ಫಾರ್ಚುನರ್ ಕಾರು, 1 ಕೋಟಿ ರೂ ವರದಕ್ಷಿಣೆ ಕೊಟ್ಟರೂ ಕಿರುಕುಳ, ದುರಂತ ಅಂತ್ಯ ಕಂಡ 24ರ ಯುವತಿ

Spread the love

ಮದುವೆ ಬಳಿಕ ವರದಕ್ಷಿಣೆ ಕಿರುಕುಳ, ಗಂಡ ಹಾಗೂ ಮನೆಯವರ ದೈಹಿಕ ಮಾನಸಿಕ ಹಿಂಸೆಯಿಂದ ದುರಂತ ಅಂತ್ಯ ಕಾಣುತ್ತಿರುವ ಮಹಿಳೆಯರ ಪ್ರಕರಣ ಹೆಚ್ಚಾಗುತ್ತಿದೆ. ಇದೀಗ ಎರಡೇ ದಿನದಲ್ಲಿ ನೋಯ್ಡಾದಲ್ಲೇ ಎರಡನೇ ಪ್ರಕರಣ ದಾಖಲಾಗಿದೆ. 1 ಕೋಟಿ ರೂಪಾಯಿ ವರದಕ್ಷಿಣೆ, ಫಾರ್ಚುನರ್ ಕಾರು ಜೊತೆಗೆ 1 ಕೋಟಿ ರೂಪಾಯಿ ಖರ್ಚು ಮಾಡಿ ಮಗಳ ಮದುವೆ ಮಾಡಿದ ಪೋಷಕರು ಈಗ ಕಂಗಾಲಾಗಿದ್ದಾರೆ.

ಮದುವೆಯಾದ 14 ತಿಂಗಳಿಗೆ 24ರ ಯುವತಿ ದೀಪಿಕಾ ಮಹಡಿಯಿಂದ ಜಿಗಿದು ದುರಂತ ಅಂತ್ಯಕಂಡಿದ್ದಾಳೆ. ಮೃತಗಳ ಗಂಡ ಹಾಗೂ ಮಾವ ಅರೆಸ್ಟ್ ಆಗಿದ್ದಾರೆ.

ಗ್ರೇಟರ್ ನೋಯ್ಡಾದ ಜಲ್ಪುರ ವಲಯದಲ್ಲಿ ಘಟನೆ ನಡೆದಿದೆ. ದೀಪಿಕಾ ಹಾಗೂ ರಿತಿಕ್ ತನ್ವಾರ್ ವಿವಾಹ 14 ತಿಂಗಳ ಹಿಂದೆ ಅದ್ಧೂರಿಯಾಗಿ ನಡೆದಿದೆ. ದೀಪಿಕಾ ಕುಟುಂಬಸ್ಥರು ಇದ್ದ ಬಂಡವಾಳ, ಸಾಲ ಮಾಡಿ ಅದ್ಧೂರಿ ವಿವಾಹ ಮಾಡಿದ್ದರು. ಮದುವೆಗೆ ಇನ್ನೇನು 3 ತಿಂಗಳು ಇರುವಾಗ ವರದಕ್ಷಿಣೆ ಬೇಡಿಕೆ ತೀವ್ರಗೊಂಡಿತ್ತು. ಎಲ್ಲರಿಗೂ ಆಹ್ವಾನ ನೀಡಿ ಆಗಿತ್ತು. ಇದರ ನಡುವೆ ವರದಕ್ಷಿಣೆ ವಿಚಾರದಲ್ಲಿ ಮದುವೆ ನಿಂತರೆ ಮಗಳ ಭವಿಷ್ಯದ ಕುರಿತು ಚಿಂತಿಸಿದ ಪೋಷಕರು ಬರೋಬ್ಬರಿ 1 ಕೋಟಿ ರೂಪಾಯಿ ವರದಕ್ಷಿಣೆ ಜೊತೆಗೆ ಫಾರ್ಚುನರ್ ಕಾರನ್ನು ನೀಡಿದ್ದರು. ಮದುವೆಗೂ ಭಾರಿ ಖರ್ಚು ಮಾಡಿದ್ದರು.

ಮತ್ತೆ ವರದಕ್ಷಿಣೆಗೆ ಕಿರುಕುಳ, ಇಡೀ ಕುಟುಂಬಸ್ಥರಿಂದ ಹಿಂಸೆ

ಮದುವೆಯಾದ ಬೆನ್ನಲ್ಲೇ ವರನ ಕುಟುಂಬದಿಂದ ಮಾನಸಿಕ, ದೈಹಿಕ ಕಿರುಕುಳ ಆರಂಭಗೊಂಡಿದೆ. ಗಂಡ, ಮಾವ ಸೇರಿದಂತೆ ರಿತಿಕ್ ತನ್ವರ್ ಕುಟುಂಬ ಕಿರುಕುಳ ನೀಡಲು ಆರಂಭಿಸಿದೆ. ಈ ಕುರಿತು ಪೋಷಕರಿಗೆ ಹೇಳಿದ್ದ ದೀಪಿಕಾ ಉತ್ತಮ ಸಮಯ ಬರಲಿದೆ.ಎಲ್ಲವು ಬದಲಾಗಲಿದೆ ಎಂದು ಕಾದಿದ್ದಳು. ಇತ್ತ ಪೋಷಕರು ಪೊಲೀಸ್ ದೂರು ನೀಡಿದೆ ಸಮಸ್ಯೆ ಬಗೆ ಹರಿಸಲು ಯತ್ನಿಸಿದ್ದರು.

ಸಮಸ್ಯೆ ಬಗೆ ಹರಿಯುವ ಬದಲು ತೀವ್ರಗೊಳ್ಳುತ್ತಿದ್ದಂತೆ ಮನೆಯ ಮಹಡಿ ಮೇಲೆ ತೆರಳಿ ಅಲ್ಲಿಂದ ಜಿಗಿದ 24ರ ಹರೆಯದ ದೀಪಿಕಾ ದುರಂತ ಅಂತ್ಯ ಕಂಡಿದ್ದಾಳೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೃತದಹೇ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ದೀಪಿಕಾಳ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ತನಿಖೆ ತೀವ್ರಗೊಂಡಿದೆ. ಈಗಾಗಲೇ ರಿತಿಕ್ ತನ್ವರ್ ಹಾಗೂ ಆತನ ತಂದೆಯನ್ನು ಅರೆಸ್ಟ್ ಮಾಡಿದ್ದಾರೆ. ರಿತಿಕ್ ಕುಟುಂಬಸ್ಥರ ವಿರುದ್ಧವೂ ಪ್ರಕರಣ ದಾಖಲಾಗಿದೆ.

WhatsApp Group Join Now

Spread the love

Leave a Reply