ಯುವಕನ ಕಿಡ್ನಾಪ್‌ ಮಾಡಿ ಮಂಗಳಮುಖಿ ಮಾಡಿದ್ರು: ಮೈಸೂರಿನಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ಕರಾಳ ದಂಧೆ

Spread the love

ಮೈಸೂರಿನಲ್ಲಿ ಮಾನವೀಯತೆಯನ್ನೇ ಮರೆಸುವಂತಹ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬನನ್ನು ಅಪಹರಿಸಿ, ಆತನಿಗೆ ಬಲವಂತವಾಗಿ ಮಂಗಳಮುಖಿಯ ವೇಷ ಹಾಕಿಸಿ ಹಣ ವಸೂಲಿ ದಂಧೆಗೆ ಬಳಸಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ.

ಈ ಕರಾಳ ಜಾಲದ ತಪ್ಪಿಸಿಕೊಂಡು ಬಂದಿರುವ ನೊಂದ ಯುವಕ ಈಗ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.

ನಂಜನಗೂಡಿನ ತ್ಯಾಗರಾಜ ಕಾಲೋನಿ ನಿವಾಸಿಯಾದ ಅನಿಲ್ ಕುಮಾರ್ ಈ ದಂಧೆಗೆ ಬಲಿಯಾದ ಯುವಕ. ಸುಮಾರು ನಾಲ್ಕು ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ, ಮಂಗಳಮುಖಿ ಅನಿತಾ ಮತ್ತು ಆಕೆಯ ತಂಡ ಅನಿಲ್ ಕುಮಾರ್‌ಗೆ ಪರಿಚಯವಾಗಿದೆ. ಈ ವೇಳೆ ಅನಿಲ್‌ನನ್ನು ಬಲವಂತವಾಗಿ ಕಿಡ್ನ್ಯಾಪ್ ಮಾಯುವಕನ ಕಿಡ್ನಾಪ್‌ ಮಾಡಿ ಮಂಗಳಮುಖಿ ಮಾಡಿದ್ರು: ಮೈಸೂರಿನಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ಕರಾಳ ದಂಧೆಡಿದ ತಂಡ, ಮುಸುಕು ಹಾಕಿ ಮಂಗಳೂರಿಗೆ ಕರೆದುಕೊಂಡು ಬರಲಾಗಿತ್ತು.

ಮಂಗಳೂರಿಗೆ ಕರೆದೊಯ್ದ ನಂತರ ಅನಿಲ್ ಕುಮಾರ್‌ಗೆ ಬಲವಂತವಾಗಿ ಸೀರೆ, ನೈಟಿ ತೊಡಿಸಿ, ಕಿವಿಗೆ ಓಲೆ ಮತ್ತು ಮೂಗುಬಟ್ಟು ಹಾಕುವ ಮೂಲಕ ಮಂಗಳಮುಖಿಯಂತೆ ವೇಷ ಧರಿಸುವಂತೆ ಒತ್ತಾಯಿಸಲಾಯಿತು.

ಈ ವೇಷದಲ್ಲಿ ದಿನವಿಡೀ ಬೀದಿಗಳಲ್ಲಿ ಮತ್ತು ಅಂಗಡಿಗಳ ಮುಂದೆ ನಿಂತು ಹಣ ವಸೂಲಿ ಮಾಡುವಂತೆ ಈ ಗ್ಯಾಂಗ್ ಕಿರುಕುಳ ನೀಡುತ್ತಿತ್ತು. ಪ್ರತಿದಿನ 2 ರಿಂದ 3 ಸಾವಿರ ರೂಪಾಯಿ ಕಲೆಕ್ಷನ್ ಮಾಡಿಸಿಕೊಳ್ಳುತ್ತಿದ್ದ ತಂಡ, ಅನಿಲ್‌ನನ್ನು ಬಳಸಿ ರೀಲ್ಸ್‌ ತಯಾರಿಸಿ ಸಾಮಾಜಿಕ ಜಾಲತಾಣಗಳಿಗೂ ಅಪ್‌ಲೋಡ್‌ ಮಾಡುತ್ತಿತ್ತು.

ದಂಧೆಕೋರರ ಅಟ್ಟಹಾಸ ಇಷ್ಟಕ್ಕೇ ನಿಲ್ಲಲಿಲ್ಲ. ಅನಿಲ್ ಕುಮಾರ್‌ನನ್ನು ಮಂಗಳೂರು ಮತ್ತು ಕೇರಳದ ವಿವಿಧ ಭಾಗಗಳಿಗೆ ಕಳುಹಿಸಿ ಬಲವಂತವಾಗಿ ಸೆಕ್ಸ್ ವರ್ಕ್‌ಗೆ ಬಳಸಿಕೊಳ್ಳಲಾಗಿತ್ತು. ಇಷ್ಟೇ ಅಲ್ಲದೆ, ಆತನ ಆಧಾರ್ ಕಾರ್ಡ್‌ನಲ್ಲಿ ‘ಲಿಂಗತ್ವ ಅಲ್ಪಸಂಖ್ಯಾತ’ ಎಂದು ನಮೂದಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಅಧಿಕೃತ ಪ್ರಮಾಣಪತ್ರವನ್ನೂ ಕೊಡಿಸಲಾಗಿತ್ತು.

ಅಷ್ಟೇ ಅಲ್ಲದೆ, ಅನಿಲ್‌ನನ್ನು ಮುಂಬೈಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮೂಲಕ ಶಾಶ್ವತವಾಗಿ ಮಂಗಳಮುಖಿಯನ್ನಾಗಿ ಪರಿವರ್ತಿಸಲು ಈ ತಂಡ ಸಂಚು ರೂಪಿಸಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಮಂಗಳಮುಖಿಯರ ಗ್ಯಾಂಗ್ ನಿಂದ ತಪ್ಪಿಸಿಕೊಂಡು ಬಂದ ಯುವಕ, ತಾನು ದುಡಿದ ಹಣದ ಪೈಕಿ 3 ಲಕ್ಷ ರೂಪಾಯಿ ವಾಪಸ್ ಕೇಳಿದಾಗ ಅನಿತಾ ತಂಡ ಉಲ್ಟಾ ಹೊಡೆದಿದೆ. ಅಷ್ಟೇ ಅಲ್ಲದೆ, ಮನೆಯಿಂದ 5 ಲಕ್ಷ ನಗದು ಮತ್ತು ಚಿನ್ನಾಭರಣ ಕಳ್ಳತನ ಮಾಡಿರುವ ಸುಳ್ಳು ದೂರು ನೀಡಿ ಜೈಲಿಗೆ ಹಾಕಿಸುವುದಾಗಿ ಬೆದರಿಕೆ ಹಾಕಲಾಗಿದೆ.

ಪ್ರಾಣಭಯದಿಂದ ಅಲ್ಲಿಂದ ತಪ್ಪಿಸಿಕೊಂಡು ನಂಜನಗೂಡು ಸೇರಿದರೆ, ಅಲ್ಲಿಗೂ ತನ್ನ ತಂಡವನ್ನು ಕಳುಹಿಸಿ ಗಲಾಟೆ ಮಾಡಿಸಿರುವುದಾಗಿ ಸಂತ್ರಸ್ತ ಅನಿಲ್ ದೂರಿದ್ದಾರೆ. ಸದ್ಯ ಲಷ್ಕರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

WhatsApp Group Join Now

Spread the love

Leave a Reply