ಗೋವು ಸಾಗಿಸುತ್ತಿದ್ದ ಲಾರಿ ತಡೆದಿದ್ದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ

ಗೋವುಗಳನ್ನು ಸಾಗಿಸುತ್ತಿದ್ದ ಲಾರಿಗಳನ್ನು ತಡೆದು, ಅಕ್ರಮ ಗೋವು ಸಾಗಣೆ ಮಾಡಲಾಗುತ್ತಿದೆಯೇ ಎಂದು ಪರಿಶೀಲನೆ ಮಾಡಿದ್ದಕ್ಕೆ ಇಬ್ಬರು ಹಿಂದು ಕಾರ್ಯಕರ್ತರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿದ ಟನೆ ನಗರದ ರಿಂಗ್ ರಸ್ತೆಯ ರಾಮನಗರದ ಬಳಿ ಬುಧವಾರ ನಡೆದಿದೆ. ಹಿಂದು ಕಾರ್ಯಕರ್ತರಾದ ರೋಹಿತ್ ಪಿಸ್ಕೆ, ಅನೀಲ ಹಲ್ಲೆಗೊಳಗಾದವರು. ಗೋವುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆದಿರುವ ಹಿಂದು ಕಾರ್ಯಕರ್ತರಾದ ರೋಹಿತ್, ಅನೀಲ ಸೇರಿ ಇತರರು ಅಕ್ರಮ ಗೋವುಗಳು ಇವೆಯೇ ಎಂದು ಪ್ರಶ್ನಿಸಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಸ್ಥಳಿಯ ಅನ್ಯಕೋಮಿನ … Read more

ಬೋಳರೆ ಗ್ರಾಮದಲ್ಲಿ ಬಹಿರ್ದೆಸೆಗೆ ಹೋದ ಬಾಲಕಿ ಶವವಾಗಿ ಪತ್ತೆ; ಅತ್ಯಾಚಾರಗೈದು ಕೊಲೆ ಶಂಕೆ!

ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳರೆ ಗ್ರಾಮದಲ್ಲಿ 15 ವರ್ಷದ ಬಾಲಕಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಬಾಲಕಿಯನ್ನು ಅತ್ಯಾ*ಚಾರ ಮಾಡಿ ಕೊಲೆ ಮಾಡಿರುವ ಬಗ್ಗೆ ತೀವ್ರ ಶಂಕೆ ವ್ಯಕ್ತವಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಬೋಳರೆ ಗ್ರಾಮದ ಅಶ್ವಥ್ ನಾರಾಯಣ್ ಎಂಬುವವರ ತೋಟದ ಮನೆಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಸಂಪತ್ ಕುಮಾರ್ ಎಂಬುವವರ ಪುತ್ರಿ ಕವಿತ (15) ಮೃತ ಬಾಲಕಿ. ಶೌಚಕ್ಕೆ ಹೋಗಿದ್ದ ಬಾಲಕಿ ಶವವಾಗಿ ಪತ್ತೆ … Read more

Ram Mandir : ರಾಮ ಮಂದಿರ ಧ್ವಜಾರೋಹಣ ವೇಳೆ ಮೋದಿಯವರ ಕೈಗಳು ನಡುಗಿದ್ದೇಕೆ? ಇಲ್ಲಿದೆ ಅಸಲಿ ಸತ್ಯ

Ram Mandir : ಅಯೋಧ್ಯೆ ರಾಮ ಮಂದಿರ ಪೂರ್ಣಗೊಂಡ ಹಿನ್ನೆಲೆ ನಿನ್ನೆ (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿಯವರು ಮಂದಿರದ ಮೇಲೆ ಬೃಹತ್ ಗಾತ್ರದ ಕೇಸರಿ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ವೇಳೆ ಧ್ವಜಾರೋಹಣ ಪೂರ್ಣಗೊಳ್ಳುತ್ತಿದ್ದಂತೆ ನಮಸ್ಕರಿಸುತ್ತಿದ್ದ ಪ್ರಧಾನಿ ಮೋದಿಯವರ ಕೈಗಳು ನಡುಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ರಾಮ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರಿಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ನೂರಾರು ಸಾಧು-ಸಂತರು ಸಾಥ್ ನೀಡಿದರು. … Read more

ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗೋಣ : ಮಾಜಿ ಸಚಿವ ಕೆ ಎನ್ ರಾಜಣ್ಣ

ವಿಧಾನಸಭೆ ವಿಸರ್ಜನೆ ಮಾಡಿ ಎಲ್ಲಾ ಚುನಾವಣೆಗೆ ಹೋಗಿ ಬಿಡೋಣ. ಮುಂದೆ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಒಟ್ಟಿಗೆ ಕೆಲಸ ಮಾಡಿ, ಮೆಜಾರಿಟಿ ತಗೊಂಡು ಬರೋಣ. ಆಗ ಅವರೇ 5 ವರ್ಷ ಸಿಎಂ ಆಗಲಿ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರನ್ನು ಎಲೆಕ್ಟ್ ಮಾಡಿರುವುದು ಸಿಎಲ್‌ಪಿ ಅಲ್ವಾ..? ಈಗ ಸಿಎಲ್‌ಪಿಯಲ್ಲಿ ತೀರ್ಮಾನ ಆಗ್ಬೇಕು. ಸಿಎಲ್‌ಪಿಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಅಂತಾ ಯಾರಾದರೂ ಕೇಳಿದ್ದಾರ. ಯಾರಾದ್ರೂ ಕೇಳಿದ್ದಾರ ಹೇಳಿ ಎಂದು ಪ್ರಶ್ನಿಸಿದರು. … Read more

IAS ಅಧಿಕಾರಿ ಮಹಾಂತೇಶ ಬೀಳಗಿ ಕಾರು ಅಪಘಾತ ಪ್ರಕರಣ… ಗಾಯಗೊಂಡಿದ್ದ ಮತ್ತೋರ್ವ ಮೃತ್ಯು

ಜಿಲ್ಲೆಯ ಜೇವರ್ಗಿ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಕಾರು ಪಲ್ಟಿ ಅಪಘಾತದಲ್ಲಿ ಎಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿ ಮೂವರು ಮೃತಪಟ್ಟಿದ್ದರೆ, ಇವರ ಜತೆ ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ನಾಲ್ವರು ಮೃತಪಟ್ಟಂತಾಗಿದೆ. ಈರಣ್ಣ ಶಂಕ್ರಪ್ಪ ಸಿರಸಂಗಿ (47) ಎನ್ನುವರೇ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಕೊನೆಯುಸಿರೆಳೆದಿದ್ದಾರೆ. ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಕ್ಕೊಳಗಾದ ಕಾರಿನ ಚಾಲಕ ಅರೋಕಿಯಾ ಅಂಥೋನಿರಾಜ್ ಗೆ ಚಿಕಿತ್ಸೆ ಮುಂದುವರೆದಿದೆ. ಚಾಲಕನ ವಿರುದ್ಧ ಪ್ರಕರಣ ದಾಖಲು: ಎಎಎಸ್ ಅಧಿಕಾರಿ ಮಹಾಂತೇಶ … Read more

ಕರ್ನಾಟಕ ಸಿಎಂ ಕುರ್ಚಿ ಕದನ – ಸಿದ್ದರಾಮಯ್ಯ ಪ್ಲ್ಯಾನ್ ಏನು ಗೊತ್ತಾ.?

