ಬೇಸಿಗೆಯಲ್ಲಿ ಈ ತಪ್ಪು ಮಾಡ್ಬೇಡಿ, ಗ್ಯಾಸ್ ಸಿಲಿಂಡರ್‌ನಂತೆ ಫ್ರಿಡ್ಜ್ ಕೂಡ ಸ್ಫೋಟಗೊಳ್ಳಬಹುದು!

Spread the love

ಈ ಬಿಸಿಲಿಗೆ ಫ್ರಿಡ್ಜ್ ಎಲ್ಲರಿಗೂ ಅವಶ್ಯಕ. ಆದರೆ ಹೆಚ್ಚುತ್ತಿರುವ ತಾಪಮಾನದ ನಡುವೆ ಫ್ರಿಡ್ಜ್‌ಗಳು ಸ್ಫೋಟಗೊಳ್ಳುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿವೆ. ನಾವು ಮಾಡುವ ಸಣ್ಣಪುಟ್ಟ ತಪ್ಪು, ನಿರ್ಲಕ್ಷ್ಯ ಈ ಅಪಾಯಕಾರಿ ಅನಾಹುತಕ್ಕೆ ಕಾರಣವಾಗಬಹುದು.

ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್‌ಗಳ ಮಾದರಿಯಲ್ಲೇ ಫ್ರಿಡ್ಜ್‌ಗಳು ಕೂಡ ಸ್ಫೋಟಗೊಳ್ಳುತ್ತಿರುವ ಸುದ್ದಿಯನ್ನು ನಾವು ಕೇಳುತ್ತಿದ್ದೇವೆ. ಇದಕ್ಕೆ ಪ್ರಮುಖ ಕಾರಣ ಫ್ರಿಡ್ಜ್ ಅನ್ನು ಸರಿಯಾದ ಸ್ಥಳದಲ್ಲಿ ಇಡದಿರುವುದು ಮತ್ತು ಮಿತಿಮೀರಿದ ಬಳಕೆ. ಫ್ರಿಡ್ಜ್ ಹಿಂಭಾಗದಲ್ಲಿರುವ ಸಂಕೋಚಕ (Compressor) ಬಿಸಿಯಾದಾಗ ಅದಕ್ಕೆ ಸರಿಯಾದ ಗಾಳಿ ಸಿಗದಿದ್ದರೆ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.

ಸರಿಯಾದ ಅಂತರವಿರಲಿ

ಫ್ರಿಡ್ಜ್ ಅನ್ನು ಎಂದಿಗೂ ಗೋಡೆಗೆ ಅಂಟಿಸಿ ಇಡಬಾರದು. ಗೋಡೆ ಮತ್ತು ಫ್ರಿಡ್ಜ್ ನಡುವೆ ಕನಿಷ್ಠ 6 ಇಂಚುಗಳಷ್ಟು ಜಾಗ ಇರಬೇಕು. ಇದರಿಂದ ಗಾಳಿಯ ಸಂಚಾರ (Air circulation) ಸುಲಲಿತವಾಗಿ ನಡೆದು ಕಂಪ್ರೆಸರ್ ತಂಪಾಗಿರುತ್ತದೆ.

ಫ್ರಿಡ್ಜ್‌ನಲ್ಲಿ ವಸ್ತುಗಳನ್ನು ಕಿಕ್ಕಿರಿದು ತುಂಬಿಸಬಾರದು. ಗಾಳಿ ಆಡಲು ಸ್ವಲ್ಪ ಜಾಗವಿದ್ದಾಗ ಮಾತ್ರ ಕೂಲಿಂಗ್ ಎಲ್ಲಾ ಕಡೆ ಸಮಾನವಾಗಿ ಹರಡುತ್ತದೆ. ಇಲ್ಲದಿದ್ದರೆ ಕೂಲಿಂಗ್ ಕಡಿಮೆಯಾಗಿ ಆಹಾರ ಪದಾರ್ಥಗಳು ಬೇಗನೆ ಹಾಳಾಗುತ್ತವೆ.

ಮಳೆ ಬೀಳುವಾಗ ಅಥವಾ ಗುಡುಗು ಸಹಿತ ಮಿಂಚು ಬರುವಾಗ ವಿದ್ಯುತ್ ಏರಿಳಿತದ (Power fluctuations) ಕಾರಣದಿಂದ ಬೋರ್ಡ್‌ಗಳು ಸುಟ್ಟುಹೋಗುವ ಅಪಾಯವಿರುತ್ತದೆ. ಅಂತಹ ಸಮಯದಲ್ಲಿ ಫ್ರಿಡ್ಜ್ ಸ್ವಿಚ್ ಆಫ್ ಮಾಡಿ ಪ್ಲಗ್ ತೆಗೆಯುವುದು ಅತ್ಯಂತ ಸುರಕ್ಷಿತ.

ಫ್ರೀಜರ್‌ನಲ್ಲಿ ಐಸ್ ಹೆಚ್ಚಾಗಿ ಗಡ್ಡೆ ಕಟ್ಟಿದಾಗ ಚಾಕು ಅಥವಾ ಸ್ಕ್ರೂ ಡ್ರೈವರ್‌ನಿಂದ ಚುಚ್ಚಬಾರದು. ಇದರಿಂದ ಗ್ಯಾಸ್ ಪೈಪ್‌ಗಳು ಲೀಕ್ ಆಗಿ ಫ್ರಿಡ್ಜ್ ಹಾಳಾಗುತ್ತದೆ. ಕೇವಲ ‘ಡಿಫ್ರಾಸ್ಟ್’ (Defrost) ಬಟನ್ ಒತ್ತಿ ಐಸ್ ಕರಗುವವರೆಗೆ ಕಾಯಬೇಕು.

ಉಪ್ಪಿನಕಾಯಿ, ಹುಣಸೆಹಣ್ಣಿನಂತಹ ವಸ್ತುಗಳನ್ನು ಫ್ರಿಡ್ಜ್‌ನಲ್ಲಿ ಇಡುವ ಅಗತ್ಯವಿಲ್ಲ. ಇವುಗಳನ್ನು ಇಡುವುದರಿಂದ ಫ್ರಿಡ್ಜ್‌ನಲ್ಲಿ ಕೆಟ್ಟ ವಾಸನೆ ಬರುವುದು ಮಾತ್ರವಲ್ಲದೆ, ಅನಗತ್ಯವಾಗಿ ಜಾಗವೂ ವ್ಯರ್ಥವಾಗುತ್ತದೆ.

ಈ ಸರಳ ಕ್ರಮಗಳನ್ನು ಪಾಲಿಸುವ ಮೂಲಕ ಬೇಸಿಗೆಯಲ್ಲಿ ನಿಮ್ಮ ಫ್ರಿಡ್ಜ್ ಅನ್ನು ಸುರಕ್ಷಿತವಾಗಿರಿಸಿಕೊಳ್ಳಿ ಮತ್ತು ವಿದ್ಯುತ್ ಬಿಲ್ ಅನ್ನು ಕೂಡ ಉಳಿಸಿ.

WhatsApp Group Join Now

Spread the love

Leave a Reply