ಪಿತ್ತಕೋಶದಲ್ಲಿ ಕಲ್ಲು ಕಂಡುಬರುವುದಕ್ಕೆ ಕಾರಣವೇನು.? ಇದು ಬರದಂತೆ ತಡೆಯಲು ಏನು ಮಾಡಬೇಕು.?

Spread the love

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೇ ಪಿತ್ತಕೋಶದಲ್ಲಿ ಕಲ್ಲು (Gall Bladder Stone) ಕಂಡುಬರುವ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅಸಮತೋಲನ ಆಹಾರ ಪದ್ಧತಿ, ಕಡಿಮೆ ನೀರು ಕುಡಿಯುವುದು, ಫಾಸ್ಟ್ ಫುಡ್ ಸೇವನೆ ಮತ್ತು ಜೀವನಶೈಲಿಯ ಬದಲಾವಣೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿದೆ.

ತಜ್ಞರ ಪ್ರಕಾರ, ಪಿತ್ತಕೋಶದಲ್ಲಿ ಪಿತ್ತರಸ (Bile) ಒಳಗೆ ಕೊಲೆಸ್ಟ್ರಾಲ್ ಅಥವಾ ಬಿಲಿರೂಬಿನ್ ಅತಿಯಾಗಿ ಜಮೆಯಾಗುವಾಗ ಕಲ್ಲು ರೂಪಗೊಳ್ಳುತ್ತದೆ. ಇದು ಸಣ್ಣ ಕಣದಿಂದ ಹಿಡಿದು ಗಾಲ್ಫ್ ಚೆಂಡಿನ ಗಾತ್ರದವರೆಗೂ ಇರಬಹುದು. ಅನೇಕರಲ್ಲಿ ಇದು ಕಂಡುಬರುವಾಗ ಯಾವುದೇ ರೀತಿಯ ಲಕ್ಷಣಗಳು ಕೂಡ ಕಂಡುಬರುವುದಿಲ್ಲ. ಆದರೆ ಈ ಸಮಸ್ಯೆ ಉಂಟಾದರೆ ಹೊಟ್ಟೆಯ ಮಧ್ಯಭಾಗ ಮತ್ತು ಬಲಭಾಗದಲ್ಲಿ ತೀವ್ರ ನೋವು ಕಾಣಿಸಿಕೊಳ್ಳಬಹುದು.

ಗಾಲ್ ಸ್ಟೋನ್‌ಗಳ ವಿಧಗಳು :

ವೈದ್ಯರ ಪ್ರಕಾರ ಗಾಲ್ ಸ್ಟೋನ್‌ಗಳು ಮುಖ್ಯವಾಗಿ ಎರಡು ವಿಧಗಳಾಗಿವೆ. ಕೊಲೆಸ್ಟ್ರಾಲ್ ಸ್ಟೋನ್ ಮತ್ತು ಪಿಗ್ಮೆಂಟ್ ಸ್ಟೋನ್. ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಅಥವಾ ಪಿತ್ತಕೋಶದ ಒಳಪದರದಲ್ಲಿ ದೋಷ ಉಂಟಾದಾಗ ಕೊಲೆಸ್ಟ್ರಾಲ್ ಸ್ಟೋನ್ ರೂಪಗೊಳ್ಳುತ್ತದೆ. ಕೆಲವರಲ್ಲಿ ಇದು ವಂಶಪಾರಂಪರ್ಯ ಕಾರಣಗಳಿಂದಲೂ ಕಾಣಿಸಬಹುದು. ಪಿಗ್ಮೆಂಟ್ ಸ್ಟೋನ್‌ಗಳು ಸಾಮಾನ್ಯವಾಗಿ ರಕ್ತಕಣಗಳ ಒಡೆತ (Hemolysis) ಹೆಚ್ಚಾದಾಗ ಉಂಟಾಗುತ್ತವೆ. ಸಣ್ಣ ವಯಸ್ಸಿನವರಲ್ಲಿ ಹೆಚ್ಚಾಗಿ ಈ ರೀತಿಯ ಕಪ್ಪು ಬಣ್ಣದ ಸಣ್ಣ ಕಲ್ಲುಗಳು ಕಂಡುಬರುತ್ತವೆ.

ಯುವಕರಲ್ಲಿ ಈ ಸಮಸ್ಯೆ ಹೆಚ್ಚುತ್ತಿರುವುದಕ್ಕೆ ಕಾರಣವೇನು.?

ಅನಿಯಮಿತ ಆಹಾರ ಪದ್ಧತಿ, ಹೆಚ್ಚು ಎಣ್ಣೆಯುಕ್ತ ಆಹಾರ ಸೇವನೆ, ತ್ವರಿತವಾಗಿ ತೂಕ ಇಳಿಸುವ ಕ್ರ್ಯಾಶ್ ಡಯಟ್ ಮತ್ತು ದೇಹದಲ್ಲಿ ನೀರಿನ ಕೊರತೆ ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಜಿಮ್‌ಗೆ ಹೋಗುವವರು, ಹೆಚ್ಚು ಹೊರಗಡೆ ಕೆಲಸ ಮಾಡುವವರು ಮತ್ತು ವಿದ್ಯಾರ್ಥಿಗಳಲ್ಲಿಯೂ ಈ ಸಮಸ್ಯೆ ಹೆಚ್ಚಾಗುತ್ತಿದೆ.

ತಪ್ಪದೇ ಗಮನಿಸಬೇಕಾದ ಲಕ್ಷಣಗಳು:

• ಹೊಟ್ಟೆಯ ಬಲಭಾಗದಲ್ಲಿ ತೀವ್ರ ನೋವು
• ವಾಂತಿ ಅಥವಾ ಅಜೀರ್ಣ
• ಊಟದ ನಂತರ ಹೊಟ್ಟೆ ಉಬ್ಬರ
• ಜ್ವರ ಅಥವಾ ಅಸ್ವಸ್ಥತೆ
• ಪಿತ್ತಕೋಶದ ಕಲ್ಲು ತಡೆಯಲು ಏನು ಮಾಡಬೇಕು?

ತಜ್ಞರ ಪ್ರಕಾರ ದಿನಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಅತ್ಯಂತ ಮುಖ್ಯ. ಎಣ್ಣೆಯಲ್ಲಿ ಕರಿದ ಆಹಾರ, ಪಿಜ್ಜಾ, ಬರ್ಗರ್, ಸಮೋಸಾ ಮೊದಲಾದ ಫಾಸ್ಟ್ ಫುಡ್ ಕಡಿಮೆ ಮಾಡಬೇಕು. ಓಟ್ಸ್, ಹಣ್ಣುಗಳು, ಹಸಿ ತರಕಾರಿ ಮತ್ತು ಸಂಪೂರ್ಣ ಧಾನ್ಯಗಳಲ್ಲಿ ಇರುವ ಫೈಬರ್ ಅಂಶವನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು. ಜೊತೆಗೆ ಉಪಹಾರವನ್ನು ಬಿಟ್ಟುಬಿಡದೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು.

WhatsApp Group Join Now

Spread the love

Leave a Reply