Horoscope Today : ಡಿಸೆಂಬರ್‌ 29 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಸ್ವಲ್ಪ ಸಮಯದಲ್ಲಿ ಹೆಚ್ಚು ಪ್ರಯೋಜನವನ್ನು ಪಡೆಯುವ ಸಲುವಾಗಿ ದುರಾಸೆಯನ್ನು ಹೊಂದದಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ ಇಲ್ಲವಾದಲ್ಲಿ ಕೇವಲ ಸೂಪ್‌ ಮಾತ್ರವೇ ಪಡೆಯಬೇಕಾಗುತ್ತದೆ. ಎಲ್ಲಾ ರೀತಿಯ ಅನೈತಿಕ ಚಟುವಟಿಕೆಗಳಿಂದ ದೂರವಿರಿ. ಮತ್ತು ಆರ್ಥಿಕ ವ್ಯವಹಾರಗಳನ್ನು ನಡೆಸುವಾಗ ಎಚ್ಚರಿಕೆಯಿಂದಿರಿ. ಇಂದು ನಿಮಗೆ ಏಕಾಗ್ರತೆಯ ಕೊರತೆ ಉಂಟಾಗಬಹುದು. ಪರಿಣಾಮವಾಗಿ, ನೀವು ಇಂದು ಅತ್ಯುತ್ತಮ ಕಾರ್ಯವನ್ನು ನೀಡಲು ಅಸಮರ್ಥರಾಗಬಹುದು. ದಿನದ ಪೂರ್ವಾರ್ಧದಲ್ಲಿ ನಿಮಗೆ ಅಪಘಾತದ ಸಂಭಾವ್ಯತೆಯಿದೆ. ಎಚ್ಚರಿಕೆಯಿಂದ ಚಾಲನೆ ಮಾಡಿ. ಸಂಜೆಯ ವೇಳೆಗೆ ದೈಹಿಕವಾಗಿ ನೀವು ಹೆಚ್ಚು ಕ್ರಿಯಾಶೀರಾಗಿರುತ್ತೀರಿ. … Read more

ಹೋಮ್‌ ವರ್ಕ್‌ ಮಾಡಿಲ್ಲ ಎಂದು ಮಕ್ಕಳ ಬಟ್ಟೆ ಬಿಚ್ಚಿಸಿ ಚಳಿಯಲ್ಲಿ ನಿಲ್ಲಿಸಿದ ಶಿಕ್ಷಕರು.!

ಹೋಮ್‌ ವರ್ಕ್‌ ಮಾಡಿಲ್ಲ ಅಂತ 7ನೇ ತರಗತಿ ಬಾಲಕರನ್ನು ಅರೆ ಬಟ್ಟೆಯಲ್ಲಿ ಚಳಿಯಲ್ಲಿ ಹೊರಗೆ ನಿಲ್ಲಿಸಿದ ಘಟನೆ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ನಡೆದಿದೆ. ಈ ಘಟನೆ ವೈರಲ್‌ ಆದ ಬಳಿಕ ಪೋಷಕರು ಮತ್ತು ಗ್ರಾಮಸ್ಥರಲ್ಲಿ ಆಕ್ರೋಶಕ್ಕೆ ಹೊರಹಾಕಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸೆಹೋರ್ ಜಿಲ್ಲೆಯ ಜಟಖೇಡಾ ಗ್ರಾಮದ ಸೇಂಟ್ ಏಂಜಲ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮಕ್ಕಳನ್ನು ಚಳಿಗಾಲದ ಕೊರೆಯುವ ಚಳಿಯಲ್ಲಿ ಬೆತ್ತಲೆಯಾಗಿ ನಿಲ್ಲುವಂತೆ ಒತ್ತಾಯಿಸಲಾಯಿತು ಎನ್ನಲಾಗಿದೆ. ಶಿಕ್ಷೆಯ ಭಾಗವಾಗಿ ಆಟದ ಮೈದಾನವನ್ನು ಸ್ವಚ್ಛಗೊಳಿಸಲು, … Read more