ಕರ್ನಾಟಕದಲ್ಲಿ ಸಿಎಂ ಕುರ್ಚಿಗಾಗಿ ಅಂತರಿಕ ಕಿತ್ತಾಟ ಶುರುವಾಗಿದೆ. ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಬಹಿರಂಗ ನಡೆ ಮತ್ತು ಹೇಳಿಕೆಗಳು ನಿಗೂಢವಾಗಿಯೇ ಇವೆ. ಕರ್ನಾಟಕದ ಕಾಂಗ್ರೆಸ್ ನ ಅಂತರಿಕ ಗೊಂದಲವನ್ನು ಡಿಸೆಂಬರ್ 1 ರೊಳಗಾಗಿ ಕಾಂಗ್ರೆಸ್ ಹೈಕಮ್ಯಾಂಡ್ ಬಗೆಹರಿಸುವ ನಿರೀಕ್ಷೆ ಇದೆ. ಈಗಾಗಲೇ ಡಿಕೆಶಿ ಬಣ ದೆಹಲಿ ಟೂರ್‌ ಮಾಡಿ, ಅಧಿಕರಾ ಹಂಚಿಕೆ ಬಗ್ಗೆ ಒತ್ತಡ ಹಾಕಿದ್ದಾರೆ. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ಕೂಡಾ ಅಖಾಡಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ಡಿಸೆಂಬರ್ 1 ರಂದು … Read more

ಕುದುರೆ ವ್ಯಾಪಾರ ಜೋರಾಗಿದ್ದು, ನನಗೆ 100 ಕೋಟಿ ಕೊಟ್ರೆ ನಾನು ಹೋಗಲು ಸಿದ್ಧ : ಸಚಿವ ಕೆ. ವೆಂಕಟೇಶ್

ರಾಜ್ಯದಲ್ಲಿ ಕುದುರೆ ವ್ಯಾಪಾರ ಜೋರಾಗಿದ್ದು, ಓಬ್ಬೊಬ್ಬ ಶಾಸಕರಿಗೆ ₹50 ರಿಂದ 100 ಕೋಟಿ ಆಫರ್ ಕೊಡಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ನನಗೆ ₹100 ಕೋಟಿ ಕೊಟ್ರೆ ನಾನೇ ಹೋಗೋಕೆ ಸಿದ್ಧನಿದ್ದೇನೆ ಎಂದು ಚಾಮರಾಜನಗರ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು. ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಏನ್ ಗುರು ನೂರು ಕೋಟಿ ಕೊಟ್ರೆ ನೀನು ಹೋಗಲ್ವ? ಎಂದು ಕ್ಯಾಮರಾದ ಮುಂದೆ ಶಾಸಕ ಪುಟ್ಟರಂಗಶೆಟ್ಟಿಗೆ ಸಚಿವರು ಕೇಳಿದ್ದಕ್ಕೆ ನೂರು ಕೋಟಿ ಅಲ್ಲ 200 ಕೋಟಿ ದುಡ್ಡು ಕೊಟ್ರು ನಾನು ಎಲ್ಲಿಗೂ ಹೋಗಲ್ಲ … Read more

ಡಿ.ಕೆ.ಶಿವಕುಮಾರ್‌ ಭೇಟಿಯಾದ್ರೂ ಸಿದ್ದರಾಮಯ್ಯಗೇ ನಮ್ಮ ಬೆಂಬಲ : ಸಚಿವ ಸತೀಶ್‌ ಜಾರಕಿಹೊಳಿ

ಪಕ್ಷ ಸಂಘಟನೆ ದೃಷ್ಟಿಯಿಂದ ಡಿ.ಕೆ.ಶಿವಕುಮಾರ್‌ ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್‌ ಭೇಟಿಯಾದ ಮಾತ್ರಕ್ಕೆ ಸಿದ್ದರಾಮಯ್ಯ ಅವರಿಗೆ ನಮ್ಮ ಬೆಂಬಲದಲ್ಲಿ ಯಾವುದೇ ಬದಲಾವಣೆಯಿಲ್ಲ. ಉಳಿದಂತೆ ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬದ್ಧ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷ ಸಂಘಟನೆ, ಮುಂಬರುವ ಚುನಾವಣೆ ಕುರಿತು ಚರ್ಚೆಗೆ ಡಿ.ಕೆ. ಶಿವಕುಮಾರ್‌ ಭೇಟಿಯಾಗಿದ್ದರು. ಉಳಿದ ಎಲ್ಲ ವಿಚಾರಗಳನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಅದರಲ್ಲಿ ನಮ್ಮ ಪಾತ್ರ ಇರುವುದಿಲ್ಲ. ಹೀಗಾಗಿ ಬೇರೆ ವಿಚಾರಗಳ ಬಗ್ಗೆ ಚರ್ಚೆ ಮಾಡಿಲ್ಲ … Read more

