6ರ ಬಾಲಕಿಯ ಮೇಲೆ ಮೂವರು ಅಪ್ರಾಪ್ತರಿಂದ ಕಾಮುಕ ಕೃತ್ಯ : 10 ವರ್ಷದ ಆರೋಪಿ ಮಗನನ್ನು ಸ್ವತಃ ಠಾಣೆಗೆ ಕರೆತಂದ ತಾಯಿ.!

Spread the love

ದೇಶದ ರಾಜಧಾನಿ ದೆಹಲಿಯ ಈಶಾನ್ಯ ಭಾಗದ ಭಜನ್‌ಪುರ ಪ್ರದೇಶದಲ್ಲಿ ಅತ್ಯಂತ ಅಮಾನವೀಯ ಮತ್ತು ಕ್ರೂರ ಘಟನೆಯೊಂದು ನಡೆದಿದೆ. ಕೇವಲ ಆರು ವರ್ಷದ ಪುಟ್ಟ ಬಾಲಕಿಯ ಮೇಲೆ ಅದೇ ಪ್ರದೇಶದ ಮೂವರು ಅಪ್ರಾಪ್ತ ಬಾಲಕರು ಸಾಮೂಹಿಕ ಲೈಂಗಿಕ ದೌರ್ಜನ್ಯ ಎಸಗಿದ್ದು, ಇಡೀ ಪ್ರದೇಶದಲ್ಲಿ ಆಕ್ರೋಶ ಭುಗಿಲೆದ್ದಿದೆ.

ರಕ್ತಸಿಕ್ತವಾಗಿ ಮನೆಗೆ ಬಂದ ಬಾಲಕಿ ತಾಯಿಯ ಆಕ್ರಂದನ

ಜನವರಿ 18 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ತಾಯಿ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದು, “ನನ್ನ ಮಗಳು ರಕ್ತಸಿಕ್ತ ಸ್ಥಿತಿಯಲ್ಲಿ, ತೀವ್ರ ಕಿರುಚಾಟದೊಂದಿಗೆ ಮನೆಗೆ ಬಂದಳು. ಮೊದಲು ಬಿದ್ದಿದ್ದಾಗಿ ಸುಳ್ಳು ಹೇಳಿದರೂ, ಅವಳ ಮೈಮೇಲೆ ಬೇರೆಲ್ಲೂ ಗಾಯಗಳಿರಲಿಲ್ಲ. ಪ್ರೀತಿಯಿಂದ ವಿಚಾರಿಸಿದಾಗ ಕಾಮುಕರು ಮಾಡಿದ ಕೃತ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಳು” ಎಂದು ನೋವು ಹಂಚಿಕೊಂಡಿದ್ದಾರೆ. ಬಾಲಕಿಯನ್ನು ಕಟ್ಟಡವೊಂದರ ಟೆರೇಸ್ ಮೇಲೆ ಕರೆದೊಯ್ದು ಈ ಕೃತ್ಯ ಎಸಗಲಾಗಿದ್ದು, ಅಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಕಾಮುಕರು ಯಾರು?

ಪೊಲೀಸರ ತನಿಖೆಯ ಪ್ರಕಾರ, ಈ ಕೃತ್ಯದಲ್ಲಿ 10, 13 ಮತ್ತು 16 ವರ್ಷ ವಯಸ್ಸಿನ ಮೂವರು ಬಾಲಕರು ಭಾಗಿಯಾಗಿದ್ದಾರೆ. ಆರೋಪಿಗಳ ಪೈಕಿ 10 ವರ್ಷದ ಬಾಲಕನ ತಾಯಿ, ಸಂತ್ರಸ್ತೆಯ ಸ್ಥಿತಿಯನ್ನು ಕಂಡು ಸ್ವತಃ ತನ್ನ ಮಗನನ್ನು ಪೊಲೀಸರಿಗೆ ಒಪ್ಪಿಸಿರುವುದು ವಿಶೇಷವಾಗಿದೆ. ಪೊಲೀಸರು ಈಗಾಗಲೇ ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ಬಾಲ ನ್ಯಾಯ ಮಂಡಳಿ (JJB) ಮುಂದೆ ಹಾಜರುಪಡಿಸಿದ್ದಾರೆ. ಮೂರನೇ ಆರೋಪಿ ಪರಾರಿಯಾಗಿದ್ದು, ಅವನು ಬಿಹಾರಕ್ಕೆ ಓಡಿಹೋಗಿದ್ದಾನೆ ಎಂದು ಶಂಕಿಸಲಾಗಿದೆ. ಅವನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

WhatsApp Group Join Now

Spread the love

Leave a Reply