ಒಂದೇ ಕುಟುಂಬದ ಮೂವರು ನಿಗೂಢವಾಗಿ ಸಾವನಪ್ಪಿದ ಪ್ರಕರಣ ಮಂಡ್ಯದಲ್ಲಿ ನಡೆದಿದ್ದು, ಅನುಮಾನಾಸ್ಪದ ರೀತಿಯಲ್ಲಿ ತಂದೆ ತಾಯಿ ಹಾಗೂ ಮಗ ಸಾವನಪ್ಪಿದ್ದಾರೆ. ನಿನ್ನೆ ರಾತ್ರಿ ತಾಯಿ ಜ್ಯೋತಿ ಮತ್ತು ಮಗ ಸಂತೋಷ್ ಸಾವನ್ನಪ್ಪಿದ್ದು, ಇಂದು ತಂದೆ ಪ್ರಭಾಕರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದ ನೆಹರು ನಗರದಲ್ಲಿ ನಡೆದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಡೆತ್ ನೋಟ್ ಒಂದು ಪತ್ತೆಯಾಗಿದೆ. ಡೆತ್ ನೋಟ್ ನಲ್ಲಿ ಆಶ್ಚರ್ಯಕರವಾದ ಮಾಹಿತಿ ಪತ್ತೆಯಾಗಿದ್ದು, ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಬಟ್ಟೆ ವ್ಯಾಪಾರ ಕಡಿಮೆಯಾಗಿದೆ. ಈ ಕಾರಣದಿಂದ ನನಗೆ ಸಾಲ ಜಾಸ್ತಿಯಾಗಿದೆ. ಸಾಲದ ಹೊರೆಯಿಂದಾಗಿ ಜೀವನ ನಡೆಸಲು ಆಗುತ್ತಿಲ್ಲ ಈ ಕಾರಣದಿಂದ ನಾನು ಹೆಂಡತಿಯನ್ನು ಕೊಲೆ ಮಾಡಿ ನೇಣಿಗೆ ಶರಣಾಗಿದ್ದೇನೆ ಎಂದು ಪ್ರಭಾಕರ್ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.
ಆದರೆ ಮಗನ ಸಾವಿನ ಬಗ್ಗೆ ಡೆತ್ ನೋಟ್ ಅಲ್ಲಿ ಪ್ರಸ್ತಾಪ ಮಾಡಿಲ್ಲ. ಮಗ ಮತ್ತು ಹೆಂಡತಿಯನ್ನು ಕೊಲೆ ಮಾಡಿ ನಂತರ ಪ್ರಭಾಕರ್ ನೇಣಿಗೆ ಶರಣಾಗಿರಬಹುದು ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಮನೆಯಲ್ಲಿಯೇ ಇದ್ದಂತಹ ಸೊಸೆಗೆ ಈ ವಿಚಾರ ಗೊತ್ತೇ ಇಲ್ಲ ಇಂದು ಬೆಳಿಗ್ಗೆ 8 ಗಂಟೆ ಆದರೂ ಕೂಡ ಅತ್ತೆ ಹಾಗು ತನ್ನ ಗಂಡ ರೂಮಿನಿಂದ ಆಚೆ ಬರಲಿಲ್ಲವೋ, ಆ ಸಂದರ್ಭದಲ್ಲಿ ರೂಮಿಗೆ ಹೋಗಿ ನೋಡಿದಾಗ ಅತ್ತೆ ಹಾಗು ಗಂಡನ ಮೃತದೇಹ ಪತ್ತೆಯಾಗಿದೆ. ಆದರೆ ಪೊಲೀಸರ ಮಾಹಿತಿ ಪ್ರಕಾರ ಇದಕ್ಕೆ ಇನ್ನು ಸ್ಪಷ್ಟವಾದ ಕಾರಣ ಸಿಕ್ಕಿಲ್ಲ ತನಿಖೆ ಬಳಿಕ ಎಲ್ಲವೂ ತಿಳಿದು ಬರಲಿದೆ .
ಸರ್ಕಾರದ ಫ್ರೀ ಬಸ್ ನಿಂದ ಬ್ಯುಸಿನೆಸ್ ಲಾಸ್ : ಮಂಡ್ಯದಲ್ಲಿ ಪತ್ನಿ, ಮಗನನ್ನು ಕೊಂದು ಬಟ್ಟೆ ವ್ಯಾಪಾರಿ ನೇಣಿಗೆ ಶರಣು!
WhatsApp Group
Join Now