ಕರ್ನಾಟಕದಲ್ಲಿ ಮದ್ಯ ದರ ಏರಿಕೆ: ಬಡವರ ಬ್ರ್ಯಾಂಡ್ ತುಟ್ಟಿ, ಶ್ರೀಮಂತರ ಮದ್ಯ ಸಸ್ತಾ.. ಸಂಪೂರ್ಣ ವಿವರ ಇಲ್ಲಿದೆ

Spread the love

ವಿಶೇಷವೆಂದರೆ, ಅತಿ ಹೆಚ್ಚು ಮಾರಾಟವಾಗುವ ಸಾಮಾನ್ಯ ಬ್ರ್ಯಾಂಡ್‌ಗಳ ಬೆಲೆ ಏರಿಕೆ ಮಾಡಲಾಗಿದ್ದು, ಪ್ರೀಮಿಯಂ ಅಥವಾ ದುಬಾರಿ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ. ಸರ್ಕಾರದ ಈ ನಿರ್ಧಾರಕ್ಕೆ ಮದ್ಯಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯಾವುದರ ಬೆಲೆ ಎಷ್ಟು ಏರಿಕೆ? : ಸಾಮಾನ್ಯವಾಗಿ ಮಧ್ಯಮ ಮತ್ತು ಕೆಳವರ್ಗದ ಜನರು ಬಳಸುವ ಮದ್ಯದ ಬ್ರ್ಯಾಂಡ್‌ಗಳ ಮೇಲೆ ₹20 ರಿಂದ ₹30 ರವರೆಗೆ ಏರಿಕೆ ಮಾಡಲಾಗಿದೆ. ಪ್ರಮುಖ ಬ್ರ್ಯಾಂಡ್‌ಗಳ ಪರಿಷ್ಕೃತ ದರ ಪಟ್ಟಿ ಹೀಗಿದೆ.

ಬೆಲೆ ಏರಿಕೆಯಾದ ಮದ್ಯದ ಬ್ರ್ಯಾಂಡ್‌ಗಳು (180ml)

MC ಬ್ರಾಂಡಿ: 185 ರೂ.ನಿಂದ 215 ರೂ.ಗೆ ಏರಿಕೆ
DSP ಬ್ಲ್ಯಾಕ್: 185 ರೂ.ನಿಂದ 215 ರೂ.ಗೆ ಏರಿಕೆ
8PM ವಿಸ್ಕಿ: 135 ರೂ.ನಿಂದ 165 ರೂ.ಗೆ ಏರಿಕೆ
BP (ಬ್ಯಾಗ್‌ಪೈಪರ್): 135 ರೂ.ನಿಂದ 165 ರೂ.ಗೆ ಏರಿಕೆ
OT (ಓಲ್ಡ್ ಟ್ಯಾವರ್ನ್): 115 ರೂ.ನಿಂದ 145 ರೂ.ಗೆ ಏರಿಕೆ
ಸಿಲ್ವರ್ ಕಪ್: 95 ರೂ.ನಿಂದ 120 ರೂ.ಗೆ ಏರಿಕೆ
ಒರಿಜಿನಲ್ ಚಾಯ್ಸ್: 95 ರೂ.ನಿಂದ 120 ರೂ.ಗೆ ಏರಿಕೆ
ಓಲ್ಡ್ ಮಾಂಕ್: 155 ರೂ.ನಿಂದ 175 ರೂ.ಗೆ ಏರಿಕೆ
ದುಬಾರಿ ಮದ್ಯದ ಬೆಲೆ ಇಳಿಕೆ : ಸರ್ಕಾರವು ಕೆಲವು ಆಯ್ದ ಪ್ರೀಮಿಯಂ ಬ್ರ್ಯಾಂಡ್‌ಗಳ ಬೆಲೆಯನ್ನು ಇಳಿಕೆ ಮಾಡಿದೆ. ಇದು ಶ್ರೀಮಂತರಿಗೆ ಅನುಕೂಲ ಮಾಡಿಕೊಡುವ ತಂತ್ರ ಎಂದು ಸಾರ್ವಜನಿಕರು ಟೀಕಿಸುತ್ತಿದ್ದಾರೆ. ಬೆಲೆ ಇಳಿಕೆಯಾದ ಬ್ರ್ಯಾಂಡ್‌ಗಳ ವಿವರ ಈ ಕೆಳಗಿನಂತಿದೆ.

ಮ್ಯಾನ್ಷನ್ ಹೌಸ್ (MH): 235 ರೂ.ನಿಂದ 215 ರೂ.ಗೆ ಇಳಿಕೆ
ಇಂಪೀರಿಯಲ್ ಬ್ಲ್ಯೂ (IB): 235 ರೂ.ನಿಂದ 215 ರೂ.ಗೆ ಇಳಿಕೆ
MC ವಿಸ್ಕಿ: 235 ರೂ.ನಿಂದ 215 ರೂ.ಗೆ ಇಳಿಕೆ
ಆಫ್ಟರ್ ಡಾರ್ಕ್: 235 ರೂ.ನಿಂದ 215 ರೂ.ಗೆ ಇಳಿಕೆ
ಬ್ಲ್ಯಾಕ್ ಅಂಡ್ ವೈಟ್: 585 ರೂ.ನಿಂದ 520 ರೂ.ಗೆ ಇಳಿಕೆ
ರಾಜ್ಯ ಸರ್ಕಾರವು ಗ್ಯಾರೆಂಟಿ ಯೋಜನೆಗಳ ಜಾರಿಯಿಂದ ಖಾಲಿಯಾಗುತ್ತಿರುವ ಬೊಕ್ಕಸವನ್ನು ತುಂಬಿಸಿಕೊಳ್ಳಲು ಮದ್ಯಪ್ರಿಯರನ್ನು ದಾಳವನ್ನಾಗಿ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈಗಾಗಲೇ ಚಿನ್ನದ ಮೇಲೆ ಶೇ. 15ರಷ್ಟು ಆಮದು ಸುಂಕ ವಿಧಿಸಿರುವುದರಿಂದ ಬಂಗಾರ ಸಾಮಾನ್ಯರಿಗೆ ಎಟುಕದಂತಾಗಿದೆ. ಸಿಲಿಂಡರ್ ಬೆಲೆ ಏರಿಕೆ ಕೂಡ ಜನ ಜೀವನವನ್ನು ಹೈರಾಣಾಗಿಸಿದೆ ಎಂಬ ಚರ್ಚೆ ನಡೆದಿದೆ..

ಮದ್ಯಪ್ರಿಯರು ಸರ್ಕಾರದ ವಿರುದ್ಧ ಕಿಡಿಕಾರುತ್ತಾ, ಪ್ರತಿ ಬಾರಿಯೂ ಬೊಕ್ಕಸ ತುಂಬಿಸಲು ಮದ್ಯದ ಬೆಲೆ ಏರಿಸುವುದು ಸರಿಯಲ್ಲ. ಕಡಿಮೆ ಬೆಲೆಯ ಬ್ರ್ಯಾಂಡ್‌ಗಳನ್ನು ಗುರಿಯಾಗಿಸಿಕೊಂಡು ದರ ಹೆಚ್ಚಿಸಿರುವುದು ಬಡ ಮತ್ತು ಮಧ್ಯಮ ವರ್ಗದವರಿಗೆ ಮಾಡಿದ ಅನ್ಯಾಯ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಒಟ್ಟಾರೆಯಾಗಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಮದ್ಯದ ದರ ಏರಿಕೆಯು ರಾಜ್ಯದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂದಿನಿಂದಲೇ ಅಬಕಾರಿ ಇಲಾಖೆಯ ಈ ನೂತನ ದರಗಳು ಜಾರಿಗೆ ಬಂದಿದ್ದು, ಸರ್ಕಾರದ ವಿರುದ್ಧ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ.

WhatsApp Group Join Now

Spread the love

Leave a Reply