Borewell Scheme : ಬೋರ್ವೆಲ್ ಕೊರಿಸಲು ರೈತರಿಗೆ ಸಹಾಯಧನ: ಯಾವ ರೈತರು ಅರ್ಜಿ ಸಲ್ಲಿಸಬಹುದು..? ಅರ್ಜಿ ಸಲ್ಲಿಸುವುದು ಹೇಗೆ..?

Spread the love

Borewell Scheme : ನಮಸ್ಕಾರ ಸ್ನೇಹಿತರೇ, ಪ್ರಸ್ತುತ ತೋಟಗಾರಿಕೆ ಇಲಾಖೆ 2024 ಮತ್ತು 25ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ವೆಲ್ ಕೊರಿಸಲು ರೈತರಿಗೆ ಸಹಾಯಧನ ನೀಡಲಾಗುತ್ತಿದೆ ಹಾಗಾಗಿ ಆಸಕ್ತಿ ಇರುವಂತಹ ರೈತರು ಅರ್ಜಿ ಸಲ್ಲಿಸಬಹುದು.! ಅರ್ಜಿ ಸಲ್ಲಿಸಿದಂತ ರೈತರಿಗೆ ಸುಮಾರು ನಾಲ್ಕು ಲಕ್ಷ ರೂಪಾಯಿವರೆಗೆ ಬೋರ್ವೆಲ್ ಕೊರಿಸಲು ಆರ್ಥಿಕ ಸಹಾಯಧನ ನೀಡಲಾಗುತ್ತದೆ ಇದರ ಜೊತೆಗೆ ಬೋರ್ವೆಲ್ ಪಂಪ್ಸೆಟ್ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು.?

• ರೈತರು ಕಡ್ಡಾಯವಾಗಿ ಕನಿಷ್ಠ ಎರಡು ಎಕರೆ ಜಮೀನು ಹೊಂದಿರಬೇಕು
• ಅತಿ ಸಣ್ಣ ಹಾಗೂ ಸಣ್ಣ ರೈತರು ಆಗಿರಬೇಕು
• ಅರ್ಜಿ ಸಲ್ಲಿಸಲು ಬಯಸುವ ರೈತರು ಕಡ್ಡಾಯವಾಗಿ ಕರ್ನಾಟಕದ ಅನಿವಾಸಿ ಆಗಿರಬೇಕು
• ಕನಿಷ್ಠ 18 ವರ್ಷ ವಯೋಮಿತಿ ಹಾಗೂ ಗರಿಷ್ಠ ಅರವತ್ತು ವರ್ಷದ ವಯೋಮಿತಿ ಹೊಂದಿದವರು ಅರ್ಜಿ ಸಲ್ಲಿಸಬಹುದು
• ಅರ್ಜಿ ಸಲ್ಲಿಸಲು ಬಯಸುವ ರೈತರ ಜಮೀನಿಗೆ ಯಾವುದೇ ರೀತಿ ನೀರಿನ ಸಂಪರ್ಕ ಇರಬಾರದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು.?

• ಆಧಾರ್ ಕಾರ್ಡ್
• ಬ್ಯಾಂಕ್ ಪಾಸ್ ಬುಕ್
• ಜಾತಿ ಮತ್ತು ಆದಾಯ ಪ್ರಮಾಣ ಪತ್ರ
• ಜಮೀನು ಪ್ರಮಾಣ ಪತ್ರ
• ಅರ್ಜಿದಾರ ಭಾವಚಿತ್ರ
• ಮೊಬೈಲ್ ನಂಬರ್
• ನೀರಾವರಿ ಬಳಕೆಯ ಪ್ರಮಾಣ ಪತ್ರ
• ಸಣ್ಣ ರೈತರ ಪ್ರಮಾಣ ಪತ್ರ
• ಮೊಬೈಲ್ ಸಂಖ್ಯೆ

ಅರ್ಜಿ ಸಲ್ಲಿಸುವುದು ಹೇಗೆ.?

ಸ್ನೇಹಿತರೆ ನೀವು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತ ಬೋರ್ವೆಲ್ ಕೊರಿಸಲು ಬಯಸುತ್ತಿದ್ದರೆ ಹಾಗೂ ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ನೀವು ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ಗ್ರಾಮ್ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು

WhatsApp Group Join Now

Spread the love

Leave a Reply