ಗ್ಯಾರಂಟಿ ಎಂದು ಮತ ಪಡೆದು, ಅನರ್ಹ ಎಂದು ಹಕ್ಕು ಕಸಿಯುವ ಕಾಂಗ್ರೆಸ್ ಸರ್ಕಾರ ರಾಜ್ಯದ ತಾಯಂದಿರಿಗೆ ಉತ್ತರ ಕೊಡಲೇಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ತಮ ಸಾಮಾಜಿಕ ಜಾಲತಾಣ ಎಕ್್ಸನಲ್ಲಿ ಪೋಸ್ಟ್ ಮಾಡಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಅವರು, ತಕ್ಷಣವೇ ಈ ಅನ್ಯಾಯವನ್ನು ನಿಲ್ಲಿಸಿ, ಅರ್ಹ ಫಲಾನುಭವಿಗಳಿಗೆ ಯಾವುದೇ ಗೊಂದಲವಿಲ್ಲದೆ ಯೋಜನೆಯ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ತಾಯಂದಿರ ಶಾಪಕ್ಕೆ ಈ ಸರ್ಕಾರ ಸುಟ್ಟು ಭಸವಾಗುವುದು ಗ್ಯಾರಂಟಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ವೋಟ್ ಬ್ಯಾಂಕ್ಗಾಗಿ ಮಹಿಳೆಯರನ್ನು ಬಳಸಿಕೊಂಡು, ಅಧಿಕಾರ ಸಿಕ್ಕ ಬಳಿಕ ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಕಾಂಗ್ರೆಸ್ನ ಈ ದ್ವಂದ್ವ ನೀತಿಯನ್ನು ಕರ್ನಾಟಕದ ಜನತೆ ಗಮನಿಸುತ್ತಿದ್ದಾರೆ. ಚುನಾವಣೆಗೂ ಮೊದಲು ಪ್ರತಿ ಮನೆಯ ಯಜಮಾನಿಗೂ 2,000 ರೂ. ಎಂದು ಭರವಸೆ, ಚುನಾವಣೆ ಬಳಿಕ ಅನರ್ಹರ ಪಟ್ಟಿ, ಈಗ ಬಯೋಮೆಟ್ರಿಕ್ ಹೆಸರಲ್ಲಿ ಹೊಸ ಕಿರುಕುಳ, ಇದೇನಾ ಕಾಂಗ್ರೆಸ್ನ ಮಹಿಳಾ ಸಬಲೀಕರಣ? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ ಬ್ರ್ಯಾಂಡ್ ಬೆಂಗಳೂರು ಎಂದು ಬೊಗಳೆ ಬಿಟ್ಟು, ಇಡೀ ಸಿಲಿಕಾನ್ ಸಿಟಿಯನ್ನು ಕಸದ ನಗರ ಮಾಡಿದ್ದೇ ನಿಮ ಸಾಧನೆಯೇ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ? ಒಮೆ ನಿಮ ಎಸಿ ಕಾರಿನ ಗಾಜು ಇಳಿಸಿ, ಮೂಗು ಮುಚ್ಚಿಕೊಳ್ಳದೆ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವ ಧೈರ್ಯ ಮಾಡಿ! ಎಂ.ಜಿ. ರಸ್ತೆ, ಬನ್ನೇರುಘಟ್ಟ ರಸ್ತೆ, ಎಚ್ಎಸ್ಆರ್ನಲ್ಲಿ ನಿಲ್ಲಿಸಿ, ರಸ್ತೆಗಳನ್ನೇ ಕಸದ ತೊಟ್ಟಿ ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿಮ ಆಡಳಿತದಲ್ಲಿ ಬೆಂಗಳೂರಿಗರಿಗೆ ಸಿಗುತ್ತಿರುವುದು ಇದೇನಾ?, ರಸ್ತೆ ತುಂಬಾ ಉಸಿರುಗಟ್ಟಿಸುವ ನಾರುವ ದುರ್ವಾಸನೆ. ರಸ್ತೆ ರಸ್ತೆಯಲ್ಲೂ ಹರಿಯುತ್ತಿರುವ ಕಸದ ವಿಷದ ನೀರು. ಕಸದ ಲಾರಿಗಳಿಂದಾಗಿ ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ನರಕ. ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ನಾಗರಿಕರ ಬದುಕು. ಬೆಂಗಳೂರಿನ ಜನರಿಗೆ ಉತ್ತರಿಸಿ ಎಂದು ಒತ್ತಾಯಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಂದಿದ್ದು ಕಮಿಷನ್ ಹೊಡೆಯಲೋ ಅಥವಾ ರಸ್ತೆಗಳಲ್ಲೇ ಕಸ ಸುರಿಯಲೋ? ಅಧಿಕಾರಿಗಳು-ಗುತ್ತಿಗೆದಾರರ ಒಳಜಗಳದ ಪರಿಣಾಮವನ್ನು ಬೆಂಗಳೂರಿನ ತೆರಿಗೆದಾರರು ಯಾಕೆ ಹೊರಬೇಕು? ಕೋಟಿ ಕೋಟಿ ಸುರಿದು ಬ್ರ್ಯಾಂಡ್ ಬೆಂಗಳೂರು ಎಂದು ಜಾಹೀರಾತು ಕೊಡುವ ನಿಮಗೆ, ಕಣ್ಣೆದುರೇ ಕಾಣುತ್ತಿರುವ ಈ ದೋಷಗಳು ನಾಚಿಕೆ ತರುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇದು ಕೇವಲ ಆಡಳಿತ ವೈಫಲ್ಯವಲ್ಲ, ಬೆಂಗಳೂರಿನ ಜನರಿಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಅನ್ಯಾಯ, ಮೋಸ. ಈಗಲಾದರೂ ಎಚ್ಚೆತ್ತುಕೊಂಡು ತಕ್ಷಣ ಕಸದ ಅವ್ಯವಸ್ಥೆಗೆ ಅಂತ್ಯ ಹಾಡಿ..ಇಲ್ಲದಿದ್ದರೆ, ಇದೇ ಬೆಂಗಳೂರಿನ ಜನ ನಿಮ ಸರ್ಕಾರವನ್ನು ಕಸದ ಬುಟ್ಟಿಗೆ ಎಸೆಯುವ ದಿನ ದೂರವಿಲ್ಲ ಎಂದು ಅಶೋಕ್ ಎಚ್ಚರಿಕೆ ಕೊಟ್ಟಿದ್ದಾರೆ.
ರಾಜ್ಯದ ತಾಯಂದಿರಿಗೆ ಕಾಂಗ್ರೆಸ್ ಸರ್ಕಾರ ಉತ್ತರ ಕೊಡಲೇಬೇಕು : ಅಶೋಕ್ ವಾಗ್ದಾಳಿ
WhatsApp Group
Join Now