ಯಾದಗಿರಿಯ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಶಹಾಪುರ ಜೆಎಂಸಿ ನ್ಯಾಯಾಲಯದಲ್ಲಿ ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ನ್ಯಾಯಾಧೀಶರ ಎದುರು ದಾಖಲಿಸಲಾಗಿದೆ.
ಕಾನೂನು ಪ್ರಕಾರ, ಬಾಲಕಿಯ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಗೆ ನೀಡಲಾಗುತ್ತದೆ. ಈ ಹೇಳಿಕೆ ಪ್ರಕರಣದ ಮುಂದಿನ ತನಿಖೆಯಲ್ಲಿ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ. ಆದ್ದರಿಂದ ಮುತ್ಯಾ ಅವರ ಮುಂದಿನ ಕಾನೂನು ಹೋರಾಟದಲ್ಲಿ ಈ ಹೇಳಿಕೆ ನಿರ್ಣಾಯಕವಾಗುವ ಸಾಧ್ಯತೆ ಇದೆ.
ಇದೀಗ ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನೊಂದೆಡೆ ಮುತ್ಯಾ ಅವರ ಭಕ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಕರಣವನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕೆಲವು ಕಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರ ನಡುವೆಯೇ, ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಹಾಗೂ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸುವಂತೆ ಮುತ್ಯಾ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿಯ ವಿಚಾರಣೆ ಮುಂದಿನ ದಿನಗಳಲ್ಲಿ ನಡೆಯಲಿದೆ.
ಆರೋಪ ತಳ್ಳಿ ಹಾಕಿದ್ದ ಮುತ್ಯಾ..
ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ್ದ ಆರೋಪಿ ಮುತ್ಯಾ, ಮೊದಲಿಗೆ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವುದು ತಪ್ಪು.. ಆ ಬಾಲಕಿ ನನ್ನ ಮಗಳು ಇದ್ದ ಹಾಗೆ, ಒಬ್ಬ ತಂದೆ ಮಗಳ ಜೊತೆ ಹೇಗೆ ಇರ್ತಾರೋ ಅದೇ ರೀತಿ ನಾನು ನಡೆದುಕೊಂಡಿದ್ದೇನೆ ಅಷ್ಟೇ. ಯಾಕೆ ತಂದೆ ಮಗಳನ್ನ ಪ್ರೀತಿ ಮಾಡಲ್ವಾ? ತಂದೆ ಮಗಳನ್ನ ಪ್ರೀತಿ ಮಾಡೋದೇ ತಪ್ಪಾ. ಎಂದು ಪ್ರಶ್ನಿಸಿದ್ದರು.
ಈ ಘಟನೆಯಲ್ಲಿ ಯಾರ ಪಾತ್ರವಿದೆ ಎಂಬುದೇ ಮುಖ್ಯ ವಿಚಾರವಲ್ಲ. ಅಪ್ರಾಪ್ತ ಬಾಲಕಿಯನ್ನು ಈ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದು ಗಂಭೀರ ಮತ್ತು ಅಸ್ವೀಕಾರಾರ್ಹ. ಸರ್ಕಾರ ಯಾವ ಕ್ರಮ ಕೈಗೊಂಡರೂ ಅದನ್ನು ನಾನು ಸ್ವೀಕರಿಸಲು ಸಿದ್ಧನಿದ್ದೇನೆ ಎಂದು ಮಲ್ಲಿಕಾರ್ಜುನ ಮುತ್ಯಾ ತಿಳಿಸಿದ್ದರು.
ಪೊಲೀಸರು ತನಿಖೆಗಾಗಿ ಕರೆಯುವ ಸಂದರ್ಭದಲ್ಲಿ ಹಾಜರಾಗುತ್ತೇನೆ ಮತ್ತು ಸಂಪೂರ್ಣ ಸಹಕಾರ ನೀಡುತ್ತೇನೆ. ಇದು ನಮ್ಮ ಸಮೂಹ ಹೋರಾಟವಾಗಿದ್ದು, ಕಾನೂನು ಪ್ರಕ್ರಿಯೆಯ ಮೂಲಕ ನ್ಯಾಯ ಸಾಧನೆಯಾಗಲಿದೆ ಎಂಬ ವಿಶ್ವಾಸವಿದೆ. ಅಷ್ಟೇ ಅಲ್ಲದೆ, ಈ ವೀಡಿಯೋದಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತದೆ, ಮಠದ ಭಕ್ತರು ಇದಕ್ಕೆ ತಲೆ ಕೆಡಿಕೊಳ್ಳಬೇಡಿ ಎಂದು ಮಲ್ಲಿಕಾರ್ಜುನ ಮುತ್ಯಾ ಹೇಳಿದ್ದರು.
ಅಪ್ರಾಪ್ತ ಬಾಲಕಿಯ ಹೇಳಿಕೆ ದಾಖಲು – ಮುತ್ಯಾ ಕೈಗೆ ಬೀಳುತ್ತಾ ಬೇಡಿ.? ಆರೋಪ ತಳ್ಳಿ ಹಾಕಿದ್ದ ಮುತ್ಯಾ..
WhatsApp Group
Join Now