ಡಿಕೆಶಿಗೆ ಜಾವಾ ಬೈಕ್‌ಗೆ ಪೆಟ್ರೋಲ್ ಹಾಕಿಸಲು ಕಾಸಿರಲಿಲ್ಲ, ನಾನೇ ಕೊಟ್ಟಿದ್ದೆ; ನಾನೇ ‘ಕನಕಪುರ ಬಂಡೆ’ ಶ್ರೀನಿವಾಸ್!
ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಹಿರಿಯ ಚಲನಚಿತ್ರ ನಿರ್ಮಾಪಕ ಹಾಗೂ ವಿತರಕ ಕನಕಪುರ ಶ್ರೀನಿವಾಸ್ ಅವರು ಸ್ಫೋಟಕ ಹೇಳಿಕೆಗಳನ್ನು ನೀಡುವ ಮೂಲಕ ಹೊಸ ವಿವಾದದ ಕಿಡಿ ಹೊತ್ತಿಸಿದ್ದಾರೆ. ಡಿಕೆಶಿ ಅವರ ಹಳೆಯ ದಿನಗಳನ್ನು ಕೆದಕಿರುವ ಶ್ರೀನಿವಾಸ್, ‘ಒಂದು ಕಾಲದಲ್ಲಿ ಡಿ.ಕೆ ಶಿವಕುಮಾರ್ ಅವರ ಬಳಿ ಜಾವಾ ಬೈಕಿಗೆ ಪೆಟ್ರೋಲ್ ಹಾಕಿಸಲೂ ಹಣವಿರಲಿಲ್ಲ. ಆಗ ನಾನೇ ಅವರಿಗೆ ಹಣ ನೀಡಿದ್ದೆ’ ಎಂದು ಬಹಿರಂಗಪಡಿಸಿದ್ದಾರೆ. ನಾನೇ ಒರಿಜಿನಲ್ ‘ಕನಕಪುರ ಬಂಡೆ’: ಕಾಟನ್‌ಪೇಟೆ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, … Read more