ನನ್ನ ದೇಹಕ್ಕೆ ಪತಿ ಪಾದರಸ ಇಂಜೆಕ್ಟ್‌ ಮಾಡಿದ್ದಾರೆ ಎಂದು ಎಫ್‌ಐಆರ್‌ ದಾಖಲಿಸಿದ ಮರುದಿನವೇ ಪತ್ನಿ ಸಾವು!

9 ತಿಂಗಳ ಹಿಂದೆ ಪಾದರಸದ ಇಂಜೆಕ್ಷನ್‌ಅನ್ನು ಪತ್ನಿಗೆ ನೀಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಪತ್ನಿ ಸಾವನ್ನಪ್ಪಿದ್ದ ಆಘಾತಕಾರಿ ಘಟನೆ ಬೆಂಗಳೂರು ಸಮೀಪದ ಅತ್ತಿಬೆಲೆಯಲ್ಲಿ ನಡೆದಿದೆ. ಎನ್‌ಡಿಟಿವಿ ವರದಿಯ ಪ್ರಕಾರ, ಫೆಬ್ರವರಿ 26 ರಂದು ತನ್ನ ಪತಿ ಬಸವರಾಜ್ ಮತ್ತು ಅವನ ತಂದೆ ಮರಿಶ್ವಾಮಾಚಾರಿ ತನ್ನನ್ನು ಕೊಲ್ಲುವ ಉದ್ದೇಶದಿಂದ ತನ್ನ ದೇಹಕ್ಕೆ ಪಾದರಸವನ್ನು ಚುಚ್ಚಿದ್ದಾರೆ ಎಂದು ವಿದ್ಯಾ ಹೇಳಿಕೊಂಡಿದ್ದರು. ವಿದ್ಯಾ ಹೇಳಿಕೆ ನೀಡಿದ ನಂತರ ನವೆಂಬರ್ 23 ರಂದು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ತನ್ನ ಗಂಡ ಮತ್ತು … Read more

ತಾಯಿ ಸಮಾಧಿ ಪಕ್ಕದಲ್ಲೇ ಮಹಾಂತೇಶ್ ಬೀಳಗಿ ಅಂತ್ಯಕ್ರಿಯೆ! ಅಪಘಾತದ ಕಾರಣ ಕುಟುಂಬಸ್ಥರಿಂದ ಅಗ್ನಿಸ್ಪರ್ಶ!

ತಾಯಿಗೆ ಪಿಂಚಣಿ ನೀಡಲು ಲಂಚ ಕೇಳಿದ್ದ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬೇಸತ್ತಿದ್ದ ಮಹಾಂತೇಶ್ ಬೀಳಗಿ, ಕಷ್ಟಪಟ್ಟು ಓದಿ ಐಎಎಸ್ ಅಧಿಕಾರಿಯಂತಹ ಉನ್ನತ ಹುದ್ದೆಗೇರಿದ್ದರು. ಹಾಲಿ ಕರ್ನಾಟಕ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ ಬೀಳಗಿ ಅವರು ನಿನ್ನೆ ಸಂಜೆ ನಡೆದ ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದರು. ಅಪಾರ ಪ್ರೀತಿ ಹೊಂದಿದ್ದ ಅಮ್ಮನ ಸಮಾಧಿ ಪಕ್ಕದಲ್ಲಿಯೇ ಮಹಾಂತೇಶ್ ಅವರ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿದ್ದವು. ಆದರೆ, ಕೊನೇ ಕ್ಷಣದಲ್ಲಿ ಅಮ್ಮನ ಮಡಿಲು ಸೇರಿಸದೇ ಅಗ್ನಿ ಸ್ಪರ್ಶದ ಮೂಲಕ … Read more