ವಿಷ್ಣುವರ್ಧನ್ ಜೊತೆ ನಟಿಸಿದ್ದ ಖ್ಯಾತ ನಟ ಇನ್ನಿಲ್ಲ.! ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ

Spread the love

ಭಾರತೀಯ ಚಿತ್ರರಂಗಕ್ಕೆ ಇದೊಂದು ಆಘಾತಕಾರಿ ಸುದ್ದಿ ಅಂತ ಹೇಳಬಹುದು. ಕನ್ನಡ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದ ಖ್ಯಾತ ನಟ ಈ ಲೋಕವನ್ನ ತ್ಯಜಿಸಿದ್ದಾರೆ. ವಿಷ್ಣುವರ್ಧನ್ ಅವರ ಜೊತೆ ನಟನೆಯನ್ನ ಮಾಡಿದ್ದ ಖ್ಯಾತ ನಟ ಈ ಲೋಕವನ್ನ ತ್ಯಜಿಸಿದ್ದಾರೆ.

ನೀವೆಲ್ಲರೂ ಕೂಡ ಡಾಕ್ಟರ್ ವಿಷ್ಣುವರ್ಧನ್ ಅವರ ವಿಷ್ಣುಸೇನಾ ಸಿನಿಮಾವನ್ನ ನೋಡೇ ಇರ್ತೀರಾ. ವಿಷ್ಣುವರ್ಧನ್ ಅವರ ವಿಷ್ಣುಸೇನಾ ಸಿನಿಮಾದಲ್ಲಿ ಡಿಸಿಪಿ ಸಮರ್ಜಿತ್ ಸಿಂಗ್ ಪಾತ್ರವನ್ನ ಬಾಲಿವುಡ್ನ ಖ್ಯಾತನಟ ಪಂಕಜ್ ಧೀರ್ ಅವರು ಮಾಡಿದ್ದರು. ವಿಷ್ಣುವರ್ಧನ್ ಅವರ ಜೊತೆ ನಟನೆಯನ್ನ ಮಾಡಿದ್ದ ಖ್ಯಾತ ನಟ ಪಂಕಜ್ ಧೀರ್ ಅವರು ಕ್ಯಾನ್ಸರ್ ಕಾಯಿಲೆಯಿಂದ ಈ ಲೋಕವನ್ನ ತ್ಯಜಿಸಿದ್ದಾರೆ.

ಪಂಕಜ್ ಧೀರ್ ಅವರು ಕೇವಲ ಸಿನಿಮಾ ಮಾತ್ರವಲ್ಲದೆ ಧಾರಾವಾಹಿಗಳಲ್ಲಿ ಕೂಡ ನಟನೆಯನ್ನ ಮಾಡಿದ್ದರು. ಬಾಲಿವುಡ್ ನ ಮಹಾಭಾರತ ಧಾರಾವಾಹಿಯಲ್ಲಿ ಪಂಕಜ್ ಧೀರ್ ರವರು ಕರ್ಣನ ಪಾತ್ರವನ್ನ ಮಾಡಿದ್ದರು. ಹಲವು ಸಮಯಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಪಂಕಜ್ ಧೀರ್ ರವರು 68ನೇ ವಯಸ್ಸಿನಲ್ಲಿ ಈ ಲೋಕವನ್ನ ತ್ಯಜಿಸಿದ್ದಾರೆ. ವಿಷ್ಣುವರ್ಧನ್ ಅವರ ಜೊತೆ ವಿಷ್ಣುಸೇನಾ ಸಿನಿಮಾದಲ್ಲಿ ನಟನೆಯನ್ನ ಮಾಡುವುದರ ಮೂಲಕ ಪಂಕಜ್ ಧೀರ್ ರವರು ಕರ್ನಾಟಕದಲ್ಲಿ ಕೂಡ ಅಭಿಮಾನಿಗಳನ್ನ ಗಳಿಸಿಕೊಂಡಿದ್ದರು.

ಪಂಕಜ್ ಧೀರ್ ರವರ ಅಗಲಿಕೆ ಸದ್ಯ ಬಾಲಿವುಡ್ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನ ಉಂಟು ಮಾಡಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಸೇರಿದಂತೆ ಅನೇಕ ನಟ-ನಟಿಯರು ಅವರ ಅಂತಿಮ ದರ್ಶವನ್ನ ಪಡೆದರು.

WhatsApp Group Join Now

Spread the love

Leave a Reply