ಲಿವರ್ ಕ್ಯಾನ್ಸರ್ 4ನೇ ಹಂತದಲ್ಲಿದ್ದರೆ ದೇಹದಲ್ಲಿ ಯಾವೆಲ್ಲಾ ಲಕ್ಷಣಗಳು ಕಾಣಿಸುತ್ತವೆ.?

Spread the love


ಟೀಮ್  ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ಲಿವರ್ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದಿದ್ದಾರೆ. ರಿಂಕು ತಂದೆ ಖಾನ್‌ಚಂದ್ ಸಿಂಗ್ ನಾಲ್ಕನೇ ಸ್ಟೇಜ್ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅಷ್ಟಕ್ಕೂ ನಾಲ್ಕನೇ ಸ್ಟೇಜ್ ಲಿವರ್ ಕ್ಯಾನ್ಸರ್ ಲಕ್ಷಣಗಳೇನು ಎನ್ನುವುದನ್ನು ನೋಡೋಣ ಬನ್ನಿ.

ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಅವರ ತಂದೆ ಖಾನ್‌ಚಂದ್ ಸಿಂಗ್ ಅವರು ಗ್ರೇಟರ್ ನೋಯ್ಡಾದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.

ಈ ಹಂತದಲ್ಲಿ ಕ್ಯಾನ್ಸರ್ ಕೋಶಗಳು ಲಿವರ್‌ನಿಂದ ದೇಹದ ಇತರ ಭಾಗಗಳಿಗೆ ಹರಡಿರುತ್ತವೆ. ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ, ಚಿಕಿತ್ಸೆಗಳು ರೋಗದ ಹರಡುವಿಕೆಯನ್ನು ನಿಧಾನಗೊಳಿಸಲು ಮತ್ತು ರೋಗಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್ ಅಂದರೆ, ಕ್ಯಾನ್ಸರ್ ಲಿವರ್‌ನಿಂದ ಶ್ವಾಸಕೋಶ, ಮೂಳೆಗಳು ಮತ್ತು ಹತ್ತಿರದ ದುಗ್ಧರಸ ಗ್ರಂಥಿಗಳಂತಹ ಇತರ ಅಂಗಗಳಿಗೆ ಹರಡಿರುತ್ತದೆ.

ಇದು ಸಾಮಾನ್ಯವಾಗಿ ಚಿಕಿತ್ಸೆ ನೀಡಲು ಕಷ್ಟಕರವಾದ ಮತ್ತು ಅಪಾಯಕಾರಿ ಹಂತವಾಗಿದೆ. ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್ ಅನ್ನು ‘ಮೆಟಾಸ್ಟಾಟಿಕ್ ಲಿವರ್ ಕ್ಯಾನ್ಸರ್’ ಎಂದೂ ಕರೆಯುತ್ತಾರೆ. ಇದು ಲಿವರ್‌ನಿಂದ ಶ್ವಾಸಕೋಶ, ಮೂಳೆಗಳು ಅಥವಾ ಹತ್ತಿರದ ದುಗ್ಧರಸ ಗ್ರಂಥಿಗಳಿಗೆ ವೇಗವಾಗಿ ಹರಡುತ್ತದೆ.

ಕಾಮಾಲೆ, ಕಾರಣವಿಲ್ಲದೆ ತೂಕ ಇಳಿಕೆ, ಹಸಿವಾಗದಿರುವುದು, ಆಯಾಸ, ಹೊಟ್ಟೆ ನೋವು, ಮೂಳೆ ನೋವು ಮತ್ತು ಉಸಿರಾಟದ ತೊಂದರೆ ಇವೆಲ್ಲವೂ ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್‌ನ ಲಕ್ಷಣಗಳಾಗಿವೆ. ನಿರಂತರ ಆರೈಕೆಯು ಜೀವನದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಈ ಹಂತದಲ್ಲಿ ಚಿಕಿತ್ಸೆಯು ರೋಗಲಕ್ಷಣಗಳನ್ನು ನಿಯಂತ್ರಿಸುವುದು, ಜೀವನದ ಗುಣಮಟ್ಟವನ್ನು ಸುಧಾರಿಸುವುದು ಮತ್ತು ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದಕ್ಕಾಗಿ ಇಮ್ಯುನೊಥೆರಪಿ, ಟಾರ್ಗೆಟೆಡ್ ಥೆರಪಿ ಅಥವಾ ಕೀಮೋಥೆರಪಿಯನ್ನು ಬಳಸಲಾಗುತ್ತದೆ.

WhatsApp Group Join Now

Spread the love

Leave a Reply