ಸ್ವಂತ ಮಗನಾದ್ರೂ ಸಿಗಲ್ಲ ತಂದೆಯ ಆಸ್ತಿ..! ತಂದೆಯ ಆಸ್ತಿ ವರ್ಗಾವಣೆ ಕುರಿತು ಹೈಕೋರ್ಟ್ ಹೇಳುವುದೇನು ಗೊತ್ತಾ?

Rights on Fathers Property : ರಾಜಸ್ಥಾನ ಹೈಕೋರ್ಟ್ ತನ್ನ ತಂದೆ ಸಂಪಾದಿಸಿದ ಆಸ್ತಿಯ ಮೇಲೆ ಮಗನಿಗೆ ಯಾವುದೇ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ. ತಂದೆ ಪ್ರೀತಿಯಿಂದ ಮಗನನ್ನು ಮನೆಯಲ್ಲಿ ಇರಲು ಬಿಟ್ಟ ಮಾತ್ರಕ್ಕೆ ಮಗನಿಗೆ ಮನೆಯ ಮಾಲೀಕತ್ವ ಸಿಗುತ್ತದೆ ಎಂದು ಭಾವಿಸುವುದು ಸರಿಯಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಮಕ್ಕಳು ಪೋಷಕರ ಅನುಮತಿಯೊಂದಿಗೆ ಮಾತ್ರ ಮನೆಯಲ್ಲಿ ಉಳಿಯಬಹುದು ಮತ್ತು ತಂದೆಗೆ ಯಾವುದೇ ಸಮಯದಲ್ಲಿ ಆ ಅನುಮತಿಯನ್ನು ಹಿಂಪಡೆಯುವ ಹಕ್ಕಿದೆ ಎಂದು ನ್ಯಾಯಾಲಯ ಹೇಳಿದೆ. ಒಂದು ಪ್ರಕರಣದಲ್ಲಿ, ಒಬ್ಬ … Read more

Horoscope Today : ಗಜಕೇಸರಿ ಯೋಗ; ಡಿಸೆಂಬರ್‌ 07 ರಂದು ಯಾವ ರಾಶಿಗೆ ಶುಭ.? ಯಾವ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

2025 ಡಿಸೆಂಬರ್‌ 07 ಭಾನುವಾರದಂದು ಯಾವ ರಾಶಿಗೆ ಶುಭವಾಗಲಿದೆ? ಯಾವ ರಾಶಿಗೆ ನಷ್ಟವಾಗಲಿದೆ..? ನಿಮ್ಮ ರಾಶಿಗೆ ಅನುಸಾರ ಯಾರಿಗೆ ಶುಭ? ಯಾರಿಗೆ ಅಶುಭ? ಎಲ್ಲಾ ರಾಶಿಗಳ ಪಾಪ ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲ ನೀಡುತ್ತವೆ. ಈ ದಿನ ಈ ರಾಶಿಯವರು ತುಂಬಾ ಮಂಗಳಕರ ಎಂದು ನಂಬಲಾಗುತ್ತದೆ. ಒಟ್ಟಾರೆ ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ಈ ಕೆಳಗೆ … Read more

ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!

ಹಾವೇರಿ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರು ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸಜೀವ ದಹನವಾಗಿದ್ದಾರೆ. ಗುರುತು ಸಿಗದಷ್ಟು ಸುಟ್ಟು ಕರಕಲಾಗಿದ್ದ ಅವರ ದೇಹವನ್ನು ಕೈಯಲ್ಲಿದ್ದ ಉಂಗುರ ಮತ್ತು ಕಾರ್ ನಂಬರ್ ಪ್ಲೇಟ್‌ನಿಂದ ಪತ್ತೆಹಚ್ಚಲಾಗಿತ್ತು. ಡಿವೈಡರ್‌ಗೆ ಡಿಕ್ಕಿಯಾಗಿ ಕಾರು ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಸಜೀವ ದಹನವಾದ ಹಾವೇರಿ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರ ಅಂತ್ಯಕ್ರಿಯೆ ಶನಿವಾರ ಅವರ ಹುಟ್ಟೂರು ಮುರಗೋಡದಲ್ಲಿ ನಡೆಯಿತು. ಹುಬ್ಬಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಅವರ ಮರಣೋತ್ತರ ಪರೀಕ್ಷೆ ನಡೆದು ಶವ … Read more

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!

