Arecanut Rate : ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ ಗೊತ್ತಾ?: ಇಲ್ಲಿದೆ ಡಿಸೆಂಬರ್ 20ರ ದರಪಟ್ಟಿ

Arecanut Rate : ರಾಜ್ಯದಲ್ಲಿ ಅಡಿಕೆ ಧಾರಣೆ ಮತ್ತಷ್ಟು ಕುಸಿತ ಕಂಡಿದೆ. ಇದರಿಂದ ಬೆಳೆಗಾರರಲ್ಲಿ ಆತಂಕ ಉಂಟಾಗಿದೆ. ಅದರಲ್ಲೂ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿ ಜಿಲ್ಲೆಯ ಹಲವೆಡೆ ಅಡಿಕೆನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹಾಗಾದ್ರೆ, ಇಂದು (ಡಿಸೆಂಬರ್ 20) ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಅಡಿಕೆ ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇಂದು (ಡಿಸೆಂಬರ್ 20) ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ದರ 55,700 ರೂಪಾಯಿ, ಕನಿಷ್ಠ ದರ 50,000 … Read more

ಹೆಂಡ್ತಿ ಮರ್ಯಾದೆ ಕೊಡ್ತಿಲ್ಲ ಎಂದು ಹತ್ಯೆಗೆ 5 ಲಕ್ಷ ಸುಪಾರಿ ಕೊಟ್ಟ ಪಾಪಿ ಪತಿ!

ಮೈಸೂರಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದ್ದು, ಪತ್ನಿ ಮರ್ಯಾದೆ ಕೊಡ್ಲಿಲ್ಲ ಅಂತ ಕೊಲೆಗೆ ಯತ್ನ ನಡೆದಿರುವ ಘಟನೆ ಮೈಸೂರಿನ ಬಿಎಂಶ್ರೀ ನಗರದಲ್ಲಿ ನಡೆದಿದೆ. ಹೆಂಡತಿ ಹತ್ಯೆಗೆ ಪಾಪಿ ಪತಿ ಸುಪಾರಿ ನೀಡಿದ್ದಾನೆ. ಮೈಸೂರಿನ ಬಿಎಂಶ್ರೀ ನಗರದಲ್ಲಿ ಪತಿ ಮಹೇಶ್ ಈ ಒಂದು ಕೃತ್ಯ ಎಸಗಿದ್ದು, ಪತ್ನಿ ನಾಗರತ್ನ ಕೊಲೆಗೆ 5 ಲಕ್ಷ ಸುಪಾರಿ ಕೊಟ್ಟಿದ್ದಾನೆ. ಪತ್ನಿ ನಾಗರತ್ನ ವರ್ತನೆಯಿಂದ ಬೇಸತ್ತಿದ್ದ ಪತಿ ಮಹೇಶ್ ಪತ್ನಿಯನ್ನ ಕೊಲ್ಲಲು ವಿರಾಜಪೇಟೆ ಮೂಲದ ಭಾಸ್ಕರ್, ಅಭಿಷೇಕ್ ಎಂಬುವರಿಗೆ ಸುಪಾರಿ ನೀಡಿದ್ದರು. ಮಹೇಶ್ ಪಾನಿಪುರಿ … Read more

ಮಗನ ಜೊತೆಗೆ ಜಗಳವಾಡ್ತಿದ್ದ ಯುವಕರ ಗುಂಪು, ಬಿಡಿಸಲು ಹೋದ ತಂದೆಯನ್ನೇ ಕೊಲೆಗೈದ ಗ್ಯಾಂಗ್!

ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಕಾರಿಗನೂರು ಪ್ರದೇಶದಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಯುವಕರ ಜಗಳವು ಹೃದಯವಿದ್ರಾವಕ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ. ಮಗನೊಂದಿಗೆ ಜಗಳವಾಡುತ್ತಿದ್ದ ಯುವಕರ ಗುಂಪನ್ನು ಬಿಡಿಸಲು ಹೋಗಿದ್ದ ತಂದೆಯೇ ಯುವಕರ ಹಲ್ಲೆಗೆ ಬಲಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು ಆರೋಪಿಗಳಾದ ಭಂಗಿ ಹನುಮಂತ, ಚರಣ, ಹುಲಿಗೆಮ್ಮ ಎಂಬ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ರಾಘವೇಂದ್ರ, ದರ್ಶನ, ಚಂದ್ರ, ಗುರಯ್ಯ ಎಂಬ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ. ಕಾರಿಗನೂರು ಪ್ರದೇಶದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. … Read more

ಒತ್ತುವರಿ ಸಾಬೀತುಪಡಿಸಿದರೆ ವಾಪಸ್‌ : ಕಂದಾಯ ಸಚಿವ ಕೃಷ್ಣಬೈರೇಗೌಡ ಸವಾಲು

ನನ್ನ ವಿರುದ್ದದ ಭೂ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆಗೂ ಸಿದ್ಧ. ಯಾವ ರೀತಿಯ ತನಿಖೆ ಆಗಬೇಕು ಎಂಬುದನ್ನು ವಿರೋಧ ಪಕ್ಷದ ನಾಯಕರು ಮತ್ತು ಸಭಾನಾಯಕರು ಸೇರಿ ತೀರ್ಮಾನಿಸಲಿ. ನಾನು ತಯಾರಿದ್ದೇನೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಹೇಳಿದರು. ಕೋಲಾರ ತಾಲ್ಲೂಕು ಗರುಡುಪಾಳ್ಯ ಗ್ರಾಮದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಆಗಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ವಿಧಾನಸಭೆಯಲ್ಲಿ ಶುಕ್ರವಾರ ಅವರು ಸ್ವಯಂಪ್ರೇರಿತ ಹೇಳಿಕೆ ನೀಡಿದರು. ‘ಒಂದು ವೇಳೆ ಒತ್ತುವರಿ ಆಗಿದೆ ಎಂಬುದು ಸಾಬೀತಾದರೆ ಆ ಭೂಮಿ … Read more

Horoscope Today : ಡಿಸೆಂಬರ್‌ 20 ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಇಂದು ನಿಮಗೆ ನಿಸ್ತೇಜ ದಿನ ಕಾದಿದೆ ಎಂಬುದಾಗಿ ಗಣೇಶ ಶಕುನ ಹೇಳುತ್ತಾರೆ. ನೀವು ಆಯಾಸ, ಆಲಸ್ಯ ಮತ್ತು ವಿಶ್ರಾಂತಿರಹಿತ ಭಾವನೆಯನ್ನು ಹೊಂದುವ ನಿರೀಕ್ಷೆ ಇದೆ. ನೀವು ಸಂಪೂರ್ಣವಾಗಿ ಕಳೆಗುಂದಿರುವ ಕಾರಣ ಯಾರಿಗಾದರೂ ಏನನ್ನಾದರೂ ಮಾಡಲು ನಿಮಗೆ ಆಸಕ್ತಿ ಇರುವುದಿಲ್ಲ. ನೀವು ವಿಶೇಷವಾಗಿ ನಿಮ್ಮ ಅವಿಶ್ರಾಂತದ ಬಗ್ಗೆ ಜಾಗ್ರತೆ ವಹಿಸಬೇಕಾದ ಅಗತ್ಯವಿದೆ. ಸಣ್ಣ ಸಣ್ಣ ವಿಷಯಗಳಿಗೆ ತಾಳ್ಮೆ ಕಳೆದುಕೊಳ್ಳಬೇಡಿ. ಮನೆಯಲ್ಲೇ ಆಗಲಿ ಅಥವಾ ಕಚೇರಿಯಲ್ಲೇ ಆಗಲಿ ಇತರರನ್ನು ಅಸಮಧಾನಪಡಿಸುವುದನ್ನು ನೀವು ಆದಷ್ಟು ತಪ್ಪಿಸಬೇಕು. ಇದು ದೀರ್ಘಕಾಲದಲ್ಲಿ … Read more

ಅಮಿತ್ ಶಾ ವಿರುದ್ಧ ನಾಲಿಗೆ ಹರಿಬಿಟ್ಟ ಪ್ರಿಯಾಂಕ್ ಖರ್ಗೆ, ಮೇಲ್ಮನೆಯಲ್ಲಿ ಕೋಲಾಹಲ! ಅಷ್ಟಕ್ಕೂ ಖರ್ಗೆ ಪುತ್ರ ಹೇಳಿದ್ದೇನು?

