ಮಂಗಳೂರಿನಲ್ಲಿ ಘೋರ ಘಟನೆ : ಬೀಡಿಯ ತುಂಡು ನುಂಗಿ 10 ತಿಂಗಳ ಮಗು ಸಾವು.!

ಮಂಗಳೂರು : ಮಂಗಳೂರಿನಲ್ಲಿ ಘೋರ ಘಟನೆಯೊಂದು ನಡೆದಿದ್ದು, ಬೀಡಿಯ ತುಂಡು ನುಂಗಿ 10 ತಿಂಗಳ ಮಗು ಸಾವನ್ನಪ್ಪಿದೆ. ಮಂಗಳೂರು ನಗರದ ಹೊರವಲಯದ ಅಡ್ಯಾರ್ನಲ್ಲಿ ಮನೆಯಲ್ಲಿ ತಂದೆ ಸೇದಿ ಬಿಸಾಡಿದ್ದ ಬೀಡಿಯ ತುಂಡನ್ನು ನುಂಗಿ 10 ತಿಂಗಳ ಮಗು ಮೃತಪಟ್ಟಿದೆ. ಅಡ್ಯಾರ್ನಲ್ಲಿ ವಾಸವಿದ್ದ ಬಿಹಾರ ಮೂಲದ ದಂಪತಿಯ ಮಗು ಅನೀಶ್ ಕುಮಾ‌ರ್ ಮೃತ ಮಗು, ತನ್ನ ಗಂಡನ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ. ಮನೆಯೊಳಗೆ ಬೀಡಿ ಸೇದಿ ಬಿಸಾಡದಂತೆ ಗಂಡನಿಗೆ ಹಲವು ಬಾರಿ ತಿಳಿಸಿದ್ದರೂ ಕೇಳದ್ದಕ್ಕೆ ಮಗುವಿನ ಪ್ರಾಣ ಹೋಗಿದೆ … Read more

ನನ್ನ ಮಾತು ಸುಳ್ಳಾದರೆ, ನಾನು ಮತ್ತೆ ವೇದಿಕೆ ಹತ್ತಲ್ಲ, ಭಾಷಣ ಮಾಡಲ್ಲ -ದಾವಣಗೆರೆಯಲ್ಲಿ ಸಿದ್ದರಾಮಯ್ಯ ಸವಾಲು

ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರ ನಮಗೆ ಮಾಡಿದ ದ್ರೋಹದ ವಿಚಾರದಲ್ಲಿ ನಾನು ಸುಳ್ಳು ಹೇಳಿದ್ದರೆ ಮತ್ತೆ ಸಾರ್ವಜನಿಕವಾಗಿ ವೇದಿಕೆ ಹತ್ತೋದಿಲ್ಲ, ಭಾಷಣ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು. ದಾವಣಗೆರೆ ಜಿಲ್ಲೆಯ 1350 ಕೋಟಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಹಲವು ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು. ” ಅಭಿವೃದ್ಧಿ ವಿಚಾರದಲ್ಲಿ ನಾವು ಜಾತಿ, ಧರ್ಮ, ಪಕ್ಷ ನೋಡುವುದಿಲ್ಲ. ಎಲ್ಲಾ ಪಕ್ಷದವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು ” ಎಂದು ಸಿಎಂ ಹೇಳಿದರು. … Read more

ಬೆಂಗಳೂರಲ್ಲಿ ಮರದ ಕೊಂಬೆ ಬಿದ್ದು ಯುವಕನ ತಲೆ ಚಿಪ್ಪು 12 ಚೂರು : ತಂದೆಯ ಹುಟ್ಟುಹಬ್ಬಕ್ಕೆ ಮಟನ್‌ ತರಲು ಹೋಗಿದ್ದ ಮಗ.!

ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. ಮತ್ತೊಂದೆಡೆ ಭಾರಿ ಬಿರುಗಾಳಿ ಕೂಡ ಬೀಸುತ್ತಿದೆ. ಅವಾಂತರಗಳು ಸಂಭವಿಸುತ್ತಿವೆ. ಬಿರುಗಾಳಿ ಹೊಡೆತಕ್ಕೆ ಮರದ ಕೊಂಬೆಯೊಂದು ಬೈಕ್ ಸವಾರನ ಮೇಲೆ ಬಿದ್ದಿರುವ ಘಟನೆ ನಡೆದಿದೆ. ಬನಶಂಕರಿ 2ನೇ ಹಂತದ ಶ್ರೀನಿವಾಸನಗರದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಏಕಾಏಕಿ ಮರದ ಕೊಂಬೆ ಮುರಿದು ಬಿದ್ದಿದ್ದು, ಬೈಕ್ ಸವಾರ ಅಕ್ಷಯ್ (29) ಗಂಭೀರವಾಗಿ ಗಾಯಗೊಂಡಿರುವ ಯುವಕ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅಕ್ಷಯ್ ಭಾನುವಾರ ತಂದೆ ಹುಟ್ಟುಹಬ್ಬದ ಹಿನ್ನೆಲೆ ಮಟನ್ ತೆಗೆದುಕೊಂಡು ಬರುವುದಕ್ಕೆ ಬೈಕ್ ನಲ್ಲಿ … Read more

ನಮಗೆ BJP ಅನಿವಾರ್ಯ, ಸ್ವಲ್ಪ ತಗ್ಗಿಬಗ್ಗಿ ನಡೆದುಕೊಂಡು ಹೋಗೋಣ ಎಂದ ಎಚ್‌ಡಿ ಕುಮಾರಸ್ವಾಮಿ! ಹೀಗೆ ಹೇಳಿದ್ದೇಕೆ?

ನಮಗೆ ಬಿಜೆಪಿ ಅನಿವಾರ್ಯವಾಗಿದ್ದು, ಸ್ವಲ್ಪ ತಗ್ಗಿಬಗ್ಗಿ ನಡೆದುಕೊಂಡು ಹೋಗೋಣ. ನಮ್ಮಿಂದ ತಪ್ಪಾಗುವುದು ಬೇಡ ಎಂದು ಎಚ್‌ಡಿ ಕುಮಾರಸ್ವಾಮಿ ಅವರು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ್ದಾರೆ. ಜೆಡಿಎಸ್ ಕಚೇರಿ ಜೆ ಪಿ ಭವನದದ ಆವರಣದಲ್ಲಿ ನಡೆದ ಸಮಾವೇಶದಲ್ಲಿ ‘ಜನರೊಂದಿಗೆ ಜನತಾದಳ’ ಮಿಸ್ ಕಾಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ‘ಜನರೊಂದಿಗೆ ಜನತಾದಳ’ ಘೋಷಣೆಯಡಿ ಕೈಗೊಳ್ಳುವ ಸಂಘಟನಾ ಪ್ರವಾಸ ಸಂಬಂಧದ ಲೋಗೋವನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದರು. ಮಿಸ್ಡ್‌ ಕಾಲ್‌ ಅಭಿಯಾನದ … Read more

ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದಾಗ ಗೆದ್ದಷ್ಟು ಸೀಟನ್ನು ಕುಮಾರಸ್ವಾಮಿಗೆ ಇನ್ನೂ ಮುಟ್ಟೋಕಾಗಿಲ್ಲ ಎಂದು ಸಚಿವ ಜಮೀರ್ ಭರ್ಜರಿ ಟಾಂಗ್!

ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಖಾನ್ ಕುಮಾರಸ್ವಾಮಿ ಅವರ ವಿರುದ್ಧ ಮತ್ತೊಮ್ಮೆ ಟೀಕಾಪ್ರಹಾರ ಮಾಡಿದ್ದು, ಸಿದ್ದರಾಮಯ್ಯನವರ ಸಾಧನೆಯನ್ನು ಉಲ್ಲೇಖಿಸಿ ಭರ್ಜರಿಯಾಗಿ ಟಾಂಗ್ ಕೊಟ್ಟಿದ್ದಾರೆ.ಬೆಂಗಳೂರು: ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಖಾನ್ ಕುಮಾರಸ್ವಾಮಿ ಅವರ ವಿರುದ್ಧ ಮತ್ತೊಮ್ಮೆ ಟೀಕಾಪ್ರಹಾರ ಮಾಡಿದ್ದು, ಸಿದ್ದರಾಮಯ್ಯನವರ ಸಾಧನೆಯನ್ನು ಉಲ್ಲೇಖಿಸಿ ಭರ್ಜರಿಯಾಗಿ ಟಾಂಗ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ಕುರಿತು ಟೀಕೆ ಮಾಡಿದ ಕುಮಾರಸ್ವಾಮಿ ಕುರಿತು ಮಾತನಾಡಿದ ಜಮೀರ್‌ ಅಹ್ಮದ್‌ ಕಾಂಗ್ರೆಸ್‌ ಸರ್ಕಾರ ಈ ಹಿಂದೆ ಅಧಿಕಾರದಲ್ಲಿದ್ದಾಗ ಏನೆಲ್ಲ ಕೆಲಸ ಮಾಡಿದೆ ಎಂಬುದು ಗೊತ್ತಿದೆ, ಹಾಗೆಯೇ … Read more

