ಗಂಡನಿಂದ ದೂರವಾಗಿದ್ದ ಮಹಿಳೆಯನ್ನು ಪ್ರೀತಿ ಹೆಸರಲ್ಲಿ ಮದುವೆಯಾಗೋದಾಗಿ ನಂಬಿಸಿ ಲೈಂಗಿಕ ಸಂಪರ್ಕ ನಡೆಸಿದ್ದಲ್ಲದೆ, ಬಳಿಕ ಆಕೆ ಗರ್ಭಿಣಿ ಎಂಬ ವಿಷಯ ತಿಳಿದ ಪ್ರಿಯಕರ ಊಟದಲ್ಲಿ ಗರ್ಭಪಾತದ ಮಾತ್ರೆಕೊಟ್ಟಿರುವ ಆರೋಪ ದೇವನಹಳ್ಳಿಯಲ್ಲಿ ಕೇಳಿಬಂದಿದೆ.
ಪ್ರಕರಣ ಸಂಬಂಧ ದೊಡ್ಡಬಳ್ಳಾಪುರ ನಗರದ ಶಾಂತಿನಗರ ನಿವಾಸಿ ಪ್ರವೀಣ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆಗೆ ಓರ್ವ ಮಗಳು ಕೂಡ ಇದ್ದಾಳೆಂಬ ವಿಷಯ ಬಹಿರಂಗವಾಗಿದ್ದು, ತನ್ನ ಮೇಲೆ ಆರೋಪಿ ಮತ್ತು ಆತನ ಕುಟುಂಬ ಶೋಷಣೆ ನಡೆಸಿರೋದಾಗಿ ಆಕೆ ಆರೋಪಿಸಿದ್ದಾಳೆ.
ಘಟನೆ ಏನು?
ಗಂಡನಿಂದ ದೂರವಾಗಿದ್ದ ಸಂತ್ರಸ್ತೆ ಎರಡು ವರ್ಷಗಳ ಹಿಂದೆ ಕೆಲಸಕ್ಕೆಂದು ಬೆಂಗಳೂರಿಗೆ ಬಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಹತ್ತಿರವಿರುವ ಕೆಫೆಯೊಂದರಲ್ಲಿ ಮ್ಯಾನೇಜರ್ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಆಕೆಗೆ ಆರೋಪಿ ಪ್ರವೀಣ್ ಕುಮಾರ್ ಪರಿಚಯವಾಗಿದೆ. ಪರಿಚಯ ಸ್ನೇಯಕ್ಕೆ ತಿರುಗಿದ್ದು, ಈ ವೇಳೆ ತನಗೆ ಅದಾಗಲೇ ಮದುವೆಯಾಗಿ ಮಗಳಿದ್ದ ಬಗ್ಗೆ ಮಹಿಳೆ ತಿಳಿಸಿದ್ದಳು. ಹೀಗಿದ್ದರೂ ನೀನೆಂದರೆ ತನಗೆ ಇಷ್ಟ ಎಂದು ನಂಬಿಸಿದ್ದ ಆರೋಪಿ ಆಕೆಯ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದ. ಸಾಲದ್ದಕ್ಕೆ ಸಂತ್ರಸ್ತೆ ಒಂದು ವರ್ಷ ಆತನ ಮನೆಯಲ್ಲೇ ನೆಲೆಸಿದ್ದಳು ಎನ್ನಲಾಗಿದೆ. ಈ ವೇಳೆ ಆಕೆ ತಾನೀಗ ನಾಲ್ಕು ತಿಂಗಳ ಗರ್ಭಿಣಿ ಎಂದು ಪ್ರವೀಣ್ಗೆ ತಿಳಿಸಿದ್ದು, ಆ ವೇಳೆ ಈತನ ಅಸಲೀ ಮುಖ ಅನಾವರಣ ಆಗಿದೆ ಎಂದು ಸಂತ್ರಸ್ತೆ ದೂರಿದ್ದಾಳೆ.
ತನ್ನನ್ನು ಮುದುವೆಯಾಗು ಎಂದು ಕೇಳಿದ್ದಕ್ಕೆ ನೀನು ಗಂಡನನ್ನು ಬಿಟ್ಟವಳು. ಅಲ್ಲದೆ ಬೇರೆ ಜಾತಿಯವಳು ಎಂದು ಬಾಯಿಗೆ ಬಂದಂತೆ ಬೈದು ಹಲ್ಲೆ ನಡೆಸಿದ್ದಾನೆ. ಆತನ ಮನೆಯವರೂ ಜಾತಿ ನಿಂದನೆ ಮಾಡಿದ್ದಾರೆ. ಬಳಿಕ ಎಲ್ಲ ಸೇರಿ ತನ್ನನ್ನು ಮನೆಯಿಂದ ಆಚೆ ಹಾಕಿದ್ದು, ಈ ಬಗ್ಗೆ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿ ಪ್ರವೀಣ್ ಕುಮಾರ್ ಹಾಗೂ ಅವರ ಮನೆಯವರನ್ನು ಕರೆಯಿಸಿ ಬುದ್ದಿ ಹೇಳಬೇಕೆಂದು ದೂರು ಅರ್ಜಿಯನ್ನು ನೀಡಿದ್ದೆ. ಅದರಂತೆ ಅವರು ಕರೆದು ಬುದ್ಧಿ ಹೇಳಿದ ಬಳಿಕ ಕೆಲ ದಿನ ಆತ ಚೆನ್ನಾಗಿಯೇ ನೋಡಿಕೊಂಡಿದ್ದಾನೆ. ಈ ನಡುವೆ ಜನವರಿ 25ರಂದು ನಾವು ಲಾಡ್ಜ್ನಲ್ಲಿ ರೂಮ್ ಮಾಡಿಕೊಂಡು ವಾಸವಿದ್ದ ವೇಳೆ ಆತ ತಂದುಕೊಟ್ಟ ಎಗ್ರೈಸ್ ತಿಂದ ಬಳಿಕ ತನಗೆ ಗರ್ಭಪಾತವಾಗಿದೆ. ಹೀಗಾಗಿ ಆತ ತನಗೆ ಕೊಟ್ಟಿದ್ದ ಊಟದಲ್ಲಿ ಮಾತ್ರೆ ಸೇರಿಸಿ ಕೊಟ್ಟಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಪ್ರೀತಿ ಹೆಸರಲ್ಲಿ ವಿವಾಹಿತ ಮಹಿಳೆ ಜೊತೆ ಚಕ್ಕಂದ: ನಂಬಿಸಿ ಗರ್ಭಪಾತ ಮಾಡಿಸಿದ್ನಾ ಯುವಕ.?
WhatsApp Group
Join Now