Bara Parihara Amount Status Check : ಇನ್ನೂ ನಿಮಗೆ ಬೆಳೆ ಪರಿಹಾರ ಹಣ ಬಾರದಿದ್ದರೆ ಈ 1 ಕೆಲಸ ಮಾಡಿ 5 ನಿಮಿಷದಲ್ಲಿ ಹಣ ನಿಮ್ಮ ಖಾತೆಗೆ ಜಮೆ

Bara Parihara Amount Status : ನಮಸ್ಕಾರ ಸ್ನೇಹಿತರೇ, ಇನ್ನೂ ಕೂಡ ಬರ ಪರಿಹಾರದ ಹಣ ನಿಮ್ಮ ಖಾತೆಗೆ ಬಂದಿಲ್ಲ ಅಂದರೆ ಈ ಒಂದು ಕೆಲಸ ಮಾಡಿ. ಬರ ಪರಿಹಾರದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಹಾಗಾದರೆ ಬರ ಪರಿಹಾರದ ಹಣ ಪಡೆಯಲು ನೀವು ಏನು ಮಾಡಬೇಕು? ಬರ ಪರಿಹಾರದ ಹಣ ಯಾಕೆ ಇನ್ನೂ ಜಮೆಯಾಗಿಲ್ಲ.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ

2023-24 ನೇ ಸಾಲಿನಲ್ಲಿ ರಾಜ್ಯದ ರೈತರು ಎದುರಿಸಿದ ಅನಾವೃಷ್ಟಿ ಕಾರಣದಿಂದಾಗಿ ಬೆಳೆ ನಷ್ಟ ಪರಿಹಾರ / ಬರ ಪರಿಹಾರ ಹಣವನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ಈಗಾಗಲೇ ರಾಜ್ಯ ಸರ್ಕಾರಕ್ಕೆ ಹಣವನ್ನ ಜಮೆ ಮಾಡಿದೆ. ರಾಜ್ಯ ಸರ್ಕಾರವು ಈಗಾಗಲೇ ರಾಜ್ಯದ 223 ತಾಲೂಕುಗಳನ್ನ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದೆ. ಇದೀಗ ಎಲ್ಲ ಅರ್ಹ ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗೆ 2000 ಬರ ಪರಿಹಾರ ಜಮೆ ಮಾಡಿದೆ.

WhatsApp Group Join Now

ಇದನ್ನೂ ಕೂಡ ಓದಿ : RGRHCL : ಗ್ರಾಮೀಣ ಜನತೆಗೆ ಗುಡ್ ನ್ಯೂಸ್.! ರಾಜೀವ್ ಗಾಂಧಿ ವಸತಿ ನಿಗಮದಿಂದ ಹೊಸ ಮನೆಗಳಿಗಾಗಿ ಆನ್ಲೈನ್ ಅರ್ಜಿ ಪ್ರಾರಂಭ

ಇನ್ನು ಬಾಕಿ ಉಳಿದ ರೈತರ ಬ್ಯಾಂಕ್ ಖಾತೆಗೆ ಹಣ ಜಮಾವಣೆ ಪ್ರಕ್ರಿಯೆ ನಡೆಯುತ್ತಿದೆ. ಕೇಂದ್ರ ಸರ್ಕಾರ 3454 ಕೋಟಿ ರೂಪಾಯಿ ಬೆಳೆ ನಷ್ಟ ಪರಿಹಾರ ಹಣವನ್ನ ರಾಜ್ಯಕ್ಕೆ ನೀಡಿದೆ. ಈಗಾಗಲೇ ಲಕ್ಷಾಂತರ ಮಂದಿ ರೈತರ ಬ್ಯಾಂಕ್ ಖಾತೆಗೆ ಈ ಬೆಳೆ ಪರಿಹಾರ ಹಣ ರೂ.3,000 ಹಾಗೂ 4000 ಬಿಡುಗಡೆಯಾಗುತ್ತಿದೆ. ಇಲ್ಲಿ ಕೆಳಗೆ ನೀಡಿರುವ ವಿಧಾನದ ಮೂಲಕ ಮೊಬೈಲ್ ನಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಿರುವ ಬರ ಪರಿಹಾರ ಹಣವನ್ನು ಪರಿಶೀಲಿಸಬಹುದು.

