ಹೊಸದಾಗಿ ಅರ್ಜಿ ಹಾಕಿದ್ರೆ 15 ದಿನದಲ್ಲಿ ಬಿಪಿಎಲ್ ಕಾರ್ಡ್ ವಿತರಣೆ :‌ ಗುಡ್‌ ನ್ಯೂಸ್‌ ಕೊಟ್ಟ ಕೆ.ಹೆಚ್ ಮುನಿಯಪ್ಪ.

ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ತಕ್ಷಣವೇ ತಹಶೀಲ್ದಾರ್ ಗಳಿಗೆ ಭೇಟಿ ಮಾಡಿ ಹೊಸದಾಗಿ ಅರ್ಜಿ ಹಾಕಿದರೆ 15 ದಿನಗಳಿಗೆ ಪಡಿತರ ಕಾರ್ಡ್ ನೀಡುತ್ತೇವೆ. ಇನ್ನು ಆಸ್ತಿ ಇರುವವರು ಕೂಡ ಬಿಪಿಎಲ್ ಕಾರ್ಡ್ ಹೊಂದಿರುವ ವಿಚಾರವಾಗಿ ಅದನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ತಿಳಿಸಿದರು. ಬೆಂಗಳೂರಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊರ ರಾಜ್ಯಗಳಿಗೆ ಪಡಿತರ ಅಕ್ಕಿ ಕಳ್ಳ ಸಾಗಾಣಿ ವಿಚಾರವಾಗಿ ಈ ಬಗ್ಗೆ ಈಗಾಗಲೇ ಕ್ರಮ ಜರುಗಿಸಿದ್ದೇವೆ ಈಗಾಗಲೇ ವಿವಿಧಡೆ 574 … Read more

ಸ್ವಂತ ಕಾರಿಗೆ ‘POLICE’ ಬೋರ್ಡ್ ಹಾಕಿ ಪ್ರವಾಸ ; ಐಡಿ ಕಾರ್ಡ್ ತೋರಿಸಿದ್ರೂ ಪೊಲೀಸಪ್ಪಗೆ ದಂಡ ಹಾಕಿದ ಲೇಡಿ ಸಿಂಗಂ!

ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರೇಣುಕಾ ಅವರು ಸಾಬೀತುಪಡಿಸಿದ್ದಾರೆ. ಸ್ವಂತ ಕಾರಿಗೆ ‘ಪೊಲೀಸ್’ ಎಂದು ಬೋರ್ಡ್ ಹಾಕಿಕೊಂಡು ಫ್ಯಾಮಿಲಿ ಜೊತೆ ಪ್ರವಾಸ ಹೊರಟಿದ್ದ ಪೊಲೀಸಪ್ಪನಿಗೆ ದಂಡ ವಿಧಿಸುವ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪೊಲೀಸ್ ಬೋರ್ಡ್ ಹಾಕಿ ಧರ್ಮಸ್ಥಳಕ್ಕೆ ಪಯಣ ಧಾರವಾಡ ಮೂಲದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸ್ವಂತ ಕಾರಿನಲ್ಲಿ ಧರ್ಮಸ್ಥಳಕ್ಕೆ ಪ್ರವಾಸ ಹೊರಟಿದ್ದರು. ಪ್ರವಾಸದ ವೇಳೆ ಟ್ರಾಫಿಕ್ ಕಿರಿಕಿರಿ ತಪ್ಪಿಸಲೋ, ಅಧಿಕಾರ ತೋರಿಸಲೋ ತಮ್ಮ … Read more

ಸಲಹೆ ಕೊಟ್ಟರೆ ದುರಹಂಕಾರದ ಮಾತು : ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ಮೂಲ ಸೌಕರ್ಯದ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಲಹೆ ಕೊಟ್ಟರೆ, ರಾಜ್ಯ ಸರ್ಕಾರದವರು ದುರಂಹಕಾರದ ಮಾತುಗಳನ್ನು ಆಡುತ್ತಾರೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದಿಂದ ಗುರುವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಸುಶಾಸನ ದಿನಾಚರಣೆ ಮತ್ತು ಅಟಲ್ ಪುರಸ್ಕಾರ-2025 ಕಾರ್ಯಕ್ರಮ’ದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಬೆಂಗಳೂರು ನಗರ ಸೇರಿ ಮೂಲ ಸೌಕರ್ಯದ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಲಹೆ ಕೊಟ್ಟರೆ, ರಾಜ್ಯ ಸರ್ಕಾರದವರು ದುರಂಹಕಾರದ ಮಾತು ಆಡುತ್ತಾರೆ. ಪ್ರಧಾನಿ … Read more

