ಇರಾನ್, ಅಮೆರಿಕಾದಿಂದ ಭದ್ರತೆ ಕರೆಸಿಕೊಳ್ಳುವುದಾದರೆ, ನೀವೇನು ದನ ಕಾಯೋದಿಕ್ಕೆ ಇದ್ದೀರಾ : ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ

Spread the love

ಬಳ್ಳಾರಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಅವರ ಮನೆಯ ಮುಂದೆ ಬ್ಯಾನರ್ ವಿಚಾರಕ್ಕೆ ಗಲಾಟೆ ಆಗಿ ಫೈರಿಂಗ್ ನಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನಪ್ಪಿದ್ದ ಈ ಒಂದು ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಕಿಡಿ ಕಾರಿದ್ದು ಇರಾನ್ ಅಮೆರಿಕಾದಿಂದ ಭದ್ರತೆ ಕರೆಸಿಕೊಳ್ಳುವ ಹಾಗಿದ್ದರೆ ನೀವೇನು ದನ ಕಾಯೋಕೆ ಇದ್ದೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಬಳ್ಳಾರಿ ಘರ್ಷಣೆಗೆ ಕ್ಷುಲ್ಲಕ ಕಾರಣ ಅಂತಾರೆ. ಇದು ಕಾಕತಾಳಿಯ ಎಂದು ಗೃಹ ಸಚಿವ ಹಿಮ್ಮೆಳ ಬಾರಿಸುತ್ತಾರೆ. ಈ ಸರ್ಟಿಫಿಕೇಟ್ ಕೊಟ್ಟ ಮೇಲೆ ಯಾವ ತನಿಖೆ ನಡೆಸುತ್ತೀರಾ? ಇವರ ತೆವಲಿಗೆ ಅಧಿಕಾರಕ್ಕೆ ಯಾರನ್ನು ಬೇಕಾದರೂ ಬಲಿಕೊಡುತ್ತಾರೆ. ಭದ್ರತೆ ಕೇಳಿದರೆ ಇರಾಕ್ ಅಮೇರಿಕಾದಿಂದ ತರಿಸಿಕೊಳ್ಳಿ ಅಂತಾರೆ ನೀವು ಏನು ದನ ಕಾಯೋಕ್ಕೆ ಇದ್ದೀರಾ ಎಂದು ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.

ಬ್ಯಾನರ್ ಕಟ್ಟುವ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಕಾಂಗ್ರೆಸ್ ಕಾರ್ಯಕರ್ತನ ಹತ್ತೆಯಾಗಿದೆ ಪ್ರತಿಮೆ ಅನಾವರಣ ಮಾಡುವುದನ್ನು ಸುಪ್ರೀಂಕೋರ್ಟ್ ನಿಷೇಧಿಸಿದೆ. ವಿಶೇಷ ಪ್ರಕರಣ ಎಂದು ಪ್ರತಿಮೆ ಅನಾವರಣ ಮಾಡಲಾಗುತ್ತಿದೆ. ಜನವರಿ 1 ರದು ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಕಟ್ಟಿದರಂತೆ. ಮನೆಯ ಬಳಿ ಬ್ಯಾನರ್ ತೆಗೆಯುವಂತೆ ಜನಾರ್ದನ ರೆಡ್ಡಿ ಹೇಳಿದ್ದರು.

ಬಳಿಕ ಶಾಸಕರ ಆಪ್ತ ರೆಡ್ಡಿ ಮನೆಯ ಬಳಿ ಹಾಕಿಕೊಂಡು ಕೂರುತ್ತಾರೆ.ಚೇರ್ ಹಾಕಿಕೊಂಡು ಕೂರೋದು ಅವರಿಗೆ ದಬ್ಬಾಳಿಕೆ ಮಾಡುವುದು ಹತ್ತು ಜನ ಇದ್ದಾಗ ಖಾಲಿ ಮಾಡಿಸಲು ಇಲಾಖೆ ಸರಕಾರ ಅನುಮತಿ ಕೊಟ್ಟಿತ್ತಾ? ಅನುಮತಿ ಕೊಡದಿದ್ದರೆ ಯಾವ ಅಧಿಕಾರದಲ್ಲಿ ಅನಾವರಣಕ್ಕೆ ಹೋಗಿದ್ದು? ಎಂದು ವಾಗ್ದಾಳಿ ನಡೆಸಿದ್ದಾರೆ.

WhatsApp Group Join Now

Spread the love

Leave a Reply