ನಾನು 2028ರ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ, ಎಂದು ಮಾಜಿ ಸಚಿವ ಕೆಎನ್‌ ರಾಣಣ್ಣ ಅವರು ಮಹತ್ವದ ನಿರ್ಧಾರವೊಂದನ್ನು ಘೋಷಿಸಿದ್ದಾರೆ. ಸಹಕಾರ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಬಳಿಕ ತುಮಕೂರಿನಲ್ಲಿ ಈ ಕುರಿತು ಸ್ಪಷ್ಟಪಡಿಸಿದ್ದಾರೆ ಡಿಕೆಶಿ ಸಿಎಂ ಆದ್ರೆ ನಾನು ಅವರ ಸಂಪುಟದಲ್ಲಿ ಮಂತ್ರಿ ಆಗೋಲ್ಲ: ಸಚಿವ ಸ್ಥಾನದ ಬೇಡಿಕೆ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡಿದ ರಾಜಣ್ಣ ಅವರು, ನಾನು ಮೊದಲೇ ಹೇಳಿದ್ದೇನೆ, ಶಿವಕುಮಾರ್ ಸಿಎಂ ಆದರೆ ಅವರ ಸಂಪುಟದಲ್ಲಿ … Read more

‘ಸೀರಿಯಲ್ ಕಿಲ್ಲರ್’ ಮಹಿಳೆಯಿಂದ ಶಾಕಿಂಗ್‌ ಹೇಳಿಕೆ: ಏಕಾದಶಿ, ದಶಮಿಯಂದೇ ನಾಲ್ಕು ಮಕ್ಕಳ ಹತ್ಯೆ !

ಹರಿಯಾಣದ ಪಾಣಿಪತ್‌ನಲ್ಲಿ ಸರಣಿ ಮಕ್ಕಳ ಹತ್ಯೆ ಆರೋಪದ ಮೇಲೆ 34 ವರ್ಷದ ಪೂನಂ ಎಂಬ ಮಹಿಳೆಯನ್ನು ಮಂಗಳವಾರ ಬಂಧಿಸಲಾಗಿದೆ. ಈಕೆಯ ಪತಿ ನವೀನ್, ಬರೋಡಾ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ತನ್ನ ಮಕ್ಕಳಿಗಿಂತ ‘ಹೆಚ್ಚು ಆಕರ್ಷಕವಾಗಿ’ ಅಥವಾ ‘ಸುಂದರವಾಗಿ’ ಇರುವ ಮಕ್ಕಳನ್ನು ಕೊಲ್ಲಲು ತನಗೆ ಪ್ರೇರಣೆ ಬರುತ್ತಿತ್ತು ಎಂದು ಪೂನಂ ಒಪ್ಪಿಕೊಂಡಿದ್ದಾಳೆ. ಇತರ ಮಕ್ಕಳ ಕೊಲೆಗೆ ತನ್ನ ಮಗ ಸಾಕ್ಷಿಯಾಗಿದ್ದಾನೆ ಎಂಬ ಭಯದಿಂದ, ಪೂನಂ ತನ್ನ ಸ್ವಂತ ಮಗನನ್ನೂ ಕೊಂದಿರುವುದಾಗಿ … Read more

