‘ವಿದ್ಯುತ್ ಬಿಲ್’ನಲ್ಲಿ ಹೆಸರು ಬದಲಾವಣೆ ಬಹಳ ಸುಲಭ ; ಮೊಬೈಲ್’ನಲ್ಲೇ ಜಸ್ಟ್ ಹೀಗೆ ಮಾಡಿ.!

Spread the love

ವಿದ್ಯುತ್ ಬಿಲ್ ನಮಗೆ ವಿಳಾಸದ ಪುರಾವೆಯಾಗಿ (Address Proof) ಬಹಳ ಮುಖ್ಯವಾಗಿದೆ. ಆಧಾರ್, ಪಾನ್ ಅಥವಾ ಚಾಲನಾ ಪರವಾನಗಿಯನ್ನು ಪಡೆಯಲು ವಿದ್ಯುತ್ ಬಿಲ್ ಸಹಕಾರಿಯಾಗುತ್ತದೆ. ನೀವು ಹೊಸ ಫ್ಲಾಟ್ ಖರೀದಿಸಿದ್ದರೆ ಅಥವಾ ನಿಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಬಿಲ್ ಅನ್ನು ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಲು ಈಗ ಕಚೇರಿಗೆ ಅಲೆಯುವ ಅಗತ್ಯವಿಲ್ಲ.

ಹಳೆಯ ಕನೆಕ್ಷನ್ ರದ್ದುಪಡಿಸಿ ಹೊಸದು ಪಡೆಯುವ ಬದಲು, ಆನ್‌ಲೈನ್ ಮೂಲಕವೇ ಹೆಸರು ಬದಲಾಯಿಸಿಕೊಳ್ಳಬಹುದು.

ಹೌದು. ವಿದ್ಯುತ್ ಬಿಲ್‌ನಲ್ಲಿ (Power Bill) ಹೆಸರು ಬದಲಾವಣೆ ಮಾಡುವುದು ಎಂದರೆ ಈ ಹಿಂದೆ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕು ಎಂಬ ಆತಂಕವಿತ್ತು. ಆದರೆ ಈಗ ಆ ಚಿಂತೆ ದೂರವಾಗಿದೆ. ನೀವು ಹೊಸ ಮನೆ ಖರೀದಿಸಿರಲಿ ಅಥವಾ ವಾರಸುದಾರರ ಹೆಸರಿಗೆ ವಿದ್ಯುತ್ ಸಂಪರ್ಕವನ್ನು ವರ್ಗಾಯಿಸಬೇಕಿರಲಿ, ಕೇವಲ ಕೆಲವೇ ನಿಮಿಷಗಳಲ್ಲಿ ನಿಮ್ಮ ಮೊಬೈಲ್ ಮೂಲಕವೇ ಆನ್‌ಲೈನ್‌ನಲ್ಲಿ ಹೆಸರು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ದಾಖಲೆಗಳನ್ನು ಅಪ್‌ಲೋಡ್ ಮಾಡುವ ಸರಳ ವಿಧಾನ ಮತ್ತು ಪಾಲಿಸಬೇಕಾದ ಹಂತಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಗತ್ಯವಿರುವ ದಾಖಲೆಗಳು:

ಫ್ಲಾಟ್ ಖರೀದಿಸಿದ್ದರೆ: ನೋಂದಾಯಿತ ಸೇಲ್ ಡೀಡ್ (Sale Deed) ಅಥವಾ ಗಿಫ್ಟ್ ಡೀಡ್ ಬೇಕು.

ಗುರುತಿನ ಚೀಟಿ: ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್.

ಇಂಡೆಮ್ನಿಟಿ ಬಾಂಡ್: ₹100 ರ ನ್ಯಾಯಾಂಗೇತರ (Non-Judicial) ಸ್ಟಾಂಪ್ ಪೇಪರ್ ಮೇಲೆ ಇಂಡೆಮ್ನಿಟಿ ಬಾಂಡ್ ಸಲ್ಲಿಸಬೇಕು. ಇದರ ಫಾರ್ಮ್ಯಾಟ್ ವಿದ್ಯುತ್ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ಎನ್‌ಒಸಿ (NOC): ಪತಿ ಅಥವಾ ಪತ್ನಿಯ ಹೆಸರಿಗೆ ಬದಲಾಯಿಸಬೇಕಿದ್ದರೆ, ₹10 ರ ಸ್ಟಾಂಪ್ ಪೇಪರ್ ಮೇಲೆ ‘ನಿರಕ್ಷೇಪಣಾ ಪತ್ರ’ (NOC) ನೀಡಬೇಕು.

