Kisan Credit Card Scheme : ನಮಸ್ಕಾರ ಸ್ನೇಹಿತರೇ, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ದೇಶದಲ್ಲಿ ರೈತರು ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದಿಂದ ರೈತರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗೆಯೇ ಸರ್ಕಾರವು ಕೃಷಿ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಯೋಜನೆ ಜಾರಿಗೆ ತಂದಿದೆ. ಇದರಿಂದಾಗಿ ಜಾನುವಾರುಗಳನ್ನು ಸಾಕಾಣಿಕೆ ಮಾಡುವವರಿಗೆ ಆರ್ಥಿಕ ನೆರವು ನೀಡಿದಂತಾಗುತ್ತದೆ. ಸ್ನೇಹಿತರೇ, ಏನಿದು ಪಶು ಕಿಸಾನ್ ಕಾರ್ಡ್ ಯೋಜನೆ.? ಇದರಿಂದ ರೈತರಿಗೆ ಏನೆಲ್ಲಾ ಉಪಯೋಗಗಳಿವೆ.? ರೈತರು ಈ ಯೋಜನೆಯ ಸೌಲಭ್ಯವನ್ನು ಪಡೆಯುವುದು ಹೇಗೆ.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card)
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅಂದರೆ, ನೀವು ಹಸು ಮತ್ತು ಎಮ್ಮೆಗಳ ಸಾಕಾಣಿಕೆಯನ್ನು ಮಾಡಲು ಈ ಕ್ರೆಡಿಟ್ ಕಾರ್ಡ್ ಮೂಲಕ ಸರ್ಕಾರದಿಂದ ಸಾಲವನ್ನು ಪಡೆಯಬಹುದು. ನೀವು ಬ್ಯಾಂಕುಗಳಲ್ಲಿ ಅರ್ಜಿಯನ್ನು ಸಲ್ಲಿಸಿ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದು ನೀವು ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನೀವು ಪಶು ಕ್ರೆಡಿಟ್ ಕಾರ್ಡ್ ಮೂಲಕ ಪಶುಗಳ ನಿರ್ವಹಣೆಗೆ ಬೇಕಾದ ಎರಡರಿಂದ ಮೂರು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಪಡೆದ ಸಾಲಕ್ಕೆ ಯಾವುದೇ ರೀತಿಯ ಗ್ಯಾರಂಟಿ ಇರುವುದಿಲ್ಲ.
ಇದನ್ನೂ ಕೂಡ ಓದಿ : Sewing Machine Scheme : ಬಟ್ಟೆ ಹೊಲಿಗೆ ಯಂತ್ರ ವಿತರಣೆ – ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ – ಇಲ್ಲಿದೆ ಡೈರೆಕ್ಟ್ ಲಿಂಕ್
ಪಶು ಕಿಸಾನ್ ಕಾರ್ಡ್ ನಿಂದ ಎಷ್ಟು ಸಾಲ ಸಿಗುತ್ತದೆ.?
ಈ ಪಶು ಕಿಸಾನ್ ಕಾರ್ಡ್ ನಿಂದ ಒಂದು ಎಮ್ಮೆ ಸಾಕಾಣಿಕೆ ಮಾಡಲು ₹60,249/- ರೂಪಾಯಿ ಸಾಲ ಸಿಗಲಿದೆ, ಹಾಗೆಯೇ ಒಂದು ಆಕಳನ್ನು ನಿರ್ವಹಣೆ ಮಾಡಲು ₹40,783/- ರೂಪಾಯಿ ಸಾಲಗಳನ್ನು ನೀಡಲಾಗುತ್ತದೆ. ನಿಮ್ಮ ಬಳಿ ಎಷ್ಟು ಎಮ್ಮೆ ಮತ್ತು ಎಷ್ಟು ಹಸು ಇದೆಯೋ ಅಷ್ಟಕ್ಕೆ ಮಾತ್ರ ನೀವು ಈ ಪಶು ಕಿಸಾನ್ ಕಾರ್ಡ್ ನಿಂದ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. 1.6 ಲಕ್ಷದವರೆಗಿನ ಸಾಲಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ನೀವು ಪಶು ಸಾಕಾಣಿಕೆ ಮಾಡಲು ಯಾವುದೇ ಕ್ರೆಡಿಟ್ ಕಾರ್ಡ್ ಇಲ್ಲದೆ ಸಾಲ ಪಡೆದರೆ 7% ಬಡ್ಡಿ ಕಟ್ಟಬೇಕಾಗುತ್ತದೆ, ಆದರೆ ಪಶು ಕಿಸಾನ್ ಕಾರ್ಡ್ ಮೂಲಕ ಪಡೆದಂತಹ ಸಾಲಕ್ಕೆ ನೀವು ಕೇವಲ 4% ಬಡ್ಡಿದರ ಕಟ್ಟಬೇಕಾಗುತ್ತದೆ.
