ಹಲ್ಲು ನೋವೆಂದು ಆಸ್ಪತ್ರೆಗೆ ಹೋದಾಗ ವೈದ್ಯರ ಎಡವಟ್ಟು: ಚಿಕಿತ್ಸೆ ವೇಳೆ ಇಂಜಕ್ಷನ್ ಕೊಡುತ್ತಿದ್ದಂತೆ ಕೋಮಾಗೆ ಜಾರಿದ ಮಹಿಳೆ

Spread the love

ಹಲ್ಲು ನೋವೆಂದು ಆಸ್ಪತ್ರೆಗೆ ಬಂದ ಮಹಿಳೆಗೆ ಚಿಕಿತ್ಸೆ ವೇಳೆ ನೀಡಿದ ಅನಸ್ತೇಶಿಯಾದಿಂದ ಕೋಮಾಗೆ ಜಾರಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಖಾಜಾ ಕಾಲೋನಿಯ ನಿವಾಸಿ ನಾಜಿಯಾ ಬೇಗಂ, ದವಡೆ ಹಲ್ಲಿನ ನೋವೆಂದು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಹೋಗಿದ್ದರು.

ಈ ವೇಳೆ ವೈದ್ಯರು ನಾಜಿಯಾ ಬೇಗಂ ಅವರಿಗೆ ಹಲ್ಲು ಕೀಳಲು ಅನಸ್ತೇಶಿಯಾ ಇಂಜಕ್ಷನ್ ಕೊಟ್ಟಿದ್ದಾರೆ. ಅನಸ್ತೇಶಿಯಾ ಕೊಟ್ಟ ಬಳಿಕ ಕೋಮಾಗೆ ಜಾರಿದ ಮಹಿಳೆ ಕಳೆದ ಒಂದುವರೆ ತಿಂಗಳಿಂದ ಕೋಮಾಸ್ಥಿತಿಯಲ್ಲಿಯೇ ಇದ್ದಾರೆ.

ಕೆಲ ವರ್ಷಗಳ ಹಿಂದೆ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡಿದ್ದ ನಾಜಿಯಾ ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು. ಜನವರಿ 1ರಂದು ಹಲ್ಲು ನೋವೆಂದು ಕಲಬುರಗಿ ಖಾಸಗಿ ಆಸ್ಪತ್ರೆಗೆ ಹೋದಾಗ ಹಲ್ಲು ಕೀಳಲು ವೈದ್ಯರು ಕೊಟ್ಟ ಅನಸ್ತೇಸಿಯಾ ಡೋಸೆಜ್ ಹೆಚ್ಚಾಗಿ ಕೋಮಾಗೆ ಜಾರಿದ ಮಹಿಳೆ ಇನ್ನೂ ಮೇಲೆಳಲಿಲ್ಲ.

ಅಂದಿನಿಂದ ಇಂದಿನವರೆಗೂ ನಾಜಿಯಾ ಬೇಗಂ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಕೋಮಾ ಸ್ಥಿತಿಯಲ್ಲಿ ಮಲಗಿರುವ ನಾಜಿಯಾಳನ್ನು ಕಂಡು ಮಕ್ಕಳಿಬ್ಬರು ಕಣ್ಣೀರಿಡುತ್ತಿದ್ದಾರೆ.

ನಾಜಿಯಾ ಕೋಮಾಗೆ ಜಾರುತ್ತಿದ್ದಂತೆ ಎಚ್ಚೆತ್ತ ಆಸ್ಪತ್ರೆ ಆಡಳಿತಮಂಡಳಿ ಪರಿಸ್ಥಿತಿ ಗಂಭೀರತೆ ಅರಿತು, ಆಕೆಯ ಕುಟುಂಬದಿಂದ ಹಣ ಪಡೆಯದೇ ಒಂದೂವರೆ ತಿಂಗಳಿಂದ 8 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಚಿಕಿತ್ಸೆ ನೀಡುತ್ತಿದೆ. ಆದಗ್ಯೂ ನಾಜಿಯಾ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ನಾಜಿಯಾಗೆ ಫಿಜಿಯೋಥೆರಪಿ ಅಗತ್ಯವಿದ್ದು, ಆ ಚಿಕಿತ್ಸೆ ನಮ್ಮ ಬಳಿ ಇಲ್ಲ. ಹಾಗಾಗಿ ಆಕೆಯನ್ನು ಬೆಂಗಳೂರು ಅಥವಾ ಹೈದರಾಬಾದ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಆಸ್ಪತ್ರೆಯವರು ಹೇಳುತ್ತಿದ್ದಾರೆ. ವೈದ್ಯರ ಎಡವಟ್ಟಿನಿಂದಾಗಿ ಮಹಿಳೆ ಕೋಮಾ ಸ್ಥಿತಿಗೆ ಜಾರಿದ್ದು. ಬೇರೆ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವಷ್ಟು ಅನುಕೂಲತೆ ಇಲ್ಲ. ನಾಜಿಯಾ ಪುಟ್ಟಮಕ್ಕಳ ಭವಿಷ್ಯದ ಗತಿಯೇನು ಎಂದು ಕುಟುಂಬದವರು ಪರಿತಪಿಸುತ್ತಿದ್ದಾರೆ.

WhatsApp Group Join Now

Spread the love

Leave a Reply