ಈ ಸೊಪ್ಪಿನ ಟೀ ಕುಡಿದು ನೋಡಿ.. ಮರೆವಿನ ಕಾಯಿಲೆಗೆ ಮದ್ದು ಮಾತ್ರವಲ್ಲ, ಪಾದರಸದಂತೆ ಚುರುಕಾಗ್ತೀರಿ!

Spread the love

ಒಂದೆಲಗ ಸೊಪ್ಪು ಅಥವಾ ಎಲೆ ಸಾಕಷ್ಟು ಜನರಿಗೆ ಗೊತ್ತು. ಕೆಲವರು ಇದನ್ನು ಬ್ರಾಹ್ಮೀ ಎಂದೂ ಕರೆಯುತ್ತಾರೆ. ಹಸಿರು ಬಣ್ಣ ಹೊಂದಿರುವ ಈ ಎಲೆ ಛತ್ರಿಯಂತೆ ವೃತ್ತಾಕಾರವಾಗಿದ್ದು ತೊಟ್ಟಿನ ಬಳಿ ಸ್ವಲ್ಪ ಕಟ್ ಮಾಡಿದಂತೆ ಇರುತ್ತದೆ. ಈ ಎಲೆಗೆ ವಿಭಿನ್ನ ಅರೋಮಾ (ಸುವಾಸನೆ) ಇದ್ದು ಇದನ್ನು ಹಲವು ವಿಧದಲ್ಲಿ ಬಳಸುತ್ತಾರೆ.

ಚಟ್ನಿ, ಸಾಂಬಾರ್, ರಸಂ ಸೇರಿದಂತೆ ಹಲವರು ಇದನ್ನು ಹೆಚ್ಚಾಗಿ ಅಡುಗೆಗೆ ಬಳಸುತ್ತಾರೆ. ಆ ಮೂಲಕ ಇದು ಹೊಟ್ಟೆಗೆ ಸೇರುವಂತೆ ನೋಡಿಕೊಳ್ಳುತ್ತಾರೆ. ಆದರೆ, ಇದನ್ನು ಟೀ ಆಗಿಯೂ ಉಪಯೋಗಿಸಬಹುದು ಎಂಬುದು ಹಲವರಿಗೆ ಗೊತ್ತಿಲ್ಲ. ಕೆಲವರು ಇದಕ್ಕೆ ‘ಹರ್ಬಲ್ ಕಷಾಯ’ ಎಂದೂ ಹೇಳುತ್ತಾರೆ.

ಒಂದೆಲಗದ ಟೀ ಮಾಡುವುದು ಹೇಗೆ?

ಎಷ್ಟು ಜನರಿಗೆ ಟೀ ಮಾಡುತ್ತಿದ್ದೀರಿ ಎಂಬ ಅಗತ್ಯಕ್ಕೆ ತಕ್ಕಂತೆ ಒಂದೆಲಗದ ಎಲೆಗಳನ್ನು ಒಂದು ಅಥವಾ ಎರಡು ಮುಷ್ಟಿ ತೆಗೆದುಕೊಳ್ಳಿ.. ಅದನ್ನು ಕ್ಲೀನಾಗಿ ತೊಳೆದುಕೊಳ್ಳಿ.. ಎಲೆಯ ಜೊತೆ ದಂಟು (ಕಾಂಡ) ಕೂಡ ಬಳಸಬಹುದು. ಅದನ್ನು ಪೂರ್ತಿ ಎಲೆಗಳ ಸಮೇತ ಅಥವಾ ಕೈನಲ್ಲೇ ಚೂರುಚೂರು ಮಾಡಿ ಕೂಡ ಕುದಿಯುತ್ತಿರುವ ನೀರಿಗೆ ಹಾಕಿ. ಜೊತೆಗೆ ಸ್ವಲ್ಪ ಏಲಕ್ಕಿ ಪುಡಿ, ಜೀರಿಗೆ ಪುಡಿ ಹಾಗೂ ಧನಿಯಾ (ಕೊತ್ತಂಬರಿ) ಪುಡಿಯನ್ನೂ ಸೇರಿಸಿಕೊಳ್ಳಿ.