ಮರಣ ಪ್ರಮಾಣ ಪತ್ರ: ಮೂಲ ಮಾಲೀಕರು ಮರಣ ಹೊಂದಿದ್ದರೆ, ವಾರಸುದಾರರು ಮರಣ ಪ್ರಮಾಣ ಪತ್ರವನ್ನು ಸಲ್ಲಿಸಿ ಹೆಸರು ಬದಲಾಯಿಸಬಹುದು.

ದಾಖಲೆಗಳ ಗಾತ್ರ ಹೀಗಿರಲಿ:

ಇಂಡೆಮ್ನಿಟಿ ಬಾಂಡ್: PDF ರೂಪದಲ್ಲಿ 500KB ಒಳಗೆ.

ಸೇಲ್ ಡೀಡ್: PDF ರೂಪದಲ್ಲಿ 5MB ಒಳಗೆ.

ಗುರುತಿನ ಚೀಟಿ: JPG/JPEG ರೂಪದಲ್ಲಿ 100KB ಒಳಗೆ.

ಅರ್ಜಿ ಸಲ್ಲಿಸುವುದು ಹೇಗೆ? (ಹಂತ-ಹಂತದ ಮಾಹಿತಿ):

ವೆಬ್‌ಸೈಟ್‌ಗೆ ಭೇಟಿ ನೀಡಿ: ನಿಮ್ಮ ವ್ಯಾಪ್ತಿಯ ವಿದ್ಯುತ್ ಸರಬರಾಜು ಕಂಪನಿಯ (ಉದಾಹರಣೆಗೆ BESCOM/HESCOM/TGSPDCL) ಅಧಿಕೃತ ವೆಬ್‌ಸೈಟ್ ಓಪನ್ ಮಾಡಿ.

ಸರ್ವೀಸ್ ಸೆಲೆಕ್ಟ್ ಮಾಡಿ: ಹೋಮ್ ಪೇಜ್‌ನಲ್ಲಿರುವ ‘Consumer Services’ ಆಯ್ಕೆಯನ್ನು ಆರಿಸಿ.

ರಿಕ್ವೆಸ್ಟ್ ನೀಡಿ: ಅಲ್ಲಿ ‘Service Request’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

ವಿವರ ನಮೂದಿಸಿ: ನಿಮ್ಮ ವಿದ್ಯುತ್ ಬಿಲ್‌ನಲ್ಲಿರುವ ‘Unique Service Number’ ಮತ್ತು ಮೊಬೈಲ್ ಸಂಖ್ಯೆಯನ್ನು ದಾಖಲಿಸಿ.

OTP ಪರಿಶೀಲನೆ: ಮೊಬೈಲ್‌ಗೆ ಬರುವ OTP ಯನ್ನು ನಮೂದಿಸಿ ಲಾಗಿನ್ ಆಗಿ.

ಟೈಟಲ್ ಟ್ರಾನ್ಸ್‌ಫರ್: ಈಗ ‘Title Transfer’ (ಹೆಸರು ಬದಲಾವಣೆ) ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ದಾಖಲೆ ಅಪ್‌ಲೋಡ್: ಕೇಳಲಾದ ಎಲ್ಲಾ ದಾಖಲೆಗಳನ್ನು ಸರಿಯಾದ ಗಾತ್ರದಲ್ಲಿ ಅಪ್‌ಲೋಡ್ ಮಾಡಿ.

ಶುಲ್ಕ ಪಾವತಿ: ಹೆಸರು ಬದಲಾವಣೆಗಾಗಿ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು (ಸುಮಾರು ₹25) ಆನ್‌ಲೈನ್ ಮೂಲಕ ಪಾವತಿಸಿ.

WhatsApp Group Join Now

Spread the love

Leave a Reply