ಇನ್ಮುಂದೆ ಕಾಲ್ತುಳಿತ ಘಟನೆ ನಡೆದರೆ 3 ವರ್ಷ ಜೈಲು ಫಿಕ್ಸ್ : ಹೊಸ ಕಾನೂನು ಜಾರಿಗೆ ರಾಜ್ಯ ಸರ್ಕಾರ ನಿರ್ಧಾರ

18ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೊಚ್ಚಲ ಕಪ್ ಎತ್ತಿ ಹಿಡಿದ ಆರ್‌ಸಿಬಿ ತಂಡ ಇತ್ತೀಚಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಒಂದನ್ನು ಹಮ್ಮಿಕೊಂಡಿತ್ತು. ಈ ಒಂದು ಕಾರ್ಯಕ್ರಮದಲ್ಲಿ ಕಲ್ಲುಡಿದ ನಡೆದು 11 ಜನ ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದರು. ಘಟನೆ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಇನ್ನು ಮುಂದೆ ಯಾವುದೇ ಸಭೆ ಸಮಾರಂಭ ಅಥವಾ ಲಕ್ಷಾಂತರ ಜನರು ಸೇರುವ ಕಾರ್ಯಕ್ರಮಗಳಿಗೆ ಹೊಸ ಕಾನೂನು ಜಾರಿಗೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಇನ್ಮುಂದೆ ನಡೆಯುವ ಸಭೆ ಸಮಾರಂಭಗಳಲ್ಲಿ ಕಾಲ್ತುಳಿತ ಘಟನೆಗಳು … Read more

ಪುನೀತ 60 ಕೋಟಿ ವ್ಯವಹಾರ ಮಾಡ್ತಾ ಇದ್ದೀನಿ ಅಂದ ಒಂದು ಚಿಟಿಕೆಗೆ ಹೊರಟುಹೋದ ಎಂದ ನಟ ಜಗ್ಗೇಶ್

ನಿನ್ನೆ ( ಜೂನ್ 15 ) ವಿಶ್ವ ತಂದೆಯಂದಿರ ದಿನದ ಸಲುವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ನಟ ನವರಸ ನಾಯಕ ಜಗ್ಗೇಶ್ ತಂದೆಯ ಮಹತ್ವ ಹಾಗೂ ತ್ಯಾಗದ ಕುರಿತು ಭಾಷಣ ಮಾಡಿದರು. ತಂದೆ ಎಂಬ ವ್ಯಕ್ತಿಗೆ ಯಾವ ಯೋಚನೆಯೂ ಇರುವುದಿಲ್ಲ, ನನ್ನ ಹೆಂಡತಿ ಚೆನ್ನಾಗಿರಬೇಕು, ನನ್ನ ಮಕ್ಕಳು ಚೆನ್ನಾಗಿರಬೇಕು ಎಂದು ಯೋಚಿಸುವ ಒಂದು ಆತ ಓರ್ವ ನಿಷ್ಕಲ್ಮಶ ಜೀವಿ ಎಂದು ಕೊಂಡಾಡಿದರು. ಆತ ಎತ್ತು ದುಡಿದ ಹಾಗೆ ದುಡೀತಾನೆ, ಕೊನೆಗೆ ಸಾಯುತ್ತಾನೆ, ಆತ ನಿಮ್ಮಿಂದ … Read more

Gold Rate : ಅಲ್ಪ ಇಳಿಕೆ ಕಂಡ ಬಂಗಾರದ ದರ.! ಇವತ್ತಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.?