ಒಂದೆರಡು ನಿಮಿಷ ನೀರಿನಲ್ಲಿ ಎಲೆ ಕುದಿದು ಆದ ಬಳಿಕ ಅದನ್ನು ಸೋಸಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ.. ರುಚಿಗೆ ತಕ್ಕಷ್ಟು ಬೆಲ್ಲ ಅಥವಾ ಸಕ್ಕರೆ ಸೇರಿಸಿಕೊಳ್ಳಿ.. ಸಕ್ಕರೆಗಿಂತ ಬೆಲ್ಲ ಒಳ್ಳೆಯದು ಎನ್ನುತ್ತಾರೆ ಬಲ್ಲವರು. ಸ್ವಲ್ಪ ಬಿಸಿಬಿಸಿಯಾಗಿಯೇ ಈ ಟೀಯನ್ನು ಕುಡಿದರೆ ಒಳ್ಳೆಯದು.

ಒಂದೆಲಗ ಕಷಾಯ ಸೇವನೆಯಿಂದ ಆಗುವ ಪ್ರಯೋಜನ ಏನು?

ಮೊದಲನೆಯದಾಗಿ, ಈ ಟೀ ಅಥವಾ ಹರ್ಬಲ್ ಕಷಾಯ ಸೇವಿಸುವುದರಿಂದ ರಕ್ತಪರಿಚಲನೆ ಚೆನ್ನಾಗಿ ಆಗುತ್ತದೆ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸಿ ಮೆದುಳಿನ ಕೆಲಸವನ್ನು ಚುರುಕುಗೊಳಿಸುತ್ತದೆ ಎಂದು ಪ್ರಾಚೀನಕಾಲದಿಂದಲೂ ಹೇಳುತ್ತಾರೆ. ಒಂದೆಲಗ ನೆನಪಿನಶಕ್ತಿ ಹೆಚ್ಚಿಸುವ ರಾಮಬಾಣದಂತೆ ಕೆಲಸ ಮಾಡುತ್ತದೆ ಎಂದು ಚರಕ ಸಂಹಿತೆ ಸೇರಿದಂತೆ, ಹಲವಾರು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಹಲವಾರು ಸಂಶೋಧನೆಗಳೂ ಕೂಡ ಇದನ್ನು ಪುಷ್ಟೀಕರಿಸಿವೆ.

ಮರೆವಿನ ಕಾಯಿಲೆಗೆ ವರದಾನ!

ಮರೆವಿನ ಕಾಯಿಲೆ ಇರುವವರಿಗೆ ಒಂದೆಲಗದ ಕಷಾಯ ಅತ್ಯಂತ ಪರಿಣಾಮಕಾರಿಯಾಗಿ ಪರಿಹಾರ ನೀಡುತ್ತದೆ. ಇದು ಮೆದುಳಿನ ಕೆಲಸಗಳನ್ನು ಉತ್ತೇಜಸಿ ದಿನವಿಡೀ ಉಲ್ಲಾಸ ಹಾಗೂ ಉತ್ಸಾಹಭರಿತರಾಗಿ ಇರುವಂತೆ ಮಾಡುತ್ತದೆ. ಜೊತೆಗೆ, ದೇಹದ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡಿ ಆರೋಗ್ಯವೃದ್ಧಿಗೂ ಸಹಕರಿಸುತ್ತದೆ. ಈ ಮೂಲಕ ಒಂದೆಲಗ ಎಲೆಯು ದೇಹದ ಆರೋಗ್ಯವೃದ್ಧಿಗೆ ಸಹಕರಿಸುತ್ತದೆ.

WhatsApp Group Join Now

Spread the love

Leave a Reply