WhatsApp Group Join Now

ಬೆಳೆ ಪರಿಹಾರ ಹಣ ಚೆಕ್ ಮಾಡುವ ವಿಧಾನ – Bara Parihara Amount Status Check

ಅಧೀಕೃತ ವೆಬ್ ಸೈಟ್ ಲಿಂಕ್ :- Bara Parihara Status check Website

ನಿಮ್ಮ ಮೊಬೈಲ್ ನಲ್ಲಿ ಅಥವಾ ಲ್ಯಾಪ್ ಟಾಪ್ ನಲ್ಲಿ ಇಲ್ಲಿ ನೀಡಿರುವ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ಅಲ್ಲಿ ವರ್ಷ 2023-24 ಸೆಲೆಕ್ಟ್ ಮಾಡಿ. ನಂತರ ಬೆಳೆ ಪರಿಹಾರ ಹಣಕ್ಕಾಗಿ ಋತು ಮುಂಗಾರು ಸೆಲೆಕ್ಟ್ ಮಾಡಿ. ನಂತರ ಬೆಳೆ ವಿಧ ಆಯ್ಕೆಯಲ್ಲಿ ಬರಗಾಲ ಆಯ್ಕೆ ಆರಿಸಿಕೊಳ್ಳಿ. ನಂತರ ನಿಮ್ಮ ಜಿಲ್ಲೆಯ ಹೆಸರು ತಾಲೂಕಿನ ಹೆಸರು ನಿಮ್ಮ ಗ್ರಾಮ ಮತ್ತು ಹೊಬಳಿ ಆರಿಸಿ. ನಂತರ ಕೆಳಗಿರುವ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಗ್ರಾಮದಲ್ಲಿ ಬಿಡುಗಡೆಯಾದ ಬರ ಪರಿಹಾರ ಹಣದ ಲಿಸ್ಟ್ ಬರುತ್ತದೆ ಅಲ್ಲಿ ನಿಮ್ಮ ಹೆಸರು ಮತ್ತು ನಿಮ್ಮ ಖಾತೆಗೆ ಜಮೆಯಾಗಿರುವ ಹಣವನ್ನ ಪರಿಶೀಲಿಸಬಹುದು.

ಅಧೀಕೃತ ವೆಬ್ ಸೈಟ್ ಲಿಂಕ್ :- Bara Parihara Status check Website

WhatsApp Group Join Now

ಇದನ್ನೂ ಕೂಡ ಓದಿ : Shrama Shakthi Scheme : ಕರ್ನಾಟಕ ಶ್ರಮ ಶಕ್ತಿ ಯೋಜನೆ ಮೂಲಕ ₹50,000/- ಹಣ ಸಿಗಲಿದೆ.! ಅರ್ಜಿ ಸಲ್ಲಿಸುವುದು ಹೇಗೆ.?

ಬರ ಪರಿಹಾರ ಹಣ ಬಂದಿಲ್ಲವಾದರೆ ಏನು ಮಾಡಬೇಕು?

  • ನಿಮಗೆ ಇನ್ನೂ ಬರ ಪರಿಹಾರ ಹಣ ಬಂದಿಲ್ಲ ಅಂದ್ರೆ, ಫ್ರೂಟ್ ಐಡಿ(FID) ಸಂಖ್ಯೆ ಸರಿಯಾಗಿದೆಯಾ.? ಎನ್ನುವುದನ್ನು ಚೆಕ್ ಮಾಡಿಕೊಳ್ಳಿ.
  • ನೀವು ಫ್ರೂಟ್ ಐಡಿ(FID) ಮಾಡಿಸಿಲ್ಲವೆಂದರೆ ತಕ್ಷಣ ಮಾಡಿಸಿಕೊಳ್ಳಿ.
  • ಆಧಾರ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡಿಕೊಳ್ಳಿ. ಇಲ್ಲವಾದರೆ ತಕ್ಷಣ NPCI ಮಾಡಿಸಿ.
  • ನಂತರ ಮುಖ್ಯವಾಗಿ ನಿಮ್ಮ ಪಹಣಿಗೆ ಅಂದರೆ RTC ಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಚೆಕ್ ಮಾಡಿಕೊಳ್ಳಿ. ಈಗಾಗಲೇ ಕಂದಾಯ ಸಚಿವರು ತಿಳಿಸಿರುವ ಪ್ರಕಾರ ಆರ್‌ಟಿಸಿ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗದಿದ್ದರೆ ಬರ ಪರಿಹಾರ ಹಣ ಜಮೆ ಆಗುವುದಿಲ್ಲ.
  • ಮೇಲೆ ತಿಳಿಸಿದ ಎಲ್ಲಾ ಕೆಲಸವನ್ನು ಮಾಡಿದ ಬಳಿಕವೂ ಬರ ಪರಿಹಾರ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದಿಲ್ಲವಾದರೆ, ತಕ್ಷಣ ನೀವು ನಿಮ್ಮ ಗ್ರಾಮದ ಲೆಕ್ಕಾಧಿಕಾರಿಯನ್ನ ಭೇಟಿ ಮಾಡಿ ಪರಿಶೀಲಿಸಬೇಕಾಗುತ್ತದೆ.

ಇದೇ ರೀತಿಯ ಹೊಸ ಹೊಸ ಮಾಹಿತಿಗಳು ತಿಳಿಯಲು, ವಿದ್ಯಾರ್ಥಿವೇತನಗಳು, ಸರ್ಕಾರಿ ಯೋಜನೆಗಳು, ಸರ್ಕಾರಿ ಕೆಲಸಗಳು ಹಾಗೂ ಖಾಸಗಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ Telegram & Whatsapp ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply