ಮನೆ ಮಗಳ ಕಾಮಾದಾಟಕ್ಕೆ ಸೊಸೆ ಹತ್ಯೆ, ದರೋಡೆಯ ಕಥೆ ಕಟ್ಟಿದ ಅತ್ತೆ, ನಾದಿನಿ, ಅಜ್ಜಿ, 24 ಗಂಟೆಯಲ್ಲೇ ಕೊಲೆ ಆರೋಪಿಗಳ ಬಂಧನ 

Spread the love

ಚಿಕ್ಕಬಳ್ಳಾಪುರ : ಕುಟುಂಬ ಕಲಹದಿಂದಾಗಿ ಸೊಸೆಯನ್ನ ಕೊಲೆ ಮಾಡಿಸಿದ ಅತ್ತೆ,ನಾದಿನಿ, ಅಜ್ಜಿ ದರೋಡೆ ಕಥೆ ಕಟ್ಟಿದ್ರು, ಕೊಲೆಯಾದ 24 ಗಂಟೆಯಲ್ಲೇ ಕೊಲೆ ಪ್ರಕರಣವನ್ನ ಭೇಧಿಸಿದ ಚಿಕ್ಕಬಳ್ಳಾಪುರ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಕಂದವಾರ ಬಾಗಿಲು ಬಳಿಯ ಬಾಪೂಜಿ ನಗರದಲ್ಲಿ ವಿವಾಹಿತ ಮಹಿಳೆಯ ಹತ್ಯೆ ಮಾಡಲಾಗಿತ್ತು, ಮೇಸ್ತ್ರೀ ನರಸಿಂಹಮೂರ್ತಿಯವರ ಸೊಸೆಯ ಕತ್ತು ಸಿಳಿ ಬರ್ಬರ ಕೊಲೆ ಮಾಡಲಾಗಿದ್ದು, ಆಕೆಯ ಕೊರಳಿನಲ್ಲಿದ್ದ ಮಾಂಗಲ್ಯ ಸರ ಮತ್ತು ಕಿವಿಯೊಲೆ ದೋಚಿದ ಕೊಲೆಗಡುಕರು ಪರಾರಿಯಾಗಿದ್ದರು.

ಮೇ 28 ರಾತ್ರಿ ನಡೆದ ಘಟನೆಯಿಂದ ಚಿಕ್ಕಬಳ್ಳಾಪುರ ಜನರೇ ಬೆಚ್ಚಿಬಿದ್ದಿದ್ದರು, ಪುಷ್ಪಲತಾ ಪಕ್ಕದಲ್ಲಿಯೇ ಮಲಗಿದ್ದ ನಾದಿನಿ ಭವ್ಯಳ ಬಾಯಿಗೆ ಬಟ್ಟೆ ತುರುಕಿ, ಮುಖಕ್ಕೆ ಸ್ಪ್ರೈ ಹೊಡೆಯಲಾಗಿದ್ದು, ಕೃತ್ಯದಿಂದ ಅಸ್ವಸ್ಥಗೊಂಡಿದ್ದ ಆಕೆಯನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು, ಘಟನೆ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದರು.

ಮಗಳ ಕೊಲೆಯಾಗಿರುವ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪುಷ್ಪಲತಾ ತಂದೆ ಮಹೇಶ್ ತಾಯಿ ಲಕ್ಷ್ಮೀ ಇದು ದರೋಡೆಯಲ್ಲ ಇದು ವ್ಯವಸ್ಥಿ ಕೊಲೆ, ಅಳಿಯನ ಅಕ್ರಮ ಸಂಬಂಧದಿಂದ ಸುಪಾರಿ ಕೊಟ್ಟ ಮಗಳ ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದರು,  ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಈ ಮೊದಲು ಇದೊಂದು ದರೋಡೆ ಪ್ರಕರಣ ಎಂದು ನಂಬಿದ್ದರು. ಆದರೆ, ಯಾವಾಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ನಾದಿನಿ ಭವ್ಯಾಳನ್ನು ವಿಚಾರಣೆ ಆರಂಭಿಸಿದ್ರೋ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಭವ್ಯಾ ನೀಡಿದ ಹೇಳಿಕೆ ಮತ್ತು ದರೋಡೆ ಸಂಬಂಧ ನಡೆದ ಕೊಲೆಗೂ ಹೊಂದಾಣಿಕೆಯಾಗುತ್ತಿರಲಿಲ್ಲ, ಸಂಶಯಗೊಂಡ ಪೊಲೀಸರು ಮತ್ತಷ್ಟು ಪ್ರಶ್ನೆಗಳನ್ನ ಕೇಳಿದ್ದಾಗ ಅಸಲಿ ಸತ್ಯವನ್ನ ಬಾಯ್ಬಿಟ್ಟಿದ್ದಾಳೆ, ಅಂದಹಾಗೇ ಇಲ್ಲಿ ಕೊಲೆ ಮಾಡಿಸಿದ್ದು ಬೇರೆಯಾರು ಅಲ್ಲ ನಾದಿನಿ ಭವ್ಯಾ, ಅತ್ತೆ ವಿಜಯಲಕ್ಷ್ಮೀ, ಅಜ್ಜಿ ನಾಗಮ್ಮ.

ನಾದಿನಿ ಭವ್ಯಳ ರಾಸಲೀಲೆ ವಿಡಿಯೋ

ಭವ್ಯ ಆಕೆಯ ಬಾಯ್ ಫ್ರೆಂಡ್ ಜೊತೆ ಖಾಸಗಿ ಕ್ಷಣಗಳನ್ನು ಕಳೆದಿದ್ದಳು, ಈ ಖಾಸಗಿ ಕ್ಷಣದ ವಿಡಿಯೋ ಆಕೆಯ ಸೋದರ ಸಂಬಂಧಿ ಹೊಸಕೋಟೆಯ ಲೋಹಿತ್ ಕುಮಾರ್ ಅಲಿಯಾಸ್ ಲೂಲ್ ಯಾದವ್ ಬಳಿ ಇತ್ತು, ಈ ವಿಡಿಯೋ ಇಟ್ಕೊಂಡ್ ಬ್ಲ್ಯಾಕ್ ಮೇಲ್ ಮಾಡಿ ಭವ್ಯಳಿಂದ 4 ಲಕ್ಷ ಹಣವನ್ನು ಕಿತ್ತಿದ್ದ, ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ, ಈ ವಿಷಯ ಭವ್ಯಾಳ ತಾಯಿ ವಿಜಯಲಕ್ಷ್ಮೀಗೆ ಗೊತ್ತಾಗಿದೆ, ಲೋಹಿತ್ ಕುಮಾರ್ ಹಣ ಕೊಡಲು ದಾರಿ ನೋಡುತ್ತಿದ್ದ ಅಮ್ಮ ಮಗಳು ಸೊಸೆಯ ಕೊರಳಿನಲ್ಲಿದ್ದ ಮಾಂಗಲ್ಯ ಸರ ದೋಚುವ ಪ್ಲಾನ್ ಮಾಡಿದ್ದಾರೆ.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್.

ನಾಲ್ಕು ವರ್ಷದ ಹಿಂದೆ ಬೆಂಗಳೂರಿನ ಪುಷ್ಪಲತಾಳನ್ನ ಮಗ ಭರತ್ ಕೊಟ್ಟು ಮದುವೆ ಮಾಡಿಕೊಂಡಿದ್ದರು. ಆದರೆ ಮದುವೆಯಾದ ದಿನದಿಂದ ಸೊಸೆಗೆ ನೆಮ್ಮದಿಕೊಟ್ಟಿರಲಿಲ್ಲ ಅಮ್ಮ-ಮಗಳು, ಕೌಟುಂಬಿಕ ಕಲಹದಿಂದ ಮಗ ಸೊಸೆ ಪ್ರತ್ಯೇಕವಾಗಿ ವಾಸವಾಗಿದ್ದರು. ಒಂದೇಡೆ ಸೊಸೆ ಕಂಡರೆ ಆಗುತ್ತಿರಲಿಲ್ಲ ಇವರಿಗೆ ಮತ್ತೊಂದೆಡೆ ಲೋಹಿತ್ ಕುಮಾರ್ ಗೆ ಹಣ ಕೊಡ ಬೇಕಿತ್ತು. ಆಗ್ಲೇ ಹೊಳೆದಿತ್ತು ಅವರಿಗೆ ದರೋಡೆ ಹೆಸರಿನಲ್ಲಿ ಸೊಸೆಯ ಕೊಲೆ.

ಸೊಸೆ ಕೊಂದು ದರೋಡೆಯ ಕಥೆ.

ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಲೋಹಿತ್ ನನ್ನ ಕರೆದ ಭವ್ಯಾ, ಪುಷ್ಪಲತಾ ಕೊರಳಿನಲ್ಲಿರುವ ಮಾಂಗಲ್ಯ ಸರವನ್ನ ದೋಚಿವಂತೆ ಹೇಳಿದ್ದಾಳೆ, ಮಗಳ ಪ್ಲಾನ್ ಗೆ ಸಾಥ್ ನೀಡಿದ ತಾಯಿ ವಿಜಯಲಕ್ಷ್ಮೀ ಗಂಡ ನರಸಿಂಹಮೂರ್ತಿ ಮಗ ಭರತ್ ನನ್ನ ಕರೆದುಕೊಂಡು ತಮಿಳುನಾಡಿನ ದೇವಸ್ಥಾನಕ್ಕೆ ಹೋಗಿದ್ದಾಳೆ, ಇತ್ತಾ ಗಂಡ ದೇವಸ್ಥಾನಕ್ಕೆ ಹೋದ ಎಂದು ಪುಷ್ಪಲತಾ ಅತ್ತೆ ಮನೆಗೆ ಬಂದು ಮಲಗಿದ್ದಾಳೆ.

