ಯಾರದ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಅಂತಾರಲ್ಲ.. ಆ ಮಾತು ಅಕ್ಷರಶಃ ಸತ್ಯ ಬಿಡಿ.. ತಾವು ಮಾಡೋ ತಪ್ಪು ಮುಚ್ಚಿಕೊಳ್ಳೋದಕ್ಕೆ ಕೆಲವ್ರು ಏನ್ ಬೇಕಾದ್ರೂ ಮಾಡ್ಬಿಡ್ತಾರೆ.. ಸ್ನೇಹ, ಸಂಬಂಧ ಅನ್ನೋದನ್ನೂ ನೋಡದೇ ರಕ್ತ ಕುಡಿದು ರಣಕೇಕೆ ಹಾಕ್ಬಿಡ್ತಾರೆ.. ಚಿಕ್ಕಬಳ್ಳಾಪುರದಲ್ಲಿ ಇಂಥದ್ದೇ ಘಟನೆ ನಡೆದಿದೆ. ಸಹೋದರ ಸಂಬಂಧಿ ಜೊತೆ ಸೇರಿ ಅತ್ತಿಗೆಯನ್ನೇ ನಾದಿನಿ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ.
ಹತ್ಯೆ ಹಿಂದಿದೆ ಹಸಿಬಿಸಿ ವಿಡಿಯೋ ಕಹಾನಿ!
ಅತ್ತಿಗೆಯ ನೆತ್ತರು ಕುಡಿದ ಕಿರಾತಕಿಯ ಹೆಸ್ರು ಭವ್ಯಾ. ಚಿಕ್ಕಬಳ್ಳಾಪುರ ನಗರದ ಕಂದವಾರದ ಬಾಪೂಜಿ ನಗರ ನಿವಾಸಿ.. ಅದೇನ್ ಕೆಲ್ಸ ಮಾಡಿದ್ಲೋ ಗೊತ್ತಿಲ್ಲ. ಅದಾಗ್ಲೇ ಪ್ರೇಮದ ಹೊಳೆಯಲ್ಲಿ ಈಜಾಡೋದಕ್ಕೆ ಶುರುಮಾಡಿದ್ಲು. ಪ್ರಿಯಕರನ ಜೊತೆ ಮರ ಸುತ್ತಿ ಮೈಮರೆತು ಹೋಗಿದ್ಲು. ಲೋಹಿತ್ ಅಲಿಯಾಸ್ ಲುಲ್ಲುಗೆ ಭವ್ಯಾಳ ಖಾಸಗಿ ವಿಡಿಯೋ, ಫೋಟೋಗಳು ಸಿಕ್ಕಿದ್ವು. ಯಾವಾಗ ಖಾಸಗಿ ವಿಡಿಯೋಗಳು ಸಿಕ್ವೋ ಲೋಹಿತ್ ಭವ್ಯಾಗೆ ಕಾಟ ಕೊಡೋದಕ್ಕೆ ಶುರುಮಾಡಿದ್ದ. ಹಣಕ್ಕೆ ಡಿಮ್ಯಾಂಡ್ ಇಟ್ಟು ಬ್ಲ್ಯಾಕ್ಮೇಲ್ ಮಾಡಿದ್ದ. ಇದ್ರಿಂದ ಬೆದರಿದ ಭವ್ಯಾ ಮೊದ್ಲು 4 ಲಕ್ಷ ಹಣ ಕೊಟ್ಟಿದ್ದಾಳೆ. ಅದಾದ್ಮೇಲೆ ಮತ್ತೆ 2 ಲಕ್ಷ ಕೊಟ್ಟಿದ್ದಾಳೆ. ಆದ್ರೂ ಲೋಹಿತ್ನ ಹಣದ ದಾಹ ಮಾತ್ರ ತೀರಿರಲಿಲ್ಲ.