ಯಾವ ಬ್ಯಾಂಕ್ ಗಳಲ್ಲಿ ನೀವು ಸಾಲ ಪಡೆದುಕೊಳ್ಳಬಹುದು.?
ದೇಶದ ಬಹುತೇಕ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರಿಗೆ ಸಾಲ ಸಿಗುತ್ತದೆ. ಆಕ್ಸಿಸ್ ಬ್ಯಾಂಕ್, ಹೆಚ್ ಡಿ ಎಫ್ ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಪ್ರಮುಖ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ, ಪಶು ಕಿಸಾನ್ ಕ್ರೆಡಿಟ್ ಕಾರ್ಡ(Kisan Credit Card) ಮೂಲಕ ಪಶುಗಳ ನಿರ್ವಹಣೆಗೆ ಬೇಕಾದ ಸಾಲವನ್ನು ರೈತರಿಗೆ ನೀಡಲಾಗುತ್ತದೆ .
ಪಶು ಕಿಸಾನ್ ಕ್ರೆಡಿಟ್ ಕಾರ್ಡ ಪಡೆಯಲು ನೀವು ರಾಷ್ಟ್ರೀಕೃತ ಬ್ಯಾಂಕ್ ಗೆ ಭೇಟಿ ನೀಡಿ, ಅಪ್ಲಿಕೇಶನ್ ಫಾರ್ಮ್ ಪಡೆದು, ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ, ಕೆವೈಸಿಗೆ ಬೇಕಾಗಿರುವ ದಾಖಲೆಗಳನ್ನು ನೀಡಿ ನೀವು ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ನೀವು ನೀಡಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿಕೊಂಡು, ನೀವು ನೀಡಿದಂತಹ ದಾಖಲೆಗಳು ಸರಿಯಾಗಿದ್ದರೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನ್ನು ನಿಮಗೆ ನೀಡುತ್ತಾರೆ.
ಇದನ್ನೂ ಕೂಡ ಓದಿ : Scholarship : ಶಾಲಾ ವಿಧ್ಯಾರ್ಥಿಗಳಿಗೆ ದೊರೆಯಲಿದೆ 10 ಸಾವಿರ ಪ್ರೋತ್ಸಾಹ ಧನ! ಇಲ್ಲಿದೆ ಅರ್ಜಿ ಹಾಕುವ ವಿವರ
ಬೇಕಾಗುವ ದಾಖಲೆಗಳೇನು.?
- ಭೂಮಿಯ ದಾಖಲೆಗಳು
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ವೋಟರ್ ಐಡಿ
- ಜಾನುವಾರಗಳ ಆರೋಗ್ಯದ ಬಗ್ಗೆ ಸರ್ಟಿಫಿಕೇಟ್
- ಬ್ಯಾಂಕ್ ಖಾತೆಯ ವಿವರ
- ಪಾಸ್ಪೋರ್ಟ್ ಸೈಜ್ ಫೋಟೋ
ಮೇಲೆ ತಿಳಿಸಿದಂತಹ ಎಲ್ಲಾ ಪ್ರಮುಖ ದಾಖಲೆಗಳನ್ನು ಸರಿಪಡಿಸಿಕೊಂಡು, ಹತ್ತಿರವಿರುವ ಬ್ಯಾಂಕ್ ಗೆ ಭೇಟಿ ನೀಡಿ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಫಾರ್ಮ್ ಪಡೆದು ಅರ್ಜಿಯನ್ನು ಸಲ್ಲಿಸಿ, ಹೈನುಗಾರಿಕೆಗೆ ಬೇಕಾದ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ನಾಳೆ ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಿದ್ದ ಅನಂತ್ ಸುಬ್ಬರಾವ್ ನಿಧನ, ಪ್ರತಿಭಟನೆ ಮುಂದೂಡಿಕೆ
- ಅವನೇ ಬೇಕು ಅಂತ ಪ್ರೀತಿಸಿ ಮದುವೆಯಾದವಳು ಇಂದು ಆತ್ಮಹತ್ಯೆ – ಆಸ್ಪತ್ರೆಯಲ್ಲಿ ಸಾವು-ಬದುಕಿನ ಜೊತೆ ಗಂಡನ ಹೋರಾಟ
- ಫ್ಯಾಟಿ ಲಿವರ್ ಕಾಯಿಲೆಗೆ ಈ ಕೆಟ್ಟ ಅಭ್ಯಾಸಗಳೇ ಕಾರಣ: ಮದ್ಯಪಾನಕ್ಕಿಂತಲೂ ತುಂಬಾ ಡೇಂಜರ್..!