ತಲೆದಿಬ್ಬಿನಿಂದ ಉಸಿರುಗಟ್ಟಿಸಿ ಕೊಲೆ

28ರ ರಾತ್ರಿ ಮನೆಗೆ ಬಂದ ಲೋಹಿತ್ ಮಲಗಿದ್ದ ಪುಷ್ಪಲತಾಳನ್ನು ತಲೆದಿಬ್ಬಿನಿಂದ ಉಸಿರುಗಟ್ಟಿ ಸಾಯಿಸಿದ್ದಾನೆ, ಅನಂತರ ಚಾಕುವಿನಿಂದ ಇರಿದು ಆಕೆಯ ಕೊರಳಿನಲ್ಲಿದ್ದ ಮಾಂಗಲ್ಯ ಸರ ಕಿವಿಯೊಲೆ ಕಿತ್ಕೊಂಡ್ ಪರಾರಿಯಾಗಿದ್ದಾನೆ, ಭವ್ಯಾ ಬಟ್ಟೆ ಹರಿದುಕೊಂಡು ಮೂರ್ಛೆ ಹೋದದಂತೆ ನಾಟಕವಾಡಿದ್ದಾಳೆ, ಅಜ್ಜಿ ನಾಗಮ್ಮ ಕಿರಿಚಿಕೊಂಡು ಮನೆಗೆ ಹೊರಗೆ ಬಂದು ಮನೆಗೆ ಕಳ್ಳರು ಬಂದಿದ್ದಾರೆಂದು ಸ್ಥಳೀಯರನ್ನ ನಂಬಿಸಿದ್ದಾಳೆ.

24 ಗಂಟೆಯಲ್ಲೇ ಪ್ರಕರಣ ಭೇದಿಸಿದ ಪೊಲೀಸರು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಭವ್ಯಾ, ಲೋಹಿತ್ ಕುಮಾರ್ ನನ್ನ ಬಂಧಿಸಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ, ಕೊಲೆ ಪ್ರಕರಣದಲ್ಲಿ ಗಂಡ ಭರತ್ ಮತ್ತು ಮಾವ ನರಸಿಂಹಮೂರ್ತಿಯವರ ಪಾತ್ರ ಇಲ್ಲ. ಅತ್ತೆ ವಿಜಯಲಕ್ಷ್ಮೀಯನ್ನ ವಿಚಾರಣೆ ಮಾಡುತ್ತಿರುವ ಪೊಲೀಸರು ವಶಕ್ಕೆ ತೆಗೆದುಕೊಳ್ಳಲಿದ್ದಾರೆ. ಘಟನೆ ನಡೆದು 24 ಗಂಟೆಯಲ್ಲಿ ಪ್ರಕರಣ ಭೇದಿಸಿದ ಪೊಲೀಸರನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಶ್ಲಾಘಿಸಿದ್ದಾರೆ.

ಕೊಲೆ ಕೃತ್ಯಕ್ಕೆ ರಾತ್ರಿ ಮನೆ ಬಾಗಿಲು ತರೆದಿದ್ದ ಆರೋಪಿಗಳು.

ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಸ್ಥಳ ಪರಿಶೀಲನೆ, ಮೃತ ಪುಷ್ಪಲತಾ ಪೋಷಕರ ಹೇಳಿಕೆ ಮತ್ತು ಶವ ಪರೀಕ್ಷೆಯಿಂದ ಇದು ದರೋಡೆ ಕೃತ್ಯ ಅಲ್ಲ ಎಂಬ ಸಂಶಯ ಬಂದಿದೆ, ಶವದಲ್ಲಿನ ಕುತ್ತಿಗೆಗೆ ಅಳವಾಗಿ ಇರಿದಿರಲಿಲ್ಲ, ಹೆಚ್ಚಿನ ರಕ್ತಸ್ರಾವ ಸಹ ಆಗಿರಲಿಲ್ಲ, ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬ ವರದಿ ಬಂದಿತು, ಮನೆ ಪರೀಕ್ಷೆ ಮಾಡಿದ್ದಾಗಿ ಆರೋಪಿಗಳು ಬಾಗಿಲು ಹೊಡೆಯುವ ಪ್ರಯತ್ನವೇ ಮಾಡಿರಲಿಲ್ಲ, ನೇರವಾಗಿ ಮನೆಗೆ ಬಂದಿದ್ದರು, ವಿಚಾರಣೆಯಲ್ಲಿ ಲೋಹಿತ್ ಕುಮಾರು ಬರುತ್ತಾನೆಂದು ಭವ್ಯಾ ಬಾಗಿಲು ತೆಗೆದು ಮಲಗಿದ್ದರು. ಈ ಸಂಶಯಗಳ ಮೇಲೆ ವಿಚಾರಣೆ ಆರಂಭಿಸಿದ ಪೊಲೀಸರು ಆರೋಪಿಗಳನ್ನ ಪತ್ತೆ ಮಾಡಿದ್ದಾರೆ ಎಂದರು.

WhatsApp Group Join Now

Spread the love

Leave a Reply