Gold Rate : ಭಾರೀ ಇಳಿಕೆಯಾಯ್ತಾ ಚಿನ್ನದ ಬೆಲೆ.? ಎಷ್ಟಾಗಿದೆ ನೋಡಿ ಇಂದಿನ ಚಿನ್ನದ ರೇಟ್.?

Gold Rate : ನಮಸ್ಕಾರ ಸ್ನೇಹಿತರೇ, ಕಳೆದ ಜುಲೈ ತಿಂಗಳಲ್ಲಿ ಬಹುತೇಕ ದಿನೇ ದಿನೇ ಚಿನ್ನದ ಬೆಲೆ ಏರಿಕೆಯಾಗಿತ್ತು ಹಾಗೂ ಬೆಳ್ಳಿ ದರವೂ ಹೆಚ್ಚಳವಾಗಿತ್ತು. ಜಾಗತಿಕ ವಿದ್ಯಮಾನಗಳ ಪ್ರಭಾವದಿಂದ ಚಿನಿವಾರ ಪೇಟೆಯಲ್ಲಿ ದರ ಏರಿಕೆ ಸಹಜವಾಗಿತ್ತು. ಆದರೆ ಈ ಆಗಸ್ಟ್ ತಿಂಗಳ ಆರಂಭದಿಂದಲೇ ಚಿನ್ನಾಭರಣ ಪ್ರಿಯರಿಗೆ ಕೊಂಚ ಭರವಸೆ ಮೂಡಿಸಿದೆ.

ಇದನ್ನೂ ಕೂಡ ಓದಿ : Ration Card : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ.! ಏನೆಲ್ಲಾ ದಾಖಲೆ ಬೇಕು.? ಹೇಗೆ ಅರ್ಜಿ ಸಲ್ಲಿಸುವುದು.?

ಹೌದು, ಚಿನ್ನದ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಕಾಣುತ್ತಿದ್ದು, ಚಿನ್ನ ಬೆಳ್ಳಿ ಬೆಲೆಯು ಇಳಿಕೆಯಾಗುವ ಮೂಲಕ ಖುಷಿ ಹೆಚ್ಚಿಸಿದೆ. ದೇಶದಲ್ಲಿ ಇಂದು ಚಿನ್ನದ ದರ ಎಷ್ಟಿದೆ? ನಮ್ಮ ಕರ್ನಾಟಕದಲ್ಲಿ ದರ ಎಷ್ಟಿದೆ? ನಿನ್ನೆ ಚಿನ್ನದ ದರ ಎಷ್ಟು? ಇವತ್ತಿನ ದರ ಎಷ್ಟು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಯೋಣ.

22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ ₹6,349/- ರೂಪಾಯಿ ಆಗಿದೆ. 10 ಗ್ರಾಂ ಗೆ ₹63,490/- ರೂಪಾಯಿ ಆಗಿದೆ. ನಿನ್ನೆ ಇದೇ 22 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹63,590/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 22 ಕ್ಯಾರೆಟ್ ನ ಚಿನ್ನದ ದರದಲ್ಲಿ ₹100/- ರೂಪಾಯಿಯಷ್ಟು ಇಳಿಕೆ ಕಂಡಿದೆ.

ಇದನ್ನೂ ಕೂಡ ಓದಿ : Pan Card Updates : ನೀವು ಪಾನ್ ಕಾರ್ಡ್ ಹೊಂದಿದ್ದೀರಾ.? ಹೊಸ ನಿಯಮ ಜಾರಿಗೆ – ₹10,000/- ದಂಡ.!

24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ 1 ಗ್ರಾಂ ಗೆ ₹6,926/- ರೂಪಾಯಿ ಆಗಿದೆ. 10 ಗ್ರಾಂ ಗೆ ₹69,260/- ರೂಪಾಯಿ ಆಗಿದೆ. ನಿನ್ನೆ ಇದೇ 24 ಕ್ಯಾರೆಟ್ ನ ಚಿನ್ನ 10 ಗ್ರಾಂ ಗೆ ₹69,370/- ರೂಪಾಯಿ ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 24 ಕ್ಯಾರೆಟ್ ನ ಚಿನ್ನದ ದರದಲ್ಲಿ ₹110/- ರೂಪಾಯಿಯಷ್ಟು ಇಳಿಕೆ ಕಂಡಿದೆ. ಹೀಗೆ ಚಿನ್ನದ ದರದಲ್ಲಿ ಬೆಲೆ ಇಳಿಕೆಯಿಂದಾಗಿ ಜನಸಾಮಾನ್ಯರ ಮುಖದಲ್ಲಿ ಮಂದಹಾಸ ಮೂಡಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply