ವಿಶ್ವದ ಅತಿದೊಡ್ಡ ಸಂಸ್ಥೆ ಆರ್‌ಎಸ್‌ಎಸ್‌ ಬಗ್ಗೆ ತಪ್ಪು ತಿಳುವಳಿಕೆಯೇ ಜಾಸ್ತಿ – ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್

Spread the love

ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಜಗತ್ತಿನಲ್ಲೇ ಅತಿ ದೊಡ್ಡ ತಪ್ಪು ತಿಳುವಳಿಕೆಗೆ ಒಳಗಾದ ಸಂಸ್ಥೆಯಾಗಿದೆ. ಈ ಸಂಸ್ಥೆಯು ಕೇವಲ ಒಂದು ಅರೆಸೇನಾ ಪಡೆಯಂತೆ ಅಥವಾ ವ್ಯಾಯಾಮ ಶಾಲೆಯಂತೆ ಕಾಣಿಸಬಹುದು. ಆದರೆ ಇದನ್ನು ಹೊರಗಿನಿಂದ ನೋಡಿ ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಆರ್.ಎಸ್.ಎಸ್ ಕಾರ್ಯಕರ್ತರು ಸಮವಸ್ತ್ರ ಧರಿಸಿ ಪಥಸಂಚಲನ ನಡೆಸುವುದನ್ನು ನೋಡಿ ಕೆಲವರು ಇದನ್ನು ಮಿಲಿಟರಿ ಮಾದರಿಯ ಸಂಸ್ಥೆ ಅಂದುಕೊಳ್ಳುತ್ತಾರೆ. ಇನ್ನು ಕೆಲವರು ಇಲ್ಲಿ ಭಾರತೀಯ ಆಟಗಳು ಮತ್ತು ಸಮರ ಕಲೆಗಳಿಗೆ ನೀಡುವ ಪ್ರೋತ್ಸಾಹವನ್ನು ನೋಡಿ ಇದೊಂದು ದೈಹಿಕ ತರಬೇತಿ ಕೇಂದ್ರ ಎಂದು ಭಾವಿಸುತ್ತಾರೆ. ಆದರೆ ಆರ್‌ಎಸ್‌ಎಸ್ ಕೇವಲ ಇಷ್ಟಕ್ಕೇ ಸೀಮಿತವಾಗಿಲ್ಲ, ಇದನ್ನು ಹೊರಗಿನಿಂದ ನೋಡಿ ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ಅವರು ಸ್ಪಷ್ಟಪಡಿಸಿದರು.

ಆರ್‌ಎಸ್‌ಎಸ್ ಸಂಸ್ಥೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅದರೊಂದಿಗೆ ಒಡನಾಟ ಇಟ್ಟುಕೊಳ್ಳಬೇಕು ಮತ್ತು ಒಳಗಿನಿಂದ ಅದನ್ನು ಅನುಭವಿಸಬೇಕು ಎನ್ನುವುದು ಭಾಗವತ್ ಅವರ ಅಭಿಪ್ರಾಯವಾಗಿದೆ. ಆದರೆ ಹೀಗೆ ಮಾಡಲು ಆ ಸಂಸ್ಥೆಯು ಸುರಕ್ಷಿತವಾಗಿದೆ ಎಂಬ ನಂಬಿಕೆ ಮೊದಲು ಜನರಲ್ಲಿ ಮೂಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಒಂದು ಭಾಷಣ ಅಥವಾ ಪುಸ್ತಕವು ಸಂಸ್ಥೆಯ ಬಗ್ಗೆ ಕನಿಷ್ಠ ತಿಳುವಳಿಕೆಯನ್ನಾದರೂ ನೀಡಬಲ್ಲದು ಎಂದು ಅವರು ಹೇಳಿದರು.

WhatsApp Group Join Now

Spread the love

Leave a Reply