- ರಾಜ್ಯ ಸರ್ಕಾರದ ಅನುದಾನಿತ ದಿನದಿಂದಲೇ ಶಿಕ್ಷಕರು `ವೇತನ’ಕ್ಕೆ ಅರ್ಹ : ಹೈಕೋರ್ಟ್ ಮಹತ್ವದ ತೀರ್ಪು
- ಮೊದಲ ತಿಂಗಳಲ್ಲೇ ನಿಜವಾಯ್ತಾ ಕೋಡಿಶ್ರೀ ಭವಿಷ್ಯ? ಒಬ್ಬ ‘ಮಹಾ’ ನಾಯಕ ಸಾವು
- ಶಿವಮೊಗ್ಗದ ಡಾ. ಪ್ರಜ್ಞಾ ಧಾರವಾಡ ಡಿಮ್ಹಾನ್ಸ್ ಹಾಸ್ಟೆಲ್ನಲ್ಲಿ ನೇಣಿಗೆ ಶರಣು; ಪಿಜಿಗೆ ಸೇರಿ 2 ವಾರದಲ್ಲಿ ಸಾವು!
- Arecanut Price : ಇಂದಿನ ಅಡಿಕೆ ಧಾರಣೆ – 28 ಜನವರಿ 2026 – ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ ಗೊತ್ತಾ.?
- ಗಾಳಿಪಟದ ಮಾಂಜಾ ದಾರಕ್ಕೆ ಮತ್ತೊಂದು ಬಲಿ : ಕುತ್ತಿಗೆ ಕಟ್ ಆಗಿ `LKG’ ಬಾಲಕಿ ಸಾವು.!
- Horoscope Today : 28 ಜನವರಿ 2026 ಬುಧವಾರ ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- Cooking Oil Usage : ನಾಲ್ಕು ಜನರ ಕುಟುಂಬವು ತಿಂಗಳಿಗೆ ಎಷ್ಟು ಅಡುಗೆ ಎಣ್ಣೆ ಬಳಸಬೇಕು ಗೊತ್ತಾ?
- ಅಟ್ಟಾಡಿಸಿ ಹಲ್ಲೆಗೈದು, 2 ನೇ ಮಹಡಿಯಿಂದ ತಳ್ಳಿ ಯುವಕನ ಕಗ್ಗೊಲೆ- ನಾಲ್ವರ ಬಂಧನ
- ಬಿಗ್ ಬಾಸ್ ಗೆದ್ದಿದ್ದು ಗಿಲ್ಲಿ ಅಲ್ಲ ನಿರ್ಮಲಾ ಸೀತಾರಾಮನ್ ಎಂದ ಶಾಸಕ ಪ್ರದೀಪ್ ಈಶ್ವರ್
- ಸರ್ಕಾರಿ ಶಾಲೆಯಲ್ಲಿ ಮಾತ್ರೆ ಸೇವನೆ ಬಳಿಕ 59 ವಿದ್ಯಾರ್ಥಿಗಳು ಅಸ್ವಸ್ಥ
- ಹಲ್ಲುಜ್ಜಿದ ಬಳಿಕ ವಸಡಿನಲ್ಲಿ ರಕ್ತಸ್ರಾವ ಆಗುವುದು ಕಾಯಿಲೆಯ ಮುನ್ಸೂಚನೆಯೇ?
- ಬೆಳ್ಳಂಬೆಳಗ್ಗೆಯೇ ದೇವರ ಜಾತ್ರೆಗೆ ಹೊರಟ ಭಕ್ತ; ದೈವ ದರ್ಶನಕ್ಕೂ ಮುನ್ನವೇ ಯಮರಾಜ ಕರೆದೊಯ್ದ!
- ಇವನೆಂಥಾ ನೀಚ ಮಗ.! ಹಣಕ್ಕಾಗಿ ಕಲ್ಲಿನಿಂದ ಹೊಡೆದು ತಾಯಿಯನ್ನೇ ಕೊಂದ ಮಗ.! ಆರೋಪಿಯ ಬಂಧನ
- ಆಹಾ ನೋಡೋಕೆ 2 ಕಣ್ಣು ಸಾಲದು ; ಡಿಕೆಶಿ ತಲೆಗೆ ಸ್ವತಃ ಟವೆಲ್ ಕಟ್ಟಿದ ಸಿಎಂ ಸಿದ್ದರಾಮಯ್ಯ.!
- ರಾತ್ರಿ ಹೊತ್ತು ಗೋಚರಿಸುವ ಈ ಬದಲಾವಣೆಗಳು `ಕಿಡ್ನಿ ವೈಫಲ್ಯ’ದ ಲಕ್ಷಣವಾಗಿರಬಹುದು ಎಚ್ಚರ.!
- ಚೀಲದಲ್ಲಿ ಯುವತಿಯ ಶಿರವಿಲ್ಲದ ದೇಹ ಪತ್ತೆ; ಸಹೋದ್ಯೋಗಿ ಅರೆಸ್ಟ್, ಆತ ಸಿಕ್ಕಿಬಿದ್ದಿದ್ದೇ ರೋಚಕ ಕಹಾನಿ!
- Arecanut Price : ಇಂದಿನ ಅಡಿಕೆ ಧಾರಣೆ – ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ ಗೊತ್ತಾ.?



