ಚಳಿಗಾಲದ ಅಧಿವೇಶನದಲ್ಲಿ ‘ದ್ವೇಷ ಭಾಷಣ ತಡೆ ವಿಧೇಯಕ’ ಗದ್ದಲ ಕೋಲಾಹಲಕ್ಕೆ ಕಾರಣವಾಗಿದೆ. ಪರಿಷತ್ನಲ್ಲಿ ಇಂದು ವಿಪಕ್ಷಗಳ ವಿರೋಧದ ನಡುವೆಯೂ ರಾಜ್ಯ ಸರ್ಕಾರ ದ್ವೇಷ ಭಾಷಣ ತಡೆ ವಿಧೇಯಕ ಮಂಡಿಸಿದೆ. ಈ ವೇಳೆ ಕಾಂಗ್ರೆಸ್ ನಾಯಕರು ಕೇಂದ್ರ ಸಚಿವ ಗೃಹ ಸಚಿವ ಅಮಿತ್ ಶಾ ಹೆಸರು ಪ್ರಸ್ತಾಪಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ನಾಲಿಗೆ ಹರಿಬಿಟ್ಟಿದ್ದು, ಅಮಿತಾ ಶಾರನ್ನ ನಾಲಾಯಕ್ ಎಂದು ಕರೆದಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯಿಂದ … Read more

ತಂದೆಗೆ ದೈಹಿಕ, ಮಾನಸಿಕ ಹಿಂಸೆ ನೀಡುವಂತಿಲ್ಲ : ಚೈತ್ರಾ ಕುಂದಾಪುರಗೆ ಕೋರ್ಟ್‌ ನಿರ್ದೇಶನ

ಚೈತ್ರಾ ಕುಂದಾಪುರ ಅವರ ತಂದೆಗೆ ಯಾವುದೇ ರೀತಿ ದೈಹಿಕ, ಮಾನಸಿಕ ಹಿಂಸೆ ನೀಡುವಂತಿಲ್ಲ. ಅವರ ಮನೆಯಲ್ಲಿ ನಿರ್ಭೀತಿಯಿಂದ ಇರಲು ಅವಕಾಶ ಮಾಡಿಕೊಡಬೇಕೆಂದು ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಆದೇಶ ಮಾಡಿದೆ. ಬಾಲಕೃಷ್ಣ ಅವರು ಪುತ್ರಿ ಚೈತ್ರಾ ಕುಂದಾಪುರ ಅವರಿಂದ ಅನ್ಯಾಯ ಆಗುತ್ತಿದೆ. ನನ್ನ ಮನೆಯಲ್ಲಿ ವಾಸಿಸಲು ಅವಕಾಶ ನೀಡಬೇಕೆಂದು ಕೋರಿ ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯ್ದೆ ಅನ್ವಯ ಪರಿಹಾರ ಕೋರಿ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧದ ಕೋರ್ಟ್‌ ತೀರ್ಪು ನೀಡಿದೆ. ತಂದೆಗೆ ಮಗಳು ಯಾವುದೇ ರೀತಿ … Read more

ಬೆಂಗಳೂರಲ್ಲಿ ಪ್ರೀತ್ಸೆ ಅಂತ 19ರ ಹುಡ್ಗಿ ಹಿಂದೆ ಬಿದ್ದ 40ರ ಅಂಕಲ್‌ ನ ಭೀಕರ ಹತ್ಯೆ.!

