ಹೃದಯವಿದ್ರಾವಕ ಘಟನೆ : ಮೂವರು ಅಪ್ರಾಪ್ತ ಮಕ್ಕಳನ್ನು ಕೊಂದು ತಂದೆಯೂ ಆತ್ಮಹತ್ಯೆ.!
ಪತ್ನಿಯ ಸಾವಿನಿಂದ ತೀವ್ರ ನೊಂದು ವ್ಯಕ್ತಿಯೊಬ್ಬ ತನ್ನ ಮೂವರು ಅಪ್ರಾಪ್ತ ಮಕ್ಕಳಿಗೆ ವಿಷ ಕುಡಿಸಿ ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಗುರುವಾರ, ಹೊಸ ವರ್ಷದ ಮುನ್ನಾದಿನದಂದು ನಂದ್ಯಾಲ್ ಜಿಲ್ಲೆಯ ಉಯ್ಯಾಲವಾಡ ಮಂಡಲದ ತುಡುಮಲ ದಿನ್ನೆ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ತುಡುಮಲ ದಿನ್ನೆ ನಿವಾಸಿ ವೇಮುಲಪತಿ ಸುರೇಂದ್ರ (35) ಅವರು 8 ವರ್ಷಗಳ ಹಿಂದೆ ಅವುಕು ಮಂಡಲದ ಮಹೇಶ್ವರಿ ಅವರನ್ನು ವಿವಾಹವಾಗಿದ್ದರು. ಸುರೇಂದ್ರ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಮತ್ತು ವಾಸಿಸುತ್ತಿದ್ದರು. … Read more