ಆ ಲುಪುಟ ಹಿಂದೂ ಅದಾನೋ ಇಲ್ವೋ.? ಪರಮೇಶ್ವರಾನಂದ ಸ್ವಾಮೀಜಿಗೆ ಯತ್ನಾಳ್ ತಿರುಗೇಟು

ಮುಂದಿನ ಚುನಾವಣೆಯಲ್ಲಿ ಬಸನಗೌಡಪಾಟೀಲ್ ಯತ್ನಾಳ್ ಸೋಲಿಸಿ ಎಂದು ಮುಸ್ಲಿಮರಿಗೆ ಕರೆ ನೀಡಿದ ಶಿವಶರಣ ಅಲ್ಲಮಪ್ರಭು ಅಹಿಂದ ಗುರುಪೀಠದ ಪೀಠಾಧ್ಯಕ್ಷ ಪರಮೇಶ್ವರಾನಂದ ಸ್ವಾಮೀಜಿಗೆ ಹಿಂದೂ ಹುಲಿ ಎಂದೇ ಖ್ಯಾತಿಗೊಂಡಿರುವ ನಾಯಕ ತಿರುಗೇಟು ನೀಡಿದ್ದಾರೆ. ಆತ ಮಾಡೋದನ್ನು ನೋಡಿದರೆ ಮುಸ್ಲಿಂ ಮತಾಂಧನಿರಬೇಕು. ಆತನ ಬಟ್ಟೆ ಬಿಚ್ಚಿದರೆ ಗೊತ್ತಾಗುತ್ತೆ, ಆತ ಹಿಂದೂ ಅಲ್ವೋ ಅನ್ನೋದು. ಆತ ಸಾಬ ಅದಾನೋ ತಿಳ್ಕೋಳ್ಳಬೇಕು ಎಂದು ಯತ್ನಾಳ್ ಹೇಳಿದ್ದಾರೆ. ಸನಾತನ ಧರ್ಮದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ‌ ಪರಮೇಶ್ವರಾನಂದ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿರುವ ಬಸನಗೌಡಪಾಟೀಲ್ … Read more

ಪ್ಯಾಕೆಟ್ ಹಾಲಿನಿಂದಲೇ ತಿಂಗಳಿಗೆ 1 ಕೆ.ಜಿ ಬೆಣ್ಣೆ ತೆಗೆಯಬಹುದು! ಆ ಸಿಂಪಲ್ ಟ್ರಿಕ್ ಇಲ್ಲಿದೆ!

ಅಡುಗೆಯಲ್ಲಿ ಬೆಣ್ಣೆಯ ಬಳಕೆ ಸಾಮಾನ್ಯ. ಬೆಳಗ್ಗೆ ತಿಂಡಿ, ರೊಟ್ಟಿ ಅಥವಾ ಇತರ ಖಾದ್ಯಗಳಲ್ಲಿ ಬೆಣ್ಣೆ ಹಚ್ಚಿ ಸವಿಯುವುದು ಎಲ್ಲರಿಗೂ ಇಷ್ಟ. ಆದರೆ ಅಂಗಡಿಯಲ್ಲಿ ಖರೀದಿಸುವ ಬೆಣ್ಣೆ ಗಟ್ಟಿಯಾಗಿರುವುದರಿಂದ ನೈಜ ರುಚಿ ಸಿಗುವುದಿಲ್ಲ. ಫ್ರಿಡ್ಜ್‌ನಲ್ಲಿ ತಿಂಗಳುಗಳ ಕಾಲ ಇಟ್ಟು ಬಳಸುವುದು ಸಹ ರುಚಿಯನ್ನು ಕಡಿಮೆ ಮಾಡುತ್ತದೆ. ಆದರೆ ನೀವು ನಿತ್ಯ ಖರೀದಿಸುವ ಪ್ಯಾಕೆಟ್ ಹಾಲಿನಿಂದಲೇ ಮನೆಯಲ್ಲಿ ತಾಜಾ ಬೆಣ್ಣೆ ತಯಾರಿಸಬಹುದು ಗೊತ್ತಾ? ಹೇಗೆ ಅಂತ ನೋಡಿ. ಸಾಮಾನ್ಯವಾಗಿ ಹಳ್ಳಿಗಳ ಕಡೆ ಹಸು, ಎಮ್ಮೆ ಹಾಲಿನಿಂದ ಬೆಣ್ಣೆ ಮಾಡುವುದನ್ನು ನೋಡಿರುತ್ತೇವೆ. … Read more

ಬೆಂಗಳೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ : ರಾಜ್ಯ ಪೊಲೀಸರಿಗೆ ಗೃಹ ಸಚಿವ ಪರಮೇಶ್ವರ್ ತರಾಟೆ

