ಶಿವಮೊಗ್ಗ : ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದ್ದ ನಿಗೂಢ ಕೊ# ಪ್ರಕರಣವನ್ನು ಭೇದಿಸುವಲ್ಲಿ ಸಾಗರ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ. ಕೌಟಂಬಿಕ ಕಲಹ ಎಂದು ಬಿಂಬಿಸಿ ಮುಚ್ಚಿಹಾಕಲು ಯತ್ನಿಸಲಾಗಿದ್ದ ಈ ಕೊಲೆಯ ಹಿಂದೆ ಅನೈತಿಕ ಸಂಬಂಧದ ಕರಾಳ ಮುಖ ಬಯಲಾಗಿದ್ದು, ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಸಾಗರದ ಜೆ.ಪಿ. ನಗರದ ನಿವಾಸಿ ಪರಶುರಾಮ್ (40) ಕೊಲೆಯಾದ ದುರ್ದೈವಿ. ಈತನ ಪತ್ನಿ ಚೈತ್ರಾ ಹಾಗೂ ಆಕೆಯ ಪ್ರಿಯಕರ ಮಂಜು (ಯಾನೆ ಟೀಪುಡಿ ಮಂಜು) ಸದ್ಯ ಕಂಬಿ ಎಣಿಸುತ್ತಿರುವ ಆರೋಪಿಗಳು.
ನಡೆದಿದ್ದೇನು?
ಪೊಲೀಸ್ ಮೂಲಗಳ ಪ್ರಕಾರ, ಚೈತ್ರಾ ಮತ್ತು ಮಂಜು ನಡುವೆ ಇದ್ದ ಅ#ತಿಕ ಸಂಬಂಧದ ವಿಷಯ ಪರಶುರಾಮ್ಗೆ ತಿಳಿದಿತ್ತು. ಈ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಮೇ 15ರ ರಾತ್ರಿ ಕೂಡ ಇದೇ ವಿಷಯಕ್ಕೆ ಇಬ್ಬರ ನಡುವೆ ಜೋರು ಜಗಳ ಆರಂಭವಾಗಿದೆ. ವಿಷಯ ತಿಳಿದು ತಕ್ಷಣವೇ ಮನೆಗೆ ಧಾವಿಸಿದ ಪ್ರಿಯಕರ ಮಂಜು, ಪರಶುರಾಮ್ ಜೊತೆ ಜಗಳಕ್ಕೆ ನಿಂತಿದ್ದಾನೆ.
ಮಾರಾ ಮಾರಿ, ಚೂರಿ ಇರಿತ:
ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋದಾಗ, ಪರಶುರಾಮ್ ಕುಡುಗೋಲು ಹಿಡಿದರೆ, ಮಂಜು ತನ್ನ ಬಳಿಯಿದ್ದ ಚಾಕುವಿನಿಂದ ಆತನ ಮೇಲೆ ಮುಗಿಬಿದ್ದಿದ್ದಾನೆ. ಈ ವೇಳೆ ನಡೆದ ರಕ್ತಸಿಕ್ತ ಸಂಘರ್ಷದಲ್ಲಿ ಮಂಜು ಚಾಕುವಿನಿಂದ ತೀವ್ರವಾಗಿ ಇರಿದ ಪರಿಣಾಮ ಪರಶುರಾಮ್ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸಾಗರ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.
ಪ್ರಕರಣ ಮುಚ್ಚಿಹಾಕಲು ಸ್ಕೆಚ್!
ಕೊಲೆಯ ನಂತರ ಪತ್ನಿ ಚೈತ್ರಾ ತನ್ನ ಪ್ರಿಯಕರ ಮಂಜುನನ್ನು ಬಚಾವ್ ಮಾಡಲು ಹರಸಾಹಸ ಪಟ್ಟಿದ್ದಾಳೆ. ಪೊಲೀಸರ ಮುಂದೆ ಇದೊಂದು ಕೇವಲ ಸಾಮಾನ್ಯ ಕೌಟಂಬಿಕ ಜಗಳ ಎಂದು ನಂಬಿಸಿ ಕೃತ್ಯವನ್ನು ಮುಚ್ಚಿಹಾಕಲು ಯತ್ನಿಸಿದ್ದಾಳೆ. ಆದರೆ ಪೊಲೀಸರು ತೀವ್ರ ತನಿಖೆ ನಡೆಸಿದಾಗ ಇವರಿಬ್ಬರ ಅಕ್ರಮ ಸಂಬಂಧದ ಅಸಲಿ ಸತ್ಯ ಹೊರಬಿದ್ದಿದೆ. ಸದ್ಯ ಇಬ್ಬರನ್ನೂ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೇ 26 ರಂದು ಪೊಲೀಸ್ ಇಲಾಖೆ ಈ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿದೆ.
ಅನೈತಿಕ ಸಂಬಂಧಕ್ಕೆ ಪತಿ ಬಲಿ : ಪ್ರಿಯಕರನೊಂದಿಗೆ ಜೈಲು ಸೇರಿದ ಪತ್ನಿ.!
WhatsApp Group
Join Now