ಗೊತ್ತಾಗದಂತೆ ಅಟ್ಯಾಕ್‌ ಮಾಡುವ ‘ಸೈಲೆಂಟ್‌ ಕಿಲ್ಲರ್‌ʼ ಕಾಯಿಲೆಗಳಿವು.. ತಡವಾದ್ರೆ ಜೀವಕ್ಕೆ ಡೇಂಜರ್!!

Spread the love

ಸೈಲೆಂಟ್ ರೋಗಗಳು ಎಂದರೆ ಆರಂಭದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೆ ದೇಹದಲ್ಲಿ ನಿಧಾನವಾಗಿ ಬೆಳೆಯುವ ಗಂಭೀರ ಕಾಯಿಲೆಗಳು. ಹೈ ಬ್ಲಡ್ ಪ್ರೆಶರ್, ಮಧುಮೇಹ, ಹೃದಯ ಹಾಗೂ ಕಿಡ್ನಿ ಸಂಬಂಧಿತ ಸಮಸ್ಯೆಗಳು ಇವುಗಳಲ್ಲಿ ಪ್ರಮುಖವಾಗಿವೆ.

ಇತ್ತೀಚಿನ ಆರೋಗ್ಯ ವರದಿಗಳ ಪ್ರಕಾರ ಹಲವಾರು ಗಂಭೀರ ರೋಗಗಳು ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೇ ನಿಧಾನವಾಗಿ ದೇಹದಲ್ಲಿ ಬೆಳೆಯುತ್ತಿವೆ. ಇವುಗಳನ್ನ “ಸೈಲೆಂಟ್ ಡಿಸೀಸಸ್” (Silent Diseases) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಈ ರೋಗಗಳು ಮೊದಲ ಹಂತದಲ್ಲಿ ಗಮನಕ್ಕೆ ಬಾರದ ಕಾರಣ, ನಂತರದ ಹಂತದಲ್ಲಿ ದೊಡ್ಡ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಸೈಲೆಂಟ್ ಕಿಲ್ಲರ್‌ ಕಾಯಿಲೆಗಳು ಯಾವುವು?

ವೈದ್ಯಕೀಯ ತಜ್ಞರ ಪ್ರಕಾರ, ಕೆಲವು ಮಾರಕ ರೋಗಗಳು ಬಹುತೇಕ ಯಾವುದೇ ರೀತಿಯ ಲಕ್ಷಣವಿಲ್ಲದೇ ಆರಂಭವಾಗುತ್ತವೆ. ಇವುಗಳ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ಈ ರೋಗಗಳು ಯಾವಾಗ? ಯಾರಿಗೆ? ಯಾವ ರೀತಿ ಅಟ್ಯಾಕ್‌ ಮಾಡುತ್ತವೆ ಅನ್ನೋದು ತಿಳಿಯಲ್ಲ. ಹೀಗಾಗಿ ಪ್ರತಿಯೊಬ್ಬರೂ ಈ ಕಾಯಿಲೆಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವೆಂದು ಆರೋಗ್ಯ ತಜ್ಞರ ಸಲಹೆಯಾಗಿದೆ.

* ಹೈ ಬ್ಲಡ್ ಪ್ರೆಶರ್ (ರಕ್ತದೊತ್ತಡ)
* ಡಯಾಬಿಟೀಸ್ (ಮಧುಮೇಹ)
* ಹೃದಯ ಸಂಬಂಧಿತ ಕಾಯಿಲೆಗಳು
* ಕಿಡ್ನಿ ರೋಗಗಳು
* ಕೆಲವು ಕ್ಯಾನ್ಸರ್‌ಗಳು

ಈ ರೋಗಗಳು ದೇಹದಲ್ಲಿ ನಿಧಾನವಾಗಿ ಹಾನಿ ಮಾಡುತ್ತಾ ಹೋಗುತ್ತವೆ. ಆದರೆ ನಿಮ್ಮ ದೇಹದಲ್ಲಿ ಯಾವುದೇ ನೋವು ಅಥವಾ ತೊಂದರೆ ಕಾಣಿಸಿಕೊಳ್ಳುವುದಿಲ್ಲ.

ಏಕೆ ಅಪಾಯಕರ?

ತಜ್ಞರ ಪ್ರಕಾರ, ಲಕ್ಷಣಗಳು ಕಾಣಿಸಿಕೊಳ್ಳುವ ವೇಳೆಗೆ ರೋಗವು ಅದಾಗಲೇ ಗಂಭೀರ ಹಂತವನ್ನ ತಲುಪಿರುತ್ತದೆ. ಉದಾಹರಣೆಗೆ ಹೈ ಬಿಪಿ ಇರುವವರು ದೀರ್ಘಕಾಲ ತಿಳಿಯದೇ ಇರಬಹುದು, ಡಯಾಬಿಟೀಸ್ ಇದ್ದರೂ ಆರಂಭದಲ್ಲಿ ಯಾವುದೇ ಲಕ್ಷಣ ಕಾಣಿಸದಿರಬಹುದು. ಇದರಿಂದ ಹೃದಯಾಘಾತ, ಸ್ಟ್ರೋಕ್ ಅಥವಾ ಕಿಡ್ನಿ ವೈಫಲ್ಯಂತಹ ಅಪಾಯಗಳು ಹೆಚ್ಚಾಗುತ್ತವೆ.

ತಡೆಗಟ್ಟುವ ಮಾರ್ಗವೇನು?

ತಜ್ಞರು ನೀಡಿರುವ ಪ್ರಮುಖ ಸಲಹೆಗಳು

* ನಿಯಮಿತ ಆರೋಗ್ಯ ತಪಾಸಣೆ (Health Checkup)
* ಸಮತೋಲನ ಆಹಾರ ಪದ್ಧತಿ
* ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿ
* ಒತ್ತಡ ನಿಯಂತ್ರಣ

“ಲಕ್ಷಣಗಳಿಲ್ಲ ಎಂದರೆ ನನಗೆ ಯಾವುದೇ ರೋಗವಿಲ್ಲ ಎಂದುಕೊಳ್ಳಬೇಡಿ” ಅಂತಾ ವೈದ್ಯರು ಎಚ್ಚರಿಸುತ್ತಿದ್ದಾರೆ. ಆರೋಗ್ಯದ ಬಗ್ಗೆ ಜಾಗೃತಿಯಿಂದ ಇದ್ದರೆ ಮಾತ್ರ ಸೈಲೆಂಟ್ ಕಿಲ್ಲರ್‌ ರೋಗಗಳಿಂದ ದೂರ ಇರಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರೂ ಸಹ ನಿರ್ಲಕ್ಷ್ಯ ಮಾಡದೆ ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವೆಂದು ಹೇಳಲಾಗಿದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ತಜ್ಞ ಮೂಲಗಳ ಮಾಹಿತಿಯನ್ನ ಆಧರಿಸಿದೆ. ಇದನ್ನ  Kannada News Time ದೃಢಪಡಿಸುವುದಿಲ್ಲ. ಇಲ್ಲಿನ ಸಲಹೆಗಳನ್ನ ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.)

WhatsApp Group Join Now

Spread the love

Leave a Reply