IFS ಪರೀಕ್ಷೆಯಲ್ಲಿ ಕನ್ನಡಿಗರ ಕಮಾಲ್‌: ಬಸವರಾಜ ಕೆಂಪವಾಡ ದೇಶಕ್ಕೆ ಪ್ರಥಮ ರ‍್ಯಾಂಕ್, ಸಿದ್ದರಾಮಯ್ಯ ವಿಶ್

Spread the love

ಭಾರತೀಯ ಅರಣ್ಯ ಸೇವೆ (IFS Exam Results) ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದು ಕನ್ನಡಿಗ ಬಸವರಾಜ ಕೆಂಪವಾಡ ಅವರು ಅನನ್ಯ ಸಾಧನೆ ಮಾಡಿದ್ದಾರೆ. ಇನ್ನೂ ಇದೇ ಪರೀಕ್ಷೆಯಲ್ಲಿ 14ನೇ ರ‍್ಯಾಂಕ್ ಪಡೆದ ದೀಕ್ಷಿತ್.ಎನ್ ಅವವರು ರಾಜ್ಯದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಅವರಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ.

ಐಎಫ್‌ಎಸ್ ಪರೀಕ್ಷೆಯಲ್ಲಿ ಸಾಧನೆ ತೋರಿದ ಕನ್ನಡಿಗರ ಕುರಿತು ಸಿದ್ದರಾಮಯ್ಯ ಅವರು ಎಕ್ಸ್ ಪೋಸ್ಟ್ ಮಾಡಿದ್ದಾರೆ. ‘ಕನ್ನಡಿಗರ ಪರಿಶ್ರಮ, ಪ್ರಯತ್ನ ಮತ್ತು ಆತ್ಮವಿಶ್ವಾಸವಿದ್ದರೆ ಕಠಿಣಾತಿ ಕಠಿಣ ಗುರಿಯನ್ನು ಕೂಡ ಮುಟ್ಟಲು ಸಾಧ್ಯವೆಂಬುದಕ್ಕೆ ಇವರ ಸಾಧನೆಯೇ ಸಾಕ್ಷಿ. ಅರಣ್ಯ, ವನ್ಯಜೀವಿ ಹಾಗೂ ಪರಿಸರ ಸಂಪನ್ಮೂಲಗಳನ್ನು ಉಳಿಸಿ, ಬೆಳೆಸುವಲ್ಲಿ ನಿಮ್ಮ ಪ್ರತಿಭೆ, ಶ್ರದ್ಧೆಯಿಂದ ರಾಷ್ಟ್ರಕ್ಕೆ ಗರಿಷ್ಠ ಅನುಕೂಲವಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಇವರ ಸಾಧನೆ ಸ್ಪೂರ್ತಿದಾಯಕ

ಈ ಇಬ್ಬರ ಸಾಧನೆಯು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ ಮತ್ತು ಸ್ಪೂರ್ತಿದಾಯಕವಾದುದ್ದು. ಮತ್ತೊಮ್ಮೆ ವಿಶಿಷ್ಟ ಸಾಧನೆಗೈದ ಯುವ ಕನ್ನಡಿಗರಿಗೆ ಹೃತ್ಪೂರ್ವಕ ಅಭಿನಂದನೆ’ ಎಂದು ಫೋಟೋ ಸಮೇತ ಸಿಎಂ ಶುಭ ಹಾರೈಸಿದ್ದಾರೆ.

2025ನೇ ಸಾಲಿನ ಭಾರತೀಯ ಅರಣ್ಯ ಸೇವೆ ಪರೀಕ್ಷೆಯ ಫಲಿತಾಂಶ ನೆನ್ನೆ ಶುಕ್ರವಾರ (ಮೇ 08, 2026) ರಂದು ಪ್ರಕಟವಾಗಿದೆ. ಇದರಲ್ಲಿ ಅಥಣಿ ತಾಲೂಕಿನ ಸವದಿಯ ಬಸವರಾಜ ಕೆಂಪವಾಡ ಅವರು ದೇಶಕ್ಕೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಒಂದರಿಂದ ಐದನೇ ತರಗತಿವರೆಗೆ ಸ್ವಗ್ರಾಮ ಸವದಿಯಲ್ಲಿ ಮತ್ತು ರಾಯಬಾಗ್ ತಾಲೂಕಿನ ಅಳಗವಾಡಿ ಮೂರಾರ್ಜಿ ದೇಸಾಯಿ ವಸತಿಯಲ್ಲಿ ಶಾಲೆಯಲ್ಲಿ ಹೈಸ್ಕೂಲ್ (6-8) ಕಲಿತಿದ್ದಾರೆ.

ಜಮಖಂಡಿಯಲ್ಲಿ ಪಿಯುಸಿ ಓದಿದ ಬಳಿಕ ಶಿರಶಿಯಲ್ಲಿ ಅರಣ್ಯ ವಿಭಾಗದಲ್ಲಿ ಬಿಎಸ್‌ಸಿ ಮುಗಿಸಿ ಬೆಂಗಳುರಿನಲ್ಲಿ ಅಧ್ಯಯನ ಕೈಗೊಂಡಿದ್ದಾರೆ. ಇವರದ್ದು ಕೃಷಿ ಕುಟುಂಬವಾಗಿದ್ದು ಮೂರುವರೆ ಎಕರೆ ಜಮೀನಿದೆ. ಮಗನ ಸಾಧನೆ ಕಂಡು ಪೋಷಕರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

WhatsApp Group Join Now

Spread the love

Leave a Reply