ಹಾಗೂ ಸಂಘ ಸಂಸ್ಥೆಗಳಿಂದ ಸಾಕಷ್ಟು ದೂರು ಬಂದ ಮೇಲೆ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಹೀಗಾಗಿ ಸರ್ಕಾರಿ ನೌಕರರು ಕಡ್ಡಾಯವಾಗಿ ಈ ಕೆಳಗಿನ ಸೂಚನೆಗಳನ್ನು ಪಾಲನೆಬೇಕಾಗಿ ತಿಳಿಸಲಾಗಿದೆ. • ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಚಲನವಲನ ವಹಿ (Movement Register) ಕಡ್ಡಾಯವಾಗಿ ನಿರ್ವಹಿಸಬೇಕು.• … Read more

ಇನ್ಶೂರೆನ್ಸ್ ಹಣಕ್ಕಾಗಿ ಹಾವು ಕಚ್ಚಿಸಿ ತಂದೆಯನ್ನೇ ಕೊಂದ ಮಕ್ಕಳು

ಮೂರು ಕೋಟಿ ಇನ್ಶೂರೆನ್ಸ್ ಹಣಕ್ಕಾಗಿ ಮಕ್ಕಳು ಹಾವು ಕಚ್ಚಿಸಿ ತಂದೆಯನ್ನೇ ಕೊಲೆಗೈದಿರುವ ಘಟನೆ ತಮಿಳುನಾಡು ಜಿಲ್ಲೆಯ ತಿರುವಳ್ಳೂರು ಜಿಲ್ಲೆಯಲ್ಲಿ ನಡೆದಿದೆ. ಎಸ್ ಐಟಿ ತನಿಖೆ ವೇಳೆ ಕೊಲೆ ರಹಸ್ಯ ಬಯಲಾಗಿದೆ. ತಂದೆಯ ಇನ್ಶೂರೆನ್ಸ್ ಹಣಕ್ಕಾಗಿ ಮಕ್ಕಳಿಬ್ಬರು ತಂದೆಯನ್ನು ಹಾವು ಕಚ್ಚಿಸಿ ಕೊಲೆಗೈದಿದ್ದಾರೆ. ಹಾವು ಕಡಿತದಿಂದ ಸಾವು ಎಂದು ಆರಂಭದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಇನ್ಶೂರೆನ್ಸ್ ಕಂಪನಿ ಈ ಬಗ್ಗೆ ಅನುಮಾನಗೊಂಡಿದೆ. ಈ ವೇಳೆ ವಿಶೇಷ ತನಿಖಾ ತಂಡ ಪ್ರಕರಣ ಕೈಗೆತ್ತಿಕೊಂಡಿದೆ. ಇ.ಪಿ.ಗಣೇಶನ್ (56) ಇಪರ್ತಿಪೇಟೆ ತಮ್ಮ ನಿವಾಸದಲ್ಲಿ … Read more

ಮೆಸ್ಸಿ ಕಾರ್ಯಕ್ರಮದಲ್ಲೂ ದೇವರ ಜಪವೇ..?: ದೇವೇಂದ್ರ ಫಡ್ನವೀಸ್ ಕಾಲೆಳೆದ ನಟ ಕಿಶೋರ್

ಕೆಲ ದಿನಗಳ ಹಿಂದೆ ಭಾರತ ಪ್ರವಾಸದಲ್ಲಿದ್ದ ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರು, ಮುಂಬೈನ ವಾಂಖೆಡೆ ಮೈದಾನಕ್ಕೆ ಭೇಟಿ ನೀಡಿದ್ದರು. ಆ ವೇಳೆ ಅಲ್ಲಿ ನೆರೆದಿದ್ದ ಅಭಿಮಾನಿಗಳು ‘ಮೆಸ್ಸಿ ..ಮೆಸ್ಸಿ’ ಎಂದು ಕೂಗುತ್ತಿದ್ದರು. ಆ ಸಂದರ್ಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ‘ಗಣಪತಿ ಬಪ್ಪಾ ಮೋರಯಾ’ ಎಂದು ಘೋಷಣೆ ಕೂಗುವ ಮೂಲಕ ಅಲ್ಲಿನ ಜನರ ಗಮನ ಸೆಳೆಯಲು ಮುಂದಾದ ಈ ಘಟನೆಗೆ ಸಂಬಂಧಿಸಿದಂತೆ ನಟ ಕಿಶೋರ್ ಸಾಮಾಜಿಕ ಮಾಧ್ಯಮದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತಾನಾಡಿರುವ … Read more