ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಹುಷಾರ್ – ಕಠಿಣ ಕ್ರಮಕ್ಕೆ ಮುಂದಾದ ಬೆಂಗಳೂರು ಪೊಲೀಸ್!

ಇತ್ತೀಚೆಗೆ ಟ್ರಾಫಿಕ್ ರೂಲ್ಸ್ (Traffic rules) ಬ್ರೇಕ್ ಮಾಡೋರ ಸಂಖ್ಯೆ ಹೆಚ್ಚಾಗಿದ್ದು, ಪೊಲೀಸರು (Police) ರೂಲ್ಸ್ ಬ್ರೇಕ್ ಮಾಡೋ ಜನರಿಗೆ ತಕ್ಕ ಪಾಠ ಕಲಿಸೋಕೆ ಮುಂದಾಗಿದ್ದಾರೆ. ಬೆಂಗಳೂರಲ್ಲಿ ಕಠಿಣ ನಿಯಮವಳಿಗಳನ್ನ ಜಾರಿ ಮಾಡಿದರೂ ನಗರದ ಟ್ರಾಫಿಕ್ ಮಾತ್ರ ಹತೋಟಿಗೆ ಬರುತ್ತಿಲ್ಲ. ಈ ಈ ಸಮಸ್ಯೆಗೆ ಮುಕ್ತಿ ನೀಡಲು ಪ್ರಯತ್ನ ಮಾಡುತ್ತಿರುವ ಪೊಲೀಸರು ಈಗ RTO ಜೊತೆ ಸೇರಿ ಒನ್ ವೇ ಸವಾರರ ವಿರುದ್ಧ ಸಮರಕ್ಕೆ ಮುಂದಾಗಿದ್ದಾರೆ. ಒನ್ ವೇ ಸವಾರರನ್ನ ಪತ್ತೆ ಹಚ್ಚಿ ಅವರ ಡಿಎಲ್‌ಗಳನ್ನ ನೇರವಾಗಿ … Read more

‘ಕೇವಲ 37 ಸಕೆಂಡ್ ಗಳಲ್ಲಿ ರಾಜ್ಯಪಾಲರು ಎಸಗಿದ ಅಪಚಾರ ಒಂದೆರಡಲ್ಲ: ಗವರ್ನರ್ ರಿಮೋಟ್ ಕಂಟ್ರೋಲ್ ಕೇಶವ ಕೃಪಾದಲ್ಲಿದೆಯೋ, ಜಗನ್ನಾಥ ಭವನದಲ್ಲಿದೆಯೋ?’

ಬಿಜೆಪಿ ಮತ್ತು ರಾಜ್ಯಪಾಲರು ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ, ಕೇವಲ 37 ಸಕೆಂಡ್ ಗಳಲ್ಲಿ ರಾಜ್ಯಪಾಲರು ಎಸಗಿದ ಅಪಚಾರ ಒಂದೆರಡಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ರಾಜ್ಯಪಾಲು ಕೇವಲ 37 ಸೆಕೆಂಡುಗಳಲ್ಲಿ ರಾಷ್ಟ್ರಗೀತೆಗೆ ಅಪಚಾರ, ಸಂವಿಧಾನಕ್ಕೆ ದ್ರೋಹ, ಕರ್ನಾಟಕಕ್ಕೆ ಅಗೌರವ, ಕನ್ನಡಿಗರಿಗೆ ಅಪಮಾನ,ರಾಜ್ಯ ಸರ್ಕಾರಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯಪಾಲರಿಂದ ಇಷ್ಟೆಲ್ಲ ಅಪಚಾರವಾದರೂ ಬಿಜೆಪಿಯವರ ಸಮರ್ಥನೆ ನೋಡುತ್ತಿದ್ದರೆ ರಾಜ್ಯಪಾಲರ ರಿಮೋಟ್ ಕಂಟ್ರೋಲ್ ಕೇಶವ … Read more

ಅಪ್ಪ ಮಗನ ಗಲಾಟೆ ದುರಂತ ಅಂತ್ಯ – ಕೋವಿಯಿಂದ ಗುಂಡು ಹಾರಿಸಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಮಗನ ಶವ ಪತ್ತೆ

ಕೋವಿಯಿಂದ ಗುಂಡು ಹಾರಿಸಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾದ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ರಾಮಕುಂಜದ ವಸಂತ್ ಅಮೀನ್ ಪುತ್ರ ಮೋಕ್ಷ (17) ಗುರುತಿಸಲಾಗಿದೆ. ಬಾಲಕನ ತಂದೆಯೂ ಚೂರಿಯಿಂದ ಇರಿದ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಘಟನೆಯ ಬಗ್ಗೆ ಹಲವು ಅನುಮಾನಗಳು ಮೂಡಿದೆ. ಕೌಟುಂಬಿಕ ಕಲಹದಲ್ಲಿ ಮನೆಯಲ್ಲಿ ಸಂಘರ್ಷ ನಡೆದ ಬಗ್ಗೆ ಅನುಮಾನ ಇದ್ದು, ತಂದೆ ಮತ್ತು ಮಗನ ಮಧ್ಯೆ ಮನೆಯಲ್ಲಿ ಪರಸ್ಪರ ಜಗಳ ನಡೆದಿರುವ ಸಾಧ್ಯತೆ ಇದೆ. ಈ … Read more

Horoscope Today : 25 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಮೇಷ ರಾಶಿಯವರಿಗೆ ಸಾಮಾನ್ಯ ದಿನವು ಕಾದಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಏಕಾಗ್ರತೆ ಮತ್ತು ಲಕ್ಷ್ಯದ ಕೊರತೆಯು ನೀವು ಎಷ್ಟೇ ಕಷ್ಟವಾದರೂ ಎದುರಿಸಲೇಬೇಕಾದ ಸಮಸ್ಯೆಗಳಾಗಿವೆ. ಧ್ಯಾನ ಮತ್ತು ಯೋಗದ ಮೂಲಕ ಇವುಗಳಿಂದ ಮುಕ್ತಿ ಪಡೆಯಬಹುದು.ಈ ದಿನವು ಫಲಪ್ರದವಾಗಿರುವ ಸಾಧ್ಯತೆಯಿರದ ಕಾರಣ, ಹೂಡಿಕೆದಾರರು ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಇಂದು ಕಾನೂನು ದಾಖಲೆ ಪತ್ರಗಳಿಗೆ ಸಹಿ ಹಾಕುವಾಗ ಎಚ್ಚರವಹಿಸಿ. ಸಂಜೆಯ ವೇಳೆಗೆ, ಪರಿಸ್ಥಿತಿಗಳು ಸುಲಭ ಹಾಗೂ ಸಂತಸದಿಂದ ಕೂಡಿರುತ್ತದೆ. ಮನೆಯಲ್ಲಿನ ಪ್ರಕ್ಷುಬ್ಧತೆಯು ತಿಳಿಗೊಂಡು … Read more

ರಾಜ್ಯ ಸರ್ಕಾರದವರು ತಮಗೆ ಬೇಕಾದಂತೆ ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ಮಾಡಿಸಿದ್ದಾರೆ : ಹೆಚ್ ಡಿ ಕುಮಾರಸ್ವಾಮಿ ಕಿಡಿ

ಜೆಡಿಎಸ್ ಪಕ್ಷದ ಬೆಳ್ಳಿ ಹಬ್ಬದ ಹಿನ್ನಲೆಯಲ್ಲಿ ಇಂದು ಹಾಸನದಲ್ಲಿ ಬೃಹತ್ ಸಮಾವೇಶದ ಮೂಲಕ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಿದೆ. ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು. ಪ್ರಜ್ವಲ್ ರೇವಣ್ಣ ಕೇಸ್ ನಲ್ಲಿ ಆರೋಪ ಸಾಬೀತುಪಡಿಸಿದ ಪೊಲೀಸ್ ಅಧಿಕಾರಿಗಳಿಗೆ 30 ಲಕ್ಷ ಹಣವನ್ನು ಸರ್ಕಾರವು ಬಹುಮಾನವಾಗಿ ಘೋಷಣೆ ಮಾಡಿರುವ ವಿಚಾರವನ್ನು ಅವರು ಪ್ರಸ್ತಾಪಿಸಿದರು. ರಾಜ್ಯ ಸರ್ಕಾರದ ಧೋರಣೆಗಳ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ರಾಜ್ಯದಲ್ಲಿ ಈ ಹಿಂದೆ ಕಾಡುಗಳ್ಳ ವೀರಪ್ಪನ್ … Read more

ಬರ್ತಡೇ ಪಾರ್ಟಿಗೆ ಕರೆದು ಗೆಳೆಯನನ್ನೇ ಕೊಂದರು! ರಾಯಚೂರು ಕೆರೆ ಏರಿ ಮೇಲೆ ಕೊಲೆ

ರಾಯಚೂರಿನ ಮಾವಿನಕೆರೆ ದಂಡೆಯ ಮೇಲೆ ಶುಕ್ರವಾರ ರಾತ್ರಿ ಜನ್ಮದಿನದ ಪಾರ್ಟಿಗೆ ಕರೆಸಿ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿ ಯುವಕನ ಕೊಲೆ ಮಾಡಲಾಗಿದೆ. ಜಹೀರಾಬಾದ್ ಬಡಾವಣೆ ನಿವಾಸಿ ವಿಶಾಲ (22) ಕೊಲೆಯಾಗಿದ್ದಾನೆ. ಬಸವರಾಜ, ಜನ್ಮದಿನದ ಪಾರ್ಟಿ ಕೊಡಿಸುವುದಾಗಿ ನಂಬಿಸಿ ವಿಶಾಲನನ್ನು ಕರೆಸಿಕೊಂಡಿದ್ದ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿಗಳಾದ ಜಹೀರಾಬಾದ್‌ ಬಡಾವಣೆಯ ರಾಜು ಅಲಿಯಾಸ್ ಯೇಸು (19) ಹಾಗೂ ಬಸವರಾಜ (19) ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿ ಓಡಿ ಹೋಗುತ್ತಿದ್ದಾಗ ಡಿವೈಎಸ್‌ಪಿ ಶಾಂತವೀರ ಕೈಗೆ ಸಿಕ್ಕಿ … Read more

ಗಣಿತ ಹೋಮ್‌ವರ್ಕ್‌ ಮಾಡದ 4 ವರ್ಷದ ಮಗಳು ವಂಶಿಕಾಳನ್ನು ಲಟ್ಟಣಿಗೆಯಲ್ಲಿ ಹೊಡೆದು ಸಾಯಿಸಿದ ಪಾಪಿ ಅಪ್ಪ.!

ಗಣಿತದ ಹೋಮ್‌ವರ್ಕ್‌ ಮಾಡುವ ವೇಳೆ 1 ರಿಂದ 50ರವರೆಗಿನ ಸಂಖ್ಯೆಗಳನ್ನು ಬರೆಯಲು ವಿಫಲವಾದ ಕಾರಣಕ್ಕೆ 4 ವರ್ಷದ ಮಗಳನ್ನು ಲಟ್ಟಣಿಗೆಯಲ್ಲಿ ಹೊಡೆದು ಸ್ವಂತ ಅಪ್ಪನೇ ಕೊಂದಿರುವ ಘಟನೆ ನಡೆದಿದೆ. 31 ವರ್ಷದ ವ್ಯಕ್ತಿ ಸಿಟ್ಟಿನ ಭರದಲ್ಲಿ 4 ವರ್ಷದ ಮಗಳಿಗೆ ಲಟ್ಟಣಿಗೆಯಲ್ಲಿ ಹೊಡೆದಿದ್ದು, ಬಳಿಕ ಸಿಟ್ಟಿನಲ್ಲಿ ಆಕೆಯನ್ನು ನೆಲಕ್ಕೆ ಬಡಿದಿದ್ದಾನೆ. ಇದರ ಬೆನ್ನಲ್ಲಿಯೇ ಮಗು ಸಾವು ಕಂಡಿದೆ. ಬಳಿಕ ಹರಿಯಾಣದ ಫರಿದಾಬಾದ್ ನಿವಾಸಿ ಕೃಷ್ಣ ಜೈಸ್ವಾಲ್ ಈ ಕೊಲೆಯನ್ನು ಆಕಸ್ಮಿಕ ಸಾವು ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು … Read more

ಅಕ್ರಮ ಸಂಬಂಧ – ಪ್ರಿಯಕರನಿಗಾಗಿ ತಮ್ಮನೊಂದಿಗೆ ಸೇರಿ ಗಂಡನನ್ನೇ ಕೊಂದ ಪತ್ನಿ : ಠಾಣೆಗೆ ಬಂದು ಶರಣು

ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಮತ್ತು ತಮ್ಮನ್ನು ಕೊಲ್ಲುತ್ತಾನೆ ಎಂಬ ಭಯದಿಂದ ಪತ್ನಿಯೊಬ್ಬಳು ತನ್ನ ತಮ್ಮನೊಂದಿಗೆ ಸೇರಿ ಪತಿಯ ಕಣ್ಣಿಗೆ ಖಾರದ ಪುಡಿ ಎರಚಿ, ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಶನಿವಾರ(ಜ.24) ವರದಿಯಾಗಿದೆ. ಪ್ರಕಾಶಂ ಜಿಲ್ಲೆಯ ಪೆದ್ದರವಿಡು ಮಂಡಲದಲ್ಲಿ ಬುಧವಾರ ಈ ಘಟನೆ ನಡೆದಿದೆ. ಲಾಲು ಶ್ರೀನು (38) ಕೊಲೆಯಾದ ಪತಿ. ಝಾನ್ಸಿ ಗಂಡನ ಕೊಲೆಗೆ ಸುಪಾರಿ ನೀಡಿ, ಜೊತೆಗೆ ತಾನೇ ತಮ್ಮನೊಂದಿಗೆ ಸೇರಿ ಕೊಲೆ ಮಾಡಿದ ಆರೋಪಿ ಪತ್ನಿ. ಕೊಲೆ … Read more

ಮಗನ ಅನೈತಿಕ ಸಂಬಂಧಕ್ಕೆ ತಾಯಿ ಫುಲ್ ಸಪೋರ್ಟ್! ನವವಿವಾಹಿತೆ ಗಂಭೀರ ಆರೋಪ.! ಮದ್ವೆಯಾದ 7 ದಿನಕ್ಕೆ ಮುರಿದು ಬಿತ್ತು ಸಂಸಾರ..!

ನವವಿವಾಹಿತರ ನಡುವಿನ ವೈವಾಹಿಕ ಕಲಹ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪತ್ನಿಯ ಕುಟುಂಬಸ್ಥರಿಂದ ಪತಿ ಹಲ್ಲೆಗೊಳಗಾದ ಘಟನೆ ಆನೇಕಲ್ನ (Anekal)ಅತ್ತಿಬೆಲೆಯಲ್ಲಿ ನಡೆದಿದೆ. ಪತಿ ಆರೋಪಕ್ಕೆ ಪ್ರತ್ಯಾರೋಪ ಮಾಡಿರುವ ಪತ್ನಿ, ಆತನಿಗೆ ಅನೈತಿಕ ಸಂಬಂಧವಿದ್ದು, ಅವನ ತಾಯಿಯೂ ಸಹಕರಿಸಿರುವುದಾಗಿ ಆರೋಪಿಸಿದ್ದಾಳೆ. ಪತಿಯ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದ ಪತ್ನಿಯ ಕುಟುಂಬಸ್ಥರು ಅಂತರ್ಜಾತಿ ವಿವಾಹವಾಗಿದ್ದ ಅಂಬರೀಶ್ ಮತ್ತು ನಂದಿನಿ ನಡುವೆ ಮದುವೆಯಾಗಿ ವಾರದೊಳಗೆ ವೈಮನಸ್ಸು ಉಂಟಾಗಿತ್ತು. ಈ ಹಿನ್ನೆಲೆ ನವವಿವಾಹಿತೆಯ ಮಾವ ಸಂಪಂಗಿ, ಅಂಬರೀಶ್ ಮೇಲೆ ಹಲ್ಲೆ ನಡೆಸಿದ್ದ. ನಂತರ ನಂದಿನಿ … Read more

ಡಿಕೆಶಿ ಕನಸಿನ ‘ಸಿಎಂ’ ಪಟ್ಟದ ಬಗ್ಗೆ ಕೋಡಿಶ್ರೀ ಭವಿಷ್ಯ: ಅಡ್ಡಗೋಡೆ ಮೇಲಿನ ದೀಪದ ಹಿಂದೆ ಅಡಗಿದೆಯೇ ಗಾದಿ ಸೀಕ್ರೆಟ್.?

ಸಾಮಾನ್ಯವಾಗಿ ಮಕರ ಸಂಕ್ರಾಂತಿಯ ಪರ್ವಕಾಲದಂದು ವರ್ಷದ ಮೊದಲ ಭವಿಷ್ಯ ನುಡಿಯುವ ಕೋಡಿಮಠದ ಶ್ರೀಗಳು ಈ ಬಾರಿ ( 2026 ) ಭವಿಷ್ಯವನ್ನು ನುಡಿಯಲಿಲ್ಲವೇ? ಶ್ರೀಗಳು ಸಂಕ್ರಾಂತಿಯ ಭವಿಷ್ಯ, ಹಬ್ಬ ಮುಗಿದು ಹತ್ತು ದಿನಗಳಾಗುತ್ತಾ ಬಂದರೂ ಇನ್ನೂ ಎಲ್ಲೂ ವರದಿಯಾಗಿಲ್ಲ. ಸಂಕ್ರಾಂತಿಗೆ ಭವಿಷ್ಯ ನುಡಿಯುವುದಾಗಿ ಶ್ರೀಗಳು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಸಂಕ್ರಾಂತಿಗೆ ಭವಿಷ್ಯ ನುಡಿಯುವುದಾಗಿ ದೇವದುರ್ಗ ಕಾಗಿನೆಲೆ ಕನಕಪೀಠದಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ (ಜನವರಿ 13) ಕೋಡಿಶ್ರೀಗಳು ಹೇಳಿದ್ದರು. ಸೂರ್ಯನನ್ನು ನೋಡಿ ಭವಿಷ್ಯ ಹೇಳುವುದು ಮಕರ ಸಂಕ್ರಾಂತಿಯ ವೇಳೆ, … Read more