ಬೆಂಗಳೂರಿನಲ್ಲಿ ಮಾದಕ ವಸ್ತುಗಳ ತಯಾರಿಕಾ ಘಟಕಗಳು ಪತ್ತೆಯಾಗಿರುವುದಕ್ಕೆ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಸಿಡಿಮಿಡಿಯಾಗಿದ್ದು, ಹಿರಿಯ ಪೊಲೀಸ್‌‍ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.ಇಂದು ಬೆಂಗಳೂರಿನ ಪೊಲೀಸ್‌‍ ಆಯುಕ್ತರ ಕಚೇರಿಗೆ ಆಗಮಿಸಿದ ಗೃಹಸಚಿವರು, ನಗರ ಪೊಲೀಸ್‌‍ ಆಯುಕ್ತರು, ಜಂಟಿ ಆಯುಕ್ತರು, ಉಪಆಯುಕ್ತರು ಮತ್ತು ಸಹಾಯಕ ಆಯುಕ್ತರ ಜೊತೆ ಹೊಸ ವರ್ಷಾಚರಣೆಗೆ ಪೂರ್ವಭಾವಿ ಭದ್ರತೆ ಕುರಿತು ಚರ್ಚೆ ನಡೆಸಿದರು. ಈ ವೇಳೆ ಮಾದಕ ವಸ್ತುಗಳ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಮೈಸೂರಿನಲ್ಲಿ ಇದೇ ರೀತಿಯ ಸಿಂಥೆಟಿಕ್‌ ಡ್ರಗ್ಸ್ ಉತ್ಪಾದನೆಯ ಕಾರ್ಖಾನೆ … Read more

ಡಿ.ಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಬಗ್ಗೆ ಕೋಡಿಮಠ ಸ್ವಾಮೀಜಿ ಅಚ್ಚರಿ ಭವಿಷ್ಯ

ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕುರಿತಾದ ಗೊಂದಲದ ನಡುವೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಚ್ಚರಿ ಭವಿಷ್ಯ ನುಡಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಬೇರೆಯವರಿಗೆ ಅವಕಾಶ ಇದೆ ಎಂದು ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಹಾಲುಮತ ಸಮಾಜದಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ. ಅವರಾಗಿಯೇ ಬಿಟ್ಟರೆ ಮಾತ್ರ ಬೇರೆಯವರಿಗೆ ಅಧಿಕಾರ ಸಿಗುತ್ತದೆ. ಸಿದ್ದರಾಮಯ್ಯನವರು ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಡಿ.ಕೆ. ಶಿವಕುಮಾರ್ ಗೆ ಅಧಿಕಾರ ಸಿಗುತ್ತದೆ. ಇಲ್ಲದಿದ್ದರೆ ಇಲ್ಲ ಎಂದು … Read more

ಚಿತ್ರದುರ್ಗ ಮುರುಘಾ ಶರಣರ ವಿರುದ್ಧ ಮತ್ತೊಂದು ಗಂಭೀರ ಆರೋಪ

ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ನ್ಯಾಯಾಲಯದ ಆದೇಶವನ್ನು ಮೀರಿ ಮಠದ ಆಸ್ತಿಯನ್ನು ಮಾರಾಟ ಮಾಡಿದ ಆರೋಪ ಕೇಳಿ ಬಂದಿದೆ. ಎರಡು ಕೋಟಿ ರೂಪಾಯಿ ಮೌಲ್ಯದ ಒಟ್ಟು ನಾಲ್ಕು ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿರುವ ನಾಲ್ಕು ನಿವೇಶನಗಳನ್ನು ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ. ಮಂಜುನಾಥ ಎಂಬುವವರಿಗೆ ಸ್ಪೆಷಲ್ ಜಿಪಿಎ ನೀಡಿ ನಿವೇಶನ ಮಾರಾಟ ಮಾಡಲಾಗಿದೆ. ಶರಣರು ಪೋಕ್ಸೊ ಪ್ರಕರಣದ ಆರೋಪಿಯಾದ ನಂತರ ನ್ಯಾಯಾಲಯ ನಿರ್ಬಂಧ … Read more

ಪ್ರಯಾಣಿಕರಿಗೆ ಗುಡ್ ನ್ಯೂಸ್ : ರೈಲು ಹೊರಡುವ 30 ನಿಮಿಷಗಳ ಮುಂಚೆಯೇ ಟಿಕೆಟ್ ಬುಕ್ ಮಾಡಬಹುದು.!

ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುತ್ತಿದೆ. ಅದರಲ್ಲೂ ಟಿಕೆಟ್ ಬುಕ್ಕಿಂಗ್ ವಿಚಾರದಲ್ಲಿ ಕಾಲಕಾಲಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಯಾಣಿಕರಿಗೆ ಟಿಕೆಟ್ ಲಭ್ಯತೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಆದರೆ ರೈಲ್ವೇ ದರ ಕಡಿಮೆ ಇರುವುದರಿಂದ ಜನಸಾಮಾನ್ಯರೂ ರೈಲಿನಲ್ಲಿ ಪ್ರಯಾಣಿಸಲು ಆಯ್ಕೆ ಮಾಡಿಕೊಳ್ಳುತ್ತಾರೆ.ಆದರೆ ನೀವು ನಿಮ್ಮ ಪ್ರಯಾಣವನ್ನು ಮುಂಚಿತವಾಗಿಯೇ ಯೋಜಿಸಿದರೆ, ಅದು ದೊಡ್ಡ ಸಮಸ್ಯೆಯಾಗುವುದಿಲ್ಲ, ಆದರೆ ನೀವು ಅನಿರೀಕ್ಷಿತ ಸಂದರ್ಭಗಳಲ್ಲಿ ಅಥವಾ ಹಬ್ಬ ಹರಿದಿನಗಳಲ್ಲಿ ಪ್ರಯಾಣಿಸಬೇಕಾದರೆ, ರೈಲು ಟಿಕೆಟ್ ಪಡೆಯುವುದು ಕಷ್ಟವಾಗುತ್ತದೆ. ಅಂತಹ ಸಮಯದಲ್ಲಿ ಬಸ್ಸುಗಳು ಮತ್ತು ಇತರ ಸಾರಿಗೆಯನ್ನು … Read more

ತಂಗಿ ಮೇಲೆ ಅತ್ಯಾಚಾರ, ಮದುವೆಯಾಗೋದಾಗಿ ಅಕ್ಕನಿಗೆ ಮೋಸ : ಸಹೋದರಿಯರನ್ನು ಕಾಡಿದ್ದ ಆರೋಪಿ ಅರೆಸ್ಟ್

ರಾಜ್ಯದಲ್ಲಿ ಮತ್ತೊಂದು ಲವ್ ಸೆಕ್ಸ್ ದೋಖಾ ಆರೋಪ ಪ್ರಕರಣ ಸದ್ದು ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಯುವತಿಯಿಂದ ಲಕ್ಷಾಂತರ ಹಣ ಬೆದರಿಸಿ ಪಡೆದಿರುವ ಜೊತೆಗೆ, ಆಕೆಯ ಮನೆಯಲ್ಲಿದ್ದ ಚಿನ್ನಾಭರಣವನ್ನು ಆರೋಪಿ ಕದ್ದಿದ್ದ. ಅಲ್ಲದೆ, ಯುವತಿಯ ಸಹೋದರಿ ಮೇಲೂ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದ ಎನ್ನಲಾಗಿದೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಶುಭಾಂಶು ಶುಕ್ಲಾ(27)ನನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲು ಸಂತ್ರಸ್ತೆಯ ಸಹೋದರಿಯಾದ ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ, ಆಕೆಯ ಕುಟುಂಬಕ್ಕೂ ಬಲ್ಲವನಾಗಿದ್ದ. ಬಳಿಕ … Read more

ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ – ಬಸ್ ಚಾಲಕ ಗಂಭೀರ, 20ಕ್ಕೂ ಹೆಚ್ಚು ಮಂದಿಗೆ ಗಾಯ

ಹಾಸನದ ಚನ್ನರಾಯಪಟ್ಟಣ ತಾಲೂಕಿನ ಬೈಪಾಸ್‌ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಖಾಸಗಿ ಬಸ್ಸೊಂದು ಲಾರಿಗೆ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಇಪ್ಪತ್ತಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ನಡೆದಿದೆ. ಖಾಸಗಿ ಬಸ್ ಹಾಗೂ ಲಾರಿ ಬೆಂಗಳೂರಿನಿಂದ ಹಾಸನದ ಕಡೆಗೆ ಬರುತ್ತಿತ್ತು, ಈ ವೇಳೆ ರಭಸವಾಗಿ ಬಂದ ಖಾಸಗಿ ಬಸ್ ಏಕಾಏಕಿ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಬಸ್ ನಲ್ಲಿ ಸುಮಾರು 40ಕ್ಕೂ ಹೆಚ್ಚು ಜನ ಪ್ರಯಾಣಿಕರಿದ್ದರು. ಸದ್ಯ ಡಿಕ್ಕಿಯ ರಭಸಕ್ಕೆ ಖಾಸಗಿ ಬಸ್ ನ ಮುಂಭಾಗ … Read more