ಲಕ್ಷ ಲಕ್ಷ ಹಣ ಕೊಟ್ರೂ ಲೋಹಿತ್ ಬ್ಲ್ಯಾಕ್ಮೇಲ್ ಮಾಡೋದನ್ನ ಬಿಟ್ಟಿರಲಿಲ್ಲ. ಮತ್ತೆ ಹಣ ಕೊಡುವಂತೆ ಪೀಡಿಸ್ತಿದ್ನಂತೆ.. ಆದ್ರೆ ಹಣ ಇಲ್ಲದೇ ಭವ್ಯಾ ಕಂಗಲಾಗಿದ್ಲು. ಹೀಗಾಗಿ ಮನೆಯಲ್ಲಿದ್ದ ಅತ್ತಿಗೆ ಪುಷ್ಪಲತಾಳ ಚಿನ್ನಾಭರಣದ ಮೇಲೆ ಕಣ್ಣಾಕಿದ್ಲು. ಹೇಗಾದ್ರೂ ಮಾಡಿ ಕಳ್ಳತನ ಮಾಡ್ಬೇಕು ಅಂತ ಲೋಹಿತ್ ಜೊತೆ ಸೇರಿ ಸ್ಕೆಚ್ ಹಾಕಿದ್ಲು. ಅದ್ರಂತೆ ರಾತ್ರೋರಾತ್ರಿ ಕಳ್ಳತನಕ್ಕೆ ಮುಂದಾಗಿದ್ದಾರೆ. ಈ ವೇಳೆ ಅದೇನ್ ಎಡವಟ್ಟು ಮಾಡಿಕೊಂಡ್ರೋ ಏನೋ. ಇಬ್ಬರು ಸೇರಿ ಪುಷ್ಪಲತಾಳನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಕೀಚಕನಿಗೆ ಹಣ ಕೊಡಲು ಅತ್ತಿಗೆ ಕೊಂದ ನಾದಿನಿ!
ಯಾವಾಗ ಅತ್ತಿಗೆ ಉಸಿರು ನಿಲ್ತೋ ಭವ್ಯಾ ಖತರ್ನಾಕ್ ಕಥೆ ಕಟ್ಟಿದ್ಲು. ರಾತ್ರೋರಾತ್ರಿ ಖದೀಮರು ಬಂದು ರಾಬರಿ ಮಾಡಿದ್ದಾರೆ. ನನ್ನ ಬಾಯಿಗೆ ಬಟ್ಟೆ ತುರುಕಿ, ಮುಖಕ್ಕೆ ಸ್ಪ್ರೇ ಹೊಡೆದ್ರು.. ಪುಷ್ಪಲತಾಳನ್ನ ಕೊಲೆ ಮಾಡಿ ಆಕೆಯ ಮೈಮೇಲಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ರು ಅಂತ ಕಥೆ ಕಟ್ಟಿದ್ಲು.. ಆದ್ರೆ ನಡೆದ ಘಟನೆಗೂ ಭವ್ಯ ಹೇಳಿಕೆಗೂ ಒಂದಕ್ಕೊಂದು ಸಂಬಂಧನೇ ಇರಲಿಲ್ಲ.. ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರಿಗೆ ಅನುಮಾನ ಶುರುವಾಗಿತ್ತು. ಫೀಲ್ಡಿಗಿಳಿದು ತನಿಖೆ ನಡೆಸಿದಾಗ ಭವ್ಯಾಳ ಕೈವಾಡ ಇರೋದು ಗೊತ್ತಾಗಿತ್ತು. ಕೂಡಲೇ ಅರೆಸ್ಟ್ ಮಾಡಿ ವಿಚಾರಣೆ ನಡೆಸಿದಾಗ ಭವ್ಯಾ ಸತ್ಯ ಬಾಯ್ಬಿಟ್ಟಿದ್ದಾಳೆ.
ವಿಚಾರಣೆ ವೇಳೆ ಭವ್ಯಾಳಿಗೆ ಆಕೆಯ ತಾಯಿ ವಿಜಯಮ್ಮ, ಅಜ್ಜಿ ನಾಗಮ್ಮ ಸಾಥ್ ಕೊಟ್ಟಿದ್ರು ಅನ್ನೋದು ಗೊತ್ತಾಗಿದೆ. ಸದ್ಯ ಆರೋಪಿಗಳನ್ನ ಬಂಧಿಸಿ ವಿಚಾರಣೆ ಮಾಡ್ತಿದ್ದು, ಮತ್ಯಾವ ಸತ್ಯ ಬಾಯ್ಬಿಡ್ತಾರೋ ಕಾದು ನೋಡ್ಬೇಕಿದೆ.
ಖಾಸಗಿ ವಿಡಿಯೋ ಇಡ್ಕೊಂಡು ಬ್ಲಾಕ್ಮೇಲ್, ಹಣ ಹೊಂದಿಸಲು ಅತ್ತಿಗೆಯನ್ನೇ ಕೊಂದ ನಾದಿನಿ
WhatsApp Group
Join Now