ರಾಜ್ಯ, ದೇಶ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಪ್ರಮುಖ ಘಟನೆಗಳು ನಡೆದರೂ, ಅದಕ್ಕೆ ಹಾಸನದ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದ ಭವಿಷ್ಯವನ್ನು ತಾಳೆ ಹಾಕುವುದು ಈಗಿನ ಸಂಪ್ರದಾಯವಾಗಿ ಬಿಟ್ಟಿದೆ.
ಈಗ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಬೆಳವಣಿಗೆಗಳು ಶ್ರೀಗಳ ಭವಿಷ್ಯವಾಣಿಯನ್ನು ಮತ್ತೆ ಮುನ್ನೆಲೆಗೆ ತಂದಿವೆ.
ಜಾಗತಿಕ ನಾಯಕನ ದುರ್ಮರಣ: ಶ್ರೀಗಳ ಭವಿಷ್ಯವಾಣಿ
ಕೆಲವು ದಿನಗಳ ಹಿಂದೆ ಬೆಳಗಾವಿಯ ಭಕ್ತರ ಮನೆಯೊಂದರಲ್ಲಿ ಮಾತನಾಡಿದ್ದ ಕೋಡಿಶ್ರೀಗಳು, “ದೇಶ ದೇಶಗಳ ನಡುವೆ ಜಿದ್ದು ಹೆಚ್ಚಾಗಲಿದೆ, ರಾಜಕೀಯ ಅರಾಜಕತೆ ಸೃಷ್ಟಿಯಾಗಲಿದೆ ಹಾಗೂ ಜಾಗತಿಕ ಮಟ್ಟದ ಪ್ರಭಾವಿ ನಾಯಕನೊಬ್ಬನ ದುರ್ಮರಣ ಸಂಭವಿಸಲಿದೆ” ಎಂದು ಮಾರ್ಮಿಕವಾಗಿ ನುಡಿದಿದ್ದರು.
ಇದೀಗ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತರಾಗಿರುವುದು ಜಗತ್ತನ್ನೇ ಬೆಚ್ಚಿಬೀಳಿಸಿದೆ. ಇರಾನ್ ಸರ್ಕಾರಿ ಮಾಧ್ಯಮಗಳೇ ಈ ಸುದ್ದಿಯನ್ನು ಖಚಿತಪಡಿಸಿರುವ ಬೆನ್ನಲ್ಲೇ, ಕೋಡಿಶ್ರೀಗಳು ಅಂದೇ ಈ ಬಗ್ಗೆ ಸುಳಿವು ನೀಡಿದ್ದರೇ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.
ವಿಶ್ವಕ್ಕೆ ಯುದ್ದದ ಭೀತಿ : ಜಾಗತಿಕ ನಾಯಕನ ದುರ್ಮರಣ : ನಿಜವಾಯ್ತು ಕೋಡಿಶ್ರೀಗಳ ಭವಿಷ್ಯವಾಣಿ.!
WhatsApp Group
Join Now