ಗ್ಯಾಸ್ ಗೀಸರ್ ಹಾಕಿಸಿದ್ದೀರಾ? ಹುಷಾರು..! ಗ್ಯಾಸ್‌ ಸೋರಿಕೆಯಾಗಿ 24 ರ ಯುವತಿ ಸಾವು

ಬೆಂಗಳೂರಿನಲ್ಲಿ (Bengaluru) ಗ್ಯಾಸ್ ಗೀಸರ್ (Gas Geyser) ಅವಘಡಕ್ಕೆ ಮತ್ತೊಂದು ಬಲಿಯಾಗಿದೆ. ಸ್ನಾನ ಮಾಡುವ ವೇಳೆ ವಿಷಕಾರಿ ಅನಿಲ ಬಿಡುಗಡೆಯಾದ ಪರಿಣಾಮ 24 ವರ್ಷದ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ತೋಟದಗುಡ್ಡದಹಳ್ಳಿಯಲ್ಲಿ ನಡೆದಿದೆ. ಮೃತ ಯುವತಿಯನ್ನು 24 ವರ್ಷದ ಭೂಮಿಕಾ ಎಂದು ಗುರುತಿಸಲಾಗಿದೆ. ಕಳೆದ 15 ದಿನಗಳಿಂದ ಭೂಮಿಕಾ ಮತ್ತು ಕೃಷ್ಣಮೂರ್ತಿ ಎಂಬುವವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅದರಂತೆ ಇದೀಗ ಸ್ನಾನಕ್ಕೆ ಹೋದಾಗ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿ ಈ ಅವಘಡ ಸಂಭವಿಸಿದೆ. ಕೃಷ್ಣಮೂರ್ತಿ ನವೆಂಬರ್ 29 ರಂದು ಬೆಳಿಗ್ಗೆ … Read more

‘ಹುಟ್ಟುವಾಗ ಹಿಂದೂವಾಗಿದ್ದೆ, ಸಾಯುವಾಗ ಹಿಂದೂವಾಗಿ ಸಾಯಲಾರೆ ಎಂದು ಅಂಬೇಡ್ಕರ್ ಹೇಳಿದ್ರು’ : ಸಿಎಂ ಸಿದ್ದರಾಮಯ್ಯ

ಹುಟ್ಟುವಾಗ ಹಿಂದೂವಾಗಿದ್ದೆ, ಸಾಯುವಾಗ ಹಿಂದೂವಾಗಿ ಸಾಯಲಾರೆ ಎಂದು ಅಂಬೇಡ್ಕರ್ ಹೇಳಿದ್ರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂವಿಧಾನ ಶಿಲ್ಪಿ, ಭಾರತ ರತ್ನ ಡಾll ಬಿ.ಆರ್. ಅಂಬೇಡ್ಕರ್ ರವರ 69ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ವಿಧಾನಸೌಧ ಆವರಣದಲ್ಲಿರುವ ಬಾಬಾ ಸಾಹೇಬರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ, ಮಾತನಾಡಿದರು. ಅಂಬೇಡ್ಕರ್ ಅವರೊಬ್ಬ ಮಹಾನ್ ವ್ಯಕ್ತಿ ಹಾಗೂ ದೇಶ ಕಂಡ ಒಬ್ಬ ಅಪರೂಪದ ನಾಯಕ. ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತರಿಗೆ ಗೌರವ … Read more

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು

ಕೋವಿಡ್‌ ನಂತರ ಯುವಕರಲ್ಲಿ ಹೃದಯಾಘಾತ ಹಾಗೂ ಹೃದಯಸ್ತಂಭನದಂಥ ಘಟನೆಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ವೈದ್ಯರು ಕೂಡ ಎಚ್ಚರಿಕೆ ನೀಡಿದ್ದಾರೆ. ಹಾಗಿದ್ದರೂ ಚಿಕ್ಕವಯಸ್ಸಿನವೇ ಹೃದಯಾಘಾತಕ್ಕೆ ಬಲಿಯಾಗುವುದು ಕಡಿಮೆಯಾಗಿಲ್ಲ. ಲೈಫ್‌ಸ್ಟೈಲ್‌ನಲ್ಲಿನ ದೊಡ್ಡ ಮಟ್ಟದ ಬದಲಾವಣೆಗಳೇ ಇದಕ್ಕೆ ಕಾರಣ ಎಂದು ಹೇಳಿದರೂ, ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುವಾಗಲೇ ಸಾವು ಕಂಡ ಸಾಕಷ್ಟು ವರದಿಗಳು ಆಗಿವೆ. ಅದೇ ರೀತಿಯ ಪ್ರಕರಣ ಕೊಪ್ಪಳದಲ್ಲಿ ವರದಿಯಾಗಿದ್ದು, 28 ವರ್ಷದ ಯುವಕ, ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕನಾಗಿರುವ ಸಂದೇಶ್ ಹೃದಯಾಘಾತದಿಂದ ಸಾವು ಕಂಡಿದ್ದಾರೆ. ಜಿಮ್‌ ಮುಗಿಸಿ ಬಂದ ಕೆಲವೇ … Read more