ಲವ್ ಮಾಡು ಎಂದು ಯುವತಿಯ ಬೆನ್ನು ಹತ್ತಿದ್ದ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. 19 ವರ್ಷದ ಯುವತಿಯ ಹಿಂದೆ 40 ವರ್ಷದ ವ್ಯಕ್ತಿ ಲವ್ ಮಾಡು ಎಂದು ದುಂಬಾಲು ಬಿದಿದ್ದಾನೆ. ನನ್ನನ್ನು ಪ್ರೀತಿ ಮಾಡು ಎಂದು ಬೆನ್ನು ಬಿದ್ದಿದ್ದ. ಇದನ್ನ ಸಹಿಸದ ಯುವತಿಯ ತಂದೆ ಹಾಗೂ ಸೋದರ ಮಾವ 40 ವರ್ಷದ ಚೆಲುವ ಎನ್ನುವ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದ ಬಳಿ ವ್ಯಕ್ತಿಯ ಕೊಲೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ … Read more

2ನೇ ಪತ್ನಿಯ ಸಾಕುವ ತಾಕತ್ತಿರುವವ ಮೊದಲ ಪತ್ನಿಗೆ ಜೀವನಾಂಶ ನಿರಾಕರಿಸುವಂತಿಲ್ಲ : ಹೈಕೋರ್ಟ್ ತೀರ್ಪು

ಎರಡನೇ ಪತ್ನಿಯ ಕಷ್ಟಸುಖಗಳಿಗೆ ಹೆಗಲಾಗುವ ಗಂಡ ಮೊದಲ ಪತ್ನಿಗೆ ಜೀವನಾಂಶವನ್ನು ನಿರ್ಲಕ್ಷಿಸುವಂತಿಲ್ಲ ಎಂದು ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಹೈಕೋರ್ಟ್ ತೀರ್ಪು ನೀಡಿದೆ. ಎರಡನೇ ಪತ್ನಿಯನ್ನು ಪೋಷಿಸಲು ಸಾಧ್ಯವಾಗುವ ಪತಿಯ ಆರ್ಥಿಕ ಸಾಮರ್ಥ್ಯವು ಮೊದಲ ಪತ್ನಿಯ ಜೀವನಾಂಶ ಹಕ್ಕನ್ನು ನಿರಾಕರಿಸಲು ಕಾರಣವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಅಲಹಾಬಾದ್ ಹೈಕೋರ್ಟ್ ಗುರುವಾರ ಈ ತೀರ್ಪು ನೀಡಿದೆ. ಅರ್ಜಿದಾರರು ಜೂನ್ 6 ರಂದು ಅಲಿಘರ್ ಕೌಟುಂಬಿಕ ನ್ಯಾಯಾಲಯವು ತನ್ನ ಮೊದಲ ಪತ್ನಿಗೆ ಮಾಸಿಕ 20,000 ರೂ. ಜೀವನಾಂಶ … Read more

‘ನಿಮ್ಮ ಮನದ ಇಷ್ಟ ಇನ್ನೊಂದು ತಿಂಗಳಲ್ಲಿ ಈಡೇರುತ್ತೆ’ – ಡಿಕೆಶಿಗೆ ಹೂವಿನ ವರ ಕೊಟ್ಟ ಅಂಕೋಲಾ ‘ಜಗದೀಶ್ವರಿ’!

ಸಿಎಂ ಹುದ್ದೆಯ ನಿರೀಕ್ಷೆಯಲ್ಲಿರುವ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಉತ್ತರ ಕರ್ನಾಟಕದ ಅಂಕೋಲಾದ ಆಂದ್ಲೆ ಜಗದೀಶ್ವರಿ ದೇವಸ್ಥಾನಕ್ಕೆ ಡಿ. 19ರಂದು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು, ಅಲ್ಲಿನ ದೇವರಿಗೆ ಪೂಜೆ ಸಲ್ಲಿಸಿ ಮನದ ಬೇಡಿಕೆಯನ್ನು ಈಡೇರಿಸುವಂತೆ ಪ್ರಾರ್ಥಿಸಿದಾಗ ದೇವಿಯು ಬಲಬದಿಯಿಂದ ಹೂವಿನ ಪ್ರಸಾದ ಕೊಟ್ಟಿದ್ದು ಇನ್ನೊಂದು ತಿಂಗಳಲ್ಲಿ ಆಸೆ ಈಡೇರುವುದಾಗಿ ಹೇಳಿದ್ದಾರೆ ಎಂದು ಹೇಳಲಾಗಿದೆ. ಇದು ಡಿಕೆಶಿ ಬಣದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಅಂಕೋಲದ ಆಂದ್ಲೆ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಡಿಸಿಎಂ … Read more