‘ವಿದ್ಯುತ್ ಬಿಲ್’ನಲ್ಲಿ ಹೆಸರು ಬದಲಾವಣೆ ಬಹಳ ಸುಲಭ ; ಮೊಬೈಲ್’ನಲ್ಲೇ ಜಸ್ಟ್ ಹೀಗೆ ಮಾಡಿ.!

ವಿದ್ಯುತ್ ಬಿಲ್ ನಮಗೆ ವಿಳಾಸದ ಪುರಾವೆಯಾಗಿ (Address Proof) ಬಹಳ ಮುಖ್ಯವಾಗಿದೆ. ಆಧಾರ್, ಪಾನ್ ಅಥವಾ ಚಾಲನಾ ಪರವಾನಗಿಯನ್ನು ಪಡೆಯಲು ವಿದ್ಯುತ್ ಬಿಲ್ ಸಹಕಾರಿಯಾಗುತ್ತದೆ. ನೀವು ಹೊಸ ಫ್ಲಾಟ್ ಖರೀದಿಸಿದ್ದರೆ ಅಥವಾ ನಿಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಬಿಲ್ ಅನ್ನು ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಲು ಈಗ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಹಳೆಯ ಕನೆಕ್ಷನ್ ರದ್ದುಪಡಿಸಿ ಹೊಸದು ಪಡೆಯುವ ಬದಲು, ಆನ್‌ಲೈನ್ ಮೂಲಕವೇ ಹೆಸರು ಬದಲಾಯಿಸಿಕೊಳ್ಳಬಹುದು. ಹೌದು. ವಿದ್ಯುತ್ ಬಿಲ್‌ನಲ್ಲಿ (Power Bill) ಹೆಸರು ಬದಲಾವಣೆ ಮಾಡುವುದು ಎಂದರೆ … Read more

ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮ ಬದಲಾವಣೆ ; ಇನ್ನು 21 ದಿನ ಕಾಯಲೇಬೇಕು! ಕೇಂದ್ರ ಸರ್ಕಾರ ಪ್ರಮುಖ ಘೋಷಣೆ!

ಕೇಂದ್ರ ಸರ್ಕಾರ ಪ್ರಮುಖ ಘೋಷಣೆ ಮಾಡಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಎಲ್‌ಪಿಜಿ ಪೂರೈಕೆಯ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಪಂಚದಾದ್ಯಂತ ಯುದ್ಧದ ವಾತಾವರಣ ಹೆಚ್ಚು ಅಪಾಯಕಾರಿಯಾಗುತ್ತಿರುವುದರಿಂದ ಭಾರತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯಿಂದಾಗಿ ಆಮದುಗಳನ್ನ ನಿಲ್ಲಿಸುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ ಗುರುತಿಸಿದೆ. ಅದಕ್ಕಾಗಿಯೇ ಪೆಟ್ರೋಲಿಯಂ ಸಚಿವಾಲಯವು ದೇಶದಲ್ಲಿ ಎಲ್‌ಪಿಜಿ ಕೊರತೆಯನ್ನು ತಡೆಗಟ್ಟಲು ಸಂವೇದನಾಶೀಲ ಆದೇಶಗಳನ್ನು ಹೊರಡಿಸಿದೆ. ಈ ನಿರ್ಧಾರವು ಕೋಟ್ಯಂತರ ಗೃಹ ಗ್ರಾಹಕರಿಗೆ ದೊಡ್ಡ ಪರಿಹಾರವಾಗಿದೆ. … Read more

ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಉರ್ದು ಬಳಕೆ: ರೂಪೇಶ್‌ ರಾಜಣ್ಣ ಕೆಂಡಾಮಂಡಲ, ಉಗ್ರ ಹೋರಾಟದ ಎಚ್ಚರಿಕೆ!

ಆರೋಗ್ಯ ಇಲಾಖೆಯ ಅಧಿಕೃತ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಕನ್ನಡದ ಜೊತೆಗೆ ಉರ್ದು ಭಾಷೆಯನ್ನು ಬಳಸಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಈ ನಡೆಗೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಹಾಗೂ ವಿವಿಧ ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇತ್ತೀಚೆಗೆ ಆಯೋಜಿಸಿದ್ದ ಅಧಿಕೃತ ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆಯಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯೊಂದಿಗೆ ಉರ್ದು ಭಾಷೆಯನ್ನೂ ಬಳಸಿರುವುದು ಈಗ ರಾಜ್ಯಾದ್ಯಂತ ಭಾರಿ ಚರ್ಚೆ ಮತ್ತು ವಿವಾದಕ್ಕೆ ಈಡುಮಾಡಿದೆ. … Read more

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : 2 ಕಂತಿನ ‘ಗೃಹಲಕ್ಷ್ಮಿ’ ಹಣ ಬಿಡುಗಡೆ.!

