ಪ್ರಧಾನಿ ಮೋದಿಗೆ ಸ್ವಲ್ಪನೂ ಸಾಮಾನ್ಯ ಪ್ರಜ್ಞೆ ಎಂಬುದಿಲ್ಲ, ಕೇಸರಿ ತಿಲಕ ಯಾವ ದೇಶದಿಂದ ಬರುತ್ತೆ ಗೊತ್ತಾ: ಪ್ರಿಯಾಂಕ್ ಖರ್ಗೆ

Spread the love

ನಾವು ತಿಲಕಕ್ಕೆ ಹಾಕುವ ಕೇಸರಿ ತಯಾರಾಗುವುದು ಕೇಸರಿಯಿಂದ ಶೇಕಡಾ 90ರಷ್ಟು ಕೇಸರಿ ಬರುವುದು ಮುಸ್ಲಿಂ ರಾಷ್ಟ್ರಗಳಿಂದ ಕೇವಲ 5ಶೇಕಡಾ ಕಾಶ್ಮೀರದಲ್ಲಿ ಬೆಳೆಯುತ್ತಾರೆ, ಶೇಕಡಾ 90ಕ್ಕೂ ಹೆಚ್ಚು ಕೇಸರಿ ಬರುವುದು ಇರಾಕ್, ಆಫ್ಘಾನಿಸ್ತಾನದಿಂದ. ಪ್ರಾಯೋಗಿಕವಾಗಿ ಯೋಚನೆ ಮಾಡಬೇಕು ಎಂದರು,

ಅಲ್ಪಸಂಖ್ಯಾತರ ಬಗ್ಗೆ ಅಸಮಾಧಾನ, ಬೇಸರವಿದ್ದರೆ, ದೇಶಪ್ರೇಮದ ಬಗ್ಗೆ ಮಾತನಾಡುವ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಇಸ್ಲಾಮಿಕ್ ದೇಶಗಳ ಜೊತೆ ವ್ಯಾಪಾರ ಸಂಪರ್ಕ, ಸಂಬಂಧ ಬಿಟ್ಟುಬಿಡಲಿ, ಈ ದೇಶದ ಅಲ್ಪಸಂಖ್ಯಾತರು, ಆದಿವಾಸಿಗಳು, ದಲಿತರು ನಮ್ಮ ನಾಗರಿಕರು ಅಲ್ಲ ಎಂದು ಹೇಳಲಿ ನೋಡೋಣ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ನಿನ್ನೆ ಮಾತನಾಡಿದ ಅವರು, ಇಸ್ಲಾಮಿಕ್ ದೇಶಗಳಿಗೆ ಹೋಗಿ ಯುಎಇ ರಾಜನನ್ನು, ಸೌದಿ ಅರೇಬಿಯಾ ದೊರೆಯನ್ನು ತಬ್ಬಿಕೊಳ್ಳುತ್ತಾರೆ, ಮೈ ಫ್ರೆಂಡ್, ಮೈ ಬ್ರದರ್ ಎಂದು ಟ್ವೀಟ್ ಮಾಡುತ್ತಾರೆ. ಅವರಿಂದ ವ್ಯಾಪಾರ, ಪೆಟ್ರೋಲಿಯಂ ಉತ್ಪನ್ನಗಳು, ಕಚ್ಚಾ ತೈಲ ಎಲ್ಲವೂ ಬೇಕು, ಅವರಿಂದ ಯೂರಿಯಾ ಬೇಕು, ಮೋದಿಯವರಿಗೆ ಸಾಮಾನ್ಯ ಪ್ರಜ್ಞೆ ಎಂಬುದಿಲ್ಲ, ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಾರೆ, ಎಲ್ ಪಿಜಿ ಗ್ಯಾಸ್, ಇಂಧನ, ಕಚ್ಚಾತೈಲ ಶೇಕಡಾ 78ರಷ್ಟು ಎಲ್ಲಿಂದ ಬರುತ್ತಿದೆ ಎಂದು ಈಗ ಯುದ್ಧ ಆರಂಭವಾದ ನಂತರ ಜನರಿಗೆ ಅರ್ಥವಾಗಿರಬಹುದು ಎಂದರು.

ಕೇಸರಿ ಎಲ್ಲಿಂದ ಬರುತ್ತದೆ?

ನಾವು ತಿಲಕಕ್ಕೆ ಹಾಕುವ ಕೇಸರಿ ತಯಾರಾಗುವುದು ಕೇಸರಿಯಿಂದ ಶೇಕಡಾ 90ರಷ್ಟು ಕೇಸರಿ ಬರುವುದು ಮುಸ್ಲಿಂ ರಾಷ್ಟ್ರಗಳಿಂದ ಕೇವಲ 5ಶೇಕಡಾ ಕಾಶ್ಮೀರದಲ್ಲಿ ಬೆಳೆಯುತ್ತಾರೆ, ಶೇಕಡಾ 90ಕ್ಕೂ ಹೆಚ್ಚು ಕೇಸರಿ ಬರುವುದು ಇರಾಕ್, ಆಫ್ಘಾನಿಸ್ತಾನದಿಂದ. ಪ್ರಾಯೋಗಿಕವಾಗಿ ಯೋಚನೆ ಮಾಡಬೇಕು ಎಂದರು,

ಅಮಿತ್ ಶಾ ಅವರ ಮಗ ಜಯ್ ಶಾ ಕೊರೊನಾ ಸಂದರ್ಭದಲ್ಲಿ ಐಪಿಎಲ್ ಆಡಿಸಿದ್ದು ದುಬೈಯಲ್ಲಿ, ಆಗ ಅವರ ದೇಶಪ್ರೇಮ ಎಲ್ಲಿ ಹೋಗಿತ್ತು, ದ್ವಂದ್ವ ನೀತಿ, ಎರಡು ಮಾತುಗಳಿಂದ ಬಿಜೆಪಿ ನಾಯಕರಿಗೇ ಸಮರ್ಥನೆ ಮಾಡಿಕೊಳ್ಳಲು ಆಗುತ್ತಿಲ್ಲ ಎಂದರು,

ಬಿಜೆಪಿಯವರಿಗೆ ತರ್ಕಬದ್ಧ ನಿಲುವು ಎಂಬುದಿಲ್ಲ, ಕೇವಲ ವಾಟ್ಸಾಪ್ ಯೂನಿವರ್ಸಿಟಿ ಅಲ್ಲಿಂದಿಲ್ಲಿಂದ ಸಿಕ್ಕಿದ ಮಾಹಿತಿಗಳನ್ನು ತೆಗೆದುಕೊಂಡು ಬಾಯಿಪಾಠ ಮಾಡಿ ಮಾಧ್ಯಮಗಳ ಮುಂದೆ ಹೇಳುತ್ತಾರೆ.

WhatsApp Group Join Now

Spread the love

Leave a Reply