Horoscope : ಡಿಸೆಂಬರ್‌ 26 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ನಿಮ್ಮ ಸ್ನೇಹಿತರೊಂದಿಗೆ ಆನಂದದಿಂದ ಸಮಯ ಕಳೆಯುವ ಕಾಲ ಎಂದು ಗಣೇಶ ಹೇಳುತ್ತಾರೆ. ನಿಮ್ಮ ಸ್ನೇಹಿತರ ಅನಿರೀಕ್ಷಿತ ಉಡುಗೊರೆಯು ನಿಮಗೆ ಖುಷಿನೀಡಲಿದೆ. ಅದಕ್ಕೆ ಪ್ರತಿಯಾಗಿ ನೀವು ಕೂಡಾ ಅವರಿಗೆ ಸಹಾಯಮಾಡಬೇಕಾಗಿ ಬರಬಹುದು. ಹೊಸ ಸಂಬಂಧ ನಿಮ್ಮ ಭವಿಷ್ಯದಲ್ಲಿ ಅದೃಷ್ಟವನ್ನು ತರಲಿದೆ. ಹಾಗೂ ಮಕ್ಕಳು ನಿಮ್ಮ ಪಾಲಿಗೆ ಅದೃಷ್ಚವಂತರಾಗುತ್ತಾರೆ. ದೂರದ ಪ್ರಕೃತಿ ತಾಣಕ್ಕೆ ಪ್ರವಾಸ ತೆರಳುವ ಸಾಧ್ಯತೆಯಿದೆ. ಸರಕಾರಕ್ಕೆ ಸಂಬಂಧಿಸಿದ ವಿಚಾರಗಳು ಇತ್ಯರ್ಥಗೊಂಡು ನಿಮಗೆ ಒಳ್ಳೆಯ ಸುದ್ದಿ ಬರುವ ಸಾಧ್ಯತೆ ಇದೆ. ವೃಷಭ :- ವೃತ್ತಿನಿರತರಿಗೆ ಹಾಗೂ … Read more

ಟಿಪ್ಪರ್ ಬೈಕ್ ನಡುವೆ ಭೀಕರ ಅಪಘಾತ : ನಾಲ್ವರು ಯುವಕರು ಸ್ಥಳದಲ್ಲೇ ಮೃತ್ಯು

ಚಿತ್ರದುರ್ಗದಲ್ಲಿ ನಡೆದ ಭೀಕರ ದುರಂತದ ಆಘಾತ ಮಾಸುವ ಮುನ್ನವೇ, ಚಿಕ್ಕಬಳ್ಳಾಪುರದಲ್ಲಿ ಹೃದಯವಿದ್ರಾವಕ ಅಪಘಾತ ಸಂಭವಿಸಿದೆ. ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮನೋಜ್, ನರಸಿಂಹಮೂರ್ತಿ ನಂದೀಶ್ ಹಾಗೂ ಅರುಣ್ ಮೃತ ಯುವಕರು.  ಮೃತರು ಅಜ್ಜವಾರ ಗ್ರಾಮದ ಯುವಕರಾಗಿದ್ದು, ಒಂದೇ ಬೈಕಿನಲ್ಲಿ ನಾಲ್ವರು ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮನೋಜ್, ನರಸಿಂಹಮೂರ್ತಿ ನಂದೀಶ್ ಹಾಗೂ ಅರುಣ್ ಮೃತ ಯುವಕರು. ಇನ್ನು … Read more

ನಿಮ್ಮ ಹೃದಯದ ಇಂಚಿಂಚು ಮಾಹಿತಿ ನೀಡುತ್ತೆ ಈ ಟೆಸ್ಟ್‌.! ಒಂದೇ ಬಾರಿ ಮಾಡಿಸಿದ್ರೆ ಕೊನೆವರೆಗೂ ನೆಮ್ಮದಿಯಾಗಿ ಇರಬಹುದು..

ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಅನೇಕ ಜನರು ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುವುದು ಹೆಚ್ಚಾಗುತ್ತಿದೆ. ಹೀಗಾಗಿ ವಯಸ್ಸಾದಂತೆ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗುತ್ತದೆ. ಕಳಪೆ ಆಹಾರ ಪದ್ಧತಿ ತೂಕ ಹೆಚ್ಚಾಗಲು ಕಾರಣವಾಗುವುದಲ್ಲದೆ, ನಮ್ಮ ಅಪಧಮನಿಗಳ ಗೋಡೆಗಳಲ್ಲಿ ಪ್ಲೇಕ್ (ಕೊಬ್ಬಿನ ನಿಕ್ಷೇಪಗಳು) ಸಂಗ್ರಹವಾಗುವ ಅಪಾಯ ಹೆಚ್ಚಿಸುತ್ತದೆ. 25 ವರ್ಷಗಳಿಗೂ ಹೆಚ್ಚು ಕ್ಲಿನಿಕಲ್ ಅನುಭವ ಹೊಂದಿರುವ ಕಾರ್ಡಿಯೋಥೊರಾಸಿಕ್ ಶಸ್ತ್ರಚಿಕಿತ್ಸಕ ಡಾ.ಜೆರೆಮಿ ಲಂಡನ್ ಇತ್ತೀಚೆಗೆ ಹೃದಯ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಸ್ಕ್ರೀನಿಂಗ್ ಪರೀಕ್ಷೆಗಳ ಬಗ್ಗೆ … Read more

ಎಂಥಾ ಕಾಲ ಬಂತಪ್ಪಾ! ರೈಲಿನಲ್ಲಿ ಯುವಕ ಮತ್ತು ಹುಡುಗಿ ಲೈಂಗಿಕ ಕ್ರಿಯೆಯ ವಿಡಿಯೋ ಎಲ್ಲೆಡೆ ವೈರಲ್.!

ಗಾಜಿಯಾಬಾದ್ : ಕಾಲ ಕೆಟ್ಟೋಯ್ತು.. ಈ ಕಣ್ಣಲ್ಲಿ ನೋಡಬಾರದ್ದನ್ನೆಲ್ಲಾ ನೋಡೋ ಕಾಲ ಬಂದ್ಬಿಡ್ತು. ಮುರಾದ್‌ನಗರ ಮತ್ತು ಮೀರತ್ ಸೌತ್ ನಡುವೆ ಚಲಿಸುವ ರ‍್ಯಾಪಿಡೋ ರೈಲಿನಲ್ಲಿ ಯುವಕ ಮತ್ತು ಹುಡುಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋ ತುಣುಕುಗಳು ಎಲ್ಲೆಡೆ ವೈರಲ್ ಆಗಿವೆ. ನವೆಂಬರ್ 24 ರಂದು ಬಹುತೇಕ ಖಾಲಿ ಕೋಚ್‌ನಲ್ಲಿ ಈ ಘಟನೆ ನಡೆದಿದ್ದು. ಲೈವ್ ಸಿಸಿಟಿವಿ ಫೀಡ್‌ನಿಂದ ಉದ್ಯೋಗಿಯೊಬ್ಬರು ಫೋನ್‌ನಲ್ಲಿ ರೆಕಾರ್ಡ್ ಮಾಡಲಾದ ವೀಡಿಯೊ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಮೋದಿ ನಗರ ಉತ್ತರ … Read more

ದಲಿತರು ಪ್ರೀತಿನೇ ಮಾಡಬಾರದಾ? ಮರ್ಯಾದಾ ಹತ್ಯೆ ಮಾಡಿದ ರಾಕ್ಷಸ ತಂದೆಯನ್ನು ಶೂಟ್‌ ಮಾಡಿ : ಪ್ರಮೋದ್ ಮುತಾಲಿಕ್‌