ರಾಜ್ಯ ಸರ್ಕಾರವು ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸಿಹಿಸುದ್ದಿ ನೀಡಿದ್ದು, ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ 24 ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಇದೀಗ ಮತ್ತೆ ಎರಡು ಕಂತು ಹಣ ಬಿಡುಗಡೆ ಮಾಡುತ್ತಿದ್ದೇವೆ ಈ ಮೂಲಕ ಗೃಹಲಕ್ಷ್ಮಿಯೋಜನೆಯಡಿ ಒಟ್ಟು 26 ಕಂತಿನಲ್ಲಿ 52 ಸಾವಿರ ರೂಪಾಯಿ ಫಲಾನುಭವಿಗಳಿಗೆ ನೀಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆ ಹಣ … Read more

ಬಜೆಟ್ ನಲ್ಲಿ ‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ : ‘ಆಲ್ಕೋಹಾಲ್, ಸಿಗರೇಟ್’ ಬೆಲೆಯಲ್ಲಿ ಭಾರೀ ಏರಿಕೆ.!

ಮದ್ಯ ಪ್ರಿಯರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದ್ದು, ಮದ್ಯದ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದೆ. ಹೌದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಸತತ ಒಂಬತ್ತನೇ ಬಜೆಟ್‌ನಲ್ಲಿ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ದೇಶದಲ್ಲಿ ಅಲ್ಕೋಹಾಲ್, ಸಿಗರೇಟ್ ಬೆಲೆಯಲ್ಲಿ ಭಾರೀ ಏರಿಕೆ ಮಾಡಲಾಗಿದೆ. ಚರ್ಮದ ಶೂ ಮತ್ತು ಜವಳಿ ರಫ್ತುಗಳು ಅಗ್ಗವಾಗಿವೆ ಎಂಬುದು ಸಾರ್ವಜನಿಕರಿಗೆ ಅತ್ಯಂತ ದೊಡ್ಡ ಮತ್ತು ಅತ್ಯಂತ ಭರವಸೆ ನೀಡುವ ಸುದ್ದಿಯಾಗಿದೆ. ಮೈಕ್ರೋವೇವ್‌ಗಳು, ಸೌರಶಕ್ತಿ ಸಂಬಂಧಿತ ಉತ್ಪನ್ನಗಳು ಮತ್ತು ಕ್ಯಾನ್ಸರ್ ಔಷಧಿಗಳು … Read more

ರೈತರಿಗೆ ಗುಡ್‌ ನ್ಯೂಸ್ :‌ 20 ಕುರಿ 1 ಟಗರು ಸಾಕಲು ಸರ್ಕಾರದಿಂದ ಸಿಗಲಿದೆ ₹43,750 ಸಹಾಯಧನ! ಇಂದೇ ಅರ್ಜಿ ಹಾಕಿ

ಒಮ್ಮೆ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾಗಿದ್ದ ಕುರಿ ಸಾಕಾಣಿಕೆ ಇಂದು ಲಾಭದಾಯಕ ಹಾಗೂ ವೃತ್ತಿಪರ ಉದ್ಯೋಗವಾಗಿ ರೂಪಾಂತರಗೊಂಡಿದೆ. ಹೆಚ್ಚುತ್ತಿರುವ ಯುವಕರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಜೀವನಮಟ್ಟ ಸುಧಾರಣೆ ಹಾಗೂ ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗಾಗಿ ಕರ್ನಾಟಕ ಸರ್ಕಾರ ‘ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ’ಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಸುಸ್ಥಿರ ಜೀವನೋಪಾಯ ಒದಗಿಸುವ ಗುರಿ ಹೊಂದಿದೆ. ಏನಿದು ಅಮೃತ ಸ್ವಾಭಿಮಾನಿ … Read more

ಫೆಬ್ರವರಿ, ಮಾರ್ಚ್‌ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ : ಗುಡ್‌ ನ್ಯೂಸ್‌ ಕೊಟ್ಟ ಡಿಸಿಎಂ ಡಿ.ಕೆ ಶಿವಕುಮಾರ್

2025 ರ ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳ ಗೃಹ ಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಎಂದು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಒಪ್ಪಿಕೊಂಡಿದ್ದು, ಆದಷ್ಟು ಶೀಘ್ರದಲ್ಲೇ ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದರು. ಇದೀಗ ಗೃಹ ಲಕ್ಷ್ಮಿ ಹಣ ಬಿಡುಗಡೆ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಗೃಹಲಕ್ಷ್ಮಿ ಹಣ ಒಂದೆರಡು ತಿಂಗಳು ತಡವಾಗಿರಬಹುದು. ಹಣ ಸಂಗ್ರಹವಾದ ಬಳಿಕ … Read more

‘ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ : ‘ಸಂಬಳ ಪ್ಯಾಕೇಜ್’ ನಲ್ಲಿ ನೋಂದಾಯಿಸಲು ಜ. 16 ಕೊನೆಯ ದಿನ.!