15 ದಿನಗಳಿಂದ ಏರಿಯಾದಲ್ಲಿ ದುರ್ವಾಸನೆ: ವಾಸನೆ ಜಾಡು ಹಿಡಿದ ಪೊಲೀಸರಿಗೆ ಸಿಕ್ಕಿದ್ದು ಟೆಕ್ಕಿ ಶವ.!

ಆ ಏರಿಯಾದ ಜನರು ಕಳೆದ ಎರಡು ವಾರಗಳಿಂದ ದುರ್ವಾಸನೆಗೆ ಬೇಸತ್ತಿದ್ದರು. ಹೆಗ್ಗಣ್ಣ ಸತ್ತಿರಬಹುದೆಂದು ಹಾದಿ ಬದಿಯ ಚರಂಡಿಗೆ ನೀರು ಸುರಿಯುತ್ತಿದ್ದರು. ಆದರೆ ಇಂದು ಪೊಲೀಸರು (police) ಎಂಟ್ರಿಕೊಟ್ಟಾಗ ಬೆಚ್ಚಿಬಿದ್ದಿದ್ದರು. ದುರ್ವಾಸನೆ ಜಾಡು ಹಿಡಿದ ಪೊಲೀಸರಿಗೆ ಕೊಳೆತ ಶವ (deadbody) ಸಿಕ್ಕಿತ್ತು. ಇಂದು ಬಸವೇಶ್ವರ ನಗರ ಪೊಲೀಸರು ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯೊಂದರಲ್ಲಿ ಕೊಳೆತು ನಾರುತ್ತಿತ್ತು ಶವ ಬೆಂಗಳೂರಿನ ಮಂಜುನಾಥ್ ನಗರದ 3ನೇ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ಕಳೆದ ಹದಿನೈದು ದಿನಗಳಿಂದ ಶವ ಕೊಳೆತು … Read more

ಎರಡನೇ ಬಾರಿಗೆ ಭೇಟಿ : ಸತೀಶ್ ಜಾರಕಿಹೊಳಿ ಬಳಿ ಬೆಂಬಲ ಕೇಳಿದ್ರಾ ಡಿಕೆ ಶಿವಕುಮಾರ್.!

• ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷೆಯಲ್ಲಿರುವ ಡಿಕೆ ಶಿವಕುಮಾರ್, ಜಾರಕಿಹೊಳಿ ಅವರ ಬೆಂಬಲ ಕೋರಿದ್ದಾರೆ ಎಂಬ ವರದಿಗಳು ಕೇಳಿಬಂದಿದ್ದವು. ಜಾರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆಯೂ ವರದಿಯಾಗಿತ್ತು. ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್ ಹಗ್ಗಜಗ್ಗಾಟದ ನಡುವೆಯೇ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಹಿರಿಯ ಸಚಿವ ಸತೀಶ್ ಜಾರಕಿಹೊಳಿ ಖಾಸಗಿ ಮದುವೆ ಕಾರ್ಯಕ್ರಮವೊಂದರಲ್ಲಿ ಮುಖಾಮುಖಿಯಾಗಿದ್ದು, ಮಾತುಕತೆ ನಡೆಸಿರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುವ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ, … Read more