ಮನೆಯಲ್ಲಿ ‘ಏರ್ ಕೂಲರ್’ ಬಳಸುವವರೇ ಎಚ್ಚರ : ನೀರು ಹಾಕುವಾಗ `ವಿದ್ಯುತ್ ಶಾಕ್’ನಿಂದ ವ್ಯಕ್ತಿ ಸಾವು.!
ಬೇಸಿಗೆಯ ಭೀಕರ ಬಿಸಿಲಿನಿಂದ ತಂಪಾಗಲು ಬಳಸುವ ಏರ್ ಕೂಲರ್‌ಗಳನ್ನು ಬಳಸುವಾಗ ಕನಿಷ್ಠ ಜಾಗರೂಕತೆ ವಹಿಸದಿದ್ದರೆ ಪ್ರಾಣಕ್ಕೇ ಕುತ್ತು ಬರಬಹುದು ಎಂಬುದಕ್ಕೆ ಹೈದರಾಬಾದ್‌ನಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಚಾಲ್ತಿಯಲ್ಲಿದ್ದ (ಆನ್ ಆಗಿದ್ದ) ಏರ್ ಕೂಲರ್‌ಗೆ ನೀರು ತುಂಬಿಸಲು ಹೋದ ವ್ಯಕ್ತಿಯೊಬ್ಬರು ವಿದ್ಯುತ್ ಶಾಕ್ ತಗುಲಿ ಜಾಗದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ನಗರದ ಎಎಸ್ ರಾವ್ ನಗರ (AS Rao Nagar) ವ್ಯಾಪ್ತಿಯಲ್ಲಿ ಗುರುವಾರ (ಮೇ 14) ಈ ಘಟನೆ ನಡೆದಿದ್ದು, ಕೃಷ್ಣ (54) ಎಂಬುವವರೇ ಮೃತಪಟ್ಟ ದುರ್ದೈವಿ.ಗುರುವಾರ ಕೃಷ್ಣ ಅವರು … Read more