ಸರ್ಕಾರದಿಂದ ನೇರವಾಗಿ / ಪರೋಕ್ಷವಾಗಿ ನೇಮಕಗೊಂಡಿರುವ ಎಲ್ಲಾ ‘ಎ’ ‘ಬಿ’ ಮತ್ತು ‘ಸಿ’ ಗುಂಪಿನ ಅರ್ಹ ಅಧಿಕಾರಿಗಳು/ನೌಕರರು ಕಡ್ಡಾಯವಾಗಿ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಕಾಲಾವಧಿಯನ್ನು ವಿಸ್ತರಿಸುವ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದಲ್ಲಿ ಎಲ್ಲಾ ಅರ್ಹ “ಎ”, “ಬಿ” ಮತ್ತು “ಸಿ” ಗುಂಪಿನ ಅಧಿಕಾರಿಗಳು/ನೌಕರರಿಗೆ ಕಡ್ಡಾಯವಾಗಿ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ದಿನಾಂಕ: 15.12.2025 ರೊಳಗಡೆ ನೋಂದಾಯಿಸಿಕೊಳ್ಳದ ಅಧಿಕಾರಿಗಳ ಸಂಬಳದ ವಿತರಣೆಯನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಲು ತಿಳಿಸಲಾಗಿತ್ತು. ಆದರೆ, … Read more

ಅಂಚೆ ಕಚೇರಿಯ ಅದ್ಭುತ ಯೋಜನೆ : ಒಮ್ಮೆ ಠೇವಣಿ ಇಟ್ಟರೆ ಪ್ರತಿ ತಿಂಗಳು ನಿಮ್ಮ ಖಾತೆಗೆ 5,550 ರೂ. ಜಮಾ.!

ಇತ್ತೀಚೆಗೆ ಅನೇಕ ಜನರು ಅಂಚೆ ಕಚೇರಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಕಡಿಮೆ ಅಪಾಯ ಮತ್ತು ಉತ್ತಮ ಆದಾಯ ಇದಕ್ಕೆ ಕಾರಣ.ಸುರಕ್ಷಿತ ಹೂಡಿಕೆಯ ಜೊತೆಗೆ ಪ್ರತಿ ತಿಂಗಳು ಸ್ಥಿರ ಆದಾಯವನ್ನು ಬಯಸುವವರಿಗೆ ಅಂಚೆ ಕಚೇರಿ ಅದ್ಭುತ ಅವಕಾಶವನ್ನು ನೀಡುತ್ತಿದೆ. ಅದು ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ. ಈ ಯೋಜನೆ ವಿಶೇಷವಾಗಿ ನಿವೃತ್ತರು, ಗೃಹಿಣಿಯರು ಮತ್ತು ಅಪಾಯ-ಮುಕ್ತ ಆದಾಯವನ್ನು ಬಯಸುವ ಮಧ್ಯಮ ವರ್ಗದ ಜನರಿಗೆ ವರದಾನವಾಗಿದೆ. ಈ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕಕ್ಕೆ ಕೇಂದ್ರ ಸರ್ಕಾರ ಬಡ್ಡಿದರಗಳಲ್ಲಿ ಯಾವುದೇ … Read more

ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ರಾಜ್ಯಾದ್ಯಂತ ‘ಅಕ್ಕಪಡೆ’ ಜಾರಿ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಗೃಹ ಇಲಾಖೆಯು ಸಹಯೋಗದೊಂದಿಗೆ “ಅಕ್ಕ ಪಡೆ” ಎಂಬ ಒಂದು ನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಸ್ತುತ ಆಧುನಿಕ ಮತ್ತು ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯ (ಅತ್ಯಾಚಾರ, ಲೈಂಗಿಕ ಕಿರುಕುಳ, ಮಾನವ ಕಳ್ಳ ಸಾಗಣೆ, ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ & ಪೋಕ್ಸ್) ಅಂತಹ ಪ್ರಕರಣಗಳಿಂದ ಮಹಿಳೆಯರು ಮತ್ತು … Read more