Gold Rate : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಈ ಲೇಖನದಲ್ಲಿ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಇವತ್ತಿನ ಚಿನ್ನದ ದರವನ್ನು ನೋಡುವುದಾದರೆ, 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹9,305/- ರೂಪಾಯಿ ಆಗಿದೆ. 10 ಗ್ರಾಂ ಗೆ ₹93,050/- ರೂಪಾಯಿ. 100 ಗ್ರಾಂ ಗೆ ₹9,30,500/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ … Read more

ಪ್ರೀತಿಸಿ ಮದುವೆಯಾದ ಯುವತಿಯನ್ನು ಗಂಡನ ಮನೆಯಿಂದ ಗೋಣಿ ಚೀಲದಲ್ಲಿ ತುಂಬಿ ಹೊತ್ತೊಯ್ದ ಪೋಷಕರು!

ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಆಕೆಯ ಪೋಷಕರು ಪತಿಯ ಮನೆಯಿಂದ ಗೋಣಿ ಚೀಲದಲ್ಲಿ ತುಂಬಿ ಬಲವಂತವಾಗಿ ಹೊತ್ತೊಯ್ದಿರುವಂತಹ ಆಘಾತಕಾರಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಬೈರಿಕೊಪ್ಪ ಗ್ರಾಮದ ನಿರಂಜನ್ ಹಾಗೂ ಸುಷ್ಮಾ ಪರಸ್ಪರ 8 ವರ್ಷಗಳಿಂದ ಪ್ರೀತಿಸುತ್ತಿದ್ದರು. ಜೋಡಿ ಎರಡು ವರ್ಷದ ಹಿಂದೆ ಗದಗದಲ್ಲಿ ರಿಜಿಸ್ಟರ್‌ ಮ್ಯಾರೇಜ್‌ ಆಗಿದ್ದರು. ಆದರೆ ಮದುವೆಗೆ ಪೋಷಕರ ವಿರೋಧವಿತ್ತು. ಇದರಿಂದ ಇಬ್ಬರು ದೂರವಾಗಿ ವೇದನೆ ಪಡುತ್ತಿದ್ದರು. ಆದರೆ ಸುಷ್ಮಾ ಪ್ರೀತಿಸಿದ ವ್ಯಕ್ತಿಯನ್ನು ಬಿಟ್ಟು ಇರಲಾಗದೆ ನಿರಂಜನ್‌ ಮನೆಗೆ ಹೋಗಿದ್ದಳು. ಈ ವಿಚಾರ ತಿಳಿದ … Read more

ಕಾಲ್ತುಳಿತ ಕೇಸ್ : ದುರಂತಕ್ಕೆ ಸಿಎಂ, ಡಿಸಿಎಂ ಹೊಣೆ ಅನ್ನೋದು ಸರಿಯಲ್ಲ – ಸಚಿವ HC ಮಹದೇವಪ್ಪ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 4 ರಂದು ಸಂಭವಿಸಿದ್ದ ಕಾಲ್ತುಳಿತ ದುರಂತಕ್ಕೆ ಸಿಎಂ, ಹಾಗೂ ಡಿಸಿಎಂ ನೇರ ಹೊಣೆ ಎಂದು ವಿಪಕ್ಷ ಬಿಜೆಪಿ ಆರೋಪಿಸಿದೆ. ಅಲ್ಲದೇ ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕೂಡ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ ವಿರುದ್ಧ ಆಕ್ರೋಶ ಹೊರ ಹಾಕಿದರು. ಈ ಬಗ್ಗೆ ಕಲಬುರ್ಗಿಯಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಸಚಿವ ಎಚ್ ಸಿ ಮಹದೇವಪ್ಪ, ಇವೆಲ್ಲವೂ ತುಂಬಾ ಬಾಲಿಷ ಹೇಳಿಕೆ ಎಂದಿದ್ದಾರೆ. ಕಾಲ್ತುಳಿತ ದುರಂತ ಆಗಬಾರದಿತ್ತು. ಘಟನೆಯಿಂದ ಎಲ್ರಿಗೂ ತುಂಬಾ ನೋವಾಗಿದೆ. … Read more