ಮರ್ಯಾದಾ ಹತ್ಯೆ ಮಾಡಿದ ತಂದೆಯನ್ನು ಜೈಲಿಗೆ ಹಾಕೋ ಅವಶ್ಯಕತೆ ಇಲ್ಲ. ಬದಲಿಗೆ ಶೂಟ್ ಮಾಡಬೇಕು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದರು. ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ಗರ್ಭಿಣಿ ಪುತ್ರಿಯನ್ನು ತಂದೆಯೇ ಕೊಚ್ಚಿ ಕೊಂದಿದ್ದಾನೆ. ದಲಿತ ಹುಡುಗನ ಮದುವೆಯಾಗಿದ್ದಕ್ಕೆ ಈ ಮರ್ಯಾದೆ ಹತ್ಯೆ ನಡೆದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುತಾಲಿಕ್‌ ವಿರೋಧ ವ್ಯಕ್ತಪಡಿಸಿದರು. ಮರ್ಯಾದೆ ಹತ್ಯೆಯನ್ನು ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಅಂಬೇಡ್ಕರ್ ಕನಸು ಇನ್ನು ನನಸಾಗಿಲ್ಲ ಎನ್ನುವುದಕ್ಕೆ ಇದು ಸಾಕ್ಷಿ. ಹೊಡೆದವರಿಗೆ ಹೃದಯವಿಲ್ಲ, ರಾಕ್ಷಸರು ಅವರು. … Read more

ನಾನು ಪಕ್ಷದ ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ, ಸ್ಟೇಜ್ ಮೇಲೆ ಬಂದು ಭಾಷಣ ಮಾಡಿ ಹೋಗಿಲ್ಲ : ಡಿಸಿಎಂ ಡಿಕೆ ಶಿವಕುಮಾರ್

ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಕುರ್ಚಿಯ ವಿಚಾರವಾಗಿ ಆಂತರಿಕ ಕಿಚ್ಚಾಟ ಹೆಚ್ಚಾಗಿದ್ದು, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಏನೇನು ಬೇಕು ಎಲ್ಲವನ್ನು ಮಾಡಿದ್ದೇನೆ. ನಾನು ಎಲ್ಲರ ಹಾಗೆ ಸ್ಟೇಜ್ ಮೇಲೆ ಬಂದು ಭಾಷಣ ಮಾಡಿಕೊಂಡು ಸುಮ್ಮನೆ ಹೋಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಗೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ನಾನು ಬಾವುಟ ಕಟ್ಟಿದ್ದೇನೆ. ಕಸ ಗುಡಿಸಿದ್ದೇನೆ. ಪಕ್ಷಕ್ಕೆ ಏನೇನು ಬೇಕು ಎಲ್ಲವನ್ನು ಮಾಡಿದ್ದೇನೆ. ಭಾಷಣ ಮಾಡಿಕೊಂಡು ಹೋಗು ಕೆಲಸ … Read more

ಸರ್ಕಾರಿ ನೌಕರರಿಗೆ ನ್ಯೂ ಇಯರ್ ಗಿಫ್ಟ್ ; ಜ.1ರಿಂದ್ಲೇ ಶೇ.20-35ರಷ್ಟು ಸಂಬಳ ಹೆಚ್ಚಳ ಸಾಧ್ಯತೆ | 8th Pay Commission

7ನೇ ವೇತನ ಆಯೋಗದ ಅವಧಿ ಡಿಸೆಂಬರ್ 31, 2025ರಂದು ಕೊನೆಗೊಳ್ಳಲಿದ್ದು, 8ನೇ ವೇತನ ಆಯೋಗವು ಏನು ನೀಡಬಹುದು ಎಂಬ ಬಗ್ಗೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಲ್ಲಿ ನಿರೀಕ್ಷೆ ಹೆಚ್ಚುತ್ತಿದೆ. 20-35% ವೇತನ ಹೆಚ್ಚಳದ ನಿರೀಕ್ಷೆಗಳು ಸುತ್ತುತ್ತಿರುವಾಗ, ವಾಸ್ತವವು ಸಮಯಸೂಚಿಗಳು, ನೀತಿ ನಿರ್ಧಾರಗಳು ಮತ್ತು ಆಯೋಗದ ಅಂತಿಮ ಶಿಫಾರಸುಗಳನ್ನ ಅವಲಂಬಿಸಿರುತ್ತದೆ. ಹೊಸ ವೇತನ ಪರಿಷ್ಕರಣೆಯ ನಿರೀಕ್ಷೆಯು ಮತ್ತೊಮ್ಮೆ ವೇತನ ರಚನೆಗಳನ್ನ ಬೆಳಕಿಗೆ ತಂದಿದೆ. ಅಕ್ಟೋಬರ್ 2025ರಲ್ಲಿ, ಕೇಂದ್ರ ಸಚಿವ ಸಂಪುಟವು 8ನೇ ವೇತನ ಆಯೋಗದ ಉಲ್ಲೇಖ ನಿಯಮಗಳನ್ನ … Read more