ಸರಿಯಾದ ಕಾರಣಗಳಿಲ್ಲದೇ ಪತ್ನಿ ಲೈಂಗಿಕ ಸಂಭೋಗಕ್ಕೆ ನಿರಾಕರಿಸುವುದು ಮತ್ತು ವೈವಾಹಿಕ ಹಕ್ಕುಗಳನ್ನು ನಿರಾಕರಿಸುವುದು ಪತಿ ಮೇಲೆ ನಡೆಸುವ ಮಾನಸಿಕ ಕ್ರೌರ್ಯ ಎಂದು ಸುಪ್ರೀಂಕೋರ್ಟ್(Supreme Court) ತೀರ್ಪು ನೀಡಿದ್ದು, ಅಂತಹ ಸಂದರ್ಭದಲ್ಲಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(1) (IA) ಅಡಿಯಲ್ಲಿ ವಿಚ್ಛೇದನವನ್ನು ಪಡೆಯುವ ಹಕ್ಕಿದೆ ಎಂದು ಸ್ಪಷ್ಟಪಡಿಸಿದೆ.
ರಾಜಸ್ಥಾನದ ವೈದ್ಯರೊಬ್ಬರು ತಮ್ಮ ಪತ್ನಿ ಲೈಂಗಿಕ ಸಂಭೋಗವನ್ನು ನಿರಾಕರಿಸುತ್ತಿದ್ದಾರೆ ಈ ಹಿನ್ನೆಲೆ ಪತ್ನಿಯಿಂದ ವಿಚ್ಚೇದನ ಕೋರಿ ರಾಜಸ್ಥಾನ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಪತ್ನಿ ತಮ್ಮನ್ನು ರಾತ್ರಿ ಹತ್ತಿರಕ್ಕೂ ಸೇರಿಸಿಕೊಳ್ಳುತ್ತಿಲ್ಲ ಕೋಣೆಯನ್ನು ಒಳಗಿಂದ ಲಾಕ್ ಮಾಡಿಕೊಳ್ತಾಳೆ, ನಾನು ಬೇರೆ ರೂಮ್ನಲ್ಲಿ ಮಲಗಬೇಕಾಗಿದೆ ಎಂದು ಆರೋಪಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಪತಿಗೆ ವಿಚ್ಚೇದನ ನೀಡಿತ್ತು.
ಹೈಕೋರ್ಟ್ ಆದೇಶ ಪ್ರಶ್ನಿಸಿ ಪತ್ನಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕರುಲ್ ಮತ್ತು ಅಗಸ್ಟೀನ್ ಜಾರ್ಜ್ ಮಾಸಿ ಅವರ ಪೀಠವು, ಪತಿಗೆ ಲೈಂಗಿಕ ಸಂಭೋಗವನ್ನು ಪದೇ-ಪದೇ ನಿರಾಕರಿಸುವುದು ವಿವಾಹ ಬಂಧದ ಅಡಿಪಾಯವನ್ನೇ ಹಾನಿಗೊಳಿಸುತ್ತದೆ ಮತ್ತು ಮಾನಸಿಕ ದುಃಖವನ್ನು ಉಂಟುಮಾಡುತ್ತದೆ ಎಂದು ಹೇಳಿತು.
ಹೈಕೋರ್ಟ್ಗಳು ಈಗಾಗಲೇ ಪತಿ ಮತ್ತು ಪತ್ನಿಯ ನಡುವಿನ ವಿವಾಹದ ಬಂಧನವನ್ನು ಗುರಿತಿಸಿ ತೀರ್ಪುಗಳನ್ನು ನೀಡಿವೆ. ಈ ಹಿನ್ನೆಲೆ ಇಬ್ಬರು ಒಟ್ಟಿಗೆ ವಾಸಿಸದ ಹೊರತು ಮದುವೆಯು ಅನಿಯಂತ್ರಿತ ಹಕ್ಕಲ್ಲ ಎಂದು ಹೈಕೋರ್ಟ್ ಆದೇಶ ಎತ್ತಿ ಹಿಡಿದು, ಮಾನಸಿಕ ಕ್ರೌರ್ಯದ ಆಧಾರದ ಮೇಲೆ ನ್ಯಾಯಾಲಯವು ದಂಪತಿಗೆ ವಿಚ್ಛೇದನವನ್ನು ನೀಡಿದೆ.
ಸರಿಯಾದ ಕಾರಣವಿಲ್ಲದೇ ಪತ್ನಿ ಲೈಂಗಿಕ ಸಂಭೋಗಕ್ಕೆ ನಿರಾಕರಿಸುವುದು ಪತಿ ಮೇಲೆ ನಡೆಸುವ ಕ್ರೌರ್ಯ: ಸುಪ್ರೀಂಕೋರ್ಟ್
WhatsApp Group
Join Now